ಕ್ರೆಡಿಟ್ ಕಾರ್ಡ್‌ಗಳ ಸುಲಭ ಪಾವತಿ ಮತ್ತು ಆಕರ್ಷಕ ಕೊಡುಗೆಗಳಿಂದಾಗಿ, ಎಲ್ಲ ವಯಸ್ಸಿನ ಜನರು ಇದನ್ನು ಬಳಸುವುದನ್ನು ಇಷ್ಟಪಡುತ್ತಾರೆ. ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಉಚಿತ ಏರ್‌ಪೋರ್ಟ್ ಲಾಂಜ್ ಪ್ರವೇಶವನ್ನು ಪಡೆಯುವುದು ಸಾಮಾನ್ಯ. ಅದರಲ್ಲೂ ಭಾರತದ ವಿಮಾನ ನಿಲ್ದಾಣಗಳಲ್ಲಿ ಲಾಂಜ್ ಗಳ ಪ್ರವೇಶ ಪಡೆಯಲು ಕ್ರೆಡಿಟ್ ಕಾರ್ಡ್‌ಗಳು ಜನಪ್ರಿಯ ಆಯ್ಕೆಯಾಗಿ ಮಾರ್ಪಟ್ಟಿದೆ. ವಿವಿಧ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳು, ಕೊಡುಗೆಗಳು ಮತ್ತು ಪ್ಯಾಕೇಜ್‌ಗಳನ್ನು ನೀಡುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಈ ಕೊಡುಗೆಗಳಲ್ಲಿ ವಿಶ್ರಾಂತಿ ಕೋಣೆಗೆ ಉಚಿತ ಪ್ರವೇಶ, ಆಹಾರ ಮತ್ತು ಪಾನೀಯಗಳ ಮೇಲಿನ ರಿಯಾಯಿತಿಗಳು, ಇಂಟರ್ನೆಟ್ ಸೌಲಭ್ಯಗಳು ಮತ್ತು ಇನ್ನಿತರ ಸೌಲಭ್ಯಗಳು ಸೇರಿರುವುದರಿಂದ ಹೆಚ್ಚಿನ ಜನ ಏರ್ ಪೋರ್ಟ್ ನಲ್ಲಿ ಕ್ರೆಡಿಟ್ ಕಾರ್ಡ್ ಗಳನ್ನು ಬಳಸುತ್ತಾರೆ. ಅದರೂ ಕ್ರೆಡಿಟ್ ಕಾರ್ಡ್‌ಗಳ ಅತಿರೇಕದ ಬಳಕೆಯು ಸೈಬರ್ ಹಗರಣಗಳು ಮತ್ತು ವಂಚನೆಗಳಿಗೆ ಗುರಿಯಾಗುವಂತೆ ಮಾಡುತ್ತದೆ.
ಬೆಂಗಳೂರು ಏರ್ ಪೋರ್ಟ್ (KIA ) ವಿರುದ್ದ ಕೇಳಿಬಂದ ಗಂಭೀರ ಆರೋಪ
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ವಿರುದ್ಧದ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ತನಗೆ 87,125 ರೂಪಾಯಿ ವಂಚಿಸಲಾಗಿದೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿರುದ್ದ ಮಹಿಳೆ ಆರೋಪಿಸಿದ್ದಾರೆ. ವಂಚನೆ ವಿವಾದಕ್ಕೆ ಸಂಬಂಧಿಸಿದಂತೆ ಮಹಿಳೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದು, ಅಲ್ಲಿ ಅವರು ಕ್ರೆಡಿಟ್ ಕಾರ್ಡ್ ಹಗರಣಕ್ಕೆ ಕಾರಣವಾದ ಘಟನೆಯನ್ನು ವಿವರಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಚೆನ್ನೈ ಮೂಲದ ಮಹಿಳೆಯು ಸೆಪ್ಟೆಂಬರ್ 29 ರಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತನ್ನ ವಿಮಾನ ಹೊರಡುವ ನಿಗದಿತ ಸಮಯಕ್ಕಿಂತ 5 ಗಂಟೆ ಮುಂಚಿತವಾಗಿ ಆಗಮಿಸಿದಾಗ ತಾನು ಲಾಂಜ್‌ಗೆ ಹೋಗಲು ಬಯಸಿದ್ದೆ. ಆದರೆ ಮಹಿಳೆ ತನ್ನ ಕ್ರೆಡಿಟ್ ಕಾರ್ಡ್ ಅನ್ನು ತನ್ನೊಂದಿಗೆ ಕೊಂಡೊಯ್ಯದ ಕಾರಣ, ಲಾಂಜ್ ಸಿಬ್ಬಂದಿ ತನ್ನ ಕ್ರೆಡಿಟ್ ಕಾರ್ಡ್‌ನ ಚಿತ್ರವನ್ನು ಸ್ಕ್ಯಾನ್ ಮಾಡಲು ಕೇಳಿದರು ಎಂದು ಮಹಿಳೆ ವಿಡಿಯೋದಲ್ಲಿ ತಿಳಿಸಿದ್ದಾರೆ. ಆದರೆ ಈ ವೇಳೆ ವಿಮಾನ ನಿಲ್ದಾಣದ ಸಿಬ್ಬಂದಿ ಮಹಿಳೆಗೆ 'ಲೌಂಜ್ ಪಾಸ್' ಎಂಬ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಮಾಡುವಂತೆ ತಿಳಿಸಿದರು. ನಾನು ಡೌನ್‌ಲೋಡ್ ಮಾಡಿದೆ ಮತ್ತು ಈ ವೇಳೆ ಸ್ಕ್ರೀನ್ ಶೇರಿಂಗ್ ಹಾಘೂ ಫೇಸ್ ಸ್ಕ್ಯಾನಿಂಗ್ ಕೇಳಿದರು. ಇದು ನನಗೆ ವಿಚಿತ್ರ ಅನಿಸಿ ಪ್ರಶ್ನಿಸಿದಾಗ ಭದ್ರತಾ ಕಾರಣಗಳಿಗಾಗಿ ಎಂದಾಗ ನಾನು ಅವರು ಹೇಳಿದಂತೆ ಮಾಡಿದೆ" ಎಂದು ವೀಡಿಯೋದಲ್ಲಿ ವಿವರಿಸಿದ್ದಾರೆ.
ಕೆಲವು ದಿನಗಳ ನಂತರ ತನ್ನ ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ ಪ್ರಕಾರ ತನ್ನ ಖಾತೆಯಿಂದ 87,125 ರೂ.ಗಳನ್ನು ಡೆಬಿಟ್ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು ಮಹಿಳೆ ಆರೋಪಿಸಿದ್ದಾರೆ. Lounge Pass app ನಲ್ಲಿ ನನ್ನ ಫೋನ್ ನ ಸೆಟ್ಟಿಗ್ ನೊಳಗೆ ಪ್ರವೇಶಿಸಿ, ಕೆಲವೊಂದು ಬದಲಾವಣೆ ಮಾಡಿಕೊಂಡು ಬೆಂಗಳೂರಿನಲ್ಲಿ ಸಂಜೆ 6.44 ಕ್ಕೆ ಫೋನ್‌ಪೇಗೆ ವರ್ಗಾಯಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ಮುಂದುವರೆದ ತನಿಖೆ
ಸದ್ಯ KIA ನಿಲ್ದಾಣದ ವಿರುದ್ದ ಮಹಿಳೆ ಮಾಡಿರುವ ಆರೋಪದ ಬಗ್ಗೆ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಲಾಗಿದೆ. ಇನ್ನು ಇಲ್ಲಿ ಹತ್ತು ಪ್ರಶ್ನೆಗಳು ಉದ್ಬವಿಸಿದೆ. ಒಂದು ವೇಳೆ ವಿಮಾನ ನಿಲ್ದಾಣದ ಸಿಬ್ಬಂದಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಹೇಳಿರುವ ಅಪ್ಲಿಕೇಶನ್ ಆ ರೀತಿಯ ಹಣ ಲಪಟಾಯಿಸುವ ಆಪ್ ಆಗಿದೆಯೇ ಎಂಬ ಪ್ರಶ್ನೆ ಮೂಡಿದ್ದು, ತನಿಖೆ ಮುಂದುವರೆದಿದೆ. ಸೈಬರ್ ಕ್ರೈಂ ಇಲಾಖೆ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದ್ದರಿಂದ ಆರೋಪಗಳು ಇನ್ನೂ ಸಾಬೀತಾಗಿಲ್ಲ.
ಬೇಕಾಬಿಟ್ಟಿ ಆಪ್ ಡೌನ್‌ಲೋಡ್ ಮಾಡದಿರಿ
ಸದ್ಯ ಒಂದು ವೇಳೆ ಮಹಿಳೆ ಮಾಡಿರುವ ಆರೋಪ ನಿಜವೇ ಆಗಿದ್ದರೆ ಅದೊಂದು ಗಂಭೀರವಾದ ಪ್ರಕರಣವಾಗಿದೆ. ಯಾಕೆಂದರೆ ಸರಿಯಾದ ಮಾಹಿತಿ ಇಲ್ಲದ ಅಪ್ಲಿಕೇಶನ್‌ಗಳನ್ನು ಬೇಕಾಬಿಟ್ಟಿಯಾಗಿ ಡೌನ್‌ಲೋಡ್ ಮಾಡುವುದು ಎಷ್ಟೊಂದು ಅಪಾಯಕಾರಿ ಎಂಬುದು ಇದರಿಂದ ತಿಳಿಯುತ್ತದೆ. ಹಾಗಾಗಿ ಡೌನ್‌ಲೋಡ್ ಮಾಡುವ ಅಪ್ಲಿಕೇಶನ್‌ಗಳ ಬಗ್ಗೆ ಬಳಕೆದಾರರು ಪೂರ್ವ ಮಾಹಿತಿ ಹೊಂದಿರಬೇಕಾಗಿರುವುದು ಅತೀ ಮುಖ್ಯವಾಗಿದೆ. ಇಂದಿನ ಜಾಗತಿಕ ಯುಗದಲ್ಲಿ ಬಹುತೇಕ ಎಲ್ಲಾ ಹಣದ ವ್ಯವಹಾರಗಳು ಅಂತರ್ಜಾಲಗಳ ಮೂಲಕವೇ ನಡೆಯುತ್ತದೆ. ಸಹಜವಾಗಿಯೇ ಇದರಿಂದ ಹ್ಯಾಕರ್‌ಗಳ ವಕ್ರ ದೃಷ್ಟಿ ಕೂಡ ಬೀರುವುದು ಸಹಜ. ಹಾಗಾಗಿ ಬೇಕಾಬಿಟ್ಟಿ ಅಪ್ಲಿಕೇಶನ್‌ಗಳನ್ನು ಮೊಬೈಲ್ ಫೋನ್‌ನಲ್ಲಿ ಡೌನ್ ಲೋಡ್ ಮಾಡುವ ಮುನ್ನ ಅರಿತುಕೊಳ್ಳುವುದು ಅವಶ್ಯಕವಾಗಿದೆ.


Click it and Unblock the Notifications