ಹೊಸವರ್ಷ, ದೀಪಾವಳಿ, ಸ್ವಾತಂತ್ರ್ಯ ದಿನಾಚರಣೆ ಹೀಗೆ ಯಾವುದೇ ಹಬ್ಬಗಳು ಬರಲಿ ಪ್ರಮುಖ ಇ-ಕಾಮರ್ಸ್ ಕಂಪನಿಗಳು ವಿಶೇಷ ಸೇಲ್ ಲಾಂಚ್ ಮಾಡುತ್ತದೆ. ಅಮೆಜಾನ್ ತನ್ನ ಬಹುನಿರೀಕ್ಷಿತ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026 ಗಾಗಿ (Republic Day Sale 2026) ಪ್ರೈಮ್ ಸದಸ್ಯರಿಗೆ ಮುಂಚಿತ ವಿಶೇಷ ಆಫರ್ ಘೋಷಣೆ ಮಾಡಿದೆ. ಇದರ ಮೂಲಕ ಪ್ರೈಮ್ ಗ್ರಾಹಕರು ಸಾಮಾನ್ಯ ಬಳಕೆದಾರರಿಗಿಂತ 12 ಗಂಟೆಗಳ ಮುಂಚಿತವಾಗಿ ವಿಶೇಷ ಡೀಲ್‌ಗಳಿಗೆ ಪ್ರವೇಶ ಪಡೆಯಬಹುದು. ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟಿವಿಗಳು ಮತ್ತು ಪ್ರೊಜೆಕ್ಟರ್‌ನಂತಹ ಹೆಚ್ಚು ಬೇಡಿಕೆಯಿರುವ ಉತ್ಪನ್ನಗಳು ಆಫರ್ ಘೋಷಿಸುತ್ತಿದ್ದಂತೆ ಬೇಗನೆ ಖಾಲಿಯಾಗುತ್ತದೆ. ಅದೇ ಕಾರಣದಿಂದ ಇದೀಗ ಇಕಾಮರ್ಸ್ ಕಂಪನಿಗಳು ಪ್ರೈಮ್ ಸದಸ್ಯರಿಗೆ ಮೊದಲೇ ಖರೀದಿ ಅವಕಾಶ ನೀಡುತ್ತದೆ.

ಇಂದಿನಿಂದ ಆಫರ್ ಶುರು!
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026 ಅಧಿಕೃತವಾಗಿ ಜನವರಿ 16 ರಂದು ತಡರಾತ್ರಿ 12:00 ಗಂಟೆಗೆ ಪ್ರಾರಂಭವಾಗಲಿದೆ. ಆದರೆ, ಪ್ರೈಮ್ ಸದಸ್ಯರು ಸಾಮಾನ್ಯ ಗ್ರಾಹಕರಿಗಿಂತ ಮೊದಲೇ ಆಯ್ದ ವಸ್ತುಗಳ ಮೇಲೆ ಶಾಪಿಂಗ್ ಶುರು ಮಾಡಬಹುದು. ಈ ಮಾರಾಟದ ಅಂತಿಮ ದಿನಾಂಕವನ್ನು ಅಮೆಜಾನ್ ಇನ್ನೂ ಪ್ರಕಟಿಸಿಲ್ಲ. ಪ್ರೈಮ್ ಅರ್ಲಿ ಆಕ್ಸೆಸ್ ಮೂಲಕ, ಸೀಮಿತ ಸ್ಟಾಕ್‌ನ ಉತ್ಪನ್ನಗಳನ್ನು ಮೊದಲೇ ಪಡೆಯಲು ಹಾಗೂ ಬ್ಯಾಂಕ್ ಆಫರ್‌ಗಳು, ಎಕ್ಸ್‌ಚೇಂಜ್ ಆಫರ್‌ಗಳು ಮತ್ತು ನೊ-ಕಾಸ್ಟ್ ಇಎಂಐ ಆಯ್ಕೆಗಳನ್ನು ಸಹ ಪಡೆಯಬಹುದು.
ಒಂದು ಸೇಲ್, ಹಲವು ಆಫರ್
ರಿಪಬ್ಲಿಕ್ ಡೇ ಸೇಲ್ 2026 ಸಮಯದಲ್ಲಿ, ಹಲವು ವಿಭಾಗಗಳಲ್ಲಿ ಉತ್ತಮ ರಿಯಾಯಿತಿಗಳು ಲಭ್ಯ. ಇವುಗಳಲ್ಲಿ ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು, ದಿನನಿತ್ಯದ ಸಾಮಾಗ್ರಿಗಳು ಮತ್ತು ದೈನಂದಿನ ಬಳಕೆಯ ವಸ್ತುಗಳು ಸೇರಿವೆ. ಮೊಬೈಲ್ ಫೋನ್‌ಗಳು ಮತ್ತು ಅವುಗಳ ಪರಿಕರಗಳ ಮೇಲೆ ಶೇ. 40 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಮೊಬೈಲ್ ಪರಿಕರಗಳು ₹39 ರಿಂದ ಮತ್ತು ಬಜೆಟ್ ಸ್ಮಾರ್ಟ್‌ಫೋನ್‌ಗಳು ₹5,999 ರಿಂದ ಆರಂಭವಾಗಲಿವೆ.
ಎಷ್ಟು ಡಿಸ್ಕೌಂಟ್?
ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳ ಮೇಲೆ ಶೇ. 75 ರಷ್ಟು ರಿಯಾಯಿತಿ ಲಭ್ಯವಿದ್ದು, ಮನೆ ಮತ್ತು ಅಡುಗೆಮನೆ ಉಪಕರಣಗಳ ಮೇಲೆ ಶೇ. 70 ರಷ್ಟು ಡಿಸ್ಕೌಂಟ್ ಇದೆ. ಕೈಗಾರಿಕಾ ಸಾಮಗ್ರಿಗಳ ಮೇಲೆ ಶೇ. 60 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅಲ್ಲದೆ, ಟಿವಿಗಳು ಮತ್ತು ದೊಡ್ಡ ಗೃಹೋಪಯೋಗಿ ವಸ್ತುಗಳ ಮೇಲೆ ಶೇ. 55 ರಷ್ಟು ಬೆಲೆ ಕಡಿತ ಇರುತ್ತದೆ.
ಈ ಸೇಲ್‌ನಲ್ಲಿ ಅಮೆಜಾನ್ ಗ್ರಾಹಕರಿಗೆ ಹಲವಾರು ಲಾಭಗಳನ್ನು ಸಹ ಪಡೆಯಬಹುದು. ಅರ್ಹ ಕ್ರೆಡಿಟ್ ಕಾರ್ಡ್ ಬಳಕೆದಾರರು ತಕ್ಷಣ ಶೇ. 10 ರಷ್ಟು ಬ್ಯಾಂಕ್ ರಿಯಾಯಿತಿ ಪಡೆಯಬಹುದು. ಸ್ಮಾರ್ಟ್‌ಫೋನ್‌ಗಳನ್ನು ತಿಂಗಳಿಗೆ ₹1,417 ರಿಂದ ಮತ್ತು ಟೆಲಿವಿಷನ್‌ಗಳನ್ನು ತಿಂಗಳಿಗೆ ₹900 ರಿಂದ ನೊ-ಕಾಸ್ಟ್ ಇಎಂಐ ಆಯ್ಕೆ ಮೂಲಕ ಖರೀದಿ ಮಾಡಬಹುದು.
ಮಾರಾಟದ ಸಮಯದಲ್ಲಿ, ಎಲ್ಲಾ ಬೆಲೆ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಉತ್ತಮ ಡೀಲ್‌ಗಳು ಲಭ್ಯ. Samsung Galaxy A55 5G ಅನ್ನು ₹23,999 ಕ್ಕೆ ಪಟ್ಟಿ ಮಾಡಲಾಗಿದೆ. OnePlus 15 ಬೆಲೆ ₹68,999 ಆಗಿದ್ದು, ಕ್ರೆಡಿಟ್ ಕಾರ್ಡ್ ಇಎಂಐ ಮೇಲೆ ಹೆಚ್ಚುವರಿ ₹4,000 ರಿಯಾಯಿತಿ ಲಭ್ಯವಿದೆ. ₹7,000 ಬ್ಯಾಂಕ್ ರಿಯಾಯಿತಿಯೊಂದಿಗೆ iQoo 15 ಅನ್ನು ₹65,999 ಕ್ಕೆ ಮತ್ತು Realme Narzo 80 Lite 5G ಯನ್ನು ₹11,499 ರಿಂದ ಖರೀದಿಸಬಹುದು.
ಐಫೋನ್‌ಗಳಲ್ಲಿ ಬಂಪರ್ ರಿಯಾಯಿತಿ
iPhone 17 Pro ಅನ್ನು ಅಮೆಜಾನ್‌ನ ರಿಪಬ್ಲಿಕ್ ಡೇ ಸೇಲ್‌ನಲ್ಲಿ ₹1,25,400 ಕ್ಕೆ ಖರೀದಿಸಬಹುದು. iPhone 17 Pro Max ಬೆಲೆ ₹1,40,400 ಆಗಿದ್ದು, ಇದರಲ್ಲಿ ಅರ್ಹ ಬ್ಯಾಂಕ್ ಕಾರ್ಡ್‌ಗಳ ಮೂಲಕ ₹3,000 ರಿಯಾಯಿತಿ ಮತ್ತು ₹6,500 ಕೂಪನ್ ಲಾಭ ಕೂಡಾ ಪಡೆಯುವ ಅವಕಾಶವಿದೆ. ಇದರ ಜೊತೆಗೆ, Amazon Republic Day Sale 2026 ರಲ್ಲಿ iPhone Air ಅನ್ನು ₹91,249 ಕ್ಕೆ ಖರೀದಿಸಬಹುದು, ಇದರಲ್ಲಿ ₹750 ಬ್ಯಾಂಕ್ ರಿಯಾಯಿತಿ ಒಳಗೊಂಡಿದೆ.


Click it and Unblock the Notifications