ಟೆಕ್ ದೈತ್ಯ ಅಮೆಜಾನ್ ಕಂಪನಿ (Amazon Company) ಈ ಹಿಂದೊಮ್ಮೆ ಅಕ್ಟೋಬರ್‌ನಲ್ಲಿ, ತನ್ನ 14,000 ಕಾರ್ಪೊರೇಟ್ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ದೊಡ್ಡ ಘೋಷಣೆ ಮಾಡಿತ್ತು. ಈ ಮೂಲಕ ಅಮೆಜಾನ್‌ನಿಂದ ಕಳೆದ ಮೂರು ವರ್ಷಗಳಲ್ಲಿ ನಡೆಯುವ ಅತಿದೊಡ್ಡ ವಜಾ (Layoff) ಇದಾಗಿದೆ.

ಒಂದು ನಿರ್ಧಾರ, ಹಲವು ಪರಿಣಾಮ!
ಈ ಒಂದು ನಿರ್ಧಾರದಿಂದ ಕಂಪನಿಯ ಪ್ರತಿಯೊಂದು ವ್ಯವಹಾರದ ಮೇಲೂ ಪರಿಣಾಮ ಬೀರಿದೆ. ಅಂದರೆ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಇತರ ಸಾಧನಗಳಿಂದ ಹಿಡಿದು ಜಾಹೀರಾತು, ಚಿಲ್ಲರೆ ವ್ಯಾಪಾರ ಮತ್ತು ದಿನಸಿ ಮಳಿಗೆಗಳವರೆಗೆ ಕಂಪನಿಯ ಎಲ್ಲಾ ರೀತಿಯಲ್ಲೂ ಪರಿಣಾಮ ಬೀರಿದೆ. ಆದರೆ, ಇಂಜಿನಿಯರ್‌ಗಳ ವಿಭಾಗವು ಈ ಕಡಿತದಿಂದ ಹೆಚ್ಚು ಪ್ರಭಾವಿತವಾಗಿದೆ.
ಅತೀ ಹೆಚ್ಚು ವಜಾ ಆದ ಉದ್ಯೋಗ!
ವರದಿ ಪ್ರಕಾರ, ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ, ನ್ಯೂಜೆರ್ಸಿ ಮತ್ತು ವಾಷಿಂಗ್ಟನ್‌ನಲ್ಲಿ ಸಲ್ಲಿಸಲಾದ ದಾಖಲೆಗಳಲ್ಲಿ, ಕಡಿತಗೊಳಿಸಿದ ಸುಮಾರು 4,700 ಉದ್ಯೋಗಗಳಲ್ಲಿ 40% ಇಂಜಿನಿಯರಿಂಗ್ ಹುದ್ದೆಗಳೆಂದು ಹೇಳಲಾಗಿದೆ.
ಅಲ್ಲದೇ ಈ ವರದಿ ಕಂಪನಿಯ ಡಬ್ಲ್ಯುಎಆರ್‌ಎನ್ (WARN) ಫೈಲಿಂಗ್ಸ್‌ನಲ್ಲಿ ದಾಖಲಾಗಿದೆ. ಅಂದರೆ ಇದು ಕಂಪನಿಯ ಆಗುಹೋಗುಗಳನ್ನು ನೋಡುವುದಾಗಿದೆ. ಈ ದಾಖಲೆಗಳು ಡೇಟಾದ ಒಂದು ಭಾಗವನ್ನು ನೋಡಿಕೊಳ್ಳುತ್ತದೆ. ಆ ವರದಿ ಪ್ರಕಾರ, ಅಕ್ಟೋಬರ್‌ನಲ್ಲಿ ಅಮೆಜಾನ್‌ನ ಉದ್ಯೋಗ ಕಡಿತವು ವಿವಿಧ ಹಂತದ ಸಾಫ್ಟ್‌ವೇರ್ ಇಂಜಿನಿಯರ್‌ಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಈ ಲೇಆಫ್ ಎಸ್‌ಡಿಇ II (SDE II) ಪಾತ್ರಗಳು ಅಂದರೆ ಮಧ್ಯಮ ಮಟ್ಟದ ಉದ್ಯೋಗಿಗಳ ಮೇಲೆ ಇದು ಹೆಚ್ಚು ಪರಿಣಾಮ ಬೀರಿದೆ.
ಆದರೆ ಕಡಿಮೆ ಸಿಬ್ಬಂದಿಯೊಂದಿಗೆ ಕೆಲಸ ನಿರ್ವಹಿಸಲು ಕಂಪನಿ ಸಿದ್ಧವಾಗಿದ್ದು, ಅದಕ್ಕಾಗಿ ನಿರ್ದಿಷ್ಟವಾಗಿ ಇಂಜಿನಿಯರ್‌ಗಳ ಅಗತ್ಯವಿದೆ ಎಂದು ಮಾನವ ಸಂಪನ್ಮೂಲ ಮುಖ್ಯಸ್ಥ ಬೆತ್ ಗ್ಯಾಲೆಟ್ಟಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರೂ ಈ ವಜಾ ನಡೆದಿದೆ ಎನ್ನಲಾಗಿದೆ.
ವರದಿಯ ಪ್ರಕಾರ, ವಾರ್ನ್ (WARN) ಡೇಟಾವನ್ನು ಉಲ್ಲೇಖಿಸಿ, ಅಕ್ಟೋಬರ್ ಘೋಷಣೆಯ ನಂತರ 500 ಕ್ಕೂ ಹೆಚ್ಚು ಪ್ರೊಡಕ್ಟ್ ಮ್ಯಾನೇಜರ್ಸ್ ಮತ್ತು ಪ್ರೋಗ್ರಾಂ ಮ್ಯಾನೇಜರ್ಸ್ ಅನ್ನು ವಜಾಗೊಳಿಸಲಾಗಿದೆ. ಇದು ಒಟ್ಟು ಉದ್ಯೋಗ ಕಡಿತದ 10% ಕ್ಕಿಂತ ಹೆಚ್ಚು ಭಾಗ ಎಂದು ಹೇಳಲಾಗಿದೆ.
ಅಮೆಜಾನ್‌ನಲ್ಲಿ ನಡೆದ ಉದ್ಯೋಗ ಕಡಿತದ ಭಾಗವಾಗಿ ಸೀನಿಯರ್ ಮ್ಯಾನೇಜರ್‌ಗಳ ಮಟ್ಟದ ಹುದ್ದೆಗಳನ್ನು ಸಹ ತೆಗೆದುಹಾಕಲಾಗಿದೆ. ಅಮೆಜಾನ್ ಅಕ್ಟೋಬರ್‌ನಲ್ಲಿ ತನ್ನ ವಿವಿಧ ವಿಭಾಗಗಳಲ್ಲಿ 14,000 ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿತ್ತು.
ಅಮೆಜಾನ್‌ನ ಕಾರ್ಪೊರೇಟ್ ಸಿಬ್ಬಂದಿ ಬಳಗ, ಸುಮಾರು 350,000 ಜನರನ್ನು ಒಳಗೊಂಡಿದೆ. ಅಂದರೆ ಅಕ್ಟೋಬರ್‌ನಲ್ಲಿ ಘೋಷಿಸಲಾದ 14,000 ಕಡಿತಗಳು ಆ ಒಟ್ಟು ಸಂಖ್ಯೆಯ ಸುಮಾರು 4% ರಷ್ಟು ಎಂದು ಹೇಳಲಾಗಿದೆ.
ಅಮೆಜಾನ್ ಸಿಇಒ ಆಂಡಿ ಜಸ್ಸಿ ಹೇಳಿದ ಪ್ರಕಾರ, ಅಮೆಜಾನ್ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ನಿರ್ವಹಣಾ ಹಂತಗಳನ್ನು ಸರಳೀಕರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.


Click it and Unblock the Notifications