ವಿಶ್ವದ ಅತೀ ದಟ್ಟಣೆಯ ವಿಮಾನ ನಿಲ್ದಾಣಗಳಲ್ಲಿ (Airport) ಬೆಂಗಳೂರೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೂಡಾ ಒಂದು. ಇದೀಗ ಜನದಟ್ಟಣೆ, ವಾಹನ ದಟ್ಟಣೆಯನ್ನು (Traffic Problems) ಕಮ್ಮಿ ಮಾಡುವ ನಿಟ್ಟಿನಲ್ಲಿ, ಬೆಂಗಳೂರು ವಿಮಾನ ನಿಲ್ದಾಣ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಆಗಮನ ಮತ್ತು ಪಿಕಪ್‌ಗಾಗಿ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.

ವಿಮಾನ ನಿಲ್ದಾಣದ ಆಗಮನದ ಕರ್ಬ್‌ಸೈಡ್‌ಗಳಲ್ಲಿ ಪ್ರೈವೇಟ್ ವಾಹನಗಳ ಕಾಯುವಿಕೆ ಅವಧಿ ಹೆಚ್ಚಾಗುತ್ತಿರುವುದರಿಂದ ಸಂಚಾರ ದಟ್ಟಣೆ ಕೂಡಾ ಜಾಸ್ತಿಯಾಗಿದೆ ಎಂದು ವಿಮಾನ ನಿಲ್ದಾಣದ ಆಡಳಿತ ವರದಿ ಮಾಡಿದೆ. ಇದೀಗ ಈ ದಟ್ಟಣೆಗೆ ಪರಿಹಾರವಾಗಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (BIAL) ಲೇನ್-ಸೆಗ್ರಿಗೇಷನ್ (Lane-Segregation) ವ್ಯವಸ್ಥೆಯನ್ನು ಪರಿಚಯಿಸಿದೆ. ಈ ವ್ಯವಸ್ಥೆ ಸುಗಮ ಸಂಚಾರ, ಶಿಸ್ತು ಹೀಗೆ ಹಲವು ಸಮಸ್ಯೆಗಳಿಗೆ ಪರಿಹಾರವಾಗಲಿದೆ.
ಏನಿದು ಹೊಸ ನಿಯಮ?
ಹೊಸ ನಿಯಮದ ಪ್ರಕಾರ, ಖಾಸಗಿ (ವೈಟ್-ಬೋರ್ಡ್) ವಾಹನಗಳು ಟರ್ಮಿನಲ್ 1 (T1) ಮತ್ತು ಟರ್ಮಿನಲ್ 2 (T2)ಪಾರ್ಕಿಂಗ್ ಸ್ಥಳದಲ್ಲಿ 8 ನಿಮಿಷಗಳ ಕಾಲ ಉಚಿತವಾಗಿ ಪ್ರವೇಶ ಪಡೆಯಬಹುದು. ಒಂದು ವೇಳೆ ಈ ಸಮಯ ಮೀರಿದರೆ ದಂಡ ಅನ್ವಯವಾಗುತ್ತದೆ ಎನ್ನಲಾಗಿದೆ. ಆ ಪ್ರಕಾರ, 8-13 ನಿಮಿಷಗಳ ಕಾಲ ನಿಂತರೆ ₹150 ರೂ., 13-18 ನಿಮಿಷಗಳ ಕಾಲ ನಿಂತರೆ ₹300 ರೂ., 18 ನಿಮಿಷ ಮೀರಿದರೆ ವಾಹನವನ್ನು ಹತ್ತಿರದ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಲಾಗುತ್ತದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಹೆಚ್ಚುವರಿ ದಂಡ ಮತ್ತು ಟೋವಿಂಗ್ ಶುಲ್ಕ ಕೂಡಾ ಸ್ಟೇಷನ್‌ನಲ್ಲಿ ವಿಧಿಸಲಾಗುತ್ತದೆ ಎನ್ನಲಾಗಿದೆ.
ಇನ್ನು ವಿಮಾನ ಅಧಿಕಾರಿಗಳ ಪ್ರಕಾರ, ಈ ನಿಯಮದಿಂದಾಗಿ ದಟ್ಟಣೆ ಹೆಚ್ಚಾಗದೆ, ಪ್ರಯಾಣಿಕರಿಗೆ ಸುಗಮ ಪಿಕಪ್‌ಗೆ ಸಾಕಷ್ಟು ಸಮಯವನ್ನು ನೀಡುತ್ತದೆ. ವಾಣಿಜ್ಯ ವಾಹನಗಳಾದ ಹಳದಿ ಬೋರ್ಡ್ ಟ್ಯಾಕ್ಸಿಗಳು ಮತ್ತು ಎಲೆಕ್ಟ್ರಿಕ್ ಕ್ಯಾಬ್‌ಗಳು ಪಾರ್ಕಿಂಗ್ ವಲಯದಲ್ಲಿ ಮಾತ್ರ ಪಿಕಪ್‌ಗಾಗಿ ಕಾಯಬೇಕು. ಆದ್ದರಿಂದ ಮೊದಲ 10 ನಿಮಿಷಗಳ ಪಾರ್ಕಿಂಗ್ ಉಚಿತವಾಗಿ ಮಾಡುವ ಅವಕಾಶವಿದೆ.
ಪಾರ್ಕಿಂಗ್ ನಿಯಮಗಳು:
ಇನ್ನು T1 ಗಾಗಿ ವಾಣಿಜ್ಯ ವಾಹನಗಳು P3 ಮತ್ತು P4 ಪಾರ್ಕಿಂಗ್ ಜಾಗಗಳನ್ನು ಬಳಸಬೇಕು. T2 ವಾಹನಗಳು P2 ಜಾಗವನ್ನು ಬಳಸುವಂತೆ ಸೂಚಿಸಲಾಗಿದೆ. ಈ ಹೊಸ ಕ್ರಮಗಳು ಡಿಸೆಂಬರ್ 11, 2025 ರಂದು ಟರ್ಮಿನಲ್ 2 ರಲ್ಲಿ ಮತ್ತು ಡಿಸೆಂಬರ್ 13, 2025 ರಂದು ಟರ್ಮಿನಲ್ 1 ರಲ್ಲಿ ಜಾರಿಗೆ ಬರಲಿವೆ ಎಂದು ವರದಿಯಾಗಿದೆ.
ಇನ್ನು ಈ ಕುರಿತು ಬಿಐಎಎಲ್ ವಕ್ತಾರರು ಮಾತನಾಡಿದ್ದು, "ಇತ್ತೀಚಿನ ವಿಮಾನ ಅಡಚಣೆಗಳ ವರದಿಗಳು ಸರಿಯಾದ ನಂತರ, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆಗಮನದ ಕರ್ಬ್‌ಸೈಡ್‌ಗಳಲ್ಲಿ ಹೊಸ ಪಿಕಪ್ ಕ್ರಮಗಳು ಮತ್ತು ಸಮಯ ಮೀರಿದರೆ ದಂಡ ವಿಧಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಈ ನಿಯಮ ಡಿಸೆಂಬರ್ 11, 2025 ರಿಂದ ಟರ್ಮಿನಲ್ 2 ರಲ್ಲಿ ಮತ್ತು ಡಿಸೆಂಬರ್ 13, 2025 ರಿಂದ ಟರ್ಮಿನಲ್ 1 ರಲ್ಲಿ ಜಾರಿಗೆ ಬರಲಿದೆ ಎಂದು ಹೇಳಿದರು.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications