ಆ್ಯಪಲ್ ಕಂಪನಿಯು ತನ್ನ ಆ್ಯಪ್ ಸ್ಟೋರ್ ನಿಂದ 1 ಲಕ್ಷ 35 ಸಾವಿರಕ್ಕೂ ಹೆಚ್ಚು ಆ್ಯಪ್‌ಗಳನ್ನು ಬ್ಯಾನ್ ಮಾಡಿ, ಜಗತ್ತೇ ಹುಬ್ಬೇರಿಸಿ ನೋಡುವಂತೆ ಮಾಡಿದೆ. ತನ್ನ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಈ ಕ್ರಮ ತೆಗೆದುಕೊಂಡಿದ್ದು, ಇದೇ ಮೊದಲ ಬಾರಿಗೆ ಇಷ್ಟೊಂದು ಆ್ಯಪ್‌ಗಳು ಬ್ಯಾನ್ ಮಾಡಲಾಗಿದೆ. 1 ಲಕ್ಷ 35 ಸಾವಿರಕ್ಕೂ ಹೆಚ್ಚು ಆ್ಯಪ್‌ಗಳನ್ನು, ಯುರೋಪಿಯನ್ ಸದಸ್ಯ ರಾಷ್ಟ್ರಗಳಲ್ಲಿನ ಆ್ಯಪ್ ಸ್ಟೋರ್‍ಗಳಿಂದ ತೆಗೆದುಹಾಕಲಾಗಿದೆ. ಆ್ಯಪಲ್ ಕಂಪನಿ ಪರಿಶೀಲನೆ ನಡೆದು, ವ್ಯವಹಾರಿಕ ಮಾಹಿತಿಗಳನ್ನು ಒದಗಿಸುವವರೆಗೆ ಅಪ್ಲಿಕೇಷನ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಆ್ಯಪ್ ಫಿಗರ್ ವೆಬ್‌ಸೈಟ್‌ನಲ್ಲಿ ಮಾಹಿತಿ ಇದೆ.
ಆ್ಯಪಲ್ ತೆಗೆದುಕೊಂಡ ಈ ಒಂದು ನಿರ್ಧಾರದಿಂದ, ಇಡೀ ಜಗತ್ತಿಗೇ ಶಾಕ್ ಆಗಿದೆ. ಒಂದಲ್ಲ ಎರಡಲ್ಲ ಒಂದೂವರೆ ಲಕ್ಷದ ದಾಟಿದೆ ಆ್ಯಪಲ್ ಸಂಸ್ಥೆ ಡಿಲಿಟ್ ಮಾಡಿದ ಆ್ಯಪ್‌ಗಳ ಸಂಖ್ಯೆ. ಗ್ರಾಹಕರಿಗೆ ಕೂಡ ಇದರಿಂದ ಶಾಕ್ ಆಗಿದೆ. ಈ ಬ್ಯಾನ್ ಆಗಿರುವ ಆ್ಯಪ್‌ಗಳಲ್ಲಿ ತಾವು ಇಲ್ಲಿವರೆಗೂ ಬಳಸುತ್ತಿದ್ದ ಯಾವುದಾದರೂ ಒಂದು ಆ್ಯಪ್ ಇರಬಹುದಾ ಎಂಬ ಪ್ರಶ್ನೆಯೂ ಎದುರಾಗಿದೆ. ಆದ್ರೆ ಆ್ಯಪಲ್ ಸಂಸ್ಥೆ ಏನೇ ಮಾಡಿದ್ದರೂ ಗ್ರಾಹಕರ ಸುರಕ್ಷತೆಗಾಗಿಯೇ ಆಗಿದೆ.

ಆ್ಯಪ್‌ಗಳನ್ನು ಬ್ಯಾನ್ ಮಾಡಿದ್ದೇಕೆ ಆ್ಯಪ್ ಸ್ಟೋರ್..?
ಆ್ಯಪ್ ಸ್ಟೋರ್‍ಗಳಲ್ಲಿ ಒಳಪಡುವ ಎಲ್ಲಾ ಅಪ್ಲಿಕೇಷನ್‌ಗಳು, ಎಲ್ಲಾ ಮಾಹಿತಿಯನ್ನು ಕಂಪನಿಗೆ ಒದಗಿಸಬೇಕು. ತನ್ನ ವ್ಯಾಪಾರ ಸ್ಥಿತಿ ಬಗ್ಗೆ ಆ್ಯಪಲ್ ಕಂಪನಿಗೆ ತಿಳಿಸಿರಬೇಕು. ಆದರೆ ಇಲ್ಲಿ ನಿಷೇಧಕ್ಕೊಳಗಾಗಿರುವ ಆ್ಯಪ್‌ಗಳು ಮಾಹಿತಿಯನ್ನು ಬಹಿರಂಗಪಡಿಸುತ್ತಿಲ್ಲ. ಅಂದರೆ ಅಗತ್ಯವಾದ ವಿಳಾಸ, ಫೋನ್ ನಂಬರ್, ಇಮೇಲ್ ವಿಳಾಸದಂತಹ ಮಾಹಿತಿಯನ್ನೇ ಮುಚ್ಚಿಡುತ್ತಿದೆ. ಹೊಸ EU ನಿಯಮಗಳ ಪ್ರಕಾರ ಅಪ್ಲಿಕೇಷನ್ ಡೆವಲಪರ್‍ಗಳು ಈ ಎಲ್ಲಾ ಮಾಹಿತಿಗಳನ್ನು ಒದಗಿಸದೇ ಇದ್ದರೆ, ಸಂಪರ್ಕ ವಿವರಗಳು ಕಾಣೆಯಾದಂತೆ ಅರ್ಥ. ಹೀಗಾಗಿ ಇಂತಹ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ.
ಮ್ಯಾಮತ್ ಆ್ಯಪ್ ನಿಷೇಧಕ್ಕೆ ಕಾರಣ ಏನು..?
ಆ್ಯಪಲ್ ಆ್ಯಪ್‌ಸ್ಟೋರ್‍ನಲ್ಲಿ ಗಮನಾರ್ಹವಾಗಿ ಗ್ರಾಹಕರನ್ನು ರಕ್ಷಿಸುವ ಉದ್ದೇಶದಿಂದ, ಯುರೋಪಿಯನ್ ಒಕ್ಕೂಟದ ಡಿಜಿಟಲ್ ಸೇವೆಗಳ ಕಾಯಿದೆಯು, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಮಾರ್ಗಸೂಚಿಗಳನ್ನು ನೀಡಿತು. ಅದು ತಾತ್ಕಾಲಿಕವಾಗಿ 2023ರಲ್ಲಿ ಜಾರಿ ಬಂದಿತು. EU ಪ್ರದೇಶಗಳಲ್ಲಿ ವಿತರಣೆಗಾಗಿ ಹೊಸ ಅಪ್ಲಿಕೇಷನ್‌ಗಳು ಅಥವಾ ಅಪ್ಲಿಕೇಷನ್ ಅಪ್‌ಡೇಟ್ ಮಾಡಲು, ಅದರ ಡೆವಲಪರ್‍ಗಳು ತಮ್ಮ ವ್ಯವಹಾರಿಕ ಸಂಪರ್ಕ ಮಾಹಿತಿಯನ್ನು ನೀಡುವುದು ಕಡ್ಡಾಯವಾಗಿತ್ತು.
ವ್ಯಾಪಾರಿ ಸಂಪರ್ಕ ಮಾಹಿತಿ ಎಂದರೇನು?
ಆ್ಯಪಲ್ ಪ್ರಕಾರ ವ್ಯಾಪಾರಿ ಸಂಪರ್ಕ ಮಾಹಿತಿ ಏನಂದ್ರೆ, ಇದು ವಿಳಾಸ, ಫೋನ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಒಳಗೊಂಡಿರುತ್ತದೆ. ವ್ಯಾಪಾರಿಗಳು DSAಗೆ ಅನುಗುಣವಾಗಿ ಇವುಗಳನ್ನು ಆಪ್ ಸ್ಟೋರ್ ಉತ್ಪನ್ನ ಪುಟದಲ್ಲಿ ಪೋಸ್ಟ್ ಮಾಡಲು ನೀಡಬೇಕು. ಎಲ್ಲವನ್ನೂ ನೀಡಿದ ಬಳಿಕವಷ್ಟೇ ಆ್ಯಪಲ್ ಪರಿಶೀಲನೆ ನಡೆಸಿ ತಮ್ಮ ಅಪ್ಲಿಕೇಷನ್‌ಗಳನ್ನು EU ಪ್ರದೇಶಗಳಲ್ಲಿ ವಿತರಿಸುತ್ತದೆ. ಅಲ್ಲದೇ ತನ್ನ ಉತ್ಪನ್ನದಲ್ಲಿ ಡೆವಲಪರ್‍ಗಳು ನೀಡಿದ ಮಾಹಿತಿಯನ್ನು ಪ್ರಕಟಿಸುತ್ತದೆ.
ಎಲ್ಲಾ ಮಾಹಿತಿಗಳನ್ನು ಒದಗಿಸಿದಲ್ಲಿ ಮಾತ್ರ ಆ್ಯಪಲ್ ಗ್ರಾಹಕರಿಗಾಗಿ ಡೆವಲಪರ್‍ಗಳು ನೀಡುವ ಅಪ್ಲಿಕೇಷನ್‌ಗಳು ಸಿಗುತ್ತವೆ. ಈ ರೀತಿಯ ನಿಯಮ ಆ್ಯಪಲ್ ಸಂಸ್ಥೆ ಜಾರಿ ಮಾಡಿರುವುದು ನಿಜಕ್ಕೂ ಉತ್ತಮವಾದ ಸಂಗತಿ. ಏಕೆಂದರೆ ಈಗೀಗ ಸ್ಕ್ಯಾಮ್ ಮಾಡುವ ಥರ್ಡ್ ಪಾರ್ಟಿ ಅಪ್ಲಿಕೇಷನ್‌ಗಳ ಹಾವಳಿ ಹೆಚ್ಚಾಗಿದೆ. ಅವಗಳು ಗ್ರಾಹಕರ ಮಾಹಿತಿಗಳನ್ನು ಕದ್ದು ಬೇಕಾದಂತೆಲ್ಲ ದುರ್ಬಳಕೆ ಮಾಡಿಕೊಳ್ಳುತ್ತಿವೆ. ಅದರಲ್ಲೂ ಕೆಲವೊಂದು ಬೆಟ್ಟಿಂಗ್ ಗೇಮ್ ಅಪ್ಲಿಕೇಷನ್‌ಗಳು ಗ್ರಾಹಕರನ್ನು ಬಲೆಗೆ ಬೀಳಿಸಿಕೊಂಡು ಮೋಸ ಮಾಡುತ್ತಿವೆ. ಇತ್ತ ಕೆಲವೊಂದು ಅಪ್ಲಿಕೇಷನ್‌ಗಳು ಲೋನ್‌ಗಳ ಹೆಸರಿನಲ್ಲಿ ದೋಖಾ ಮಾಡುತ್ತಿವೆ. ಅಂದರೆ ಇಷ್ಟು ಹಣ ಸಿಗುತ್ತದೆ ಎಂದು ಹಣ ಹಾಕಿ, ಬಳಿಕ ಗ್ರಾಹಕರಿಂದ ಹೆಚ್ಚು ಹೆಚ್ಚು ಹಣ ಕಬಳಿಸುತ್ತಿವೆ. ಈ ಎಲ್ಲಾ ರೀತಿಯ ದುರ್ಬಳಕೆಒಗಳಿಂದ ಗ್ರಾಹಕರನ್ನು ಸುರಕ್ಷಿತವಾಗಿಡಲು ಆ್ಯಪಲ್ ಸಂಸ್ಥೆ ತೆಗೆದುಕೊಂಡಿರುವ ಈ ಕ್ರಮ ನಿಜ್ಕಕೂ ಉತ್ತಮ.


Click it and Unblock the Notifications