ಕರ್ನಾಟಕ ರತ್, ಕನ್ನಡಿಗರ ಪರಮಾತ್ಮ ಡಾ.ಪುನೀತ್ ರಾಜ್‌ಕುಮಾರ್ ಅಜರಾಮರರಾಗಿದ್ದಾರೆ. ಇದೇ ಮಾರ್ಚ್ 17ರಂದು ಪುನೀತ್ ಹುಟ್ಟುಹಬ್ಬ ಹಿನ್ನೆಲೆ, ಮಾರ್ಚ್ 14ರಂದು 'ಅಪ್ಪು' ಸಿನಿಮಾ ಮತ್ತೆ ರಿಲೀಸ್ ಆಗುತ್ತಿದೆ. ಇದು ಅಪ್ಪು ಅಭಿಮಾನಿಗಳಿಗೆ ಒಂದು ರೀತಿ ಹಬ್ಬ ಎಂದರೂ ತಪ್ಪಾಗಲ್ಲ. ಹಬ್ಬದಂತೆ ಈ ಚಿತ್ರವನ್ನು ಸಂಭ್ರಮಿಸುವುದು ಕನ್ಫರ್ಮ್ ಆಗಿದೆ. ಹಾಗೇನೇ ಈ ಚಿತ್ರ ಮತ್ತೆ ರಿಲೀಸ್ ಆದರೆ, ಮತ್ತೆ ನಿಧಿ ತುಂಬುವುದರಲ್ಲಿ ಅನುಮಾನವಿಲ್ಲ. 2002ರಲ್ಲಿ ಸೂಪರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಿನಿ ಜೀವನಕ್ಕೆ ಅದ್ಭುತ ಆರಂಭ ನೀಡಿದ, ಅಪ್ಪು ಸಿನಿಮಾ ಈಗಲೂ ಅಭಿಮಾನಿಗಳನ್ನು ಹುಚ್ಚೆದ್ದು ನೋಡುವಂತೆ ಮಾಡುತ್ತದೆ. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಆಗ ಸುಮಾರು 200 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು.

ಅಭಿಮಾನಿಗಳನ್ನು ಅಗಲಿರುವ ಅಪ್ಪು ಇಂದಿಗೂ ಅಜರಾಮಾರ. ಅಪ್ಪು ಮೇಲೆ ಅಭಿಮಾನಿಗಳಿಗೆಷ್ಟು ಪ್ರೀತಿ ಎನ್ನುವುದು, ಅರಿತ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅವರು ಒಂದು ಖುಷಿಸಿದ್ದಿ ನೀಡಿದ್ದಾರೆ. ಅದೇನೆಂದರೆ ಪುನೀತ್ ಅವರ 50ನೇ ಜನ್ಮದಿನದ ಅಂಗವಾಗಿ ಈ ಐಕಾನಿಕ್ ಚಿತ್ರವನ್ನು ಪುನಃ ಪ್ರದರ್ಶನಗೊಳ್ಳಲಿದೆ. ಇದು ಅವರಿಗೆ ನೀಡುವ ಒಂದು ಸ್ಮರಣಾರ್ಥವಾಗಲಿದೆ. ಈ ಬಗ್ಗೆ ತಮ್ಮ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2025ರ ಮಾರ್ಚ್ 14ರಂದು, ಅಪ್ಪು ಸಿನಿಮಾ ಪುನಃ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದಿದ್ದಾರೆ.
ಅಪ್ಪು ಸಿನಿಮಾ ಒಂದು ಫ್ಯಾಮಿಲಿ ಎಂಟರ್‍ಟೈನ್‌ಮೆಂಟ್ ಸಿನಿಮಾ ಆಗಿದೆ. ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್‍ಗೆ ಜೋಡಿಯಾಗಿ ನಟಿ ರಕ್ಷಿತಾ ನಟಿಸಿದ್ದು, ಆ ಕಾಲದಲ್ಲಿ ಎಲ್ಲರೂ ಮೆಚ್ಚಿದ ಜೋಡಿ ಇದಾಗಿತ್ತು. ಎಲ್ಲಿ ನೋಡಿದ್ರೂ ಅಪ್ಪು..ಅಪ್ಪು ಎಂಬ ಹರ್ಷೋದ್ಘಾರ ಇತ್ತು. ಇಂದಿಗೂ ಇದೆ. ಪುನೀತ್ ರಾಜ್‌ಕುಮಾರ್ ಅವರು ನಿಧನ ಹೊಂದಿದ ಮೇಲೆ, ಸಾಕಷ್ಟು ಜನ ಅಭಿಮಾನಿಗಳು ಅಪ್ಪುನ ತೆರೆ ಮೇಲೆ ನೋಡೋದನ್ನೇ ಮಿಸ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಕೂಡ ಹಂಚಿಕೊಂಡಿದ್ರು. ಹೀಗಾಗಿ ಈ ಮಾರ್ಚ್ ತಿಂಗಳಲ್ಲಿ ಅವರ ಹುಟ್ಟುಹಬ್ಬ ಬರುತ್ತಿರುವ ಹಿನ್ನೆಲೆ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಇನ್ನು ಈ ಚಿತ್ರವನ್ನು ಪಾರ್ವತಮ್ಮ ರಾಜ್‌ಕುಮಾರ್ ಅವರು ನಿರ್ಮಾಣ ಮಾಡಿದ್ದರು. ಈಗ, ಅಪ್ಪು ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನದ ಪ್ರಯುಕ್ತ 2025ರ ಮಾರ್ಚ್ 14ರಂದು ಪುನಃ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಅವರ ಪತ್ನಿ ಅಶ್ವಿನಿ ರಾಜ್‌ಕುಮಾರ್ ಘೋಷಿಸಿದ್ದಾರೆ. ಈ ಚಿತ್ರ ಪುನೀತ್ ಅವರ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯಾಗಲಿದೆ.
ಇನ್ನು ಪುನೀತ್ ರಾಜ್‌ಕುಮಾರ್ ಅಗಲಿ ಮೂರು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಅಕ್ಟೋಬರ್ 29ಕ್ಕೆ ಅಪ್ಪು ಅಗಲಿ ನಾಲ್ಕು ವರ್ಷ ತುಂಬಲಿದೆ. ಆದರೂ ಅಭಿಮಾನಿಗಳು ತನ್ನ ಪರಮಾತ್ಮನನ್ನು ಮನಸ್ಸಿನಲ್ಲೇ ಆರಾಧಿಸುತ್ತಿದ್ದಾರೆ. ಇಂದಿಗೂ ಪುನೀತ್ ರಾಜ್‌ಕುಮಾರ್‍ನ ದೇವರು ಎಂದೇ ಎಷ್ಟೋ ಜನ ಪೂಜಿಸುತ್ತಿದ್ದಾರೆ. ಈವರೆಗೂ ಯಾರಿಗೂ ಈ ಘಟನೆಯನ್ನು ಅರಗಿಸಿಕೊಳ್ಳೋಕೆ ಆಗಿಲ್ಲ. ಯಾರೂ ಕೂಡ ಈ ಘಟನೆಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ.
ಇಂದಿಗೂ ಎಷ್ಟೋ ಅಭಿಮಾನಿಗಳ ಪಾಲಿಗೆ ಪುನೀತ್ ರಾಜ್‌ಕುಮಾರ್ ಬದುಕಿದ್ದಾರೆ. ಅವರು ಮಾಡಿದ ದಾನ-ಧರ್ಮವೇ ಅವರನ್ನು ಇನ್ನೂ ಜೀವಂತವಾಗಿರಿಸಿದೆ. ಇವತ್ತಿಗೂ ಯಾವುದೋ ವಿಡಿಯೋ ನೋಡಿದ್ರೆ ಅಪ್ಪು ಅಭಿಮಾನಿಗಳು ಕಣ್ಣೀರು ಹಾಕುತ್ತಾರೆ. ಹೀಗಾಗಿ ಇದನ್ನರಿತ ಅಶ್ವಿನಿ ಪುನೀತ್‌ರಾಜ್‌ಕುಮಾರ್, ಅಭಿಮಾನಿಗಳಿಗೆ ಅಪ್ಪು ಚಿತ್ರದ ಮರು ಬಿಡುಗಡೆಯ ಖುಷಿಸುದ್ದಿ ನೀಡಿದ್ದಾರೆ. ಅಪ್ಪು ಅಭಿಮಾನಿಗಳನ್ನು ಅವರಂತೆಯೇ ಗೌರವಿಸಿದ್ದಾರೆ. ಇದು ಎಲ್ಲಾ ಅಭಿಮಾನಿಗಳೂ ಗೌರವಿಸುವಂತಹ ವಿಷಯವಾಗಿದೆ.


Click it and Unblock the Notifications