ನವದೆಹಲಿ, ಜೂನ್ 2: ಭಾರತದ ಸಿರಿವಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯ ಪುತ್ರ ಅನಂತ್ ಅಂಬಾನಿ ಮತ್ತು ಉದ್ಯಮಿ ವೀರೇನ್ ಎ. ಮರ್ಚೆಂಟ್ ಮತ್ತು ಅವರ ಪತ್ನಿ ಶೈಲಾ ವಿರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರ ಅದ್ದೂರಿ ವಿವಾಹವೂ ಜುಲೈನಲ್ಲಿ ಜರುಗಲಿದೆ.
ಇವರ ವಿವಾಹ ಪೂರ್ವ ಸಮಾರಂಭ ಮಾರ್ಚ್ ನಲ್ಲಿ ಗುಜರಾತ್ ನ ಜಾಮ್‌ನಗರದಲ್ಲಿ ನಡೆದಿತ್ತು. ಇದೀಗ ಎರಡನೇ ಈ ಜೋಡಿಗಳು ಎರಡನೇ ವಿವಾಹ ಪೂರ್ವದ ಸಂಭ್ರಮದಲ್ಲಿದ್ದುಇದು ಕ್ರೂಸ್ ನಲ್ಲಿ ನಡೆಯಲಿದೆ. ಹೌದು ಅಂಬಾನಿ ಕುಟುಂಬವು ಐಷಾರಾಮಿ ಸಮುದ್ರ ವಿಹಾರವನ್ನು ಆಯೋಜಿಸಿದ್ದು, ಸಮಾರಂಭದಲ್ಲಿ ಭಾಗಿಯಾಗುತ್ತಿರುವ ಅತಿಥಿಗಳಿಗಾಗಿ ಅನೇಕ ಚಟುವಟಿಕೆಗಳನ್ನು ಯೋಜಿಸಲಾಗಿದೆ,

ಈ ಕ್ರೂಸ್ ಇಟಲಿಯಿಂದ ಹೊರಟು ಸ್ವಿಜರ್‌ಲ್ಯಾಂಡ್ ತಲುಪಲಿದೆ. ಜಗತ್ತಿನ ಎ ಲಿಸ್ಟ್ ನಲ್ಲಿರುವ ಸೆಲೆಬ್ರಿಟಿಗಳೆಲ್ಲ ಈ ಹಡಗಿನೊಳಗಿನ ಪಾರ್ಟಿಯಲ್ಲಿ ಭಾಗವಹಿಸಲಿದ್ದು, ವರದಿಗಳ ಪ್ರಕಾರ, ಅತ್ಯಂತ ಜನಪ್ರಿಯ ಪಾಪ್ ಸಂಸ್ಕೃತಿಯ ಐಕಾನ್‌ಗಳಲ್ಲಿ ಒಬ್ಬರಾದ ಪ್ರಸಿದ್ಧ ಅಮೇರಿಕನ್ ಗಾಯಕಿ ಕೇಟಿ ಪೆರ್ರಿ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಎರಡನೇ ಪೂರ್ವ ವಿವಾಹ ಸಮಾರಂಭದ ಮೂರನೇ ದಿನದಂದು ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ.
ಅಂಬಾನಿ ಕುಟುಂಬವು ಆಯೋಜಿಸಿರುವ ವಿವಾಹಪೂರ್ವ ಬ್ಯಾಷ್‌ನಲ್ಲಿ ಪ್ರದರ್ಶನ ನೀಡಲು ಜಾಗತಿಕ ಪಾಪ್ ತಾರೆ 'ಹಾರ್ಲೆಸ್ ಇನ್ ಹವಾಯಿ' ಗಾಯಕಿ ಕೇಟಿ ಪೆರ್ರಿ USD 50.9 ಮಿಲಿಯನ್ ಅಥವಾ 45 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಅಂದಿನ ಸಮಾರಂಭ ಮಾಸ್ಕ್ವೆರೇಡ್ ಬಾಲ್ ಅನ್ನು ಒಳಗೊಂಡಿರುತ್ತದೆ ಎ ಂದು ವರದಿಯಾಗಿದೆ.
ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮೊದಲ ವಿವಾಹಪೂರ್ವ ಸಮಾರಂಭದಲ್ಲಿ, ರಿಹಾನ್ನಾ, ದಿಲ್ಜಿತ್ ದೋಸಾಂಜ್, ಅರಿಜಿತ್ ಸಿಂಗ್, ಶ್ರೇಯಾ ಘೋಷಾಲ್ ಮುಂತಾದ ಅನೇಕ ಖ್ಯಾತ ಗಾಯಕರು ಪ್ರದರ್ಶನ ನೀಡಿದ್ದು ಅದಕ್ಕಾಗಿ ಅತ್ಯುತ್ತಮ ಸಂಭಾವನೆ ಪಡೆದಿದ್ದರು.
ಸನ್ ಯುಕೆ ಪತ್ರಿಕೆ ವರದಿ ಮಾಡಿದಂತೆ , "ಎರಡನೇ ವಿವಾಹ ಪೂರ್ವ ಸಮಾರಂಭವು ಬಾಹ್ಯಕಾಶದ ಥೀಮ್ ಹೊಂದಿದ್ದು, ದೇಶ ವಿದೇಶದ ಸುಮಾರು 800 ಅತಿಥಿಗಳು ಭಾಗವಹಿಸಲಿದ್ದಾರೆ. ಈ ಕ್ರೂಸ್ ಬಾರ್ಸಿಲೋನಾ ಮತ್ತು ಜಿನೋವಾದಲ್ಲಿ ನಿಲುಗಡೆ ಮಾಡಲಿದೆ. ಕ್ರೂಸ್‌ನಲ್ಲಿ ಐದು ಗಂಟೆಗಳ ಅವಧಿಯ ಪಾರ್ಟಿಯಲ್ಲಿ ಕೇಟಿ ಪೆರ್ರಿ ಪ್ರದರ್ಶನ ನೀಡಲಿದ್ದಾರೆ. ಇದರಲ್ಲದೇ ಪಾರ್ಟಿಯ ಮೆರುಗು ಮತ್ತಷ್ಟು ಹೆಚ್ಚಿಸಲು ಬೃಹತ್ ಪಟಾಕಿ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಜುಲೈ 12 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ದಿನ ಸಮೀಪಿಸುತ್ತಿದ್ದಂತೆ, ಮುಂಬೈಯೂ ಸಂಪ್ರದಾಯ, ಶ್ರೀಮಂತಿಕೆ ಮತ್ತು ಆಧುನಿಕತೆಯ ಸ್ಪರ್ಶವನ್ನು ಒ ಳಗೊಂಡಿರುವ ಭವ್ಯವಾದ ಆಚರಣೆಗೆ ಸಾಕ್ಷಿಯಾಗಲಿದೆ.


Click it and Unblock the Notifications