ಬೆಂಗಳೂರು, ಆಗಸ್ಟ್ 22: ಆರ್ಟಿಫಿಶೀಯಲ್ ಇಂಟಲಿಜನ್ಸ್ (AI) ಅಂದರೆ ಕೃತಕ ಬುದ್ಧಿಮತ್ತೆಯೂ ಅನೇಕ ಕೋಡಿಂಗ್ ಕಾರ್ಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದರಿಂದ ಸಾಫ್ಟ್ ವೇರ್ ಎಂಜಿನಿಯರ್‌ಗಳು ಇತರ ಕೌಶಲ್ಯಗಳನ್ನು ಕಲಿತುಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಮೆಜಾನ್ ವೆಬ್ ಸರ್ವೀಸ್ ಸಿಇಒ ಮ್ಯಾಟ್ ಗಾರ್ಮನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೂನ್‌ನಲ್ಲಿ ನಡೆದ ಆಂತರಿಕ ಸಭೆ ಒಂದರ ವೇಳೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ ಎನ್ನುವ ಮಾಹಿತಿ ದೊಡ್ಡ ಚರ್ಚೆ ಹುಟ್ಟುಹಾಕುತ್ತಿದೆ. ನೀವು ಈಗಿನಿಂದ 24 ತಿಂಗಳು ಅಂದರೆ ಒಂದು ವರ್ಷ ಮುಂದೆ ಹೋದಾಗ ಪರಿಸ್ಥಿತಿ ಎಲ್ಲಿಗೆ ಹೋಗಿ ನಿಲ್ಲಲಿದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಹೆಚ್ಚಿನ ಡೆವಲಪರ್‌ಗಳು ಕೋಡಿಂಗ್ ಮಾಡದಿರುವ ಸಾಧ್ಯತೆಯಿದೆ. ಎಂದು ಜೂನ್‌ನಲ್ಲಿ ಅಮೆಜಾನ್ ವೆಬ್ ಸರ್ವೀಸ್ CEO ಆಗಿ ಅಧಿಕಾರ ತೆಗೆದುಕೊಂಡ ಗಾರ್ಮನ್ ಹೇಳಿದ್ದಾರೆ.

ಕೋಡಿಂಗ್ ಎನ್ನುವುದು ನಾವು ಕಂಪ್ಯೂಟರ್‌ಗಳೊಂದಿಗೆ ಮಾತನಾಡುವ ಭಾಷೆಯಂತೆಯೇ ಇದೆ. ಇದು ನಮ್ಮದೆ ವಿಶಿಷ್ಟ ಕೌಶಲ್ಯವಲ್ಲ. ಹೊಸತನವನ್ನು ಹೇಗೆ ಆವಿಷ್ಕಾರ ಮಾಡುವುದು ನನ್ನ ಅಂತಿಮ ಬಳಕೆದಾರರನ್ನು ಹೇಗೆ ತಲುಪಬೆಕು ಎಂಬುದರ ಕುರಿತು ಗಮನವಿರಬೇಕು ಎಂದು ಹೇಳಿದ್ದಾರೆ. ಸರಲವಾಗಿ ಹೇಳಬೇಕು ಎಂದರೆ ಸಾಫ್ಟ್ ವೇರ್ ಡೆವಲಪರ್‌ನ ಕೆಲಸ ಬದಲಾಗುತ್ತದೆ ಎಂದು ಗಾರ್ಮನ್ ಹೇಳಿದರು.
ನಮ್ಮ ಗ್ರಾಹಕರಿಗೆ ಏನು ಬೇಕು ಎನ್ನುವುದನ್ನು ಅರಿತುಕೊಂಡು ಕೆಲಸ ಮಾಡಬೇಕಾಗಿದೆ. ಆದರೆ ನಾವೆಲಲ್ರೂ ತಲೆ ತಗ್ಗಿಸಿ ಹಳೆಯ ಮಾದರಿಯ ಕೋಡಿಂಗ್ ಬರೆಯುವುದರಲ್ಲಿ ನಿರತರಾಗಿದ್ದೇವೆ ಎಂದು ಹೇಳಿದ್ದಾರೆ.
ನೀಡುತ್ತಿರುವ ಸೂಚನೆ ಏನು?:
ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವುದರಿಂದ ಅಥವಾ AI ಗೆ ಸಂಬಂಧಿಸಿದ ಸಂಪನ್ಮೂಲಗಳನ್ನು ಬದಲಾಯಿಸಲು ಅಥವಾ ಹೆಚ್ಚು ಮಾಡಿಕೊಳ್ಳಲು ಮುಂದಾಗಿರುವುದರಿಂದ ಉದ್ಯೋಗಗಳನ್ನು ತೆಗೆದುಹಾಕುವ ಚರ್ಚೆಯು ಇತ್ತೀಚೆಗೆ ತೀವ್ರಗೊಂಡಿದೆ. ಸ್ವಯಂಚಾಲಿತವಾಗಿ ಕೋಡ್ ಅನ್ನು ಉತ್ಪಾದಿಸುವ ಹೊಸ AI ಪರಿಕರಗಳು ಕಂಪನಿಗಳಿಗೆ ಅದೇ ಸಂಖ್ಯೆಯ ಇಂಜಿನಿಯರ್‌ಗಳು ಅಥವಾ ಕಡಿಮೆ ವೇತನದಲ್ಲಿ ಉದ್ಯೋಗಿಗಳೊಂದಿಗೆ ಹೆಚ್ಚಿನ ಕೆಲಸ ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಅಮೆಜಾನ್ ವೆಬ್ ಸರ್ವೀಸ್ ಸಹ ಈ ವರ್ಷದ ಆರಂಭದಲ್ಲಿ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿತ್ತು.
ಗಾರ್ಮನ್‌ನ ಅವರು ಮಾತನಾಡುತ್ತಾ, AI ನಿಂದಾಗಿ ಡೆವಲಪರ್‌ಗಳು ಅಳಿವಿನಂಚಿಗೆ ಹೋಗುತ್ತಾರೆ ಎನ್ನುವ ಅಂಶ ಹೇಳುವುದಕ್ಕಿಂತ ಹೆಚ್ಚಾಗಿ ಸಲಹೆಯನ್ನು ಹಂಚಿಕೊಂಡಿದ್ದಾರೆ. ಅವರ ಆಶಾವಾದಿಯಾಗಿಯೇ ಮಾತನಾಡಿದ್ದರು. ಸೃಜನಾತ್ಮಕ ಅವಕಾಶಗಳ ಬಗ್ಗೆಯೂ ಹೇಳಿದ್ದರು. AI ಸಹಾಯದಿಂದ ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಲು ಅಮೆಜಾನ್ ವೆಬ್ ಸರ್ವೀಸ್ ಉದ್ಯೋಗಿಗಳು ಕೌಶಲ್ಯ ಹೆಚ್ಚಳ ಮಾಡಿಕೊಳ್ಳಬಹುದು ಎನ್ನುವುದನ್ನು ತಿಳಿಸಿದರು. 2020 ರಲ್ಲಿ ಡೆವಲಪರ್ ಆಗಿರುವುದಕ್ಕು 2025ರಲ್ಲಿ ಡೆವಲಪರ್ ಆಗಿರುವುದಕ್ಕೂ ಸಾಕಷ್ಟು ವ್ಯತ್ಯಾಸ ಬರಬಹುದು ಎಂದು ತಿಳಿಸಿದರು.
ಹೆಚ್ಚಿನ ಹೊರೆಯಾಗುತ್ತದೆಯೆ?:
ಈ ಹೇಳಿಕೆ ಸಂಬಂದ ಮಾಯನಾಡಿದ ಅಮೆಜಾನ್ ವೆಬ್ ಸರ್ವೀಸ್ ವಕ್ತಾರೆ ಐಶಾ ಜಾನ್ಸನ್, 'ಗಾರ್ಮನ್ ಮಾಡಿರುವ ಕಾಮೆಂಟ್‌ಗಳನ್ನು ಬೇರೆ ದೃಷ್ಟಿಯಲ್ಲಿಯೂ ನೋಡಬಹುದಾಗಿದೆ. ಹೊಸ AI ಪರಿಕರಗಳೊಂದಿಗೆ "ಇಂದಿಗಿಂತಲೂ ಹೆಚ್ಚಿನದನ್ನು ಸಾಧಿಸಲು" ಅವಕಾಶಗಳು ದೊರೆಯಲಿವೆ ಎಂದು ವಿಶ್ಲೇಷಣೆ ಮಾಡಬಹುದು. ಡೆವಲಪರ್‌ಗಳ ಪಾತ್ರ ಕುಸಿತವಾಗುತ್ತದೆ ಎಂದು ಅವರು ಹೇಳಿಲ್ಲ ಎಂದಿದ್ದಾರೆ.
ಡೆವಲಪರ್ಗಳು ತಮ್ಮ ಕೌಶಲ್ಯ ಮತ್ತು ಶಕ್ತಿಯನ್ನು ಅತ್ಯಂತ ಹೊಸ ಆವಿಷ್ಕಾರ್ ಕೆಲಸದ ಮೇಲೆ ಕೇಂದ್ರೀಕರಿಸಬಹುದು ಎಂದು ಜಾನ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಲ್ಲರೂ ಈಗ ಪ್ರೋಗ್ರಾಮರ್‌ಗಳು:
ಡೆವಲಪರ್ ಉದ್ಯೋಗಗಳಲ್ಲಿ ಈ ರೀತಿಯ AI-ಚಾಲಿತ ಬದಲಾವಣೆ ಬಗ್ಗೆ ಹೇಳಿದ್ದು ಗಾರ್ಮನ್ ಒಬ್ಬರೆ ಅಲ್ಲ. Nvidia ನ CEO, Jensen Huang, ಹೊಸ AI ಕೋಡಿಂಗ್ ಅಸಿಸ್ಟೆಂಟ್‌ಗಳಿಂದಾಗಿ "ಎಲ್ಲರೂ ಈಗ ಪ್ರೋಗ್ರಾಮರ್ ಆಗಿದ್ದಾರೆ" ಎಂದು ಹೇಳಿದ್ದರು. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ AI ತಂತ್ರಜ್ಞಾನದ ಪರಿಣಾಮ 1 ಬಿಲಿಯನ್ ಡೆವಲಪರ್‌ಗಳು ಹುಟ್ಟಿಕೊಳ್ಳಲಿದ್ದಾರೆ ಎಂದಿದ್ದರು. ಸ್ಟೆಬಿಲಿಟಿ AI ನ ಮಾಜಿ CEO ಇಮಾದ್ ಮೊಸ್ಟಾಕ್, "ಐದು ವರ್ಷಗಳಲ್ಲಿ ಯಾವುದೇ ಪ್ರೋಗ್ರಾಮರ್‌ಗಳು ಇರುವುದಿಲ್ಲ" ಎಂದು ಭವಿಷ್ಯ ನುಡಿದಿದ್ದರು.
ಒಟ್ಟಿನಲ್ಲಿ ಎಐ ತಂತ್ರಜ್ಞಾನದ ಬೆಳವಣಿಗೆ ಡೆವಲಪರ್ ಗಳ ದೃಷ್ಟಿಯಿಂದ ಪೂರಕ ಮತ್ತು ಮಾರಕ ಎರಡು ಅಂಶಗಳನ್ನು ಒಂಗೊಂಡಿದೆ. ನಾವು ಹೇಗೆ ಈ ಎಐ ಬಳಸಿಕೊಂಡೆ ಕೌಶಲ್ಯ ಹೆಚ್ಚಳ ಮಾಡಿಕೊಂಡು ಅದನ್ನು ಕೆಲಸಕ್ಕೆ ಬಳಸುತ್ತೇವೆ ಎನ್ನುವುದರ ಮೇಲೆ ಮುಂದಿನ ದಿನಗಳು ನಿರ್ಧರಿತವಾಗಲಿವೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications