Upcoming IPO: IPO ಮೂಲಕ 4,000 ಕೋ.ರೂ. ಸಂಗ್ರಹದ ಗುರಿಯಲ್ಲಿ ಶಾರ್ಕ್ ಟ್ಯಾಂಕ್ ಜಡ್ಜ್ ಅಮಿತ್‌ ಜೈನ್‌

ಸೋನಿ ಟಿವಿಯಲ್ಲಿ ಪ್ರಸಾರವಾಗುವ ಶಾರ್ಕ್‌ ಟ್ಯಾಂಕ್‌ ಇಂಡಿಯಾದ ಬಗ್ಗೆ ಗೊತ್ತಿಲ್ಲದಿರುವವರು ಬಹುಷಃ ಕಡಿಮೆ ಎಂದರೆ ತಪ್ಪಾಗಲಾರದು. ನವೋದ್ಯಮಿಗಳಿಗೆ ಹಣಕಾಸಿನ ನೆರವು ಒದಗಿಸುವ ಕಾರ್ಯಕ್ರಮವಾಗಿರುವ ಇದರಲ್ಲಿ, ಉದ್ಯಮವನ್ನು ವಿಸ್ತರಿಸಲು ಬಯಸುವ ಉದ್ಯಮಿಗಳು ತಮ್ಮ ಭವಿಷ್ಯದ ಯೋಜನೆಗಳನ್ನು ಜಡ್ಜ್‌ ಗಳ ಮುಂದಿರಿಸುತ್ತಾರೆ.

ಒಂದು ವೇಳೆ ಉದ್ಯಮಿಗಳ ಭವಿಷ್ಯದ ಯೋಜನೆಗಳು ಜಡ್ಜ್‌ಗಳಿಗೆ ಒಳಿತೆಂದು ಅನ್ನಿಸಿದರೆ ಅದರಲ್ಲಿ ಹೂಡಿಕೆ ಮಾಡುವುದು ಕಾರ್ಯಕ್ರಮದ ಒಂದು ಭಾಗವಾಗಿದೆ. ಈ ಕಾರ್ಯಕ್ರಮದಲ್ಲಿರುವ ಜಡ್ಜ್‌ಗಳನ್ನು ಜಡ್ಜ್‌ಗಳೆಂದು ಕರೆಯುವುದಕ್ಕಿಂತ ಹೂಡಿಕೆದಾರರು ಎಂದು ಕರೆದರೆ ತಪ್ಪಾಗಲಾರದು. ಇನ್ನು ಇಷ್ಟೆಲ್ಲಾ ಪೂರ್ವಪೀಠಿಕೆ ಯಾಕೆ ಎಂದು ಕರೆದರೆ ಈ ಕಾರ್ಯಕ್ರಮದ ಜಡ್ಜ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಅಮಿತ್ ಜೈನ್ ಅವರು ತಮ್ಮ ಸಹ ಸಂಸ್ಥಾಪಕತ್ವದ CarDekho.com ಉದ್ಯಮವನ್ನು ವಿಸ್ತರಿಸಲು ಬಯಸಿದ್ದಾರೆ.

IPO ಮೂಲಕ 4,000 ಕೋ.ರೂ. ಸಂಗ್ರಹದ ಗುರಿ

ಈ ಹಿನ್ನೆಲೆಯಲ್ಲಿ ಅವರು ತಮ್ಮ ಕಂಪೆನಿಯನ್ನು ಮುಂದಿನ ವರ್ಷ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡುವ ಹೆಬ್ಬಯಕೆ ವ್ಯಕ್ತಪಡಿಸಿದ್ದು, ಇದಕ್ಕಾಗಿ ಅವರು IPO ಮೂಲಕ 4,000 ಸಾವಿರ ಕೋಟಿ ರೂ. ಕ್ರೋಢೀಕರಿಸಲು ಮುಂದಾಗಿದ್ದಾರೆ. ಈ ಮೂಲಕ CarTrade.com ನ ಮಾತೃ ಸಂಸ್ಥೆಯ ಬಳಿಕ IPO (initial public offering) ಮೊರೆಹೋದ ಭಾರತದ ಎರಡನೇ ಕಂಪೆನಿ ಎನ್ನುವ ಪಾತ್ರಕ್ಕೆ ಅವರು ಮುಂದಾಗಿದ್ದಾರೆ. CarTrade.com ನ ಮಾತೃ ಸಂಸ್ಥೆಯು 2021ರ ಆಗಸ್ಟ್‌ನಲ್ಲಿ IPO ನತ್ತ ತೆರಳಿತ್ತು. ಈ ಮೂಲಕ 2,998.5 ಕೋಟಿ ರೂ. ಮೊತ್ತವನ್ನು CarTrade.com ಕ್ರೋಢೀಕರಿಸಿತ್ತು.

ಏನಿದು CarDekho.com?

CarDekho.com ಯುವ IIT ಪದವೀಧರರಿಂದ ಸ್ಥಾಪಿಸಲ್ಪಟ್ಟ ಸಂಸ್ಥೆಯಾಗಿದೆ. Google ಕ್ಯಾಪಿಟಲ್, ಟೈಬೋರ್ನ್ ಕ್ಯಾಪಿಟಲ್, ಹಿಲ್‌ಹೌಸ್ ಕ್ಯಾಪಿಟಲ್, ಸಿಕ್ವೊಯಾ ಕ್ಯಾಪಿಟಲ್, HDFC ಬ್ಯಾಂಕ್, ರತನ್ ಟಾಟಾ ಮತ್ತು ಟೈಮ್ಸ್ ಇಂಟರ್ನೆಟ್ ಮುಂತಾದ ಸಂಸ್ಥೆಗಳು ಈ ಕಂಪೆನಿಯಲ್ಲಿ ಹೂಡಿಕೆ ಮಾಡಿದೆ.

ಇನ್ನು ಕಾರುಗಳ ಖರೀದಿ ಹಾಗೂ ಮಾರಾಟಕ್ಕೆ ಸಂಬಂಧಿತ ಸೇವೆಗಳನ್ನು ಒದಗಿಸುವ ಒಂದು ವೇದಿಕೆಯೇ CarDekho.com ಎನ್ನಬಹುದು. ಈ ವೆಬ್‌ಸೈಟ್‌ನಲ್ಲಿ ನೀವು ನಿಮಗೆ ಬೇಕಾದ ಕಾರುಗಳನ್ನು ಖರೀದಿಸಬಹುದು ಅಥವಾ ಮಾರಾಟ ಕೂಡ ಮಾಡಬಹುದು. CarDekho.com ಗ್ರಾಹಕರಿಗೆ ಹೊಸ ಅಥವಾ ಬಳಸಿದ ಕಾರುಗಳನ್ನು ಖರೀದಿಸಲು ಸಹಾಯ ಮಾಡುತ್ತದೆ.

ಅಲ್ಲದೆ ಅವರಿಗೆ ಪರಿಣಿತ ವಿಮರ್ಶೆಗಳು, ವಿವರವಾದ ಬೆಲೆಗಳು ಮತ್ತು ವೆಚ್ಚ ಮತ್ತು ವೈಶಿಷ್ಟ್ಯಗಳು ಮತ್ತು ಪರ್ಯಾಯ ಮಾದರಿಗಳ ಹೋಲಿಕೆಗಳನ್ನು ಒದಗಿಸುತ್ತದೆ. ಕಂಪನಿಯು ವಾಹನಗಳ ಖರೀದಿಗೆ ಅನುಕೂಲವಾಗುವಂತೆ ಅನೇಕ ಆಟೋ ತಯಾರಕರು, 4000 ಕ್ಕೂ ಹೆಚ್ಚು ಕಾರು ವಿತರಕರು ಮತ್ತು ಹಲವಾರು ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದವನ್ನು ಹೊಂದಿದೆ.

ಇನ್ನು ಸಂಸ್ಥೆಯನ್ನು ಮತ್ತಷ್ಟು ಬೆಳೆಸಲು ಅಥವಾ ವಿಸ್ತರಿಸಲು ಹೆಚ್ಚಿನ ಪ್ರಮಾಣದ ಹಣದ ಅಗತ್ಯವಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಾಗಿ ಈ ಯೋಜನೆಗೆ ಸಾರ್ವಜನಿಕರಿಂದ ಹಣ ಹೂಡಿಸುವ ಭಾಗವಾಗಿಯೇ ಅಮಿತ್ ಜೈನ್ ಅವರು ಷೇರು ಮಾರುಕಟ್ಟೆಯ IPO ಮೊರೆ ಹೋಗಿದ್ದಾರೆ. ಇನ್ನು ಈ ಬಗ್ಗೆ ಮೂಲಗಳ ಪ್ರಕಾರ, CarDekho.com ನ ಸಂಬಂಧಿಸಿದ ಹಿರಿಯ ಅಧಿಕಾರಿಗಳು ತಮ್ಮ ಕಂಪೆನಿಯ IPO ಯೋಜನೆಗಳಿಗಾಗಿ ಹಲವಾರು ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.

ಕಂಪನಿಯು ಐಪಿಒ ಮೂಲಕ ಸುಮಾರು 3,000 ಕೋಟಿ ರೂ.ಗಳಿಂದ 4,000 ಕೋಟಿ ರೂ. ಕ್ರೋಢೀಕರಿಸಲು ಮುಂದಾಗಿದೆ. ಬ್ಯಾಂಕರ್ ನೇಮಕಾತಿಗಳನ್ನು ಶೀಘ್ರದಲ್ಲೇ ಮುಗಿಸುವ ಯೋಜನೆಯಲ್ಲಿದೆ ಎನ್ನಲಾಗಿದೆ. ಇನ್ನು IPO ನಲ್ಲಿ ಬೆಳವಣಿಗೆಯ ಯೋಜನೆಗಳಿಗಾಗಿ ತಾಜಾ ನಿಧಿಸಂಗ್ರಹಣೆಯ ಮಿಶ್ರಣವನ್ನು ಒಳಗೊಂಡಿದೆ. ಕಂಪನಿಯ ಆರಂಭಿಕ ಹೂಡಿಕೆದಾರರಿಂದ ದ್ವಿತೀಯ ಷೇರು ಮಾರಾಟವನ್ನು ಒಳಗೊಂಡಿದೆ.

ವಿದೇಶಕ್ಕೂ ವ್ಯಾಪಿಸಿದ ಸಂಸ್ಥೆ

ಇನ್ನು CarDekho.com ಕೇವಲ ಭಾರತದಲ್ಲೇ ತನ್ನ ಅಸ್ತಿತ್ವವನ್ನು ಹೊಂದಿಲ್ಲ. ಬದಲಾಗಿ ಯುಎಇ, ಫಿಲಿಪೈನ್ಸ್ ಮತ್ತು ಮಲೇಷಿಯಾದಲ್ಲಿ ಕೂಡ ತನ್ನ ವ್ಯಾಪ್ತಿಯನ್ನು ಹೊಂದಿದೆ. ಜಿಗ್‌ವೀಲ್ಸ್ ಪ್ಲಾಟ್‌ಫಾರ್ಮ್ ಮತ್ತು ಇಂಡೋನೇಷ್ಯಾದಲ್ಲಿ ಒಟೊ ಬ್ರಾಂಡ್ ಅನ್ನು ಪ್ರಾರಂಭಿಸುವುದರೊಂದಿಗೆ ಕಂಪನಿಯು ಭಾರತದ ಗಡಿಗಳನ್ನು ಮೀರಿ ಆಗ್ನೇಯ ಏಷ್ಯಾಕ್ಕೆ ವಿಸ್ತರಿಸಿದೆ. ಯುಎಇ, ಫಿಲಿಪೈನ್ಸ್ ಮತ್ತು ಮಲೇಷಿಯಾದಲ್ಲಿ ತನ್ನ ಜಿಗ್‌ವೀಲ್ಸ್ ಪ್ಲಾಟ್‌ಫಾರ್ಮ್ ಮತ್ತು ಇಂಡೋನೇಷ್ಯಾದಲ್ಲಿ ಒಟೊ ಬ್ರಾಂಡ್ ಅನ್ನು ಪ್ರಾರಂಭಿಸುವ ಮೂಲಕ ಕಂಪೆನಿ ಹೊರಜಗತ್ತಿನಲ್ಲೂ ವ್ಯಾಪಿಸಿದೆ. ಅದೂ ಅಲ್ಲದೆ InsuranceDekho.Com ಮೂಲಕ ಕಂಪನಿಯು ಕಾರು ವಿಮಾ ವ್ಯವಹಾರದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಇನ್ನು ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಟೆಕ್‌ಗೆ ಸಂಬಂಧಿಸಿದ IPO ಅಷ್ಟಾಗಿ ಗುರುತಿಸಿಕೊಂಡಿರಲಿಲ್ಲ. ಇದೀಗ ಮತ್ತೆ ದೇಶದಲ್ಲಿ ಟೆಕ್‌ IPO ತನ್ನ ಪರಾಕ್ರಮ ಮೆರೆಯಲು ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+