ನವದೆಹಲಿ, ಏಪ್ರಿಲ್ 11: ದೇಶದಲ್ಲಿ ಈಗೇನಿದ್ದರೂ ಲೋಕಸಭೆಯ ಸಾರ್ವತ್ರಿಕ ಚುನಾವಣೆ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹವಾ ಜೋರಾಗಿದೆ. ತಮ್ಮ ನೆಚ್ಚಿನ ತಂಡದ ಆಟವನ್ನು ಒಮ್ಮೆಯಾದರೂ ಕ್ರೀಡಾಂಗಣದಲ್ಲಿ ವೀಕ್ಷಿಸಬೇಕು ಎಂಬುವುದು ಹಲವರ ಆಸೆಯಾಗಿರುತ್ತದೆ.
ಐಪಿಎಲ್ ಪ್ರತಿ ಪಂದ್ಯಕ್ಕೂ ಟಿಕೆಟ್ ದರ ದುಬಾರಿ ಇದ್ದರೂ, ಗಂಟೆಗಟ್ಟಲೆ ಕ್ಯೂ ನಲ್ಲಿ ನಿಂತು ಟಿಕೆಟ್ ಖರೀದಿಸುವವರನ್ನು ನೋಡಿದ್ದೇವೆ. ಇದೇ ರೀತಿ ದುಬಾರಿ ದರ ನೀಡಿ ಟಿಕೆಟ್ ಖರೀದಿಸಿ ಮ್ಯಾಚ್ ನೋಡಲೆಂದು ಉತ್ಸಾಹದಲ್ಲಿ ಸ್ಟೇಡಿಂಯಂಗೆ ತೆರಳಿದ್ರೆ, ಅವರಿಗೆ ನಿಂತೇ ಪಂದ್ಯಾಟ ನೋಡುವ ಪರಿಸ್ಥಿತಿ ಬಂದಿತ್ತು.!

ಹೌದು ಶುಕ್ರವಾರದಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯವನ್ನು ಕ್ರಿಡಾಂಗಣದಲ್ಲಿ ನೋಡಬೇಕೆಂದು ಆಸೆಯಿಂದ ವ್ಯಕ್ತಿಯೊಬ್ಬರು ಪಂದ್ಯದ ಟಿಕೆಟ್ ಕಾಯ್ದಿರಿಸಿದ್ದರು. ಆದರೆ ಅವದು ಸ್ಟೇಡಿಯಂಗೆ ಹೋದಾಗ ಅಚ್ಚರಿ ಕಾದಿತ್ತು.
4.5 ಸಾವಿರ ರೂ. ನೀಡಿ ಜುನೈದ್ ಅಹ್ಮದ್ ಎಂಬವರು ಮ್ಯಾಚ್ ಟಿಕೆಟ್ ಖರೀದಿಸಿದ್ದರು. ಇನ್ನೇನು ಸ್ಟೇಡಿಯಂ ಹೋಗಿ ಮ್ಯಾಚ್ ಆನಂದಿಸುವ ತುಡಿತದಲ್ಲಿದ್ದ ಅವರು ಟಿಕೆಟ್ ನಲ್ಲಿ ನಿಗದಿಪಡಿಸಿದ ಸೀಟ್ J66 ಗಾಗಿ ಹುಡುಕಾಡಿದಾಗ ಸೀಟ್ 'ಕಾಣೆಯಾಗಿತ್ತು
ಅಹ್ಮದ್ ತನ್ನ ಕಳೆದುಹೋದ ಸೀಟ್‌ಗಾಗಿ ಹುಡುಕುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು 4,500 ರೂಪಾಯಿ ಮೌಲ್ಯದ ಟಿಕೆಟ್‌ನ ಚಿತ್ರಗಳನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಾತ್ರವಲ್ಲದೇ ಪಂದ್ಯದ ವೇಳೆ ನಿಂತಿರುವ ಚಿತ್ರಗಳನ್ನೂ ಅವರು ಪೋಸ್ಟ್ ಮಾಡಿದ್ದು, ತಮ್ಮ ಟಿಕೆಟ್ ಹಣವನ್ನು ಮರುಪಾವತಿಸುವಂತೆ ಒತ್ತಾಯಿಸಿದ್ದಾರೆ.
ಮಿಸ್ಸಿಂಗ್ ಸೀಟ್ ಕುರಿತು ಅಹ್ಮದ್ ಅವರ ಪೋಸ್ಟ್ ವೈರಲ್ ಆಗಿದ್ದು, ಅನೇಕರು ಅವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಇತರರು ಕ್ರೀಡಾಂಗಣಗಳಲ್ಲಿ ಇದೇ ರೀತಿಯ ಅನುಭವಗಳ ಬಗ್ಗೆ ಶೇರ್ ಮಾಡಿದ್ದಾರೆ. ಕೆಲವರು ಇದಕ್ಕೆ "ಸ್ಕ್ಯಾಮ್ 2024" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇದು ಹೈದರಾಬಾದ್‌ನಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಹೇಳಿದ್ದಾರೆ.
ಅಹ್ಮದ್ ಅವರು ಮತ್ತೊಂದು ಪೋಸ್ಟ್ ಮಾಡಿದಾಗ ಈ ಕಾಣೆಯ ಸೀಟ್ ಕಥೆ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಪಂದ್ಯದ ವಿರಾಮದ ಸಮಯದಲ್ಲಿ, ಕ್ರಮವಾಗಿರುವ ಸೀಟ್ ಸಂಖ್ಯೆ ಇಲ್ಲದೆ ಹೋಗಿದ್ದು ಅವರ ಅವರು J69 ಮತ್ತು J70 ಸೀಟ್ ಗಳ ನಡುವೆ ನಡುವೆ ತಮ್ಮ ಕಾಣೆಯಾದ J66 ಸೀಟನ್ನು ಪತ್ತೆ ಮಾಡಿದ್ದಾರೆ.


Click it and Unblock the Notifications