ಉದ್ಯಮಿ ಅನಿಲ್ ಅಂಬಾನಿಗೆ ಸೆಬಿ ಮತ್ತೊಂದು ಶಾಕ್: 154.5 ಕೋಟಿ ರೂ. ಡಿಮ್ಯಾಂಡ್ ನೋಟಿಸ್‌

ಒಂದು ಕಾಲದಲ್ಲಿ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಟಾಪ್ ಹತ್ತರಲ್ಲಿ ಸ್ಥಾನ ಪಡೆದುಕೊಂಡಿದ್ದ ಮುಖೇಶ್ ಅಂಬಾನಿ ಅವರ ಸಹೋದರ ರಿಲಯನ್ಸ್ ಗ್ರೂಪ್ ಅಧ್ಯಕ್ಷರಾದ ಅನಿಲ್ ಅಂಬಾನಿ ಸದ್ಯ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚಿಗಿನ ದಿನಗಳಲ್ಲಿ ಸಾಲಗಳಿಂದ ಮುಕ್ತವಾಗುತ್ತಿರುವ ಹೊರತಾಗಿಯೂ ವಿವಾದದ ಮೂಲಕವೇ ಅನಿಲ್ ಅವರು ಗುರುತಿಸಿಕೊಂಡಿದ್ದಾರೆ. ರಿಲಯನ್ಸ್ ಪವರ್ ಕೂಡ ಇತ್ತೀಚೆಗೆ ಸಾಲ ಮುಕ್ತವಾಗಿದೆ. ಇದರ ನಡುವಲ್ಲೂ ಅನಿಲ್ ಅಂಬಾನಿ ಕೆಲವು ಬಾರಿ ತೊಂದರೆ ಎದುರಿಸುತಿದ್ದು, ಸದ್ಯ ಮಾರುಕಟ್ಟೆ ನಿಯಂತ್ರಕ, ಸೆಬಿ ರಿಲಯನ್ಸ್ ಹೋಮ್ ಫೈನಾನ್ಸ್‌ನ ಪ್ರವರ್ತಕ ಘಟಕ ಸೇರಿದಂತೆ ಆರು ಘಟಕಗಳಿಗೆ ಡಿಮಾಂಡ್ ನೋಟಿಸ್ ಕಳುಹಿಸಿದ್ದು, ಕಂಪನಿಯಿಂದ ಹಣವನ್ನು ತಿರುಗಿಸಲು 154.50 ಕೋಟಿ ರೂ ಪಾವತಿಸುವಂತೆ ಕೇಳಿದೆ. ಮೊತ್ತದ ದುರುಪಯೋಗದ ಆರೋಪವೊಡ್ಡಿ ಸೆಬಿಯು ಈ ನಿರ್ಧಾರ ತೆಗೆದುಕೊಂಡಿದೆ. ಆಗಸ್ಟ್ 2024 ರಲ್ಲಿ ಸೆಬಿ ವಿಧಿಸಿದ ದಂಡವನ್ನು ಪಾವತಿಸಲು ಈ ಘಟಕಗಳು ವಿಫಲವಾದ ನಂತರ ಡಿಮ್ಯಾಂಡ್ ನೋಟಿಸ್‌ಗಳು ಬಂದಿವೆ. ಒಂದು ವೇಳೆ ಸದ್ಯ 15 ದಿನಗಳ ಒಳಗೆ ಹಣವನ್ನು ಪಾವತಿ ಮಾಡಲು ವಿಫಲವಾದರೆ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆಯಬಹುದು ಎಂದು ಈ ಘಟಕಗಳಿಗೆ ಎಚ್ಚರಿಕೆ ನೀಡಲಾಗಿದೆ.

ಆರು ಪ್ರತ್ಯೇಕ ನೋಟಿಸ್ ಜಾರಿಗೊಳಿಸಿದ ಸೆಬಿ

ಎಲ್ಲರಿಗೂ ತಿಳಿದಿರುವಂತೆ ಷೇರು ಮಾರುಕಟ್ಟೆಗಳಲ್ಲಿ ನಡೆಯುವ ಅವ್ಯವಹಾರಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕಾಗಿಯೇ ಸೆಬಿ ಆರಂಭಿಸಲಾಗಿದ್ದು, ಸದ್ಯ ರಿಲಯನ್ಸ್ ಗ್ರೂಪ್ ವಿರುದ್ಧ ದಂಡ ಕಟ್ಟಲು ಆದೇಶಿಸಿದೆ. ಇನ್ನು ಸೆಬಿ ತಾನು ಆರು ಆರು ಪ್ರತ್ಯೇಕ ನೋಟಿಸ್‌ಗಳಲ್ಲಿ, ಈ ಆರು ಘಟಕಗಳಿಗೆ ತಲಾ 25.75 ಕೋಟಿ ರೂಪಾಯಿ ಪಾವತಿಸುವಂತೆ ನೋಟಿಸ್ ನೀಡಿದೆ. ಕ್ರೆಸ್ಟ್ ಲಾಜಿಸ್ಟಿಕ್ಸ್ ಮತ್ತು ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ (ಈಗ ಸಿಎಲ್‌ಇ ಪ್ರೈವೇಟ್ ಲಿಮಿಟೆಡ್ ಎಂದು ಕರೆಯಲಾಗುತ್ತದೆ), ರಿಲಯನ್ಸ್ ಯುನಿಕಾರ್ನ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್, ರಿಲಯನ್ಸ್ ಎಕ್ಸ್‌ಚೇಂಜ್ ನೆಕ್ಸ್ಟ್ ಲಿಮಿಟೆಡ್, ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್, ರಿಲಯನ್ಸ್ ಬಿಸಿನೆಸ್ ಬ್ರಾಡ್‌ಕಾಸ್ಟ್ ನ್ಯೂಸ್ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಸೇರಿದಂತೆ ಹಲವು ಘಟಕಗಳಿಗೆ ಸೆಬಿ ನೋಟಿಸ್ ಕಳುಹಿಸಿದೆ. ಇನ್ನು ಈ ಮೊತ್ತವು ಇದು 15 ದಿನಗಳಲ್ಲಿ ಬಡ್ಡಿ ಮತ್ತು ಮರುಪಡೆಯುವಿಕೆ ವೆಚ್ಚಗಳನ್ನು ಒಳಗೊಂಡಿರುತ್ತದೆ. ಒಂದು ವೇಳೆ ಬಾಕಿಯನ್ನು ಪಾವತಿಸಲು ವಿಫಲವಾದಲ್ಲಿ ಸೆಬಿಯು ಈ ಘಟಕಗಳ ಚರ ಮತ್ತು ಸ್ಥಿರ ಆಸ್ತಿಯನ್ನು ಲಗತ್ತಿಸಿ ಮತ್ತು ಮಾರಾಟ ಮಾಡುವ ಮೂಲಕ ಮೊತ್ತವನ್ನು ಮರುಪಡೆಯಲಿದೆ. ಅದೂ ಅಲ್ಲದೆ ಸಂಸ್ಥೆಯು ತಮ್ಮ ಬ್ಯಾಂಕ್ ಖಾತೆಗಳ ಲಗತ್ತನ್ನು ಕೂಡ ಎದುರಿಸುತ್ತಿದೆ.

ಉದ್ಯಮಿ ಅನಿಲ್ ಅಂಬಾನಿಗೆ ಸೆಬಿ ಮತ್ತೊಂದು ಶಾಕ್!

ಐದು ವರ್ಷಗಳ ಕಾಲ ನಿರ್ಬಂಧ ಹೇರಿದ್ದ ಸೆಬಿ

ಇದೇ ವರ್ಷದ ಆಗಸ್ಟ್‌ನಲ್ಲಿ ಸೆಬಿಯು ಅನಿಲ್ ಅಂಬಾನಿ, ರಿಲಯನ್ಸ್ ಹೋಮ್ ಫೈನಾನ್ಸ್‌ನ ಮಾಜಿ ಪ್ರಮುಖ ಅಧಿಕಾರಿಗಳು ಸೇರಿದಂತೆ ಇತರ 24 ಘಟಕಗಳನ್ನು ಸೆಬಿಯಿಂದ ಐದು ವರ್ಷಗಳ ಕಾಲ ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ಕಂಪೆನಿಯಿಂದ ಹಣವನ್ನು ಇತರ ಕಡೆಗೆ ಪಾವತಿಸದಂತೆ ನಿರ್ಬಂಧಿಸಿತ್ತು. ಸೆಬಿಯು ಅಂಬಾನಿ ಮೇಲೆ 25 ಕೋಟಿ ರೂ.ಗಳ ದಂಡವನ್ನು ವಿಧಿಸಿದೆ ಮತ್ತು ಯಾವುದೇ ಪಟ್ಟಿ ಮಾಡಲಾದ ಕಂಪನಿಯಲ್ಲಿ ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ (KMP) ಅಥವಾ ಮಾರುಕಟ್ಟೆ ನಿಯಂತ್ರಕದಲ್ಲಿ ನೋಂದಾಯಿಸಲಾದ ಯಾವುದೇ ಮಧ್ಯವರ್ತಿ ಸೇರಿದಂತೆ ಸೆಕ್ಯುರಿಟೀಸ್ ಮಾರುಕಟ್ಟೆಯೊಂದಿಗೆ ಸಂಬಂಧ ಹೊಂದದಂತೆ 5 ವರ್ಷಗಳ ನಿರ್ಬಂಧ ವಿಧಿಸಿದೆ. ಅಲ್ಲದೆ, ನಿಯಂತ್ರಕವು ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (RHFL) ಅನ್ನು ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ಆರು ತಿಂಗಳ ಕಾಲ ನಿರ್ಬಂಧಿಸಿತು ಮತ್ತು ಅದರ ಮೇಲೆ 6 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿತ್ತು.

ಒಂದು ಕಾಲ ಭಾರೀ ಶ್ರೀಮಂತ!

ಎಲ್ಲರಿಗೂ ಗೊತ್ತಿರುವಂತೆ ಅನಿಲ್ ಅಂಬಾನಿ ಅವರು ಒಂದು ಕಾಲದಲ್ಲಿ ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಗುರುತಿಸಿಕೊಂಡಿದ್ದರು. ಹಲವಾರು ಕಂಪೆನಿಗಳನ್ನು ನಿರ್ವಹಿಸುತ್ತಿದ್ದ ಅವರು ಬಳಿಕ ಆರ್ಥಿಕ ನೀತಿಗಳಿಂದ ನಷ್ಟ ಅನುಭವಿಸುತ್ತಾ ಹೋದರು ಎನ್ನಲಾಗಿದೆ. ಸದ್ಯ ಸೆಬಿ ನೋಟಿಸ್ ನೀಡಿರುವುದರಿಂದ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+