ಅಮೆಜಾನ್ ಎಲ್ಲರಿಗೂ ತಿಳಿದಿರುವ ಒಂದು ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್. ಏನೇ ಬೇಕೆಂದರೂ ಇಲ್ಲಿ ಜನರು ಖರೀದಿ ಮಾಡಬಹುದು. ಬೇಕಾದ್ದನ್ನು ಮನೆ ಬಾಗಿಲಿಗೆ ತಂಡು ಕೊಡುವ ಅಮೇಜಾನ್ ಸಾಕಷ್ಟು ಆಫರ್‍ಗಳು, ಕ್ಯಾಷ್‌ಬ್ಯಾಕ್‌ಗಳನ್ನು ನೀಡಿದೆ. ಅದಕ್ಕಾಗಿಯೇ ಇಂದಿಗೂ ಅಮೇಜಾನ್ ಅತೀ ಅಚ್ಚು-ಮೆಚ್ಚು. ಈಗ ಅದೇ ಅಮೇಜಾನ್‌ನಲ್ಲಿ ಜನರು ಈಗ ಕ್ರೆಡಿಟ್ ಕಾರ್ಡ್ ಕೂಡ ಪಡೆಯಬಹುದು.
ತನ್ನ ಸಹ-ಬ್ರಾಂಡ್ ಆಗಿರುವ ಐಸಿಐಸಿಐ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ನ ಅಮೇಜಾನ್ ಕಂಪನಿ ನೀಡಲು ಮುಂದಾಗಿದೆ. ಈ ಕಾರ್ಡ್ ಬಳಸಿ ಗ್ರಾಹಕರು ಏನೇ ಖರೀದಿ ಮಾಡಿದರೂ ಅದರ ಮೇಲೆ ಒಂದಿಷ್ಟು ಆಫರ್‍ಗಳನ್ನು ನೀಡುತ್ತಿದೆ. ಅದಕ್ಕಾಗಿ ಗ್ರಾಹಕರು ಮೊದಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವುದಕ್ಕೂ ಮೊದಲು ಗ್ರಾಹಕರು ಅದರ ಪ್ರಯೋಜನಗಳನ್ನು ತಿಳಿದುಕೊಳ್ಳುವುದು ಉತ್ತಮ.

ಅಮೆಜಾನ್ ಪೇ ಐಸಿಐಸಿಐ ಕ್ರೆಡಿಟ್ ಕಾರ್ಡ್‌ನ ಪ್ರಯೋಜನಗಳು:
- ಅಮೆಜಾನ್ ಪ್ರೈಮ್‌ನಲ್ಲಿ 3 ತಿಂಗಳ ಉಚಿತ ಸದಸ್ಯತ್ವ
- ಅಮೇಜಾನ್ ಶಾಪಿಂಗ್‌ನಲ್ಲಿ 200 ರೂ. ವರೆಗೆ 100% ಕ್ಯಾಶ್‌ಬ್ಯಾಕ್
- ವಿದ್ಯುತ್ ಬಿಲ್ ಪೇಮೆಂಟ್ ಮೇಲೆ 20% ಕ್ಯಾಶ್‌ಬ್ಯಾಕ್
- ಪ್ರಿಪೇಯ್ಡ್ ರೀಚಾರ್ಜ್‌ಗಳ ಮೇಲೆ 50% ಕ್ಯಾಶ್‌ಬ್ಯಾಕ್
- ಪೋಸ್ಟ್‌ಪೇಯ್ಡ್ ಬಿಲ್ ಪಾವತಿಗಳ ಮೇಲೆ 25% ಕ್ಯಾಶ್‌ಬ್ಯಾಕ್
- DTH ರೀಚಾರ್ಜ್‌ಗಳ ಮೇಲೆ 25% ಕ್ಯಾಶ್‌ಬ್ಯಾಕ್
- ಬ್ರಾಡ್‌ಬ್ಯಾಂಡ್ ಬಿಲ್ ಪಾವತಿಗಳ ಮೇಲೆ 50% ಕ್ಯಾಶ್‌ಬ್ಯಾಕ್
- ಗ್ಯಾಸ್ ಸಿಲಿಂಡರ್ ಪಾವತಿಗಳ ಮೇಲೆ 10% ಕ್ಯಾಶ್‌ಬ್ಯಾಕ್
- 1 ತಿಂಗಳ ಕಾಲ EazyDiner ಪ್ರೈಮ್‌ಗೆ ಉಚಿತ ಸದಸ್ಯತ್ವಸ
ಎಷ್ಟು ಕ್ಯಾಶ್‌ಬ್ಯಾಕ್ ಗಳಿಕೆ..?
- ಖರೀದಿಗಳ ಮೇಲೆ ಅಮೇಜಾನ್ ಪ್ರೈಮ್ ಸದಸ್ಯರಿಗೆ 5%, ಪ್ರೈಮ್ ಅಲ್ಲದ ಬಳಕೆದಾರರಿಗೆ 3% ಕ್ಯಾಶ್‌ಬ್ಯಾಕ್
- ವಿಮಾನ & ಹೋಟೆಲ್ ಬುಕಿಂಗ್ ಮೇಲೆ ಪ್ರೈಮ್ ಸದಸ್ಯರಿಗೆ 5%, ಪ್ರೈಮ್ ಅಲ್ಲದ ಬಳಕೆದಾರರಿಗೆ 3% ಕ್ಯಾಶ್‌ಬ್ಯಾಕ್
- ಗಿಫ್ಟ್ ಕಾರ್ಡ್ & ಇ-ಬುಕ್ಸ್ ಮೇಲೆ ಎಲ್ಲಾ ಬಳಕೆದಾರರಿಗೆ 2% ಕ್ಯಾಶ್‌ಬ್ಯಾಕ್
- ಅಮೆಜಾನ್ ಪೇ ಪಾಲುದಾರ ವ್ಯಾಪಾರಿಗಳಿಗೆ 2% ಕ್ಯಾಶ್‌ಬ್ಯಾಕ್
- ಅಮೆಜಾನ್ ಅಲ್ಲದ ವ್ಯಾಪಾರಿಗಳಿಗೆ 1% ಕ್ಯಾಶ್‌ಬ್ಯಾಕ್
- ಅಂತರರಾಷ್ಟ್ರೀಯ ವಹಿವಾಟುಗಳನ್ನು ಮಾಡಿದರೆ 1% ಕ್ಯಾಶ್‌ಬ್ಯಾಕ್
ಹೆಚ್ಚುವರಿ ಪ್ರಯೋಜನಗಳು ಏನೇನು..?
- ಸೇರ್ಪಡೆಯಾಗಲು ಆರಂಭದ ಶುಲ್ಕವೂ ಇಲ್ಲಿ ವಾರ್ಷಿಕ ಶುಲ್ಕವೂ ಇಲ್ಲ
- ಭಾರತದ ಎಲ್ಲಾ ಇಂಧನ ಕೇಂದ್ರಗಳಲ್ಲಿ 1% ಸರ್ಜಾಜ್ ಮನ್ನಾ
- 3 ಸಾವಿರಕ್ಕಿಂತ ಹೆಚ್ಚು ಖರೀದಿಸಿದರೆ 3-6 ತಿಂಗಳುಗಳ ಅವಧಿಗೆ ನೋ-ಕಾಸ್ಟ್ ಇಎಂಐ
ಅಮೆಜಾನ್ ಪೇ ಐಸಿಐಸಿಐ ಕ್ರೆಡಿಟ್ ಕಾರ್ಡ್‌ಗೆ ಮಾನದಂಡಗಳು:
- 18 ವರ್ಷ ಮೇಲ್ಪಟ್ಟಿನವರು ಮಾತ್ರ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕು
- ಐಸಿಐಸಿಐ ಬ್ಯಾಂಕ್‌ನ ಗ್ರಾಹಕರಿಗೆ ತಿಂಗಳಿಗೆ ಕನಿಷ್ಠ ₹ 25,000 ಆದಾಯ ಇರಬೇಕು
- ಐಸಿಐಸಿಐ ಬ್ಯಾಂಕ್‌ನ ಗ್ರಾಹಕರಲ್ಲದಿದ್ದರೆ ತಿಂಗಳಿಗೆ ಕನಿಷ್ಠ ₹ 35,000 ಆದಾಯ ಇರಬೇಕು
ಕ್ರೆಡಿಟ್ ಕಾರ್ಡ್‌ಗೆ ಅಗತ್ಯವಿರುವ ದಾಖಲೆಗಳು:
- ವಿಳಾಸ ಪುರಾವೆ (ಯಾವುದಾದರೂ ಒಂದು)
- ಆಧಾರ್ ಕಾರ್ಡ್
- ಚಾಲನಾ ಪರವಾನಗಿ
- ಪಾಸ್‌ಪೋರ್ಟ್
- ಮತದಾರರ ಗುರುತಿನ ಚೀಟಿ
- ಪ್ಯಾನ್ ಕಾರ್ಡ್ (ಕಡ್ಡಾಯ)
- ಆದಾಯ ಪುರಾವೆ (ಯಾವುದಾದರೂ ಒಂದು):
- ಇತ್ತೀಚಿನ ಸಂಬಳ ಚೀಟಿಗಳು
- ಮೂರು ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್
- ಇತ್ತೀಚಿನ ಐಟಿಆರ್
ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ:
- ಮೊದಲು ಐಸಿಐಸಿಐ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು
- 'Products' ಅಡಿಯಲ್ಲಿ 'Amazon Pay ICICI ಕ್ರೆಡಿಟ್ ಕಾರ್ಡ್' ಪುಟಕ್ಕೆ ನ್ಯಾವಿಗೇಟ್ ಮಾಡಿ
- 'ಈಗಲೇ ಅನ್ವಯಿಸು' ಎಂಬುದರ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಅರ್ಹತೆಯನ್ನು ಪರಿಶೀಲಿಸಲು ಮತ್ತು ಅರ್ಜಿಯನ್ನು ಮುಂದುವರಿಸಲು ನಿಮ್ಮನ್ನು Amazon ವೆಬ್‌ಸೈಟ್‌ಗೆ ಮರುನಿರ್ದೇಶಿಸಲಾಗುತ್ತದೆ
- ಅರ್ಜಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ತಕ್ಷಣವೇ ಡಿಜಿಟಲ್ ಕಾರ್ಡ್ ನೀಡಲಾಗುತ್ತದೆ
- ಅನುಮೋದನೆಯ ಬಳಿಕ ಕಾರ್ಡ್ ಅನ್ನು ಕೊರಿಯರ್ ಮೂಲಕ ಕಳುಹಿಸಲಾಗುತ್ತದೆ
ಗಮನಿಸಿ: ನೀವು ಅಮೆಜಾನ್ ಖಾತೆಯನ್ನು ಹೊಂದಿದ್ದವರು ಮಾತ್ರ ಅರ್ಜಿ ಸಲ್ಲಿಸಬಹುದು
ಹೀಗೆ ಗ್ರಾಹಕರು ತಮಗೆ ಅಗತ್ಯವಿರುವ ಕ್ರೆಡಿಟ್ ಕಾರ್ಡ್ ಪಡೆದು, ತಾವು ಖರೀದಿಸುವ ಉತ್ಪನ್ನಗಳ ಮೇಲೆ ಆಫರ್‍ಸ್ ಪಡೆಯಬಹುದು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications