ಖ್ಯಾತ ಐಟಿ ಕಂಪನಿ ಸ್ಯಾಪ್ ಬೆಂಗಳೂರಿನಲ್ಲಿ ತನ್ನ ಮತ್ತೊಂದು ಹೊಸ ಕ್ಯಾಂಪಸ್ ಅನ್ನು ಸ್ಥಾಪಿಸಲು ಯೋಜನೆ ಮಾಡಿದೆ. ಇದರೊಂದಿಗೆ 15,000 ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಸ್ಯಾಪ್ ಲ್ಯಾಬ್ಸ್ ಇಂಡಿಯಾ ಹೊಸ ಕ್ಯಾಂಪಸ್‌ಗೆ ಮೇ 29, 2023 ರಂದು ಅಡಿಪಾಯ ಹಾಕಲಾಯಿತು. ಇದು ಮುಂದಿನ ವರ್ಷ ಕಾರ್ಯಾರಂಭ ಮಾಡಲಿದೆ.
ಸ್ಯಾಪ್ ಲ್ಯಾಬ್ಸ್ ಇಂಡಿಯಾದ ಅತಿ ದೊಡ್ಡ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಿದೆ. ಇದೀಗ ಇದು ಬೆಂಗಳೂರಿನಲ್ಲಿ ತನ್ನ ಎರಡನೇ ಬೃಹತ್ ಕ್ಯಾಂಪಸ್ ತೆರೆಯಲು ಮುಂದಾಗಿದೆ. ಬೆಂಗಳೂರಿನ ದೇವನಹಳ್ಳಿಯಲ್ಲಿ ಸ್ಯಾಪ್ ಲ್ಯಾಬ್ಸ್ ಇಂಡಿಯಾ ಹೊಸ ಕ್ಯಾಂಪಸ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದರ ಮೊದಲ ಹಂತಕ್ಕೆ 80 ಮಿಲಿಯನ್ (750 ಕೋಟಿ) ಯುರೋಗಳಷ್ಟು ಖರ್ಚು ಮಾಡಲಾಗುತ್ತಿದೆ.

41 ಎಕರೆ ವಿಶಾಲವಾದ ಪ್ರದೇಶದಲ್ಲಿ ಈ ಎರಡನೇ ಕಚೇರಿಯ ಕ್ಯಾಂಪಸ್ ತೆರೆಯಲಾಗುವುದು. ಈ ಕ್ಯಾಂಪಸ್‌ನಲ್ಲಿ 15,000 ಉದ್ಯೋಗಿಗಳನ್ನು ಸೃಷ್ಟಿ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಕಂಪನಿ ಹೇಳಿದೆ.
ಸ್ಯಾಪ್ ಲ್ಯಾಬ್ಸ್‌ನ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಶೇ.40ರಷ್ಟು ಕೊಡುಗೆಯನ್ನು ಬೆಂಗಳೂರು ನೀಡುತ್ತಿದ್ದು, ಕಂಪನಿಯ ಪೇಟೆಂಟ್‌ಗಳಲ್ಲಿ ನಾಲ್ಕನೇ ಒಂದು ಭಾಗ ಇಲ್ಲಿಂದಲೇ ಬರುತ್ತಿದೆ. ಕಂಪನಿಯ 13,000 ಉದ್ಯೋಗಿಗಳಲ್ಲಿ ಶೇ. 50ರಷ್ಟು ಜನರು ಎಐ ಕೌಶಲ್ಯವನ್ನು ಹೊಂದಿದ್ದು ಕಂಪನಿ ಎಐನಲ್ಲಿ ಹೆಚ್ಚಿನ ಪರಿಣತಿ ಸಾಧಿಸಿದೆ. ಇದು ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಸ್ಯಾಪ್ ಲ್ಯಾನ್ಸ್ ಇಂಡಿಯಾ ಕಂಪನಿಯಾಗಿದೆ.
ಜಾಗತಿಕವಾಗಿ ಸ್ಯಾಪ್‌ನ ಎರಡನೇ ಅತಿ ದೊಡ್ಡ ಆರ್&ಡಿ ಕೇಂದ್ರವಾಗಿರುವ ಸ್ಯಾಪ್ ಲ್ಯಾಬ್ಸ್ ಇಂಡಿಯಾ ಜಗತ್ತಿನಲ್ಲೆಡೆ ಇರುವ ಸ್ಯಾಪ್‌ನ 4,50,000 ಗ್ರಾಹಕರಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತದೆ. ಇದರ ಬಗ್ಗೆ ಮಾತನಾಡಿದ ಸ್ಯಾಪ್ ಲ್ಯಾಬ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಗ್ರಾಹಕ ನಾವೀನ್ಯತೆ ಸೇವೆಗಳ ಮುಖ್ಯಸ್ಥೆ ಸಿಂಧು ಗಂಗಾಧರನ್, ಹೊಸ ಕ್ಯಾಂಪಸ್‌ನೊಂದಿಗೆ ಕಂಪನಿಯು ದೇಶದಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.


Click it and Unblock the Notifications