ಅಲ್ಲು ಅರ್ಜುನ್-ಶ್ರೀಲೀಲಾಗೆ ಕಾನೂನು ಕಗ್ಗಂಟು: ತಮಿಳು ಹಾಗೂ ತೆಲುಗು ನಟ ಅಲ್ಲು ಅರ್ಜುನ್‌ಗಿರುವ ಹವಾ ಅಷ್ಟಿಷ್ಟಲ್ಲ. ಹಾಗೆಯೇ ಕನ್ನಡ ಚಿತ್ರರಂಗದಿಂದ ತೆಲುಗು-ತಮಿಳು ಚಿತ್ರರಂಗಕ್ಕೆ ತೆರಳಿ ಕ್ರೇಜ್ ಮೂಡಿಸಿದ ನಟಿ ಶ್ರೀಲೀಲ ಈಗಲ್ಲಿ ಸಖತ್ ಫೇಮಸ್. ಒಳ್ಳೆ ಒಳ್ಳೆ ಆಫರ್‍ಗಳ ಸುರಿಮಳೆ ಶ್ರೀಲೀಲಾಗೆ ಈಗ ಕಾಮನ್ ಆಗೋಗಿದೆ. ಆದರೆ ಇದೀಗ ಈ ಇಬ್ಬರಿಗೂ ಕಾನೂನು ಕಗ್ಗಂಟು ಶುರುವಾಗಿದೆ. ಹಾಗಾದ್ರೆ ಇವರಿಬ್ಬರು ಮಾಡಿದ ತಪ್ಪೇನು ಅಂತೀರಾ..? ಇವರ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಅದೇನೆಂದರೆ ವಿದ್ಯಾರ್ಥಿಗಳ ಭವಿಷ್ಯವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ (AISF) ವಿಜಯವಾಡ ಘಟಕ ಹೊರ ಹಾಕಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಶಿಕ್ಷಣ ಸಂಸ್ಥೆಯ ಜಾಹೀರಾತಿಗೆ ಬೆಂಬಲ ನೀಡಿದ್ದರಿಂದ ಸಮಸ್ಯೆ:
ಶ್ರೀ ಚೈತನ್ಯ ಎಂಬ ಖಾಸಗಿ ಶಿಕ್ಷಣ ಸಂಸ್ಥೆಯ ಜಾಹೀರಾತು ನೀಡಿದ್ದೇ ಈಗ ಅಲ್ಲು ಅರ್ಜುನ್ ಹಾಗೂ ಶ್ರೀಲೀಲಾಗೆ ಸಮಸ್ಯೆಯಾದಂತೆ ಕಾಣುತ್ತಿದೆ. ಏಕೆಂದರೆ ಜಾಹೀರಾತಿನಲ್ಲಿ ಇವರು, 'ಟಾಪ್ ರ್‍ಯಾಂಕ್ ಪಡೆಯಲು ಇದೇ ಸರಿಯಾದ ಆಯ್ಕೆ' ಎಂಬ ಸಂದೇಶ ತಿಳಿಸಿದ್ದು, AISF ಕೆಂಗಣ್ಣಿಗೆ ಗುರಿಯಾಗಿದ್ದಾರೆ. AISF ಪ್ರಕಾರ ಈ ರೀತಿಯ ಜಾಹೀರಾತುಗಳು ವಿದ್ಯಾರ್ಥಿಗಳ ಪಾಲಿಗೆ ತಪ್ಪು ನಿರ್ಧಾರಗಳ ಬೀಜ ಬಿತ್ತುತ್ತವೆ ಎಂಬುದಾಗಿದ್ದು, ನಟ ಹಾಗೂ ನಟಿಯ ವಿರುದ್ಧ ಈ ಕುರಿತ ಗಂಭೀರ ಆರೋಪ ಕೇಳಿಬಂದಿದೆ. ಇಂತಹ ಜಾಹೀರಾತುಗಳು ವಿದ್ಯಾರ್ಥಿಗಳ ಪಾಲಿಗೆ ತಪ್ಪು ನಿರ್ಧಾರಗಳ ಬೀಜ ಬಿತ್ತುತ್ತವೆ. ಈ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟ ಅಥವಾ ಫಲಿತಾಂಶಗಳ ಬಗ್ಗೆ ಯಾವುದೇ ಪರಿಶೀಲನೆಯಿಲ್ಲದೆ ಸೆಲೆಬ್ರಿಟಿಗಳು ಬೆಂಬಲ ನೀಡುತ್ತಿರುವುದು, ಮಾರಾಟಕ್ಕೋಸ್ಕರ ನಂಬಿಕೆಯನ್ನು ಬಳಸಿಕೊಳ್ಳುವಂತೆ ತೋರಿಸುತ್ತಿದೆ ಎಂದಿದ್ದಾರೆ.
ವಿದ್ಯಾರ್ಥಿಗಳ ನಂಬಿಕೆಗೆ ಧಕ್ಕೆಯಾಗಬಹುದೇ?
ಎಐಎಸ್‌ಎಫ್ ಸ್ಪಷ್ಟವಾಗಿ ಹೇಳಿದ್ದೇನೆಂದರೆ, ವಿದ್ಯಾರ್ಥಿಗಳ ಅಜ್ಞಾನವನ್ನು ಶೋಷಣೆ ಮಾಡುತ್ತಿದ್ದುದು ನೈತಿಕವಾಗಿ ತಪ್ಪು ಎಂಬುದಾಗಿದೆ. ಅಂದರೆ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿರುವ ಈ ಸಂದರ್ಭದಲ್ಲಿ, ಈ ರೀತಿಯ ಭರವಸೆಗಳನ್ನು ನೀಡುವ ಸಂಸ್ಥೆಗಳಿಗೆ ಪಾಪ್ಯುಲರ್ ನಟರ ಬೆಂಬಲ ದೊರಕುವುದು ಅವರ ಬಿಸಿನೆಸ್ ವೃದ್ಧಿಗೆ ಮಾತ್ರ ನೆರವಾಗಬಹುದು. ಆದರೆ ವಿದ್ಯಾರ್ಥಿಗಳ ಹಿತಕ್ಕೆ ಎಂದಿಗೂ ಆಗಿರುವುದಿಲ್ಲ ಎಂಬುದಾಗಿದೆ..
ಹಣದ ಲಾಭಕ್ಕಾಗಿ ನೈತಿಕತೆ ಮರೆತುಬಿಟ್ಟರಾ?
ಸಿನಿಮಾ ನಟರು ತಮ್ಮ ಖ್ಯಾತಿಯನ್ನು ಬಳಸಿಕೊಂಡು ಬ್ರಾಂಡ್‌ಗಳಿಗೆ ಪ್ರಚಾರ ನೀಡುವುದು ಹೊಸದು ಅಲ್ಲ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಇದು ಅತಿಯಾದ ಪರಿಣಾಮ ಬೀರುವ ಸಾಧ್ಯತೆ ಇರುವುದು ಏಕೆಂದರೆ ಇದು ವಾಸ್ತವವಾಗಿ ವ್ಯಕ್ತಿಗಳ ಭವಿಷ್ಯವನ್ನು ರೂಪಿಸುವ ಕ್ಷೇತ್ರ. AISF ಪ್ರಕಾರ, ನಟರು ಕೇವಲ ಹಣಕ್ಕಾಗಿ ಈ ಸಂಸ್ಥೆಯ ಬೆಂಬಲ ನೀಡುತ್ತಿದ್ದಾರೆ. ಜಾಹೀರಾತು ಮಾಡಲು ಒಪ್ಪಿಕೊಳ್ಳುವ ಮೊದಲು, ಆ ಸಂಸ್ಥೆಯ ಶೈಕ್ಷಣಿಕ ಸಾಧನೆ, ವಿದ್ಯಾರ್ಥಿಗಳ ಅಳಲುಗಳು, ಹಾಸ್ಟೆಲ್‌ಗಳ ಸ್ಥಿತಿ ಮುಂತಾದ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಬೇಕಿತ್ತು ಎಂಬುದನ್ನು ಒತ್ತಿಹೇಳುತ್ತಿದೆ.
ಬೆಟ್ಟಿಂಗ್ ಆ್ಯಪ್ ವಿವಾದದ ಪ್ರತಿಧ್ವನಿ, ಸೆಲೆಬ್ರಿಟಿಗಳ ಜವಾಬ್ದಾರಿ ಎಲ್ಲಿ?
ಇದೇ ವರ್ಷ ಮಾರ್ಚ್‌ನಲ್ಲಿ ಹಲವು ನಟರು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಬೆಟ್ಟಿಂಗ್ ಆ್ಯಪ್‌ಗಳಿಗೆ ಪ್ರಚಾರ ಮಾಡಿದ ಆರೋಪಕ್ಕೆ ಒಳಪಟ್ಟಿದ್ದರು. ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ಲಕ್ಮಿ ಮಂಚು ಮುಂತಾದವರು ಪಾಪ್-ಅಪ್ ಜಾಹೀರಾತುಗಳ ಮೂಲಕ ಪ್ರಚಾರ ಮಾಡಿದರೆಂದು ಹೇಳಲಾಗಿದ್ದು, ಅವರ ವಿರುದ್ಧ ಗೇಮಿಂಗ್ ಆಕ್ಟ್ ಹಾಗೂ ಐಟಿ ಆಕ್ಟ್ ಅಡಿಯಲ್ಲಿ ಪ್ರಕರಣಗಳು ದಾಖಲಾಗಿದವು. AISF ಈಗ ಕೇಳುತ್ತಿರುವುದು, "ಅದೇ ರೀತಿಯಲ್ಲಿ ಇಲ್ಲಿ ಕೂಡ ಕಾನೂನು ಕ್ರಮ ಕೈಗೊಳ್ಳಬೇಕು."
ಸಾಮಾಜಿಕ ಜವಾಬ್ದಾರಿಯ ಕುರಿತ ತೀವ್ರ ಪ್ರಶ್ನೆ:
ಇವತ್ತಿನ ಸೆಲೆಬ್ರಿಟಿಗಳು ಬೃಹತ್ ಫ್ಯಾನ್ ಬೇಸ್ ಹೊಂದಿರುವ ಕಾರಣ, ಅವರ ಹೇಳಿಕೆಗಳು, ಅವರ ಬೆಂಬಲಗಳು ಜನರ ನಿರ್ಧಾರಗಳನ್ನು ಪ್ರಭಾವಿತಗೊಳಿಸುತ್ತವೆ. ಈ ಸಂದರ್ಭದಲ್ಲಿ, "ನಮ್ಮ ಪ್ರತಿಯೊಂದು ನಡತೆಯೂ ಸಾಮಾಜಿಕ ಜವಾಬ್ದಾರಿಯ ಮೂಲಕ ಶುದ್ಧವಾಗಿರಬೇಕು" ಎಂಬ ಸಂಕಲ್ಪದ ಅಗತ್ಯವಿದೆ. ಅದು ಕೇವಲ ಫ್ಯಾನ್ಸ್‌ಗೂ ಅಲ್ಲ, ಅವರ ಕೈಚಲಾವಣೆಯಲ್ಲಿ ನಿರ್ಧಾರಮಾಡುವ ಯುವ ಮನಸ್ಸುಗಳಿಗೂ ಅವಶ್ಯಕ.
ಮುಂದೇನು? ನಟರ ಪ್ರತಿಕ್ರಿಯೆ ನಿರೀಕ್ಷೆಯಲ್ಲಿದೆ:
ಇಲ್ಲಿಯವರೆಗೆ ಅಲ್ಲು ಅರ್ಜುನ್ ಅಥವಾ ಶ್ರೀಲೀಲಾ ಈ ವಿಚಾರದಲ್ಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ವಿದ್ಯಾರ್ಥಿ ಸಂಘಟನೆಗಳ ಒತ್ತಾಯ ಮತ್ತು ಸಾರ್ವಜನಿಕ ಒತ್ತಡದಿಂದ ಈ ವಿಚಾರ ಕಾನೂನು ಹಾದಿಯತ್ತ ಸಾಗುವ ಸಾಧ್ಯತೆ ಇದೆ. ಅಥವಾ ಕಲಾವಿದರು ತಾವು ನೀಡಿದ ಪ್ರಚಾರಕ್ಕೆ ಕ್ಷಮೆ ಯಾಚಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬಹುದೆಂಬ ನಿರೀಕ್ಷೆಯಿದೆ.
ಒಟ್ಟಿನಲ್ಲಿ ಸಿನಿಮಾ ತಾರೆಯರು ನಿಜಕ್ಕೂ ಲಕ್ಷಾಂತರ ಹೃದಯಗಳನ್ನು ಗೆದ್ದವರು. ಆದರೆ ಆ ಪ್ರಭಾವವನ್ನು ಹಣಕಾಸಿನ ಲಾಭಕ್ಕೋಸ್ಕರ ಬಳಸುವಾಗ, ಅದರ ಪರಿಣಾಮ ವಿದ್ಯಾರ್ಥಿಗಳ ಜೀವನದ ಮೇಲೆ ಬೀಳುತ್ತಿರುವುದನ್ನು ಗಮನಿಸಲೇಬೇಕು. ಶಿಕ್ಷಣ, ಆರೋಗ್ಯ, ಹಣಕಾಸು ಮುಂತಾದ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವ ಪ್ರತಿಯೊಬ್ಬ ಸೆಲೆಬ್ರಿಟಿಯೂ ತನ್ನ ಜವಾಬ್ದಾರಿಯನ್ನು ಅರಿತು ನಡವಳಿಕೆ ತೋರಿಸುವುದು ಕಾಲದ ಕತೆಯಾಗಿದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ



Click it and Unblock the Notifications