ಒಂದು ಕಡೆ ಪುಷ್ಫಾ-2 ಬಾಕ್ಸ್ ಅಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದರೆ ಮತ್ತೊಂದೆಡೆ ಚಿತ್ರದ ನಾಯಕ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿದ್ದು, ಸದ್ಯ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ. ಚಿತ್ರದ ಪ್ರಸಾರ ವೇಳೆ ಹೈದರಾಬಾದ್ ಥಿಯೇಟರ್‌ಗೆ ಅಲ್ಲು ಅರ್ಜುನ್ ಭೇಟಿ ನೀಡಿದ ವೇಳೆ ಉಂಟಾಗಿದ್ದ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರೆ ಆಕೆಯ ಮಗ ಗಂಭೀರ ರೀತಿಯಲ್ಲಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್‌ರನ್ನು ಬಂಧಿಸಲಾಗಿತ್ತು.
ಏನಿದು ಪ್ರಕರಣ?
ಪುಷ್ಪಾ ಮೊದಲನೇ ಭಾಗವು ಭಾರತದಲ್ಲಿ ಅಲ್ಲದೆ ವಿಶ್ವಾದ್ಯಂತ ಭಾರೀ ಗಳಿಕೆ ಮಾಡಿತ್ತು. ಅದರಂತೆ ಪುಷ್ಪಾ-2 ಚಿತ್ರದಲ್ಲೂ ಇದೇ ರೀತಿಯ ಕ್ರೇಜ್ ಹುಟ್ಟಿಕೊಂಡಿತ್ತು. ಇನ್ನು ಡಿಸೆಂಬರ್ 5ರಂದು ಚಿತ್ರದ ಪ್ರಥಮ ಪ್ರದರ್ಶನ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಥಿಯೇಟರ್‌ವೊಂದಕ್ಕೆ ಅಲ್ಲು ಅರ್ಜುನ್ ಅವರು ರಾತ್ರಿ ಸುಮಾರು 9:40ರ ಸುಮಾರಿಗೆ ಭೇಟಿ ನೀಡಿದ್ದರು. ಈ ವೇಳೆ ಅಪಾರ ಸಂಖ್ಯೆಯ ಅಭಿಮಾನಿಗಳು ಥಿಯೇಟರ್‌ನಲ್ಲಿ ಮುಗಿಬಿದ್ದ ಹಿನ್ನೆಲೆಯಲ್ಲಿ ಮಹಿಳೆ ಮೃತಪಟ್ಟಿದ್ದರೆ ಹಾಗೂ ಆಕೆಯ ಪುತ್ರ ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದರು. ಇನ್ನು ಅಲ್ಲು ಅರ್ಜುನ್ ಥಿಯೇಟರ್‌ಗೆ ಬರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಅಲ್ಲದೆ ಆಡಳಿತ ಮಂಡಳಿ ಕೂಡ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಥಿಯೇಟರ್ ಪ್ರವೇಶ ದ್ವಾರ ಹಾಗೂ ನಿರ್ಗಮನ ದ್ವಾರದ ಬಳಿ ಯಾವುದೇ ಭದ್ರತಾ ವ್ಯವಸ್ಥೆಗಳು ಕೂಡ ಇರಲಿಲ್ಲ ಎನ್ನಲಾಗಿದೆ. ಸದ್ಯ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಬಂಧಿಸಿ, ಸದ್ಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

ಮೃತರ ಕುಟುಂಬಕ್ಕೆ 25 ಲಕ್ಷ ರೂ. ನೆರವು
ಇನ್ನು ಮಹಿಳೆ ಮೃತಪಟ್ಟು, ಪುತ್ರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತಾಪ ಸೂಚಿಸಿರುವ ನಟ ಅಲ್ಲು ಅರ್ಜುನ್, ಮಹಿಳೆಯ ಕುಟುಂಬಕ್ಕೆ 25 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ.
ಚಿತ್ರಕ್ಕೆ ಅರ್ಜುನ್ ಪಡೆದ ಸಂಭಾವನೆ ಎಷ್ಟು?
ಇನ್ನು ಸದ್ಯ ಭಾರತದಲ್ಲಿ ಚಿತ್ರರಂಗದಲ್ಲಿ ಯಶಸ್ವಿ ನಟರಲ್ಲಿ ಒಬ್ಬರೆಂದು ಗುರುತಿಸಿಕೊಂಡಿರುವ ಅಲ್ಲು ಅರ್ಜುನ್ ಅವರು ಪುಷ್ಪ-2 ಚಿತ್ರಕ್ಕೆ ಪಡೆದಿರುವ ಸಂಭಾವನೆ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಪುಷ್ಪಾ ಮೊದಲನೇ ಭಾಗ ಕೂಡ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಹಿನ್ನೆಲೆಯಲ್ಲಿ ಸಹಜವಾಗಿಯೇ ಎರಡನೇ ಭಾಗದ ಬಗ್ಗೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಅದರಂತೆ ಅಭಿಮಾನಿಗಳ ನಿರೀಕ್ಷೆಯನ್ನು ಸುಳ್ಳು ಮಾಡದ ಅಲ್ಲು ಉತ್ತಮ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಇನ್ನು ಚಿತ್ರಕ್ಕೆ ಸಂಭಾವನೆ ರೂಪದಲ್ಲಿ ಅಲ್ಲು ಅವರು ಬರೊಬ್ಬರಿ 300 ಕೋಟಿ ರೂ. ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎನ್ನಲಾಗಿದೆ. ಸದ್ಯ ಪುಷ್ಪಾ-2 ಚಿತ್ರದ ಗಳಿಕೆಯು 1100 ಕೋಟಿ ರೂ. ದಾಟಿದ್ದು, ಯಶಸ್ವಿಯಾಗಿ ಮತ್ತೆ ಮುನ್ನುಗ್ಗುತ್ತಿದೆ. ಸದ್ಯ ಬಾಕ್ಸ್ ಆಫೀಸ್‌ನ ಗಳಿಕೆಯು ಅಲ್ಲು ಅರ್ಜುನ್ ಅವರು ಪಡೆದ ಸಂಭಾವನೆಗಿಂತ ಭಾರೀ ಪ್ರಮಾಣದಲ್ಲಿ ಹೆಚ್ಚಿದ್ದು, ಇದು ಮುಂದಿನ ದಿನಗಳಲ್ಲಿ ಅಲ್ಲು ಬಗ್ಗೆ ಚಿತ್ರ ನಿರ್ಮಾಪಕರ ಭರವಸೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎನ್ನಲಾಗಿದೆ.
ಅಲ್ಲು ಅವರ ಸಂಪತ್ತಿನ ಬಗ್ಗೆ...
ಈಗಾಗಲೇ ಹಲವಾರು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರುವ ಅಲ್ಲು ಅರ್ಜುನ್ ಅವರ ಸಂಪತ್ತಿನ ಮೌಲ್ಯದ ಬಗ್ಗೆ ಹಲವರಲ್ಲಿ ಕುತೂಹಲ ಮೂಡಿದೆ. ಇನ್ನು ಅಲ್ಲು ಅರ್ಜುನ್ ಅವರ ಕೊನಿಡೆಲಾ-ಅಲ್ಲು ಕುಟುಂಬದಲ್ಲಿ ಸಂಪತ್ತಿನಲ್ಲಿ ಸೇರಿಕೊಂಡಿದ್ದು, ಮೂಲಗಳ ಪ್ರಕಾರ ಸುಮಾರು 6,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇನ್ನು ಅವರ ಕುಟುಂಬದ ಬಗ್ಗೆ ಹೇಳುವುದಾದರೆ ಕನಿಷ್ಠ ಮೂರು ತಲೆಮಾರುಗಳನ್ನು ವಿಸ್ತರಿಸಿರುವ ಕುಟುಂಬವು ಚಲನಚಿತ್ರಗಳು, ವ್ಯಾಪಾರ ಉದ್ಯಮಗಳು ಮತ್ತು ರಾಜಕೀಯದಲ್ಲಿ ತೊಡಗಿಸಿಕೊಂಡಿದೆ. ಕುಟುಂಬದ ಪ್ರಮುಖರು ನಟ ಚಿರಂಜೀವಿ ಮತ್ತು ಅವರ ದಿವಂಗತ ಮಾವ, ಹಾಸ್ಯನಟ ಅಲ್ಲು ರಾಮಲಿಂಗಯ್ಯ ಕೂಡ ಸೇರಿದ್ದಾರೆ.
ಇನ್ನು ಕುಟುಂಬದ ಇತರೆ ಸದಸ್ಯರ ಬಗ್ಗೆ ಹೇಳುವುದಾದರೆ ಚಿರಂಜೀವಿ, ಅಲ್ಲು ರಾಮಲಿಂಗಯ್ಯ, ಅಲ್ಲು ಅರವಿಂದ್, ನಾಗೇಂದ್ರ ಬಾಬು, ಪವನ್ ಕಲ್ಯಾಣ್, ರಾಮ್ ಚರಣ್, ವರುಣ್ ತೇಜ್, ಸಾಯಿ ಧರಮ್ ತೇಜ್, ನಿಹಾರಿಕಾ, ಅಲ್ಲು ಅರ್ಜುನ್, ಅಲ್ಲು ಸಿರೀಶ್ ಮತ್ತು ಪಂಜ ವೈಷ್ಣವ್ ತೇಜ್ ಸೇರಿದ್ದಾರೆ. ಇನ್ನು ಚಿರಂಜೀವಿ ಅವರು ಅರ್ಜುನ್ ಅವರ ಚಿಕ್ಕಪ್ಪ ಆಗಿದ್ದಾರೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications