ಒಂದೇ ವರ್ಷದಲ್ಲಿ 210 ಕೋಟಿ ರೂ. ಆದಾಯ ಗಳಿಸಿದ ಭಾರತದಲ್ಲಿನ ಆಪಲ್ ಸ್ಟೋರ್‌ಗಳು

ನವದೆಹಲಿ, ಏಪ್ರಿಲ್‌ 25: ಭಾರತದಲ್ಲಿನ ದೆಹಲಿ ಮತ್ತು ಮುಂಬೈನಲ್ಲಿರುವ ಎರಡು ಆಪಲ್‌ನ ಎರಡು ಸ್ಟೋರ್ ಗಳು 2023-24 ರ ಹಣಕಾಸು ವರ್ಷದಲ್ಲಿ 190-210 ಕೋಟಿ ರೂ.ಗಳ ಭಾರೀ ಆದಾಯವನ್ನು ಗಳಿಸಿವೆ.

ಹೀಗಾಗಿ ಇವುಗಳು ಐಫೋನ್ ಸಂಸ್ಥೆಯ ವಿಶ್ವದಾದ್ಯಂತ ಇರುವ ಚಿಲ್ಲರೆ ಮಳಿಗೆಗಳಿಗಿಂತ ಶ್ರೇಷ್ಟ ಕಾರ್ಯನಿರ್ವಹಣೆಯ ರಿಟೇಲ್ ಸ್ಟೋರ್ ಗಳ ಸ್ಥಾನ ಪಡೆದಿವೆ. ಭಾರತದಲ್ಲಿನ ಈ ಎರಡು ಆಪಲ್‌ ಸ್ಟೋರ್ ಗಳು ಇತ್ತೀಚೆಗೆ ತಮ್ಮ ಮೊದಲ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತ್ತು.

ಭಾರತದಲ್ಲಿನ ಆಪಲ್ ಸ್ಟೋರ್‌ಗಳಿಂದ ಭಾರೀ ಆದಾಯ

"ಎರಡು ಆಪಲ್ ಸ್ಟೋರ್‌ಗಳು ಪ್ರಾರಂಭವಾದಾಗಿನಿಂದ ಸ್ಥಿರವಾಗಿ ಪ್ರತಿ ಮಾಸಿಕ ಸರಾಸರಿ ಮಾರಾಟದಿಂದ 16-17 ಕೋಟಿ ರೂ. ಆದಾಯ ಗಳಿಸುತ್ತಿತ್ತು, ಮುಂಬೈ ಸ್ಟೋರ್ ಗಾತ್ರದಲ್ಲಿ ಸ್ವಲ್ಪ ದೊಡ್ಡ ಸ್ಟೋರ್ ಆಗಿರುವುದರಿಂದ ಅದರ ಆದಾಯವು ದೆಹಲಿಗಿಂತ ಸ್ವಲ್ಪ ಹೆಚ್ಚಾಗಿದೆ. ಎರಡು ಮಳಿಗೆಗಳಿಗೆ ತಮ್ಮ ಪ್ರಾರಂಭದ ಪ್ರಥಮ ದಿನದಂದು ತಲಾ 6,000 ಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದರು." ಎಂದು ಎಕಾನಮಿಕ್ಸ್ ಟೈಮ್ಸ್ ತನ್ನ ವರದಿ ತಿಳಿಸಿದೆ.

"ಭಾರತದ ಈ ಎರಡು ಸ್ಟೋರ್ ಗಳು ಉತ್ತಮ-ಕಾರ್ಯನಿರ್ವಹಣೆಯಿಂದ Apple ನ ನಿರೀಕ್ಷೆಗಳನ್ನು ಪೂರೈಸಿದೆ ಮಾತ್ರವಲ್ಲದೇ ಮುಂದಿನ ಸ್ಟೋರ್ ಗಳನ್ನು ಲಾಂಚ್‌ ಮಾಡಲು ಇದು Appleಗೆ ಹುರುಪು ತುಂಬಿದ್ದು, ಇದಕ್ಕಾಗಿ ನೂತನ ಸ್ಟೋರ್ ಗಳನ್ನು ತೆರೆಯಲು ಜಾಗವನ್ನು ಹುಡುಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಏಪ್ರಿಲ್ 18 ರಂದು ಆರಂಭವಾದ ಮುಂಬೈ (ಆಪಲ್ ಬಿಕೆಸಿ) ಮತ್ತು ಎರಡು ದಿನಗಳ ನಂತರ ನವದೆಹಲಿ (ಆಪಲ್ ಸಾಕೇತ್) ನಲ್ಲಿ ಮಳಿಗೆಯ ಪ್ರಾರಂಭಕ್ಕೆ ಖುದ್ದಾಗಿ ಆಪಲ್‌ನ ಸಿಇಒ, ಟಿಮ್ ಕುಕ್ ಹಾಜರಾಗಿದ್ದರು. ಸದ್ಯ ಕಂಪನಿಯು ಪುಣೆ ಮತ್ತು ಬೆಂಗಳೂರಿನಲ್ಲಿ ಸ್ಟೋರ್‌ಗಳನ್ನು ಸ್ಥಾಪಿಸಲು ಉತ್ಸಾಹ ತೋರಿದೆ.

ಇದರೊಂದಿಗೆ ನೋಯ್ಡಾದ NCR ನ ಎರಡನೇ ಔಟ್‌ಲೆಟ್ ತನ್ನ ಮತ್ತೊಂದು ಸ್ಟೋರ್ ನ್ನು ತೆರೆಯಲು ಮುಂದಾಗಿದ್ದು, ಮುಂದಿನ ಮೂರು ಸ್ಟೋರ್ ಪ್ರಮುಖ ಮಾಲ್‌ಗಳಲ್ಲಿ ನೆಲೆಗೊಳ್ಳಲಿವೆ. ತನ್ನ ವಿಸ್ತರಣೆಯ ಯೋಜನೆಗಳನ್ನು ಮತ್ತಷ್ಟು ಅಂತಿಮಗೊಳಿಸುವ ಮೊದಲು ಆಪಲ್ ತನ್ನ ಮೊದಲ ಎರಡು ಇಂಡಿಯಾ ಸ್ಟೋರ್‌ಗಳಲ್ಲಿ ಒಂದು ವರ್ಷದ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಕಾಯುತ್ತಿತ್ತು ಎಂದು ಎಕಾನಮಿಕ್ಸ್ ಟೈಮ್ಸ್ ತನ್ನ ವರದಿ ತಿಳಿಸಿದೆ.

ಕುತೂಹಲಕಾರಿ ವಿಚಾರವೆಂದರೆ, ಆಪಲ್ ತನ್ನ ದೆಹಲಿ ಮತ್ತು ಮುಂಬೈ ಸ್ಟೋರ್‌ಗೆ ಕ್ರಮವಾಗಿ 40 ಮತ್ತು 42 ಲಕ್ಷ ರೂಪಾಯಿಗಳ ಮಾಸಿಕ ಬಾಡಿಗೆಯನ್ನು ಪಾವತಿಸುತ್ತಿದೆ. ಆಪಲ್ BKC ಕಾರ್ಯಾರಂಭಿಸಿದ ಮೊದಲ ದಿನವೇ 10 ಕೋಟಿ ರೂಪಾಯಿಗಳ ಮಾರಾಟವನ್ನು ಕಂಡಿದೆ. ಇದು ನಿಜಕ್ಕೂ ಉತ್ತಮ ವಹಿವಾಟು ಆಗಿದ್ದು ಭಾರತದಲ್ಲಿ ಒಂದು ದೊಡ್ಡ ಎಲೆಕ್ಟ್ರಾನಿಕ್ಸ್ ಅಂಗಡಿಯು ತಿಂಗಳಿಗೆ ಸರಿ ಸುಮಾರು 7-8 ಕೋಟಿ ವಹಿವಾಟು ನಡೆಸುತ್ತದೆ.

ಉದ್ಯಮ ತಜ್ಞರ ಮಾಹಿತಿ ಪ್ರಕಾರ, "ದೀಪಾವಳಿಯ ಅವಧಿಯಲ್ಲಿ ಹೊರತುಪಡಿಸಿದರೆ ಭಾರತದ ಯಾವುದೇ ಎಲೆಕ್ಟ್ರಾನಿಕ್ಸ್ ಅಂಗಡಿಯ ಆದಾಯಕ್ಕೆ ಹೋಲಿಸಿದರೆ ಈ ಅಂಕಿ ಅಂಶವು ಎರಡು ಪಟ್ಟು" ಎಂದು ಬಹಿರಂಗಪಡಿಸಿದ್ದಾರೆ. ಈ ಸಂಖ್ಯೆಯೊಂದಿಗೆ, ಆಪಲ್ ಸ್ಟೋರ್ ಆದಾಯದ ದೃಷ್ಟಿಯಿಂದ ನೋಡುವುದಾದರೆ ಭಾರತದಲ್ಲಿ ಅತಿ ಹೆಚ್ಚು ಎಲೆಕ್ಟ್ರಾನಿಕ್ಸ್ ರಿಟೇಲ್ ವ್ಯಾಪಾರಿಯಾಗಿದೆ.

ಯುಎಸ್ ಮತ್ತು ಚೀನಾದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಸವಾಲುಗಳನ್ನು ಎದುರಿಸುತ್ತಿರುವ ಕಾರಣ ಆಪಲ್ ಜಾಗತಿಕವಾಗಿ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾದ ಭಾರತದ ಮೇಲೆ ಹೆಚ್ಚು ಗಮನಹರಿಸಿದೆ. ಭಾರತದಲ್ಲಿ ಹೊಸದಾಗಿ ತೆರೆದಿರುವ ಎರಡು ಮಳಿಗೆಗಳ ಮಾರಾಟದ ಆದಾಯದ ಬಗ್ಗೆ ಪ್ರತಿಕ್ರಿಯಿಸಲು ಆಪಲ್ ನಿರಾಕರಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+