ಬೆಂಗಳೂರು, ಫೆಬ್ರವರಿ 12: ದೇಶದ ಐಟಿ ಬೂಮ್‌ನೊಂದಿಗೆ ಫಣೀಶ್ ಮೂರ್ತಿ ಹೊಸ ಎತ್ತರವನ್ನು ತಲುಪಿದ್ದಾರೆ. ಐಐಟಿ ಪದವೀಧರ ಭಾರತೀಯ ತಂತ್ರಜ್ಞಾನ ಉದ್ಯಮಿಯಾಗಿರುವ ಫಣೀಶ್ ಮೂರ್ತಿ 2000 ರಿಂದ 2002 ರವರೆಗೆ ಇನ್ಫೋಸಿಸ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದರು. ಅದರೂ ಅವರ ಕಥೆಯು ಹೆಚ್ಚಿನ ಐಐಟಿಯನ್ನರಿಗಿಂತ ಸ್ವಲ್ಪ ಭಿನ್ನವಾಗಿದೆ.
ಯಾಕೆಂದರೆ ಐಐಟಿ ಪದವೀಧರ ಇಂಜಿನಿಯರ್ ಆಗಿರುವ ಮೂರ್ತಿ, ಭಾರಿ ವೇತನ ಪಡೆದುಕೊಂಡು ನೇಮಕಗೊಂಡು ಉನ್ನತ ಹುದ್ದೆ ಪಡೆದಿ ಬಳಿಕ ವಜಾ ಆದ ಅಪರೂಪದವರಲ್ಲಿ ಇವರು ಕೂಡ ಒಬ್ಬರು. ವಜಾಗೊಳಿಸುವ ಮೊದಲು, ಫಣೀಶ್ ಮೂರ್ತಿ ವಾರ್ಷಿಕ ಸುಮಾರು 45 ಕೋಟಿ ರೂ. ಆಗಿತ್ತು.
ಫಣೀಶ್ ಮೂರ್ತಿಯವರು ಕರ್ನಾಟಕದ ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರು. ಇವರು ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ತಮ್ಮ ಬಿ.ಟೆಕ್ ಪದವಿಯನ್ನು ಪಡೆದರು. ಇದಾದ ಬಳಿಕ ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಪಿಜಿಡಿಎಂಜಿಟಿಯನ್ನು ಪಡೆದರು.

1987 ರಲ್ಲಿ ವ್ಯಾಸಾಂಗದ ಬಳಿಕ ಸೋನಾಟಾ ಸಾಫ್ಟ್‌ವೇರ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಲ್ಲಿ ಸುಮಾರು ಅರ್ಧ ದಶಕ ಕೆಲಸ ಮಾಡಿದ ನಂತರ ನಾರಾಯಣ ಮೂರ್ತಿಯವರು ಸ್ಥಾಪಿಸಿದ ಇನ್ಫೋಸಿಸ್‌ಗೆ ತೆರಳಿದರು. ಎರಡು ವರ್ಷಗಳಲ್ಲಿ ಅವರು ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದು, ಈ ವೇಳೆ ಇಬ್ಬರು ಮಹಿಳೆಯರು ಅವರ ವಿರುದ್ಧ ಮೊಕದ್ದಮೆ ಹೂಡಿದ ನಂತರ ಅವರು ಇನ್ಫೋಸಿಸ್‌ನಿಂದ ನಿರ್ಗಮಿಸಬೇಕಾಯಿತು.
ನಂತರ ಅವರು ಪ್ರೈಮೆಂಟರ್ ಮತ್ತು ಕ್ವಿಂಟಂಟ್ ಸರ್ವಿಸಸ್ ಲಿಮಿಟೆಡ್ ಅನ್ನು ಸ್ಥಾಪಿಸಿದರು. ಆದರೆ ಕ್ವಿಂಟಂಟ್ ಅನ್ನು iGATE ಗ್ಲೋಬಲ್ ಸೊಲ್ಯೂಷನ್ಸ್ ಲಿಮಿಟೆಡ್ ಶೀಘ್ರದಲ್ಲೇ ಸ್ವಾಧೀನಪಡಿಸಿಕೊಂಡಿತು. ಕ್ವಿಂಟಂಟ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಆಗಸ್ಟ್ 2003 ರಲ್ಲಿ iGATE ಗ್ಲೋಬಲ್ ಸೊಲ್ಯೂಷನ್ಸ್ ಲಿಮಿಟೆಡ್‌ಗೆ ಸೇರಿದರು .
iGATE ಗೆ ಸೇರಿದ ನಂತರ, ಐಗೇಟ್ ಅನ್ನು ಪುನರ್‌ರಚಿಸಲು 1.22 ಶತಕೋಟಿ ಡಾಲರ್‌ಗಳಿಗೆ ಪಟ್ನಿ ಕಂಪ್ಯೂಟರ್ ಸಿಸ್ಟಮ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸಿದರು. ಪಟ್ನಿ ಕಂಪ್ಯೂಟರ್ ಸಿಸ್ಟಮ್ಸ್ ನಾರಾಯಣ್ ಮೂರ್ತಿಯವರು ಸೇವೆ ಸಲ್ಲಿಸುತ್ತಿದ್ದ ಹಳೆಯ ಕಂಪನಿಯಾಗಿತ್ತು ಹಾಗೂ ಅದನ್ನು ಸ್ವಾಧೀನಪಡಿಸಿಕೊಂಡಾಗ ಅದು ಐಗೇಟ್‌ಗಿಂತ ದ್ವಿಗುಣವಾಗಿತ್ತು. ಫಣೀಶ್ ಮೂರ್ತಿಯವರ ವಿರುದ್ಧ ಉದ್ಯೋಗಿಯೊಬ್ಬರು ಮತ್ತೊಂದು ಮೊಕದ್ದಮೆ ಹೂಡಿದ ನಂತರ ಐಗೇಟ್‌ನಿಂದಲೂ ವಜಾಗೊಳಿಸಲಾಯಿತು.
ಪ್ರಸ್ತುತ ಫಣೀಶ್ ಮೂರ್ತಿ ಹಲವಾರು ಕಂಪನಿಗಳಲ್ಲಿ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದು, 2013 ರಲ್ಲಿಸಂಸ್ಥೆಯಿಂದ ವಜಾಗೊಳ್ಳುವ ಮೊದಲು 2012 ರಲ್ಲಿ ಅವರ ವಾರ್ಷಿಕ ವೇತನ 45 ಕೋಟಿ ರೂ. ಆಗಿತ್ತು. 2015 ರಲ್ಲಿ ಆರೋಗ್ಯ ಉತ್ಪನ್ನಗಳ ಆನ್‌ಲೈನ್ ಮಾರುಕಟ್ಟೆಯಾದ PM ಹೆಲ್ತ್ & ಲೈಫ್ ಕೇರ್ ಅನ್ನು ಸಹ-ಸ್ಥಾಪಿಸಿದರು. ಅವರು ಪ್ರಸ್ತುತ ಪ್ರೈಮೆಂಟರ್‌ನ CEO ಆಗಿ ಸೇವೆ ಸಲ್ಲಿಸುತ್ತಿದ್ದಾರೆ, ಇದು ಹೈಪರ್-ಗ್ರೋತ್ ಅನ್ನು ಉತ್ತೇಜಿಸಲು ಹಿರಿಯ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವ ಸಲಹಾ ಸಂಸ್ಥೆಯಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications