ಹಬ್ಬದ ಸೀಸನ್ ಆರಂಭವಾಗಿದೆ. ಹೀಗಾಗಿ ಐಫೋನ್ ಗೆ ಜನಪ್ರಿಯವಾಗಿರುವ ಆಪಲ್ ಕಂಪನಿ ಭಾರತದಲ್ಲಿ ತನ್ನ ದೀಪಾವಳಿ ಕೊಡುಗೆಗಳನ್ನು ಬಹಿರಂಗಪಡಿಸಿದೆ. ಆಪಲ್ ಕಂಪನಿಯಲ್ಲೇ ಐಫೋನ್ ಸೇರಿದಂತೆ ಇತರ ಸಾಧನಗಳನ್ನು ಖರೀದಿಸುವ ಯೋಜನೆಯಲ್ಲಿರುವವರಿಗೆ ಆಪಲ್ ಭರ್ಜರಿ ಕೊಡುಗೆ ನೀಡಿದೆ. ಕೆಲ ಉತ್ಪನ್ನಗಳ ಮೇಲೆ ಸಾವಿರಾರು ರೂಪಾಯಿ ಕ್ಯಾಶ್ಬ್ಯಾಕ್ ನೀಡುತ್ತಿದೆ. ಆದರೆ ಈ ಕೊಡುಗೆಗಳು ಅಕ್ಟೋಬರ್ ತಿಂಗಳಲ್ಲಿ ಮಾತ್ರ ಇರಲಿದ್ದು ಗ್ರಾಹಕರು ತಮ್ಮ ನೆಚ್ಚಿನ ಸಾಧನಗಳನ್ನು ಬಹುಬೇಗ ಖರೀದಿ ಮಾಡುವುದು ಸೂಕ್ತ....
ಆಪಲ್ ಕಂಪನಿಯು iPhone, iPad, Mac, Apple Watch ಮತ್ತು ಇತರ ಎಲ್ಲಾ ಸಾಧನಗಳಲ್ಲಿ ತ್ವರಿತ ಕ್ಯಾಶ್‌ಬ್ಯಾಕ್ ಅನ್ನು ನೀಡುತ್ತಿದೆ. ಜೊತೆಗೆ ಸೀಮಿತ ಅವಧಿಗೆ ಆಪಲ್ ತನ್ನ ಸೋಲೋ ಬಡ್‌ಗಳನ್ನು ಐಫೋನ್‌ನ ಖರೀದಿಯೊಂದಿಗೆ ಉಚಿತವಾಗಿ ನೀಡುತ್ತಿದೆ. ಈ ಎಲ್ಲಾ ಕೊಡುಗೆಗಳ ಬಗ್ಗೆ ವಿವರವಾಗಿ ತಿಳಿಯೋಣ.

ಐಫೋನ್ 16 ಮತ್ತು ಐಫೋನ್ 14 ಸರಣಿಗಳಲ್ಲಿ ಕೊಡುಗೆಗಳು
ಗ್ರಾಹಕರು ಐಫೋನ್ ಖರೀದಿಸಲು ಬಯಸಿದರೆ ತ್ವರಿತವಾಗಿ ಕ್ಯಾಶ್ಬ್ಯಾಕ್ ಪಡೆಯಬಹುದು. ಹಾಗಾದರೆ ದೀಪಾವಳಿಯಲ್ಲಿ ಯಾವ ಐಫೋನ್ ಖರೀದಿಯಿಂದ ಎಷ್ಟು ಕ್ಯಾಶ್ಬ್ಯಾಕ್ ಸಿಗಲಿದೆ ಎನ್ನುವ ವಿವರ ಇಲ್ಲಿದೆ. ಅರ್ಹ ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಅಮೇರಿಕನ್ ಎಕ್ಸ್‌ಪ್ರೆಸ್ ಕಾರ್ಡ್‌ಗಳೊಂದಿಗೆ iPhone 16 Pro, iPhone 16 Pro Max, iPhone 16 ಮತ್ತು iPhone 16 Plus ನಲ್ಲಿ ಗ್ರಾಹಕರು 5000 ರೂಪಾಯಿಗಳವರೆಗಿನ ತ್ವರಿತ ಕ್ಯಾಶ್‌ಬ್ಯಾಕ್ ಅನ್ನು ಪಡೆಯಬಹುದು. ಮತ್ತೊಂದೆಡೆ, iPhone 14 ಮತ್ತು iPhone 14 Plus ನಲ್ಲಿ 3000 ರೂಪಾಯಿವರೆಗಿನ ತ್ವರಿತ ಕ್ಯಾಶ್‌ಬ್ಯಾಕ್ ಪಡೆಯಬಹುದು. ನೀವು iPhone SE ಅನ್ನು ಖರೀದಿಸಲು ಬಯಸಿದರೆ ಅದರ ಮೇಲೆ 2000 ರೂಪಾಯಿಗಳ ಕ್ಯಾಶ್ಬ್ಯಾಕ್ ಸಿಗಲಿದೆ.
ಐಫೋನ್ 15 ನೊಂದಿಗೆ ಉಚಿತ ಬೀಟ್ಸ್ ಸೋಲೋ ಬಡ್ಸ್
ಅಲ್ಲದೆ ನೀವು Apple Store ನಿಂದ iPhone 15 ಅನ್ನು ಖರೀದಿಸಿದರೆ ಒಂದು ಜೋಡಿ ಬೀಟ್ಸ್ ಸೋಲೋ ಬಡ್ಸ್ (Beats Solo Buds) ಅನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯಬಹುದು. ಅಲ್ಲದೆ, ಆಕಿಬ್ ವಾನಿ ವಿನ್ಯಾಸಗೊಳಿಸಿದ ವಿಶೇಷ ಆವೃತ್ತಿಯ ಪ್ಯಾಕೇಜಿಂಗ್ ಅನ್ನು ಸಹ ಇಲ್ಲಿ ನೀಡಲಾಗುತ್ತಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಕೊಡುಗೆಯು ಅಕ್ಟೋಬರ್ ವರೆಗೆ ಮಾತ್ರ ಮಾನ್ಯವಾಗಿರುತ್ತದೆ.

Mac ಸಾಧನಗಳಲ್ಲಿ ಕೊಡುಗೆಗಳು
ಅಲ್ಲದೆ ಆಪಲ್ ಕಂಪನಿಯ ಕೆಲ ಲ್ಯಾಪ್‌ಟಾಪ್ ಖರೀದಿಸಿದರೆ ಗ್ರಾಹಕರು ಸಾವಿರಾರು ರೂಪಾಯಿ ಕ್ಯಾಶ್ಬ್ಯಾಕ್ ಪಡೆಯಬಹುದು. ಆಪಲ್ ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಅಮೆರಿಕನ್ ಎಕ್ಸ್‌ಪ್ರೆಸ್‌ನ ಅರ್ಹ ಕಾರ್ಡ್‌ಗಳ ಮೇಲೆ ಕ್ಯಾಶ್‌ಬ್ಯಾಕ್ ನೀಡುತ್ತಿದೆ.
ಮ್ಯಾಕ್‌ಬುಕ್ ಏರ್ (M3 ಚಿಪ್) 13-ಇಂಚಿನ ಮತ್ತು 15-ಇಂಚಿನ - ₹10,000 ಕ್ಯಾಶ್‌ಬ್ಯಾಕ್
ಮ್ಯಾಕ್‌ಬುಕ್ ಏರ್ (M2 ಚಿಪ್) 13-ಇಂಚಿನ - ₹8,000 ಕ್ಯಾಶ್‌ಬ್ಯಾಕ್
MacBook Pro 14-ಇಂಚಿನ ಮತ್ತು 16-ಇಂಚಿನ - ₹10,000 ಕ್ಯಾಶ್‌ಬ್ಯಾಕ್
ಮ್ಯಾಕ್ ಸ್ಟುಡಿಯೋ - ₹10,000 ಕ್ಯಾಶ್‌ಬ್ಯಾಕ್
iMac 24-ಇಂಚಿನ - ₹10000 ಕ್ಯಾಶ್‌ಬ್ಯಾಕ್
ಮ್ಯಾಕ್ ಮಿನಿ - ₹4000 ಕ್ಯಾಶ್‌ಬ್ಯಾಕ್
iPad ನಲ್ಲಿ ಕೊಡುಗೆಗಳು
ಇತ್ತೀಚಿನ 11-ಇಂಚಿನ ಮತ್ತು 13-ಇಂಚಿನ ಐಪ್ಯಾಡ್ ಪ್ರೊ ಮಾದರಿಗಳಲ್ಲಿ ಗ್ರಾಹಕರು 6000 ರೂ.ವರೆಗೆ ತ್ವರಿತ ಕ್ಯಾಶ್‌ಬ್ಯಾಕ್ ಪಡೆಯಬಹುದು. ಐಪ್ಯಾಡ್ ಏರ್‌ನ 11-ಇಂಚಿನ ಮತ್ತು 13-ಇಂಚಿನ ಮಾದರಿಗಳಲ್ಲಿ 4000ರೂ.ವರೆಗಿನ ಕ್ಯಾಶ್‌ಬ್ಯಾಕ್ ಮತ್ತು 10 ನೇ-ಜೆನ್ ಐಪ್ಯಾಡ್‌ನಲ್ಲಿ 2500 ರೂ.ವರೆಗೆ ಲಭ್ಯವಿರುತ್ತದೆ. ಆದರೆ ನೀವು ಐಪ್ಯಾಡ್ ಮಿನಿ ಖರೀದಿಸಿದರೆ 3000 ರೂ. ಕ್ಯಾಶ್‌ಬ್ಯಾಕ್ ಪಡೆಯಬಹುದು.
ಆಪಲ್ ವಾಚ್‌ನಲ್ಲಿ ಕೊಡುಗೆಗಳು
ಈ ದೀಪಾವಳಿ ಕೊಡುಗೆಗಳ ಅಡಿಯಲ್ಲಿ, ಗ್ರಾಹಕರು 'Apple Watch Ultra' ಖರೀದಿಸಿದರೆ 6000 ರೂಪಾಯಿಗಳ ತ್ವರಿತ ಕ್ಯಾಶ್‌ಬ್ಯಾಕ್ ಪಡೆಯಬಹುದು. 'ವಾಚ್ ಸೀರೀಸ್ 10' ಹಾಗೂ 'ವಾಚ್ ಎಸ್ಇ' ನಲ್ಲಿ ಕ್ರಮವಾಗಿ 4000 ರೂ ಮತ್ತು 2000 ರೂ. ತ್ವರಿತ ಕ್ಯಾಶ್ಬ್ಯಾಕ್ ಲಭ್ಯವಿದೆ.
ಏರ್‌ಪಾಡ್‌ಗಳಲ್ಲಿ ಕೊಡುಗೆಗಳು
ಇದಲ್ಲದೆ ಆಪಲ್ ತನ್ನ 'ಏರ್‌ಪಾಡ್ಸ್ ಮ್ಯಾಕ್ಸ್' ನಲ್ಲಿ 4000 ರೂಪಾಯಿಗಳ ತ್ವರಿತ ಕ್ಯಾಶ್‌ಬ್ಯಾಕ್ ಅನ್ನು ನೀಡುತ್ತಿದೆ. ಅಲ್ಲದೆ 'Airpods Pro' ನಲ್ಲಿ 2000 ರೂ. ಕ್ಯಾಶ್‌ಬ್ಯಾಕ್ ಲಭ್ಯವಿದೆ. ಅಂತಿಮವಾಗಿ 'ಏರ್‌ಪಾಡ್ಸ್ 4' ನಲ್ಲಿ ಗ್ರಾಹಕರಿಗೆ 1500 ರೂಪಾಯಿಗಳ ತ್ವರಿತ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ.
ಆಪರ್ ಹೋಮ್‌ಪಾಡ್‌ನಲ್ಲಿ ಕೊಡುಗೆಗಳು
ಜೊತೆಗೆ Apple HomePod ಖರೀದಿಯ ಮೇಲೆ 2000 ರೂಪಾಯಿಗಳ ತ್ವರಿತ ಕ್ಯಾಶ್ಬ್ಯಾಕ್ ಇರುತ್ತದೆ.
ಈ ತ್ವರಿತ ಕ್ಯಾಶ್‌ಬ್ಯಾಕ್ ಕೊಡುಗೆಗಳು ಆಯ್ದ ICICI ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಅಮೇರಿಕನ್ ಎಕ್ಸ್‌ಪ್ರೆಸ್ ಕಾರ್ಡ್‌ಗಳಲ್ಲಿ ಮಾತ್ರ ಲಭ್ಯವಿರುತ್ತವೆ ಎಂಬುದನ್ನು ನೆನಪಿನಲ್ಲಿಡಿ.
ಇತರ ಕೊಡುಗೆಗಳು ಮತ್ತು ಡೀಲ್‌ಗಳು
ಇದಲ್ಲದೆ, ಈ ದೀಪಾವಳಿ ಕೊಡುಗೆಗಳ ಅಡಿಯಲ್ಲಿ ಹೋಮ್‌ಪ್ಯಾಡ್ ಮತ್ತು ಏರ್‌ಪಾಡ್‌ಗಳ ಖರೀದಿಯ ಮೇಲೆ ಆಪಲ್ ಆಪಲ್ ಮ್ಯೂಸಿಕ್‌ನ 3 ತಿಂಗಳ ಉಚಿತ ಚಂದಾದಾರಿಕೆಯನ್ನು ಸಹ ನೀಡುತ್ತದೆ.
iPad ಮತ್ತು Mac ಖರೀದಿಯೊಂದಿಗೆ ಗ್ರಾಹಕರು 3 ತಿಂಗಳ ಆಪಲ್ ಟಿವಿ+ ಮತ್ತು ಆಪಲ್ ಆರ್ಕೇಡ್ ಅನ್ನು ಉಚಿತವಾಗಿ ಪಡೆಯಬಹುದು.
ಯಾವುದೇ ಐಫೋನ್ ಖರೀದಿಯೊಂದಿಗೆ ನೀವು 3 ತಿಂಗಳ ಆಪಲ್ ಮ್ಯೂಸಿಕ್ ಮತ್ತು 3 ತಿಂಗಳ ಆಪಲ್ ಟಿವಿ+ ಮತ್ತು ಆಪಲ್ ಆರ್ಕೇಡ್ ಅನ್ನು ಉಚಿತವಾಗಿ ಪಡೆಯುತ್ತೀರಿ.


Click it and Unblock the Notifications