ಅಮೆರಿಕಾದ ಸುಂಕದ (America Tariffs) ಸಮರ ಹಲವು ದಿನಗಳಿಂದ ಸದ್ದು ಮಾಡುತ್ತಲೇ ಇತ್ತು. ಎರಡನೇ ಬಾರಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಾಗಿನಿಂದ ನಾನೇ ಎಂಬ ಭಾವನೆಯಿಂದಲೂ ಮಾತು ಮಾತಿಗೂ ಸುಂಕದ ಬೆದರಿಕೆ ಹಾಕಲು ಶುರು ಮಾಡಿದ್ದರು. ಅಲ್ಲದೇ ತನ್ನ ನಡೆಯನ್ನು ಕ್ಯಾರೇ ಅನ್ನದೇ ವಹಿವಾಟು ನಡೆಸುತ್ತಿದ್ದ ಭಾರತ ಮತ್ತು ಚೀನಾದ (China) ಮೇಲೂ 100% ಸುಂಕ ವಿಧಿಸಿ ದರ್ಪ ತೋರಿಸಿದ್ದರು. ಆದ್ರೆ ಈ ವ್ಯಾಪಾರ ಉದ್ವಿಗ್ನತೆಯ ನಡುವೆಯೇ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ದಕ್ಷಿಣ ಕೊರಿಯಾದ (South Koria) ಬುಸಾನ್‌ನಲ್ಲಿ ಭೇಟಿಯಾಗಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ ಚೀನಾ ಅಧ್ಯಕ್ಷರನ್ನು ಭೇಟಿಯಾದ ಕೆಲವೇ ಹೊತ್ತಲ್ಲಿ ಟ್ರಂಪ್ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಸುದೀರ್ಘ ಚರ್ಚೆಯ ನಂತರ ಚೀನಾಕ್ಕೆ ಸಂಬಂಧಿಸಿದ ಫೆಂಟನಿಲ್ ಸುಂಕವನ್ನು 10% ಕಡಿತಗೊಳಿಸುವುದಾಗಿ ಟ್ರಂಪ್ ಹೇಳಿದ್ದಾರೆ ಎನ್ನಲಾಗಿದೆ. ಈ ಮೂಲಕ ಟ್ರಂಪ್ ಚೀನಾದ ಮೇಲೆ ಇದ್ದ ಶೇ.57% ಪ್ರತಿಶತದಿಂದ ಸುಂಕದಿಂದ ಶೇ. 47% ಪ್ರತಿಶತಕ್ಕೆ ಇಳಿಸುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಚೀನಾದ ಒಪ್ಪಂದಕ್ಕೆ ಚೀನಾದ ಪ್ರತಿಕ್ರಿಯೆ:
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಸುಂಕ ಕಡಿಮೆ ಮಾಡುವುದಾಗಿ ಒಪ್ಪಿಕೊಳ್ಳುತ್ತಿದ್ದಂತೆ, ಇತ್ತ ಚೀನಾ ಪ್ರತಿಯಾಗಿ ಅಮೆರಿಕಾದ ಸೋಯಾಬೀನ್ ಖರೀದಿಯನ್ನು ಪುನರಾರಂಭಿಸಲು ನಿರ್ಧರಿಸಿದೆ. ಅಷ್ಟೇ ಅಲ್ಲದೇ, ಅಪರೂಪದ ಭೂ ಖನಿಜಗಳ ರಫ್ತು ಸಮಸ್ಯೆ ಬಗೆಹರಿದು, ಒಂದು ವರ್ಷದ ಡೀಲ್ ಮಾಡಿಕೊಂಡಿದೆ ಮತ್ತು ಫೆಂಟನಿಲ್‌ನ ಅಕ್ರಮ ಸಾಗಣೆಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಚೀನಾ ಒಪ್ಪಿಕೊಂಡಿದೆ ಎಂದು ಟ್ರಂಪ್ ಹೇಳಿದ್ದಾರೆ. ಆದ್ರೆ ಈ ಬಗ್ಗೆ ಯಾವುದೇ ರೀತಿಯಲ್ಲೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ಸಭೆ ಬಳಿಕ ಮಾತನಾಡಿದ ಟ್ರಂಪ್, "ಫೆಂಟನಿಲ್ ಸಮಸ್ಯೆಯಲ್ಲಿ ನಮಗೆ ಚೀನಾ ಭರವಸೆ ನೀಡಿರುವ ಹಿನ್ನೆಲೆ ಸುಂಕವನ್ನು ಕಡಿಮೆ ಮಾಡುತ್ತೇನೆಂದು ಹೇಳಿದ್ದಾರೆ. ಅಲ್ಲದೇ ಚೀನಾದೊಂದಿಗೆ ಅಮೆರಿಕಾ ಉತ್ತಮ ಸಂಬಂಧ ಇದೆ ಎಂದು ಮತ್ತೊಮ್ಮೆ ಹೇಳಿದ್ದಾರೆ.
ಹಲವು ವರ್ಷಗಳ ನಂತರ ಟ್ರಂಪ್ ಚೀನಾಗೆ ಭೇಟಿ!
ಮುಂಬರುವ ವರ್ಷದಲ್ಲಿ ಡೊನಾಲ್ಡ್ ಟ್ರಂಪ್ ಚೀನಾಗೆ ಭೇಟಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೇ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ, ಚೀನಾಗೆ ಅವರ ಮೊದಲ ಭೇಟಿಯಾಗಿದೆ. ವ್ಯಾಪಾರ ಮತ್ತು ರಷ್ಯಾದೊಂದಿಗಿನ ಸಂಬಂಧಗಳ ಹಿನ್ನೆಲೆ ಅಮೆರಿಕ ಮತ್ತು ಚೀನಾ ನಡುವೆ ಸಂಬಂಧಗಳು ಹದಗೆಟ್ಟಿತ್ತು. ಈ ಮಧ್ಯೆ ಅಮೆರಿಕ ಅಧ್ಯಕ್ಷರ ಈ ಭೇಟಿ ಭಾರೀ ಮಹತ್ವ ಪಡೆಯಲಿದೆ.
ಇನ್ನು ಕೆಲದಿನಗಳ ಹಿಂದಷ್ಟೇ ಟ್ರಂಪ್ ಚೀನಾದ ವಿರುದ್ಧ 100% ಸುಂಕ ಹೇರುವುದಾಗಿ ಘೋಷಣೆ ಮಾಡಿದ್ದರು. ಆದರೆ ಅಮೆರಿಕಾಗೆ ಹೆಚ್ಚಿನ ಮಟ್ಟದಲ್ಲಿ ಸಾಗುತ್ತಿದ್ದ ವಿರಳ ಭೂಖನಿಜಗಳ ಮೇಲೆ ಚೀನಾ ವಿಧಿಸಿರುವ ನಿರ್ಬಂಧಗಳು ಟ್ರಂಪ್ ಅನ್ನು ಕೆರಳುವಂತೆ ಮಾಡಿತ್ತು. ಇದೂ ಅಮೆರಿಕಾದ ಕೈಗಾರಿಕಾ ಉತ್ಪಾದನೆ ಮೇಲೆ ಭಾರೀ ಪ್ರಭಾವ ಬೀರಿತ್ತು. ಇದೇ ಕಾರಣದಿಂದ ಟ್ರಂಪ್ ಚೀನಾಗೆ 100% ಶೇ. ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಇದೀಗ ಚೀನಾದ ಸುಂಕ ಕಡಿಮೆ ಮಾಡಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ



Click it and Unblock the Notifications