ಭಾರತದಲ್ಲಿ ಐಫೋನ್ 15 ಉತ್ಪಾದನೆಯನ್ನು ಪ್ರಾರಂಭಿಸಿದ ನಂತರ, ಆಪಲ್ ಮುಂದಿನ ತ್ರೈಮಾಸಿಕದಲ್ಲಿ ದೇಶದಲ್ಲಿ ಐಫೋನ್ 15 ಪ್ಲಸ್ ಅನ್ನು ಉತ್ಪಾದನೆ ಮಾಡಲು ಸಜ್ಜಾಗಿದೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಈ ಮೊಬೈಲ್ ಫೋನ್‌ಗಳನ್ನು ಚೆನ್ನೈ ಬಳಿಯಿರುವ ಫಾಕ್ಸ್‌ಕಾನ್‌ನ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತದೆ.
ಫಾಕ್ಸ್‌ಕಾನ್ ಉತ್ಪಾದನಾ ಘಟಕದಲ್ಲಿ ಐಫೋನ್ 15 ಪ್ಲಸ್ ಅನ್ನು ಉತ್ಪಾದಿಸಲು ಸಿದ್ಧತೆಗಳನ್ನು ಪ್ರಾರಂಭಿಸಿದೆ. ಯೋಜನೆಗಳ ಬಗ್ಗೆ ತಿಳಿದಿರುವ ಇಬ್ಬರು ಕಾರ್ಯನಿರ್ವಾಹಕರನ್ನು ಉಲ್ಲೇಖಿಸಿ ಈ ಮಾಹಿತಿಯನ್ನು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಅದರ ಉತ್ಪಾದನೆ ಪ್ರಾರಂಭವಾಗುವವರೆಗೆ ಕಂಪನಿಯು ಐಫೋನ್ ಪ್ಲಸ್ ಅನ್ನು ಆಮದು ಮಾಡಿಕೊಳ್ಳುತ್ತದೆ ಎಂದು ಅದು ಹೇಳಿದೆ.

ಆಪಲ್ ಭಾರತದಲ್ಲಿ ಐಫೋನ್ ಪ್ರೊ ಸಿರೀಸ್ ಅನ್ನು ಉತ್ಪಾದಿಸಲು ಬಯಸುವುದಿಲ್ಲ ಎಂದು ವರದಿ ಹೇಳಿದೆ. ಆಪಲ್ ಈಗಾಗಲೇ ಫಾಕ್ಸ್‌ಕಾನ್ ಉತ್ಪಾದನಾ ಘಟಕದಲ್ಲಿ ಐಫೋನ್ 15 ಅನ್ನು ಉತ್ಪಾದಿಸಲು ಪ್ರಾರಂಭಿಸಿದೆ. ಇದರಿಂದಾಗಿ ಟೆಕ್ ದೈತ್ಯವು ಈ ಮೊಬೈಲ್ ಫೋನ್ ಬಿಡುಗಡೆಯಾದಾಗಲೇ ಭಾರತದಲ್ಲಿ ಮಾರಾಟ ಮಾಡಲು ಅವಕಾಶ ನೀಡುತ್ತದೆ.
ಇಲ್ಲಿಯವರೆಗೆ, ಭಾರತದಲ್ಲಿ ಸ್ಥಳೀಯ ಉತ್ಪಾದನೆ ಪ್ರಾರಂಭವಾಗುವ ಮೊದಲು ಬಿಡುಗಡೆಯಾದ ಮೊದಲ ಕೆಲವು ತಿಂಗಳುಗಳಲ್ಲಿ ಐಫೋನ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈ ವರ್ಷ, ಕಂಪನಿಯು ಮೊದಲ ದಿನದಿಂದ ಭಾರತದಲ್ಲಿಯೇ ಐಫೋನ್ 15 ಅನ್ನು ಉತ್ಪಾದಿಸಲು ಪ್ರಾರಂಭಿಸಿದೆ.
ಆಪಲ್ ಮಂಗಳವಾರ, ಸೆಪ್ಟೆಂಬರ್ 12 ರಂದು, ಐಫೋನ್ 15 ಸಿರೀಸ್ ಅನ್ನು ಸ್ವಲ್ಪ ಸುಧಾರಿತ ಕ್ಯಾಮೆರಾ ರೆಸಲ್ಯೂಶನ್‌ಗಳು, ವೇಗದ ಚಿಪ್ ಮತ್ತು ಹೆಚ್ಚಿನ ಬ್ರೈಟ್‌ನೆಸ್ ಜೊತೆಗೆ ಇತರ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆ ಮಾಡಿದೆ. ಪ್ರೊ ಮಾಟೆಲ್ ಹಗುರವಾದ ಟೈಟಾನಿಯಂ ಬಾಡಿಯನ್ನು ಹೊಂದಿದೆ.
ಆಪಲ್ 2017 ರಲ್ಲಿ ಭಾರತದಲ್ಲಿ ಐಫೋನ್‌ಗಳನ್ನು ತನ್ನ ಬಜೆಟ್ ಐಫೋನ್ ಎಸ್‌ಇ ಜೊತೆಗೆ ಕರ್ನಾಟಕದಲ್ಲಿ ವಿಸ್ಟ್ರಾನ್ ಸೌಲಭ್ಯದ ಮೂಲಕ ಜೋಡಿಸಲು ಪ್ರಾರಂಭಿಸಿತು. ಪ್ರಸ್ತುತ, ಭಾರತದಲ್ಲಿ ಐಫೋನ್‌ಗಳ ಮೂರು ಗುತ್ತಿಗೆ ತಯಾರಕರು ಇದ್ದಾರೆ. ಫಾಕ್ಸ್‌ಕಾನ್, ವಿಸ್ಟ್ರಾನ್ ಮತ್ತು ಪೆಗಾಟ್ರಾನ್ ಎಂಬುವುದು ಮೂರು ಗುತ್ತಿಗೆ ತಯಾರಕರು ಆಗಿದ್ದಾರೆ. ಭಾರತದಲ್ಲಿ ಆಪಲ್ ಸಂಸ್ಥೆ ಐಫೋನ್ 13, 14 ಮತ್ತು 14 ಪ್ಲಸ್ ಮಾಡೆಲ್‌ಗಳನ್ನು ತಯಾರಿಸುತ್ತದೆ.
ಸ್ಥಳೀಯ ಉತ್ಪಾದನೆಯು ಐಫೋನ್ 15 ಬೆಲೆ ಕಡಿಮೆ ಮಾಡುತ್ತಾ?
ಭಾರತದಲ್ಲಿ ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಉತ್ಪಾದನೆ ಆರಂಭಿಸಲಾಗಿದ್ದರೂ ಕೂಡಾ ಬೆಲೆಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ ಎಂದು ಉದ್ಯಮದ ಅಧಿಕಾರಿಗಳು ಹೇಳುತ್ತಾರೆ. ಭಾರತದಲ್ಲಿ ಐಫೋನ್ 15 ಅನ್ನು ಉತ್ಪಾದಿಸುವ ಕಂಪನಿಯ ತಯಾರಕರು (ಫಾಕ್ಸ್‌ಕಾನ್, ವಿಸ್ಟ್ರಾನ್ ಮತ್ತು ಪೆಗಾಟ್ರಾನ್) ಘಟಕಗಳನ್ನು ಸ್ಥಾಪಿಸುವಾಗ ಬೇಕಾದ ವಸ್ತುಗಳಿಗಾಗಿ ಹೆಚ್ಚಿನ ಆಮದು ಸುಂಕಗಳನ್ನು ಪಾವತಿಸುವುದರಿಂದ ಅದರ ಬೆಲೆಗಳನ್ನು ಕಡಿಮೆ ಮಾಡುವ ಸಾಧ್ಯತೆಯಿಲ್ಲ.
ಮೂಲ ಕಸ್ಟಮ್ಸ್ ಸುಂಕವು ಶೇಕಡ 20 ಮತ್ತು ನಂತರ ಶೇಕಡ 2.5 ರಷ್ಟು ಹೆಚ್ಚುವರಿ ಶುಲ್ಕವಿದೆ. ಅದಕ್ಕಿಂತ ಹೆಚ್ಚಾಗಿ, ಐಫೋನ್‌ಗೆ ಶೇಕಡ 18 ರಷ್ಟು ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ. ಅಂತಿಮ ಬೆಲೆಯು ವಿತರಣಾ ವೆಚ್ಚಗಳು ಮತ್ತು ರಿಟೇಲ್ ಮಾರ್ಜಿನ್‌ಗಳನ್ನು ಕೂಡಾ ಒಳಗೊಂಡಿರುತ್ತದೆ.
ಭಾರತದಲ್ಲಿ ಐಫೋನ್ 15 ಅನ್ನು 79,900 ರೂಪಾಯಿಗೆ ಬಿಡುಗಡೆ ಮಾಡಲಾಗಿದೆ. ಐಫೋನ್ 15 ಪ್ಲಸ್ ಅನ್ನು 89,900 ರೂಪಾಯಿಗಳಿಗೆ, 128 ಜಿಬಿ ಬೇಸ್ ಹೊಂದಿರುವ ಐಫೋನ್ 15 ಪ್ರೋ ಅನ್ನು 1,34,900 ರೂಪಾಯಿಗಳಿಗೆ ಬಿಡುಗಡೆ ಮಾಡಿದೆ. ಐಫೋನ್ 15 ಪ್ರೋ ಮ್ಯಾಕ್ಸ್ 256 ಜಿಬಿ ಅನ್ನು 1,59,900 ರೂಪಾಯಿಗೆ ಬಿಡುಗಡೆ ಮಾಡಲಾಗಿದೆ.


Click it and Unblock the Notifications