ಭಾರತದಲ್ಲಿ ಆಪಲ್‌ನ ಹೆಚ್ಚುತ್ತಿರುವ ಪ್ರಾಬಲ್ಯವು ಡಿಜಿಟಲ್ ಆರ್ಥಿಕತೆಯ ಸ್ವರೂಪವನ್ನೇ ಬದಲಾಯಿಸುತ್ತಿದ್ದು ಇದಕ್ಕೆ ಪೂರಕವೆಂಬಂತೆ ಇತ್ತೀಚಿನ ವರದಿಯೊಂದು ಆಪಲ್ ಆಪ್ ಸ್ಟೋರ್ ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ಬೀರುತ್ತಿರುವ ಬಹುದೊಡ್ಡ ಪ್ರಭಾವವನ್ನು ಎತ್ತಿ ತೋರಿಸಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಹಮದಾಬಾದ್‌ನ ಪ್ರಾಧ್ಯಾಪಕ ವಿಶ್ವನಾಥ ಪಿಂಗಳಿ ಅವರ ಅಧ್ಯಯನದ ಪ್ರಕಾರ, 2024 ರಲ್ಲಿ ಆಪ್ ಸ್ಟೋರ್ ಭಾರತದಾದ್ಯಂತ ₹44,447 ಕೋಟಿಗೂ ಹೆಚ್ಚು (ಸುಮಾರು $5.31 ಶತಕೋಟಿ) ಮೊತ್ತದ ಡೆವಲಪರ್ ಬಿಲ್ಲಿಂಗ್‌ಗಳು ಮತ್ತು ಮಾರಾಟಕ್ಕೆ ಕಾರಣವಾಗಿದೆ. ಗಮನಿಸಬೇಕಾದ ಅಂಶವೆಂದರೆ, ಈ ಆದಾಯದ 94% ಕ್ಕಿಂತ ಹೆಚ್ಚಿನ ಭಾಗವು ಆಪಲ್‌ಗೆ ಯಾವುದೇ ಸೇವಾ ಶುಲ್ಕವನ್ನು ಪಾವತಿಸದೆ ನಡೆದಿದೆ.
ಆಪಲ್ ಪಿಂಗಳಿ ಅವರ ಈ ಹೊಸ ಅಧ್ಯಯನ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದ್ದು, ಕಳೆದ ಐದು ವರ್ಷಗಳಲ್ಲಿ ಭಾರತ ಮೂಲದ ಡೆವಲಪರ್‌ಗಳ ಜಾಗತಿಕ ಗಳಿಕೆಯು ಮೂರು ಪಟ್ಟು ಹೆಚ್ಚಾಗಿದೆ ಎಂದು ಸಹ ವರದಿಯು ಉಲ್ಲೇಖಿಸಿದೆ. ಇದು ಜಾಗತಿಕ ಮಟ್ಟದಲ್ಲಿ ತಲುಪುವಿಕೆಯನ್ನು ವಿಸ್ತರಿಸುವಲ್ಲಿ ಆಪ್ ಸ್ಟೋರ್‌ನ ಪಾತ್ರವನ್ನು ಒತ್ತಿಹೇಳುತ್ತದೆ.

ಆಪಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್ ಕುಕ್ ಅವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, " ಭಾರತೀಯ ಹಾಗೂ ಜಾಗತಿಕ ಡೆವಲಪರ್‌ಗಳಿಗೆ ಆಪ್ ಸ್ಟೋರ್ ಒಂದು ಅಭೂತಪೂರ್ವ ಆರ್ಥಿಕ ಯಶಸ್ಸನ್ನು ತಂದುಕೊಟ್ಟಿದೆ. ಅವರ ಈ ಕಾರ್ಯಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ. ಈ ಅಧ್ಯಯನವು ಭಾರತದ ನಂಬಲಾಗದಷ್ಟು ರೋಮಾಂಚಕ ಅಪ್ಲಿಕೇಶನ್ ಆರ್ಥಿಕತೆಯ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
"ಭಾರತದ ಅಪ್ಲಿಕೇಶನ್ ಮಾರುಕಟ್ಟೆ ಎಷ್ಟೊಂದು ಬೆಳೆದಿದೆ ಎಂದು ಈ ಅಧ್ಯಯನ ತೋರಿಸುತ್ತದೆ. ಹಾಗೆಯೇ, ಗಮನಾರ್ಹವಾದ ಪ್ರಭಾವ ಬೀರುವ ಮತ್ತು ಜನರ ಬದುಕನ್ನು ಇನ್ನಷ್ಟು ಉತ್ತಮಗೊಳಿಸುವಂತಹ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುತ್ತಿರುವ ಎಲ್ಲ ಸ್ತರದ ಡೆವಲಪರ್‌ಗಳ ಯಶಸ್ಸಿಗೆ ನಾವು ಸತತವಾಗಿ ಬಂಡವಾಳ ಹೂಡಲು ಬದ್ಧರಾಗಿದ್ದೇವೆ," ಎಂದು ಅವರು ವಿವರಿಸಿದ್ದಾರೆ.
ಭಾರತದ ಅಪ್ಲಿಕೇಶನ್ ಡೆವಲಪರ್‌ಗಳು ಮತ್ತು ಬಳಕೆದಾರರನ್ನು ಸಂಪರ್ಕಿಸುವಲ್ಲಿ, ಸುರಕ್ಷಿತ, ವಿಶ್ವಾಸಾರ್ಹ ವೇದಿಕೆ ಮತ್ತು ಜಾಗತಿಕ ಪ್ರೇಕ್ಷಕರಿಗೆ ಪ್ರವೇಶವನ್ನು ಒದಗಿಸುವಲ್ಲಿ ಆಪ್ ಸ್ಟೋರ್‌ನ ಪ್ರಮುಖ ಪಾತ್ರವನ್ನು ಸಂಶೋಧನೆಯು ಎತ್ತಿ ತೋರಿಸುತ್ತದೆ. 2024 ರಲ್ಲಿ, ಭಾರತ ಮೂಲದ ಡೆವಲಪರ್‌ಗಳು ರಚಿಸಿದ ಅಪ್ಲಿಕೇಶನ್‌ಗಳು ವಿಶ್ವಾದ್ಯಂತ 755 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ದಾಖಲಿಸಿವೆ, ಅವರ ಗಳಿಕೆಯ ಸುಮಾರು 80% ಅಂತರರಾಷ್ಟ್ರೀಯ ಬಳಕೆದಾರರಿಂದ ಬರುತ್ತಿದೆ.
ಭಾರತದ ಡಿಜಿಟಲ್ ಡೆವಲಪರ್‌ಗಳು ಭಾರತಕ್ಕಾಗಿ ಮಾತ್ರವಲ್ಲ, ಪ್ರಪಂಚಕ್ಕಾಗಿಯೂ ನಿರ್ಮಿಸುತ್ತಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ" ಎಂದು ಪ್ರೊಫೆಸರ್ ಪಿಂಗಲಿ ತಮ್ಮ ಅಧ್ಯಯನ ವರದಿಯಲ್ಲಿ ಗಮನಿಸಿದ್ದಾರೆ.
2024 ರಲ್ಲಿ ಭಾರತದಲ್ಲಿ ಆಪ್ ಸ್ಟೋರ್ ವಿಸ್ತರಣೆ ಕಂಡಿದ್ದು, ಪ್ರತಿ ವಾರ 2 ಕೋಟಿ 20 ಲಕ್ಷಕ್ಕೂ ಹೆಚ್ಚು ಜನರು ಭೇಟಿ ಮಾಡುತ್ತಿದ್ದಾರೆ. ಇದು ಮೂರು ವರ್ಷಗಳ ಹಿಂದಿನ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು. ಭಾರತದ ಜನರು ಒಂದು ವರ್ಷದಲ್ಲಿ ಸುಮಾರು 110 ಕೋಟಿ ಬಾರಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ್ದಾರೆ. ಮುಖ್ಯವಾಗಿ, ಈ ಡೌನ್‌ಲೋಡ್‌ಗಳಲ್ಲಿ 38% ರಷ್ಟು ಭಾರತೀಯ ತಂಡಗಳು ಅಭಿವೃದ್ಧಿಪಡಿಸಿದ ಅಪ್ಲಿಕೇಶನ್ ಗಳಿಂದ ಬಂದಿದೆ. ಇದು ಕಳೆದ ಐದು ವರ್ಷಗಳ ಹಿಂದಿನದಕ್ಕೆ ಹೋಲಿಸಿದರೆ 27% ಹೆಚ್ಚಳವಾಗಿದೆ.
ಪ್ರೊಫೆಸರ್ ಪಿಂಗಲಿ ಅವರ ಅಧ್ಯಯನವು ಭಾರತದಲ್ಲಿ ಆಪ್ ಸ್ಟೋರ್ ಹೇಗೆ ಬೆಳೆಯುತ್ತಿದೆ ಎಂಬುದಕ್ಕೆ ಮುಖ್ಯ ಕಾರಣಗಳನ್ನು ನೋಡಿದೆ. ಆಹಾರ ತಲುಪಿಸುವುದು, ಪ್ರಯಾಣ, ಗೇಮಿಂಗ್ ಮತ್ತು ಮನರಂಜನೆಯಂತಹ ಅಪ್ಲಿಕೇಶನ್‌ಗಳನ್ನು ಜನರು ಹೆಚ್ಚಾಗಿ ಬಳಸುತ್ತಿರುವುದು ಇದಕ್ಕೆ ಕಾರಣ ಎಂಬ ಸೂಕ್ಷ್ಮ ವಿಚಾರವನ್ನೂ ಅಧ್ಯಯನ ವೇಳೆ ಗಮನಿಸಿದ್ದಾರೆ.
ಅಧ್ಯಯನದ ಪ್ರಕಾರ, ಆಪ್ ಸ್ಟೋರ್‌ನಲ್ಲಿರುವ ಡೆವಲಪರ್‌ಗಳು ವಸ್ತುಗಳು ಮತ್ತು ಸೇವೆಗಳನ್ನು ಮಾರಾಟ ಮಾಡಿ ಸುಮಾರು ₹38,906 ಕೋಟಿ, ಅಪ್ಲಿಕೇಶನ್‌ನಲ್ಲಿನ ಬರುವ ಜಾಹೀರಾತುಗಳಿಂದ ₹3,014 ಕೋಟಿ ಮತ್ತು ಡಿಜಿಟಲ್ ಸರಕು ಮತ್ತು ಸೇವೆಗಳಿಂದ ₹2,527 ಕೋಟಿ ಆದಾಯ ಗಳಿಸಿದ್ದಾರೆ. ಗೇಮಿಂಗ್, ಆರೋಗ್ಯ ಮತ್ತು ಫಿಟ್‌ನೆಸ್, ಜೀವನಶೈಲಿ ಮತ್ತು ಉಪಯುಕ್ತತೆಗಳಂತಹ ಅಪ್ಲಿಕೇಶನ್ ವಿಭಾಗಗಳು ಗಮನಾರ್ಹ ಬೆಳವಣಿಗೆಯನ್ನು ಕಂಡಿವೆ.


Click it and Unblock the Notifications