ಭಾರತದ ಅತೀ ದೊಡ್ಡ ವಿಡಿಯೋ ಸ್ಟ್ರೀಮಿಂಗ್ ಸೇವೆಯನ್ನು ನೀಡುವ ಎಂಎಕ್ಸ್ ಪ್ಲೇಯರ್ ಅನ್ನು ಖರೀದಿಸಲು ಸಂಸ್ಥೆಯೊಂದಿಗೆ ಅಮೆಜಾನ್ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಈ ಬಗ್ಗೆ ಹಲವಾರು ಮೂಲಗಳು ಮಾಹಿತಿ ನೀಡಿರುವುದಾಗಿ ವರದಿ ಉಲ್ಲೇಖಿಸಿದೆ. ಅಮೆರಿಕಾದ ಇ -ಕಾಮರ್ಸ್ ಸಂಸ್ಥೆಯು ತನ್ನ ಸಂಸ್ಥೆಯ ವಿಸ್ತರಣೆಯ ಬಗ್ಗೆ ಚಿಂತನೆ ನಡೆಸಿದೆ.
ಎಂಎಕ್ಸ್ ಪ್ಲೇಯರ್ ಖರೀದಿ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಈ ಡೀಲ್‌ನ ನಿಯಮಗಳನ್ನು ಇನ್ನೂ ಕೂಡಾ ಅಂತಿಮಗೊಳಿಸಲಾಗಿಲ್ಲ. ಆದರೆ ಈ ಬಗ್ಗೆ ಅಮೆಜಾನ್ ಮತ್ತು ಟೈಮ್ಸ್ ಇಂಟರ್‌ನೆಟ್ ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಈ ನಡುವೆ ವರದಿಯು ಈ ಬಗ್ಗೆ ಮಾಹಿತಿ ನೀಡಿದ ಮೂಲಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.
ಟೈಮ್ಸ್ ಇಂಟರ್‌ನೆಟ್ ಮಾಲೀಕತ್ವದ ಈ ಆಪ್ ಅನ್ನು ಖರೀದಿ ಮಾಡಲು ಈ ಹಿಂದೆ ಕನಿಷ್ಠ ಎರಡು ಸಂಸ್ಥೆಗಳು ಮುಂದಾಗಿದೆ. ಇದರಲ್ಲಿ ಜೀ-ಸೋನಿ ಕೂಡಾ ಸೇರಿದೆ. ಈ ಹಿಂದೆ ಭಾರತದ ಪ್ರಮುಖ ಸಂಸ್ಥೆಯಾದ ಟೈಮ್ಸ್ ಇಂಟರ್‌ನೆಟ್ 2018ರಲ್ಲಿ 140 ಮಿಲಿಯನ್ ಡಾಲರ್‌ಗೆ ಎಂಎಕ್ಸ್ ಪ್ಲೇಯರ್ ಅನ್ನು ಖರೀದಿ ಮಾಡಿದೆ.

ಜಾಗತಿಕವಾಗಿ 300 ಮಿಲಿಯನ್ ಜನರು ಬಳಸುತ್ತಿರುವ ಆಪ್
ಬೇರೆ ಬೇರೆ ಫಾರ್ಮೆಟ್‌ನ ವಿಡಿಯೋಗಳನ್ನು ನೋಡಲು ಸಹಾಯ ಮಾಡುವ ವಿಡಿಯೋ ಆಪ್ ಎಂಎಕ್ಸ್ ಪ್ಲೇಯರ್ ಆಗಿದೆ. ಅಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ್ಲಲಿ ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು. ಜಾಗತಿಕವಾಗಿ ಸುಮಾರು 300 ಮಿಲಿಯನ್ ಜನರು ಎಂಎಕ್ಸ್ ಪ್ಲೇಯರ್ ಆಪ್ ಅನ್ನು ಬಳಸುತ್ತಿದ್ದಾರೆ.
ಈ ಸೇವೆಯು ಹೆಚ್ಚಾಗಿ ಜಾಹೀರಾತು ಮೂಲಕ ಆದಾಯವನ್ನು ಪಡೆಯುತ್ತಿದೆ. ಶಾರ್ಟ್ ವಿಡಿಯೋ ಫಾರ್ಮೆಟ್ ಅನ್ನು ಆರಂಭಿಸಿದ ಅತಿ ಹಳೆಯ ಸಂಸ್ಥೆ ಎಂದರೂ ತಪ್ಪಾಗಲಾರದು. 2020ರಲ್ಲಿ ಭಾರತ ಟಿಕ್‌ಟಾಕ್ ಬ್ಯಾನ್ ಮಾಡಿದ ಬಳಿಕ ಎಂಎಕ್ಸ್ ಪ್ಲೇಯರ್‌ನಲ್ಲೇ ಶಾರ್ಟ್ ವಿಡಿಯೋ ಇದೆ. ಎಂಎಕ್ಸ್ ಪ್ಲೇಯರ್ ಬಳಿಕ ಶಾರ್ಟ್ ವಿಡಿಯೋ ಆಪ್ ಶೇರ್‌ಚಾಟ್‌ನೊಂದಿಗೆ ವಿಲೀನವಾಗಿದೆ. ಇದು 900 ಮಿಲಿಯನ್ ಡಾಲರ್‌ನ ಡೀಲ್ ಆಗಿದೆ.
ಸುಮಾರು 184 ವರ್ಷ ಹಳೆಯದಾದ ಬೆನೆಟ್ ಕೋಲ್‌ಮ್ಯಾನ್ ಆಂಡ್ ಕಂಪನಿ ಟೈಮ್ಸ್ ಇಂಟರ್‌ನೆಟ್ ಅನ್ನು ನಿರ್ವಹಣೆ ಮಾಡುತ್ತಿದೆ. ಇದು ಸುಮಾರು 3 ಡಜನ್ ಸಂಪತ್ತನ್ನು ನಿರ್ವಹಣೆ ಮಾಡುತ್ತದೆ. ಇತ್ತೀಚೆಗೆ ಹಲವಾರು ವಹಿವಾಟುಗಳನ್ನು ಮಾರಾಟ ಮಾಡುತ್ತಿದೆ. ಅಮೆಜಾನ್ ಭಾರತದಲ್ಲಿ ಕಳೆದ ದಶಕಗಳಿಂದ 7 ಬಿಲಿಯನ್ ಖರ್ಚು ಮಾಡಿದೆ. ಈ ಸಂಸ್ಥೆಯು ಪ್ರೈಮ್ ವಿಡಿಯೋವನ್ನು ಕೂಡಾ ಹೊಂದಿದೆ. ಎಂಎಕ್ಸ್ ಮೌಲ್ಯದ 500 ಮಿಲಿಯನ್ ಡಾಲರ್ ಆಗಿದೆ.


Click it and Unblock the Notifications