ಜಗತ್ತಿನ ಅತೀ ದೊಡ್ಡ ಇ ಕಾಮರ್ಸ್ ಕಂಪೆನಿಯಾಗಿರುವ ಅಮೆಜಾನ್ ಇದೀಗ ಮತ್ತಷ್ಟು ಪ್ರಬಲವಾಗಿ ಹೊರಹೊಮ್ಮಲು ಈಗಾಗಲೇ ಹಲವು ಯೋಜನೆಗಳನ್ನು ಹೊಂದಿದ್ದು, ಇದೀಗ ಇದರ ಭಾಗವೆಂಬಂತೆ 'ತೇಝ್' ಅನ್ನು ಭಾರತದಲ್ಲಿ ಮುಂದಿನ ವರ್ಷದಿಂದ ಪ್ರಾರಂಭಿಸಲಿದೆ. ಅಮೆಜಾನ್ ಸಂಸ್ಥೆಯು ಭಾರತದಲ್ಲಿ ತನ್ನ ತ್ವರಿತ ವಾಣಿಜ್ಯ ವಿತರಣಾ ಸೇವೆಯ ಪ್ರಾರಂಭವನ್ನು ವೇಗಗೊಳಿಸುತ್ತಿದ್ದು, ಅದರಂತೆ "Tez" ಪ್ರಾರಂಭಿಸಿದೆ. ಆರಂಭದಲ್ಲಿ 2025 ರ ಮೊದಲ ತ್ರೈಮಾಸಿಕದಲ್ಲಿ ಹೊಸ ಯೋಜನೆಯನ್ನು ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಇದೀಗ ಯೋಜನೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ. ತೇಝ್ ಮೂಲಕ ಅಮೆಜಾನ್ ತನ್ನ ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ಕೇವಲ 15 ನಿಮಿಷಗಳಲ್ಲಿ ಪೂರೈಕೆ ಮಾಡಲಿದ್ದು, ಇದರಿಂದ ಭಾರತದಲ್ಲಿ ತನ್ನ ಲಾಭಾಂಶವನ್ನು ಮತ್ತಷ್ಟು ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ.
ಕಠಿಣ ಪ್ರತಿಸ್ಪರ್ಧೆ
ಸದ್ಯ ಅಮೆಜಾನ್ ನ 'Tez' ಪ್ರಾರಂಭದಿಂದ ಪ್ರತಿಸ್ಪರ್ಧಿಗಳಾದ ಬ್ಲಿಂಕಿಟ್, ಸ್ವಿಗ್ಗಿ, ಝೆಪ್ಟೊ, ಬಿಗ್ ಬಾಸ್ಕೆಟ್ ಮುಂತಾದ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡಲು ಮುಂದಾಗಿದೆ. ಯಾಕೆಂದರೆ ಬ್ಲಿಂಕಿಟ್, ಸ್ವಿಗ್ಗಿ, ಝೆಪ್ಟೊ, ಬಿಗ್ ಬಾಸ್ಕೆಟ್ ಮುಂತಾದ ಸಂಸ್ಥೆಗಳು ಈಗಾಗಲೇ ಕಡಿಮೆ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ಪೂರೈಸುವ ವ್ಯವಸ್ಥೆ ಹೊಂದಿದೆ. ಹಾಗಾಗಿ ಅಮೆಜಾನ್‌ನ ತೇಝ್ ಆಗಮನದಿಂದ ಸದ್ಯ ಗ್ರಾಹಕ ಮಾರುಕಟ್ಟೆಯಲ್ಲಿ ತೀವ್ರ ಪ್ರತಿಸ್ಪರ್ಧೆ ಉಂಟಾಗಲಿದೆ. ಇನ್ನು ಅಮೆಜಾನ್ ಸಂಸ್ಥೆಯ ಹೊಸ ಯೋಜನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆಜಾನ್ ಇಂಡಿಯಾದ ಮ್ಯಾನೇಜರ್ ಸಮೀರ್ ಕುಮಾರ್, ನಮ್ಮ ಗ್ರಾಹಕರಿಗೆ ತಮ್ಮ ದೈನಂದಿನ ಅಗತ್ಯ ವಸ್ತುಗಳನ್ನು 15 ನಿಮಿಷ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಪೂರೈಸುವ ಆಯ್ಕೆಯನ್ನು ನೀಡಲು ನಾವು ಯೋಜನೆ ಪ್ರಾರಂಭಿಸುತ್ತಿದ್ದೇವೆ. ನಾವು ಈಗಾಗಲೇ ಭಾರತದಾದ್ಯಂತ ಅಮೆಜಾನ್ ಪ್ರೈಮ್ ಸದಸ್ಯರು ಸೇರಿದಂತೆ ಲಕ್ಷಾಂತರ ಗ್ರಾಹಕರನ್ನು ಹೊಂದಿದ್ದೇವೆ. ಅದೂ ಅಲ್ಲದೆ ನಮ್ಮ ಸಂಸ್ಥೆ ಬಗ್ಗೆ ಅವರಿಗೆ ನಂಬಿಕೆ ಇದೆ. ಭಾರತದ ಬಗ್ಗೆ ಅಮೆಜಾನ್‌ನ ಬದ್ಧತೆ ಹಿಂದೆಂದಿಗಿಂತಲೂ ಪ್ರಬಲವಾಗಿದೆ ಎಂದು ತಿಳಿಸಿದ ಅವರು ಭಾರತದಲ್ಲಿ ಬದಲಾವಣೆ ತರಲು ಕೃತಕ ಬುದ್ಧಿಮತ್ತೆಯ ಸಾಮರ್ಥ್ಯದ ಬಗ್ಗೆಯೂ ಹೆಚ್ಚಿನ ಮಾಹಿತಿ ನೀಡಿದರು. ಆರೋಗ್ಯ, ಚಿಲ್ಲರೆ ವ್ಯಾಪಾರ ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ AI ಮುಂದಿನ ಹಂತದ ಬೆಳವಣಿಗೆಯನ್ನು ಮುನ್ನಡೆಸಲಿದೆ. ಸಂಸ್ಥೆಯು $13 ಶತಕೋಟಿ ರಫ್ತುಗಳನ್ನು ಸಕ್ರಿಯಗೊಳಿಸಿದ್ದು, ಅಲ್ಲದೆ ನಿಗದಿತ ಗುರಿಗಳನ್ನು ಈಗಾಗಲೇ ಪೂರೈಸಿದೆ ಎಂದು ತಿಳಿಸಿದ್ದಾರೆ. ಇನ್ನು ಕೇವಲ ಎರಡು ತಿಂಗಳ ಹಿಂದೆಯಷ್ಟೇ ಅಮೆಜಾನ್ ಇಂಡಿಯಾದ ಮ್ಯಾನೇಜರ್ ಹುದ್ದೆ ಅಲಂಕರಿಸಿದ್ದ ಸಮೀರ್ ಕುಮಾರ್ ಅವರ ನೇತೃತ್ವದಲ್ಲಿ ಇದೇ ಮೊದಲ ಬಾರಿ ಹೊಸ ಯೋಜನೆ ಭಾರತದಲ್ಲಿ ಪ್ರಕಟವಾಗಿದ್ದು, ಹಾಗಾಗಿ ಯೋಜನೆಯನ್ನು ಯಶಸ್ವಿಯಾಗಿ ಸಂಘಟಿಸಬೇಕಾದ ಒತ್ತಡ ಕೂಡ ಅವರ ಮೇಲಿದೆ ಎನ್ನಲಾಗಿದೆ. ಇನ್ನು ಮುಂದಿನ ಹಲವು ವರ್ಷಗಳಿಗೆ ಅಮೆಜಾನ್ ಇಂಡಿಯಾವು ಭಾರತದಲ್ಲಿ ತನ್ನ ಹಲವು ಗುರಿಗಳನ್ನು ಹಾಕಿಕೊಂಡಿದೆ. ಅದರಂತೆ 2030ರ ವೇಳೆಗೆ ಅಮೆಜಾನ್ ಭಾರತದಿಂದ ಸುಮಾರು 80 ಶತಕೋಟಿ ಡಾಲರ್ ಮೊತ್ತದ ವಸ್ತುಗಳ ರಫ್ತಿಗೆ ಯೋಜನೆ ಹಾಕಿಕೊಂಡಿದೆ. ಭಾರತದಲ್ಲಿ ಈಗಾಗಲೇ ಫ್ಲಿಪ್ ಕಾರ್ಟ್ ಸಂಸ್ಥೆಯು ವಿತ್ ಮಿನಿಟ್ಸ್ ಎಂಬ ಅತೀ ವೇಗದಲ್ಲಿ ಅಗತ್ಯ ವಸ್ತುಗಳನ್ನು ಪೂರೈಸುವ ವ್ಯವಸ್ಥೆಯನ್ನು ಹೊಂದಿದ್ದರೆ ಉಳಿದಂತೆ ಝೊಮ್ಯಾಟೊದ ಬ್ಲಿಂಕಿಟ್, ಸ್ವಿಗ್ಗಿಯ ಇನ್‌ಸ್ಟಾಮಾರ್ಟ್, ಝೆಪ್ಟೊದ ಲೈಟ್‌ಸ್ಪೀಡ್ ಮುಂತಾದ ಸಂಸ್ಥೆಗಳು ಕೂಡ ಕಾರ್ಯನಿರ್ವಹಿಸುತ್ತಿದೆ. ಇದರ ನಡುವೆ ಇದೀಗ ಅಮೆಜಾನ್‌ನ ತೇಝ್ ಮಾರುಕಟ್ಟೆಗೆ ಬಂದಿರುವುದು ಒಟ್ಟಾರೆಯಾಗಿ ಸ್ಪರ್ಧೆಯನ್ನು ಸೃಷ್ಟಿಸಲಿದೆ.

ಬೆಂಗಳೂರಿನಲ್ಲಿ ಪ್ರಾರಂಭ
ಇನ್ನು ಅಮೆಜಾನ್‌ನ ತೇಝ್ ವಿತರಣಾ ವ್ಯವಸ್ಥೆಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸುವ ಕುರಿತು ಮಾತನಾಡಿರುವ ಅಮೆಜಾನ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ಅಮಿತ್ ಅಗರ್ವಾಲ್ ಅವರು, ನಮ್ಮ ಗುರಿಯು ಒಂದೇ ಆಗಿದೆ. ಅಂದರೆ ನಾವು ಅತಿ ದೊಡ್ಡ ಗ್ರಾಹಕರ ಸಮೂಹಕ್ಕೆ ಹೆಚ್ಚಿನ ವೇಗದಲ್ಲಿ ಉತ್ಪನ್ನಗಳ ದೊಡ್ಡ ಆಯ್ಕೆಯನ್ನು ನೀಡಲು ಬಯಸುತ್ತೇವೆ. ನಮ್ಮ ನಗರ ಗ್ರಾಹಕರು ಸಣ್ಣ ಆಯ್ಕೆಯ ಉತ್ಪನ್ನಗಳನ್ನು ಪಡೆಯಲು ಉತ್ಸುಕರಾಗಿದ್ದಾರೆಂದು ನಾವು ಕಂಡುಕೊಂಡಿದ್ದೇವೆ. ಪ್ರತಿದಿನ ನಾವು ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications