ಫುಟ್‌ಬಾಲ್ ಲೋಕದ ಲೆಜೆಂಟ್ ಲಿಯೋನೆಲ್ ಮೆಸ್ಸಿ ಭಾರತಕ್ಕೆ ಬಂದು ಕೆಲವು ದಿನಗಳೇ ಕಳೆದೊದೆ. ಸದ್ಯ ಲಿಯೋನಿಲ್ ಮೆಸ್ಸಿ ಅನಂತ್ ಅಂಬಾನಿ ಸ್ಥಾಪಿಸಿದ ವಂತಾರಾಗೆ ಭೇಟಿಕೊಟ್ಟಿದ್ದಾರೆ. ವಂತಾರಾಗೆ ಭೇಟಿ ಕೊಟ್ಟ ಲಿಯೋನೆಲ್ ಮೆಸ್ಸಿಗೆ, ಆನಂತ್ ಅಂಬಾನಿ (Lionel Messi-Anant Ambani) ಅತ್ಯಂತ ಅಪರೂಪದ, ದುಬಾರಿ ವಾಚ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೌದು, "RM 003-V2 GMT Toubillon Asia Edition" ವಾಚ್ ಗಿಫ್ಟ್ ಆಗಿ ಕೊಟ್ಟಿದ್ದಾರೆ.

ಬೆಲೆ ಎಷ್ಟು ಗೊತ್ತಾ?
ಸುಮಾರು ₹10.91 ಕೋಟಿ ಬೆಲೆಯ ಈ ವಿಶೇಷ ವಾಚ್ ವಿಶ್ವದಲ್ಲೇ ಲಿಮಿಟೆಡ್ ಎಡಿಷನ್ ಆಗಿದೆ. ರಿಚರ್ಡ್ ಮಿಲ್ಲೆ ಬ್ರಾಂಡ್‌ನ ಈ ಐಷಾರಾಮಿ ವಾಚ್ ಇದಾಗಿದ್ದು, ವಿಶ್ವದಲ್ಲಿ ಕೇವಲ 12 ಪೀಸ್‌ಗಳು ಮಾತ್ರ ಲಭ್ಯವಿದೆ. ಇದು ಕಪ್ಪು ಕಾರ್ಬನ್ ಕೇಸ್ ಮತ್ತು ತೆರೆದ ಸ್ಕೆಲೆಟನೈಸ್ಡ್ ಡಯಲ್ ಅನ್ನು ಹೊಂದಿದೆ. ಇದರಲ್ಲಿ ಟೂರ್ಬಿಲಾನ್ ಮತ್ತು ಜಿಎಂಟಿ ತಂತ್ರಜ್ಞಾನಗಳನ್ನು ಬಳಸಲಾಗಿದೆ.
ಅನಂತ್ ಅಂಬಾನಿ ಬಳಿಯಿದೆ ಕೋಟಿ ಬೆಲೆಯ ವಾಚ್!
ಉಡುಗೊರೆ ಮಾತ್ರವಲ್ಲ, ಸ್ವತಃ ಆನಂತ್ ಅಂಬಾನಿ ಕೂಡಾ ₹45.59 ಕೋಟಿ ($5 ಮಿಲಿಯನ್) ಮೌಲ್ಯದ ರಿಚರ್ಡ್ ಮಿಲ್ಲೆ ಆರ್‌ಎಂ 056 ಸಫೈರ್ ಟೂರ್ಬಿಲಾನ್ ಗಡಿಯಾರವನ್ನು ಧರಿಸಿದ್ದರು ಎನ್ನಲಾಗಿದೆ. ಸದ್ಯ ಅನಂತ್ ಅಂಬಾನಿಯವರು, ಮೆಸ್ಸಿಯವರಿಗೆ ನೀಡಿದ ಕೊಡುಗೆ ವಿಶ್ವದೆಲ್ಲೆಡೆ ಭಾರೀ ಗಮನ ಸೆಳೆದಿದೆ.
ಇಂಟರ್ ಮಿಯಾಮಿ ತಂಡದಲ್ಲಿ ಫುಟ್‌ಬಾಲ್ ಆಡುವ ಮೂಲಕ ವರ್ಷಕ್ಕೆ $20 ಮಿಲಿಯನ್ ಗಳಿಸುವ ಮೆಸ್ಸಿ, ತಮ್ಮ ಸಂಪತ್ತನ್ನು ಐಷಾರಾಮಿ ವಾಚ್‌ಗಳ ಮೇಲೂ ಹೂಡಿಕೆ ಮಾಡಿದ್ದಾರೆ. ಸುಮಾರು $850 ಮಿಲಿಯನ್ ನಿವ್ವಳ ಮೌಲ್ಯದೊಂದಿಗೆ ಬಿಲಿಯನೇರ್ ಸ್ಥಾನದತ್ತ ಸಾಗುತ್ತಿರುವ ಮೆಸ್ಸಿ ಬಳಿ ಹಲವಾರು ದುಬಾರಿ ಬೆಲೆಯ ವಾಚ್‌ಗಳಿವೆ.
ಕಳೆದ ಆಗಸ್ಟ್‌ನಲ್ಲಿ ಇಂಟರ್ ಮಿಯಾಮಿ ಪಂದ್ಯದಲ್ಲಿ ಮೆಸ್ಸಿ ಧರಿಸಿದ್ದ ಪಾಟೆಕ್ ಫಿಲಿಪ್ ಕ್ಯೂಬಿಟಸ್ (Patek Philippe Cubitus) ವಾಚ್ ಭಾರೀ ಗಮನ ಸೆಳೆದಿತ್ತು. ರೋಸ್ ಗೋಲ್ಡ್ ಬಣ್ಣದ, ಕಂದು ಡಯಲ್ ಹೊಂದಿದ್ದ ಇದು ಅಭಿಮಾನಿಗಳಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿತು. ಇನ್ನು ಮೆಸ್ಸಿ ಧರಿಸಿದ್ದ ಈ ವಾಚ್‌ನ ಅಂದಾಜು ಬೆಲೆ ₹83 ಲಕ್ಷ.
2025ರ ಜೂನ್‌ನಲ್ಲಿ ಮೆಸ್ಸಿ "ಫ್ಲೆಮಿಂಗೋ ಬ್ಲೂ" ಟ್ಯೂಡರ್ ಬ್ಲಾಕ್ ಬೇ ಕ್ರೋನೋ (Tudor Black Bay Chrono) ನೀಲಿ ವಾಚ್ ಧರಿಸಿ ಕಾಣಿಸಿಕೊಂಡರು. ಐಷಾರಾಮಿ ಸ್ಪೋರ್ಟ್ಸ್‌ವೇರ್‌ಗೆ ಸಲೀಸಾಗಿ ಹೊಂದಿಕೊಳ್ಳುವ ಈ ವಾಚ್ ಭಾರೀ ವೈರಲ್ ಆಗಿತ್ತು. 41 mm ಸ್ಟೇನ್‌ಲೆಸ್ ಸ್ಟೀಲ್ ಕೇಸ್, ಕ್ರೋನೋಗ್ರಾಫ್ ಪುಶರ್‌ಗಳು ಮತ್ತು ಟ್ಯಾಕಿಮೆಟ್ರಿಕ್ ಬೆಜೆಲ್‌ಗಳನ್ನು ಇದು ಹೊಂದಿದ್ದು, ಭಾರೀ ಜನಪ್ರಿಯತೆ ಹೊಂದಿದೆ.
ವಂತಾರದಲ್ಲಿ ಫುಟ್‌ಬಾಲ್ ದಿಗ್ಗಜ!
ವಂತಾರದಲ್ಲಿ ಮೆಸ್ಸಿ ಮಾತ್ರವಲ್ಲದೇ, ತನ್ನ ಇಂಟರ್ ಮಿಯಾಮಿ ತಂಡದ ಸಹ ಆಟಗಾರರಾದ ಲೂಯಿಸ್ ಸುವಾರೆಜ್ ಮತ್ತು ರೊಡ್ರಿಗೋ ಡಿ ಪಾಲ್ ಅವರೊಂದಿಗೆ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ಅವರಿಗೆ ಪುಷ್ಪವೃಷ್ಟಿ ಮತ್ತು ವಿಧ್ಯುಕ್ತ ಆರತಿಯೊಂದಿಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಇನ್ನು ವಂತಾರದಲ್ಲಿ ಮೆಸ್ಸಿ, ಅಂಬೆ ಮಾತಾ ಪೂಜೆ, ಗಣೇಶ ಪೂಜೆ, ಹನುಮಾನ್ ಪೂಜೆ, ಶಿವ ಅಭಿಷೇಕ ಸೇರಿದಂತೆ ಹಲವು ಆರತಿಗಳಲ್ಲಿ ಭಾಗವಹಿಸಿದ್ರು. ಅದ್ಧೂರಿ ಸ್ವಾಗತದ ನಂತರ ಮೆಸ್ಸಿ, ವಂತಾರವನ್ನು ಸುತ್ತಾಡಿದರು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications