ಬೆಂಗಳೂರು, ಮೇ 14: ಭಾರತದಲ್ಲಿ ಕಳೆದ ವರ್ಷ ಐಫೋನ್ ಸ್ಟೋರ್‌ಗಳನ್ನು ಆರಂಭಿಸಿರುವ ಆಪಲ್ ಫೋನ್ ಕಂಪೆನಿಯು ದಾಖಲೆಯ ವಹಿವಾಟನ್ನು ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ಐಫೋನ್ ಮಾರುಕಟ್ಟೆಯನ್ನು ವಿಸ್ತರಿಸಲು ಮುಂದಾಗಿರುವ ಆಪಲ್ ಮುಂದಿನ 2-3 ವರ್ಷಗಳಲ್ಲಿ ಭಾರತದಲ್ಲಿ ವರ್ಷಕ್ಕೆ 50 ಮಿಲಿಯನ್ ಫೋನ್‌ಗಳನ್ನು ತಯಾರಿಸುವ ಗುರಿಯನ್ನು ಹಾಕಿಕೊಂಡಿದೆ.
ಆ ಮೂಲಕ, ಭಾರತದಲ್ಲಿ ಐಫೋನ್ ಉತ್ಪಾದನಾ ಪ್ರಮಾಣವನ್ನು ವಿಸ್ತರಿಸುವುದಕ್ಕೆ ಮುಂದಾಗಿದೆ. ಇದಕ್ಕಾಗಿ ಟಾಟಾ ಗ್ರೂಪ್ 50 ಸಾವಿರ ಉದ್ಯೋಗಿಗಳೊಂದಿಗೆ 20 ಅಸೆಂಬ್ಲಿ ಲೈನ್ಸ್ ಹೊಂದಿರುವ ಉತ್ಪಾದನಾ ಘಟಕವನ್ನು ನಿರ್ಮಸುವುದಕ್ಕೆ ಮುಂದಾಗಿದೆ. ಮುಂದಿನ 12ರಿಂದ 18 ತಿಂಗಳಲ್ಲಿ ಇದು ಕಾರ್ಯಾರಂಭ ಮಾಡಲಿದೆ. ಈ ಸಂಬಂಧ ಫೋಕ್ಸಿಕಾನ್ ಹಾಗೂ ಆಪಲ್ ಕಂಪೆನಿಯು ಭಾರತದಲ್ಲಿ ಮಹತ್ವದ ಒಪ್ಪಂದವನ್ನು ಮಾಡಿಕೊಂಡಿದೆ.

ಫೋಕ್ಸಿಕಾನ್ ಈ ಕಾರ್ಯಾಚರಣೆಗೆ 1.5 ಬಿಲಿಯನ್ ಡಾಲರ್ ಮೊತ್ತವನ್ನು ಹೂಡಿಕೆ ಮಾಡಲಿದೆ. ಆ ಮೂಲಕ ಆಪೆಲ್ ಕಂಪೆನಿ ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲಿದೆ. ಬೀಜಿಂಗ್ ಹಾಗೂ ವಾಷಿಂಗ್ಟನ್ ನಡುವಿನ ಶೀತಲ ಸಮರ ಜೋರಾಗುತ್ತಿರುವ ಹಿನ್ನಲೆಯಲ್ಲಿ ಆಫಲ್ ಕಂಪೆನಿಯು ತನ್ನ ಭವಿಷ್ಯದ ಐಫೋನ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಭಾರತದತ್ತ ಮುಖ ಮಾಡಿದೆ. ಆಪಲ್ ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ತನ್ನ ಉತ್ಪಾದನಾ ಘಟಕ ಸ್ಥಾಪಿಸಲು ನಿರ್ಧರಿಸಿದೆ.
ಈ ಬಗ್ಗೆ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಪ್ರತಿಕ್ರಿಯಿಸಿದ್ದಾರೆ. ಆಪಲ್‌ನಂಥ ದೈತ್ಯ ಕಂಪೆನಿಗಳಿಗೆ ಬೇಕಾಗಿರುವ ಇಕೋಸಿಸ್ಟಮ್ ರೂಪಿಸುವುದಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್‌ಸೆಂಟೀವ್(ಪಿಎಲ್‌ಐ) ಸ್ಕೀಮ್ ಜಾರಿಗೊಳಿಸಲಾಗಿದೆ ಎಂದಿದ್ದಾರೆ. ಆ ಮೂಲಕ ಚೀನಾ ಮೇಲಿನ ಅವಲಂಬನೆ ಕಡಿಮೆಗೊಳಿಸುವುದಕ್ಕೆ ಸ್ಥಳೀಯ ವಿತರಕರ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸಲು ನೆರವಾಗಲಿದೆ.
ಭಾರತದ ಮೇಕಿಂಗ್ ಇಂಡಿಯಾ ಯೋಜನೆಯಡಿ ಭಾರತದಿಂದ ವಸ್ತುಗಳನ್ನು ಜಾಗತಿಕ ಮಟ್ಟದಲ್ಲಿ ರಫ್ತು ಮಾಡುವುದಕ್ಕೆ ಆಪಲ್‌ನಂಥನ ಕಂಪೆನಿಗಳಿಗೆ ಉತ್ತೇಜನ ದೊರೆಯಲಿದೆ. ಇದು ಲಕ್ಷಾಂತರ ಉದ್ಯೋಗಾವಕಾಶ ಸೃಷ್ಟಿಸಲಿದೆ ಎಂದಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಹು ಕನಸಿನ ಪಿಎಲ್‌ಐ ಯೋಜನೆಯು ಪ್ರತಿ ದಿನವೂ ಸಾಕಷ್ಟು ಉತ್ತೇಜನಕ್ಕೆ ಕಾರಣವಾಗುತ್ತಿದೆ. 2028ರ ವೇಳೆಗೆ ಶೇ.25ರಷ್ಟು ಐಫೋನ್‌ಗಳು ಭಾರತದಲ್ಲಿ ತಯಾರಾಗಲಿದೆ ಎಂದು ಚಂದ್ರಶೇಖರ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ಥಳೀಯ ಮಾರಾಟಗಾರರ ನೆಟ್‌ವರ್ಕ್ ರೂಪಿಸುವುದಕ್ಕೆ ಆಪೆಲ್ ಕಾರ್ಯಪ್ರವೃತ್ತವಾಗಿದೆ. ಜಾಗತಿಕ ಇಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡೆಕ್ಟರ್ ವಲಯದಲ್ಲಿ ಭಾರತವು ಜಾಗತಿಕವಾಗಿ ಭಾರತವು ಪ್ರಮುಖ ಪಾತ್ರ ವಹಿಸಲಿದೆ.
ಸ್ಥಳೀಯವಾಗಿ ತಯಾರಿಸುವ ಉತ್ಪನ್ನಗಳು ಭಾರತದಲ್ಲಿನ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸುವ ಜತೆಗೆ ಚೀನಾ ದೇಶಕ್ಕೆ ದೊಡ್ಡ ಪ್ರತಿಸ್ಪರ್ಧೆಯನ್ನು ನೀಡಲಿದೆ. ಆಪೆಲ್ ಕಂಪೆನಿಯು ಕಳೆದ ಮಾರ್ಚ್‌ನಲ್ಲಿನ ತ್ರೈಮಾಸಿಕದಲ್ಲಿ ಎರಡು ಅಂಕೆಯ ಬೆಳವಣಿಗೆಯನ್ನು ಸಾಧಿಸಿದೆ. ಕೈಗಾರಿಕಾ ವಲಯದಲ್ಲಿ ಮುಂದಿನ 2-3 ವರ್ಷಗಳಲ್ಲಿ ಆಪೆಲ್ ಮೂರನೇ ಅತಿದೊಡ್ಡ ಟೆಕ್ ಕಂಪೆನಿಯಾಗಿ ಭಾರತದಲ್ಲಿ ಗುರುತಿಸಲಿದೆ. ಭಾರತದಲ್ಲಿ ಐಫೋನ್ ಈ ವರ್ಷದಲ್ಲಿ ಶೇ.20ರಷ್ಟು ಬೆಳವಣಿಗೆ ಸಾಧಿಸಿದೆ. ಕಳೆದ ವರ್ಷ ಭಾರತದಲ್ಲಿ 10 ಮಿಲಿಯನ್ ಐಫೋನ್‌ಗಳನ್ನು ಪೂರೈಸಲಾಗಿದೆ.


Click it and Unblock the Notifications