ಐಫೋನ್ ತಯಾರಕ ಸಂಸ್ಥೆಯಾದ ಆಪಲ್ ಮುಂದಿನ ನಾಲ್ಕೈದು ವರ್ಷಗಳಲ್ಲಿ ಭಾರತದಲ್ಲಿ ತನ್ನ ಐಫೋನ್ ಉತ್ಪಾದನೆಯನ್ನು ಐದು ಪಟ್ಟು ಹೆಚ್ಚಿಸಲು ಚಿಂತನೆ ನಡೆಸಿದೆ. ಐದು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಐಫೋನ್ ಉತ್ಪಾದನೆಯನ್ನು ಸುಮಾರು 40 ಬಿಲಿಯನ್ ಡಾಲರ್‌ಗೆ ಅಂದರೆ ಸುಮಾರು 3.32 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಕಂಪನಿಯು ಕಳೆದ ಆರ್ಥಿಕ ವರ್ಷದಲ್ಲಿ 7 ಬಿಲಿಯನ್ ಡಾಲರ್ ಉತ್ಪಾದನಾ ಗುರಿಯನ್ನು ದಾಟಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ ಈ ಬಗ್ಗೆ ಮಾಧ್ಯಮಗಳಿಗೆ ಆಪಲ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಈಗಾಗಲೇ ಭಾರತದಲ್ಲಿ ಆಪಲ್ ಉತ್ಪಾದನೆಯನ್ನು ಆರಂಭ ಮಾಡಲಾಗಿದೆ.

ಆಪಲ್ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸುತ್ತದೆ. ಮುಂದಿನ ವರ್ಷ ಏರ್‌ಪಾಡ್‌ಗಳ ಉತ್ಪಾದನೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಭಾರತದಲ್ಲಿ ಐಪ್ಯಾಡ್ ಅಥವಾ ಲ್ಯಾಪ್‌ಟಾಪ್‌ಗಳನ್ನು ತಯಾರಿಸಲು ಆಪಲ್ ಯಾವುದೇ ತಕ್ಷಣದ ಯೋಜನೆಯನ್ನು ಹೊಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಐಟಿ ಹಾರ್ಡ್‌ವೇರ್ ಪಿಎಲ್‌ಐನಲ್ಲಿ ಭಾಗವಹಿಸಲು ಆಪಲ್ ಸಂಸ್ಥೆ ಯಾವುದೇ ಪ್ಲ್ಯಾನ್ ಅನ್ನು ಮಾಡಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತನೆ ನಡೆಸಬಹುದು. ಆದರೆ ಸದ್ಯಕ್ಕೆ ಭಾರತದಲ್ಲಿ ಉತ್ಪಾದನಾ ಮಟ್ಟವನ್ನು ಅಧಿಕ ಮಾಡುವ ಕಡೆ ಮಾತ್ರ ಸಂಸ್ಥೆ ಗಮನಹರಿಸುತ್ತಿದೆ," ಎಂದು ಅಧಿಕಾರಿ ತಿಳಿಸಿದರು.
ಇನ್ನು ಸಂಸ್ಥೆಯು ಸೆಪ್ಟೆಂಬರ್ 25, 2022 ರಂದು ಕೊನೆಗೊಂಡ ಹಣಕಾಸು ವರ್ಷದಲ್ಲಿ ಜಾಗತಿಕವಾಗಿ 191 ಬಿಲಿಯನ್ ಡಾಲರ್ ಮೌಲ್ಯದ ಐಫೋನ್‌ಗಳನ್ನು ಮಾರಾಟ ಮಾಡಿದೆ. 8.36 ಬಿಲಿಯನ್ ಡಾಲರ್ ಮೌಲ್ಯದ ಧರಿಸುವ ಉತ್ಪನ್ನಗಳು (ವಾಚ್, ಹೆಡ್‌ಫೋನ್ ಮೊದಲಾದವು, ಮನೆಗೆ ಬೇಕಾಗುವ ಪರಿಕರಗಳುನ್ನು ಮಾರಾಟ ಮಾಡಿದೆ.
ಈ ವರ್ಷದ ಮೊದಲ ಒಂಬತ್ತು ತಿಂಗಳುಗಳಲ್ಲಿ, ಕಂಪನಿಯು ಐಫೋನ್ ಮಾರಾಟದಲ್ಲಿ ಕುಸಿತ ಕಂಡಿದೆ. ಸಂಸ್ಥೆಯಲ್ಲಿ ಐಫೋನ್ ಶೇಕಡ 4 ರಷ್ಟು ಕುಸಿದಿದ್ದು, 156.77 ಬಿಲಿಯನ್ ಡಾಲರ್ ಐಫೋನ್ ಮಾರಾಟವಾಗಿದೆ. ಇನ್ನು ವಾಚ್, ಮನೆಯಲ್ಲಿ ಉಪಯೋಗಿಸುವ ಪರಿಕರಗಳ ಮಾರಾಟ ಸುಮಾರು 30.52 ಬಿಲಿಯನ್ ಡಾಲರ್‌ನಷ್ಟು ಕೆಳಕ್ಕೆ ಇಳಿದಿದೆ.
ಕಂಪನಿಯು ಭಾರತದಿಂದ ಮೊಬೈಲ್ ಫೋನ್‌ಗಳ ಅತಿದೊಡ್ಡ ರಫ್ತುದಾರ ಸಂಸ್ಥೆಯಾಗಿ ಬದಲಾಗುತ್ತಿದೆ. ಇನ್ನು ಐಫೋನ್ 15 ಸಿರೀಸ್‌ಗಿಂತ ಅಧಿಕವಾಗಿ ಐಫೋನ್ 15 ಸಿರೀಸ್ ಬೇಡಿಕೆ ಶೇಕಡ 100 ರಷ್ಟು ಬೆಳವಣಿಗೆಯಿದೆ. ಆಪಲ್ ಐಫೋನ್ 15 ಸಿರೀಸ್‌ನಲ್ಲಿ ನಾಲ್ಕು ಮಾಡೆಲ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಆ ಪೈಕಿ ಎರಡು ಮಾಡೆಲ್‌ಗಳಾದ ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಭಾರತದಲ್ಲಿ ಉತ್ಪಾದಿಸಲಾಗುತ್ತದೆ.
ಕಂಪನಿಯು ಮೊದಲ ಬಾರಿಗೆ 'ಮೇಡ್-ಇನ್-ಇಂಡಿಯಾ' ಐಫೋನ್‌ಗಳನ್ನು ಜಗತ್ತಿನ ಇತರ ಭಾಗಗಳಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದ ದಿನದಂದೇ ಭಾರತದಲ್ಲಿಯೂ ಇದು ಲಭ್ಯವಾಗುವಂತೆ ಮಾಡಿದೆ. ಹಾಗೆಯೇ ಅಮೆಜಾನ್, ಫ್ಲಿಫ್‌ಕಾರ್ಟ್ ಮೊದಲಾದವುಗಳಲ್ಲಿ ಆಫರ್‌ಗಳು ಕೂಡಾ ಲಭಿಸಿದೆ.


Click it and Unblock the Notifications