ಬಿಲಿಯನೇರ್ ಮುಕೇಶ್ ಅಂಬಾನಿ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈಗ ವಿಶ್ವದ ಅತಿದೊಡ್ಡ ಉತ್ಪಾದನಾ ಸ್ಟುಡಿಯೊಗಳಲ್ಲಿ ಒಂದಾದ ವಾಲ್ಟ್ ಡಿಸ್ನಿ ಕಂಪನಿಯೊಂದಿಗೆ ಬಹು-ಶತಕೋಟಿ ಡಾಲರ್ ಒಪ್ಪಂದವನ್ನು ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಮೂಲಕ ಮನರಂಜನಾ ಉದ್ಯಮಕ್ಕೆ ಪ್ರವೇಶಿಸುತ್ತಿದ್ದಾರೆ.
ಬ್ಲೂಮ್‌ಬರ್ಗ್‌ನ ಇತ್ತೀಚಿನ ವರದಿಯ ಪ್ರಕಾರ, ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ವಾಲ್ಟ್ ಡಿಸ್ನಿ ಕಂಪನಿಯ ಭಾರತೀಯ ಕಾರ್ಯಾಚರಣೆಗಳನ್ನು ಬೃಹತ್ ಒಪ್ಪಂದದಲ್ಲಿ ಖರೀದಿಸಲು ಸಿದ್ಧವಾಗಿದೆ. ಈ ಒಪ್ಪಂದದ ಮೂಲಕ ರಿಲಯನ್ಸ್ ಡಿಸ್ನಿಯ ಭಾರತದ ಕಾರ್ಯಾಚರಣೆಗಳಲ್ಲಿ ನಿಯಂತ್ರಣ ಪಾಲನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಪ್ರಮುಖ ಅಮೇರಿಕನ್ ಮನರಂಜನಾ ಕಂಪನಿಯಾಗಿರುವ ವಾಲ್ಟ್ ಡಿಸ್ನಿ ಕೋ, ದೇಶದಲ್ಲಿ ರಿಲಯನ್ಸ್‌ನ ಕಾರ್ಯತಂತ್ರದ ಪ್ರಭಾವದೊಂದಿಗೆ ತನ್ನ ವ್ಯವಹಾರವನ್ನು ವಿಸ್ತರಿಸಲು ಸಾಧ್ಯವಾಗುತ್ತದೆ. ಭಾರತದಲ್ಲಿ ಕಂಪನಿಯ ಕಾರ್ಯಾಚರಣೆಗಳಲ್ಲಿ ಸಣ್ಣ ಪಾಲನ್ನು ಹೊಂದುವುದನ್ನು ಮುಂದುವರಿಸುತ್ತದೆ.
ಡಿಸ್ನಿ ಸ್ಟಾರ್ 10 ಬಿಲಿಯನ್ ಡಾಲರ್ (83,138 ಕೋಟಿ ರೂಪಾಯಿ) ಅಂದಾಜು ಮೌಲ್ಯವನ್ನು ಹೊಂದಿದೆ. ರಿಲಯನ್ಸ್ ಮತ್ತು ವಾಲ್ಟ್ ಡಿಸ್ನಿ ನಡುವಿನ ಒಪ್ಪಂದವು 5 ಬಿಲಿಯನ್ ಡಾಲರ್ ವೆಚ್ಚವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ನಡುವೆ ಮುಕೇಶ್ ಅಂಬಾನಿ ಸಂಸ್ಥೆಯು ಡಿಸ್ನಿಯ ಆಸ್ತಿಯಲ್ಲಿ ಸುಮಾರು 7-8 ಬಿಲಿಯನ್ ಡಾಲರ್ ಅಥವಾ 62,378 ಕೋಟಿ ರೂಪಾಯಿ ಹೊಂದುವ ನಿರೀಕ್ಷೆಯಿದೆ.
ರಿಲಯನ್ಸ್ ಮತ್ತು ವಾಲ್ಟ್ ಡಿಸ್ನಿ ಎರಡೂ ನವೆಂಬರ್‌ನಲ್ಲಿ ಪ್ರಮುಖ ಒಪ್ಪಂದದ ಬಗ್ಗೆ ಘೋಷಣೆ ಮಾಡುತ್ತವೆ ಎಂದು ನಿರೀಕ್ಷಿಸಲಾಗಿದೆ. ರಿಲಯನ್ಸ್‌ನ ಮಾಧ್ಯಮ ಘಟಕಗಳು ಡಿಸ್ನಿಯೊಂದಿಗೆ ವಿಲೀನವಾಗುವ ಸಾಧ್ಯತೆಯಿದೆ. ಅಂದರೆ ಡಿಸ್ನಿ + ಹಾಟ್‌ಸ್ಟಾರ್ ರಿಲಯನ್ಸ್-ಮಾಲೀಕತ್ವದ ಜಿಯೋ ಸಿನಿಮಾದೊಂದಿಗೆ ಪಾಲುದಾರಿಕೆಯನ್ನು ಹೊಂದಿರಬಹುದು.
ಈ ಹಿಂದೆ ಮುಕೇಶ್ ಅಂಬಾನಿಯವರ ಜಿಯೋ ಸಿನಿಮಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸ್ಟ್ರೀಮಿಂಗ್ ಹಕ್ಕನ್ನು 2.7 ಬಿಲಿಯನ್ ಡಾಲರ್ ಅಥವಾ 22,450 ಕೋಟಿ ಕೋಟಿ ರೂಪಾಯಿಗೆ ಪಡೆದುಕೊಂಡಿದೆ. ರಿಲಯನ್ಸ್ ನಂತರ ಯಾವುದೇ ಚಂದಾದಾರಿಕೆ ಇಲ್ಲದೆಯೇ ಬೃಹತ್ ದೇಶೀಯ ಕ್ರಿಕೆಟ್ ಪಂದ್ಯಾವಳಿಯನ್ನು ಉಚಿತವಾಗಿ ಸ್ಟ್ರೀಮ್ ಮಾಡಲು ನಿರ್ಧರಿಸಿತು.
ಡಿಸ್ನಿ+ ಹಾಟ್‌ಸ್ಟಾರ್ ಭಾರತದಲ್ಲಿ ಹಲವು ವರ್ಷಗಳಿಂದ ಐಪಿಎಲ್ ಮತ್ತು ಪ್ರಮುಖ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳ ಸ್ಟ್ರೀಮಿಂಗ್ ಪಾಲುದಾರರಾಗಿದ್ದಾರೆ. ಇಲ್ಲಿಯವರೆಗೆ, ನಿಜವಾದ ಮೌಲ್ಯಮಾಪನ ಅಥವಾ ಒಪ್ಪಂದದ ಬೆಲೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ನವೆಂಬರ್ 2023 ರ ಮೊದಲ ವಾರದಲ್ಲಿ ಈ ಬಗ್ಗೆ ಮಾಹಿತಿ ನೀಡುವ ನಿರೀಕ್ಷೆಯಿದೆ.


Click it and Unblock the Notifications