ಉಕ್ರೇನ್‌ನಲ್ಲಿರುವ ಅಪರೂಪದ ಭೂಮಿಯ ಖನಿಜ ಸಂಪತನ್ನು ಹಸ್ತಗತಿಸಿಕೊಳ್ಳಲು, ಅಮೆರಿಕಾ ಅಧ್ಯಕ್ಷ ಟ್ರಂಪ್ ಮಾಡಿದ ಕಸರತ್ತುಗಳು ಫಲಿಸಿದಂತೆ ಕಾಣುತ್ತಿದೆ. ಟ್ರಂಪ್ ತೀವ್ರ ಒತ್ತಡದ ನಂತರ ಖನಿಜ ಸಂಪತ್ತಿನ ಒಪ್ಪಂದವನ್ನು ಒಪ್ಪಿಕೊಂಡ, ಉಕ್ರೇನ್ ಮಾಜಿ ಅಧ್ಯಕ್ಷ ವ್ಲಾಡಿಮಿರ್ ಜೆಲೆನ್ಸ್ಕಿ ಮುಂಬರುವ ಶುಕ್ರವಾರವೇ ಸಹಿ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಅಂದರೆ ವಾಷಿಂಗ್ಟನ್‌ಗೆ ಭೇಟಿ ನೀಡಿದಾಗ ಸಹಿ ಹಾಕುವ ಸಾಧ್ಯತೆ ಇದೆ. ಇದು ಮಾಜಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೀವ್ರ ಒತ್ತಡದ ಫಲಿತಾಂಶವೇ ಎನ್ನಬಹುಸಾಗಿದೆ.
ಸಾಧಾರಣ ಭಾಷೆಯಲ್ಲಿ ಹೇಳುವುದಾದರೆ, ಉಕ್ರೇನ್ ತನ್ನ ಖನಿಜ ಸಂಪತ್ತಿನ ಲಾಭದ ಒಂದು ಭಾಗವನ್ನು ಅಮೇರಿಕಾಕ್ಕೆ ನೀಡಲು ಒಪ್ಪಿಕೊಂಡಿದೆ. ಈ ಖನಿಜ ಸಂಪತ್ತಿನ ಒಪ್ಪಂದ ಮಾಡಿಕೊಂಡಿರುವುದು ಅಮೆರಿಕಾಗೆ ಒಂಥರಾ ದೊಡ್ಡ ಲಾಭವಾಗಬಹುದು. ಏಕೆಂದರೆ ಖನಿಜ ಸಂಪತ್ತಿನಲ್ಲಿ ಉತ್ತಮ ಆದಾಯ ಬರುತ್ತದೆ. ಈ ಒಪ್ಪಂದದಿಂದ ಆದಾಯ ಅಮೆರಿಕಾಗೂ ಪಾಲಾಗಲಿದೆ. ಒಪ್ಪಂದದ ಪ್ರಕಾರ ಉಕ್ರೇನ್ 50% ಪಾಲನ್ನು ಅಮೆರಿಕಾಗೆ ನೀಡಲಿದೆ.

ಇನ್ನು ಅಮೆರಿಕಾ ಅಧ್ಯಕ್ಷ ಈ ಒಪ್ಪಂದಕ್ಕೆ ಒತ್ತಡ ಹಾಕಿದ್ದಕ್ಕೂ ಒಂದು ಬಲವಾದ ಕಾರಣವಿದೆ. ಅದೇನೆಂದರೆ ರಷ್ಯಾ-ಉಕ್ರೇನ್ ಯುದ್ಧವನ್ನು ಶೀಘ್ರ ಕೊನೆಗೊಳಿಸುವ ಮಾತುಕತೆಯಡಿ ಈ ಒಪ್ಪಂದವಾಗಿದೆ. ಅಲ್ಲದೇ ಅಮೇರಿಕಾ ನೀಡಿರುವ ಶತಕೋಟಿ ಡಾಲರ್ ಯುದ್ಧ ಸಹಾಯವನ್ನು ಕಡಿಮೆ ಮಾಡಲು ಕೂಡ ಈ ಒಪ್ಪಂದದ ಒತ್ತಡ ಹೇರಲಾಗಿದೆ ಎನ್ನಲಾಗುತ್ತಿದೆ. ಅಂದರೆ ಜೋ ಬೈಡೆನ್ ಆಡಳಿತದಲ್ಲಿ ಯಕ್ರೇನ್‌ಗೆ ಯುದ್ಧಕಾಲದ ಹಣಕಾಸು ನೆರವನ್ನು ನೀಡಲಾಗಿತ್ತು. ಅದನ್ನು ಶತಕೋಟಿ ಡಾಲರ್ ಹಿಂತಿರುಗಿಸುವ ಬದಲಾಗಿ, ಈ ಒಪ್ಪಂದ ಮಾಡಿಕೊಳ್ಳುವಂತೆ ಪಟ್ಟು ಹಿಡಿದಿದ್ದರು.
ಇನ್ನು ಈ ಒಪ್ಪಂದವು ರಷ್ಯಾ ನೀತಿಯಲ್ಲಾದ ಹಲವು ಪ್ರಮುಖ ಬದಲಾವಣೆಯ ನಂತರ ಆಗುತ್ತಿದೆ. ಹಾಗೆಯೇ ಟ್ರಂಪ್ ಮತ್ತು ಜೆಲೆನ್ಸ್ಕಿ ನಡುವೆ ಈ ಒಪ್ಪಂದದಿಂದ ರಾಜಕೀಯ ಉದ್ವಿಗ್ನತೆಯೂ ಹೆಚ್ಚುತ್ತದೆ. ಇದರೊಂದಿಗೆ ಭವಿಷ್ಯದಲ್ಲಿ ಉಕ್ರೇನ್ ಆರ್ಥಿಕತೆಗೆ ಈ ಒಪ್ಪಂದವೇ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.
ಖನಿಜ ಸಂಪತ್ತಿನ ಒಪ್ಪಂದದಲ್ಲಿರುವುದೇನು..?
ಈ ಒಪ್ಪಂದದ ಕುರಿತು ಯಾವುದೇ ವಿವರಗಳು ಇನ್ನೂ ತಿಳಿದು ಬಂದಿಲ್ಲ. ಆದರೆ ಒಪ್ಪಂದದ ಪ್ರಕಾರ ಯುನೈಟೆಡ್ ಸ್ಟೇಟ್ಸ್ ಮತ್ತು ಉಕ್ರೇನ್ ಪುನರ್ನಿರ್ಮಾಣ ಹೂಡಿಕೆ ನಿಧಿಯನ್ನು ಸ್ಥಾಪಿಸುತ್ತದೆ ಎನ್ನಲಾಗಿದೆ. ವರದಿ ಪ್ರಕಾರ ಖನಿಜಗಳು, ಹೈಡ್ರೋಕಾರ್ಬನ್‌ಗಳು ಮತ್ತು ಇತರ ಹೊರತೆಗೆಯಬಹುದಾದ ವಸ್ತುಗಳಿಂದ ಬರುವ ಆದಾಯ ಹಾಗೂ ಉಕ್ರೇನಿಯನ್ ಮೂಲಗಳಿಂದ ಆದಾಯವನ್ನು ಸಂಗ್ರಹಿಸಲು ಮತ್ತು ಮರುಹೂಡಿಕೆ ಮಾಡಲು ಒಪ್ಪಂದದ ಒಳನೋಟವಾಗಿದೆ.
ಈ ನಿಧಿಗೆ ಉಕ್ರೇನ್ 50% ಕೊಡುಗೆ ನೀಡಲಿದೆ. ಇದರ ಜೊತೆಗೆ ಕೊಡುಗೆಯಲ್ಲಿ ನಿರ್ವಹಣಾ ವೆಚ್ಚಗಳನ್ನು ಕಡಿತಗೊಳಿಸಿ $500 ಬಿಲಿಯನ್ ಮೊತ್ತವನ್ನು ತಲುಪುವವರೆಗೆ ಈ ಒಪ್ಪಂದ ಮುಂದುವರಿಯಲಿದೆ. ಇದಕ್ಕೆ ಪ್ರತಿಯಾಗಿ ಯುಎಸ್ ಸ್ಥಿರ ಮತ್ತು ಆರ್ಥಿಕವಾಗಿ ಸಮೃದ್ಧ ಉಕ್ರೇನ್ ಅಭಿವೃದ್ಧಿಗೆ ದೀರ್ಘಾವಧಿಯ ಆರ್ಥಿಕ ಬದ್ಧತೆಯನ್ನು ಒದಗಿಸುತ್ತದೆ.
ಡೊನಾಲ್ಡ್ ಟ್ರಂಪ್ ಹೇಳಿದ್ದೇನು..?
ಉಕ್ರೇನ್‌ಗೆ ಖನಿಜ ಸಂಪತ್ತಿನ ಒಪ್ಪಂದದ ಪ್ರತಿಯಾಗಿ ಸಿಗುವ ಲಾಭವೇನು ಎಂಬುದನ್ನು, ಟ್ರಂಪ್ ಸ್ಪಷ್ಟವಾಗಿ ತಿಳಿಸಿದ್ದಾರೆ. ಉಕ್ರೇನ್‌ಗೆ ಈಗಾಗಲೇ ಒದಗಿಸಲಾದ $350 ಬಿಲಿಯನ್, ಮಿಲಿಟರಿ ಉಪಕರಣಗಳು ಮತ್ತು ಹೋರಾಡುವ ಹಕ್ಕು ಸಿಗುತ್ತದೆ. ಹಾಗೂ ರಷ್ಯಾ-ಉಕ್ರೇನ್ ನಡುವೆ ಸಂಘರ್ಷ ಕೊನೆಗೊಳಿಸಲು ಒಪ್ಪಂದವೂ ಆಗಿದ್ದು, ಶಾಂತಿಪಾಲನಾ ಪಡೆಗಳ ಅಗತ್ಯವಿದೆ. ಹೀಗಾಗಿ ಕೆಲವು ಯುರೋಪಿಯನ್ ರಾಷ್ಟ್ರಗಳು ಉಕ್ರೇನ್‌ಗೆ ಶಾಂತಿಪಾಲನಾ ಪಡೆಗಳನ್ನು ಕಳುಹಿಸಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.
ಖನಿಜ ಸಂಪತ್ತಿನಿಂದ ಆಗುವ ಲಾಭಗಳೇನು..?
ಉಕ್ರೇನ್-ಅಮೆರಿಕಾ ನಡುವೆ ನಡೆದ ಖನಿಜ ಸಂಪತ್ತಿನ ಒಪ್ಪದದ ಪ್ರಕಾರ, ಖನಿಜ ಸಂಪತ್ತನ್ನು ಅಮೆರಿಕಾಗೆ ತರುವ ಹಕ್ಕಿದೆ. ಇದರಲ್ಲಿ ಟೈಟಾನಿಯಂ, ಲಿಥಿಯಂ, ಯುರೇನಿಯಂ ಮತ್ತು ಅಪರೂಪದ ಭೂಮಿಯ ಲೋಹಗಳು ಸೇರಿವೆ. ಜೊತೆಗೆ ಸಾಧಾರಣ ತೈಲ ಮತ್ತು ನೈಸರ್ಗಿಕ ಅನಿಲ ನಿಕ್ಷೇಪಗಳು ಸಹ ಇದರಲ್ಲಿ ಸೇರಿವೆ ಇದು ಉತ್ತಮ ಆದಾಯ ಗಳಿಸಲು ಸಹಾಯಕವಾಗಿವೆ. ಇನ್ನು ಯುರೋಪಿನ ಒಟ್ಟು ಲಿಥಿಯಂ ನಿಕ್ಷೇಪಗಳಲ್ಲಿ ಮೂರನೇ ಒಂದು ಭಾಗವನ್ನು, ಉಕ್ರೇನ್ ಹೊಂದಿದೆ. ಟೈಟಾನಿಯಂ ಗಣಿಗಳು ಜಾಗತಿಕ ಉತ್ಪಾದನೆಯ ಸುಮಾರು 6% ಹೊಂದಿವೆ. ಈ ಲೋಹದಿಂದ ನಿರ್ಮಾಣ ಕಾರ್ಯಗಳು, ವಿಮಾನ ಹಾಗೂ ಮೂಳೆಚಿಕಿತ್ಸಾ ಪ್ಲಾಂಟ್‌ಗಳ ನಿರ್ಮಾಣಕ್ಕೆ ಸಹಾಯವಾಗುತ್ತದೆ ಎನ್ನಲಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications