ನವದೆಹಲಿ: ಭಾರತದಲ್ಲಿ (India) ಪ್ರತೀ ವರ್ಷ ಪ್ರಕೃತಿ ವಿಕೋಪ, ಪ್ರವಾಹ, ಮಳೆ, ಬೆಂಕಿ ಅವಘಡ, ರೈಲು ಅಪಘಾತಗಳಂತಹ ದುರಂತಗಳು ನಡೆಯುತ್ತಲೇ ಇರುತ್ತದೆ. ಈ ಸಂದರ್ಭದಲ್ಲಿ ಹಲವರು ಬದುಕುಳಿದರೆ, ಇನ್ನೂ ಕೆಲವರು ದುರಂತವಾಗಿ ಸಾವನ್ನಪ್ಪುತ್ತಾರೆ. ಅಲ್ಲದೇ ಇಂತಹ ದುರಂತಗಳಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಸರ್ಕಾರವು ಆರ್ಥಿಕ ನೆರವು ನೀಡಲು ಮುಂದಾಗುತ್ತದೆ. ಆ ಸಂದರ್ಭದಲ್ಲಿ ಆಯಾ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಗಳು ಪರಿಹಾರ ಹಣವನ್ನು (Compensation money) ಘೋಷಣೆ ಮಾಡುತ್ತದೆ. ಹಾಗಿದ್ರೆ ಸರ್ಕಾರ ನೀಡುವ ಪರಿಹಾರದ ಹಣಕ್ಕೆ ತೆರಿಗೆ ಅನ್ವಯವಾಗುತ್ತದಾ? ಎಂಬ ಪ್ರಶ್ನೆ ಉದ್ಭವಿಸಿದೆ.

ಈಗಾಗಲೇ ದೆಹಲಿಯಲ್ಲಿ ಎರಡು ದಿನದ ಹಿಂದಷ್ಟೇ ಕೆಂಪುಕೋಟೆಯ ಮುಂದೆ ಕಾರೊಂದು ಭೀಕರವಾಗಿ ಸ್ಫೋಟವಾಗುತ್ತೆ. ಈ ದುರಂತದಿಂದ 13 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಆದರೆ ಇದೊಂದು ಭಯೋತ್ಪಾದಕ ದಾಳಿ ಎಂದು ಶಂಕಿಸಿದ್ದು, ದುರಂತದ ಸಂತ್ರಸ್ತರಿಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಪರಿಹಾರ ಧನವನ್ನೂ ಘೋಷಣೆ ಮಾಡಿದ್ದಾರೆ. ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ 10 ಲಕ್ಷ, ಶಾಶ್ವತವಾಗಿ ವಿಶೇಷಚೇತನರಾದವರಿಗೆ 5 ಲಕ್ಷ ಮತ್ತು ಗಾಯಗೊಂಡವರಿಗೆ 2 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದರು. ಅಲ್ಲದೇ ಗಾಯಗೊಂಡವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ಭರವಸೆ ನೀಡಿದರು. ಆದರೆ ಈ ಪರಿಹಾರ ಮೊತ್ತ ತೆರಿಗೆ ನೀತಿಗೆ ಅನ್ವಯವಾಗುತ್ತಾ? ಇಲ್ವಾ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ತೆರಿಗೆ ತಜ್ಞರ ಪ್ರಕಾರ, ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ನೀಡುವ ಯಾವುದೇ ಪರಿಹಾರದ ಹಣಕ್ಕೆ ತೆರಿಗೆ ಅನ್ವಯಿಸುವುದಿಲ್ಲ. ಅಂತ ಮೊತ್ತವನ್ನು ಆದಾಯ ತೆರಿಗೆ ರಿಟರ್ನ್ಸ್‌ನಲ್ಲೂ (ITR) ಆಡ್ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪರಿಹಾರದ ಹಣ ಸಂಪೂರ್ಣ ತೆರಿಗೆ ಮುಕ್ತ!
ರಾಜ್ಯ, ಕೇಂದ್ರ ಅಥವಾ ಯಾವುದೇ ಸಂಸ್ಥೆಗಳು ನೀಡುವ ಪರಿಹಾರದ ಮೊತ್ತ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ ಎನ್ನಲಾಗಿದೆ. ಪರಿಹಾರ ಧನವನ್ನು ದುರಂತದಿಂದಾದ ಹಾನಿಯನ್ನು ಸರಿದೂಗಿಸಲು ನೀಡಲಾಗುತ್ತದೆ. ಆದ್ದರಿಂದ ಈ ಹಣಕ್ಕೆ ಯಾವುದೇ ಕಾನೂನು ಸಮಸ್ಯೆಗಳು ಎದುರಾಗುವುದಿಲ್ಲ ಎನ್ನಲಾಗಿದೆ.
ಇನ್ನು ಆದಾಯ ತೆರಿಗೆ ಕಾನೂನಿನ ಅಡಿಯಲ್ಲಿ, ಪರಿಹಾರದ ಮೊತ್ತಕ್ಕಲ್ಲ, ಕೇವಲ ಆದಾಯದ ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ ಎನ್ನಲಾಗಿದೆ. ಬಂಡವಾಳ ರಸೀದಿಗಳು (ಕ್ಯಾಪಿಟಲ್ ರಿಸಿಪ್ಟ್) ಅಥವಾ ಪರಿಹಾರದ ರೂಪದಲ್ಲಿ ನೀಡಲಾದ ಹಣಕ್ಕೆ ಆದಾಯ ನೀತಿಯ ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಲಾಗಿದೆ.
ಈ ಬಗ್ಗೆ SBHS ಅಂಡ್ ಅಸೋಸಿಯೇಟ್ಸ್‌ನ ಸಂಸ್ಥಾಪಕ ಪಾಲುದಾರರಾದ ಹಿಮಾಂಕ್ ಸಿಂಗ್ಲಾ ಅವರು ಮಾತನಾಡಿದ್ದು, ದೆಹಲಿ ಸರ್ಕಾರವು ಭಯೋತ್ಪಾದಕ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೀಡುವ ₹10 ಲಕ್ಷ ರೂಪಾಯಿ ಕೂಡ ಆದಾಯ ತೆರಿಗೆ ನೀತಿಯ ವ್ಯಾಪ್ತಿಗೆ ಬರುವುದಿಲ್ಲ ಎನ್ನಲಾಗಿದೆ. ಇದು ಯಾವುದೇ ಕೆಲಸದಿಂದ, ವ್ಯವಹಾರಗಳಿಂದ ಬಂದ ಆದಾಯವಲ್ಲ. ಇದೊಂದು ಪರಿಹಾರಕ್ಕಾಗಿ ನೀಡಲಾದ ಹಣ. ಆದ್ದರಿಂದ ಈ ಪರಿಹಾರ ಹಣಕ್ಕೆ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ಹಣಕ್ಕೆ ಯಾವ ಕಾನೂನು ಅನ್ವಯವಾಗುತ್ತದೆ?
ಅದೇ ರೀತಿ PD ಗುಪ್ತಾ ಅಂಡ್ ಕಂಪನಿಯ ಪಾಲುದಾರರಾದ ಪ್ರತಿಭಾ ಗೋಯಲ್ ಮಾತನಾಡಿದ್ದು, ಕೇಂದ್ರ, ರಾಜ್ಯ ಅಥವಾ ಸ್ಥಳೀಯ ಸಂಸ್ಥೆಗಳಿಂದ ನೀಡಲಾಗುವ ಯಾವುದೇ ಪರಿಹಾರದ ಹಣವು ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುತ್ತದೆ ಎಂದು ಹೇಳಲಾಗಿದೆ. ತೆರಿಗೆ ತಜ್ಞ ಬಲವಂತ್ ಜೈನ್ ಅವರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10 (BC) ಅಡಿಯಲ್ಲಿ ಇಂತಹ ಯಾವುದೇ ಪರಿಹಾರ ಹಣವು ವಿಪತ್ತು ನಿರ್ವಹಣಾ ಕಾಯಿದೆ, 2005 ರ ಅಡಿಯಲ್ಲಿ ಬರುತ್ತದೆ ಎಂದು ತಿಳಿಸಿದ್ದಾರೆ. ಆದ್ದರಿಂದ ಪರಿಹಾರವಾಗಿ ಪಡೆದ ಹಣಕ್ಕೆ ಯಾವುದೇ ಆದಾಯ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ, ಆ ಹಣದ ಮಾಹಿತಿಯನ್ನು ಐಟಿಆರ್‌ನಲ್ಲೂ ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications