ಭಾರತಕ್ಕೆ (India) ಹೋಲಿಸಿದ್ರೆ, ದುಬೈನಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಕಡಿಮೆ ಬೆಲೆಗೆ ಸಿಗುತ್ತದೆ. ಅಂದರೆ ಟ್ಯಾಕ್ಸ್ ರಹಿತ ದರದಲ್ಲಿ ಚಿನ್ನ ಗ್ರಾಹಕರಿಗೆ ದುಬೈನಲ್ಲಿ ಲಭ್ಯವಿದೆ. ಆದ್ದರಿಂದ ಹೆಚ್ಚಿನವರು ದುಬೈಯಿಂದ (Dubai) ಊರಿಗೆ ಬರುವಾಗ ಚಿನ್ನ ತರುತ್ತಾರೆ. ಆದ್ರೆ ದುಬೈಯಿಂದ ಭಾರತಕ್ಕೆ ಚಿನ್ನವನ್ನು (Dubai Gold) ತರುವ ಬಗ್ಗೆ ಪ್ರಯಾಣಿಕರಿಗೆ ಹಲವು ರೀತಿಯಲ್ಲಿ ಗೊಂದಲಗಳಿವೆ. ಅದಕ್ಕಾಗಿ ಸರ್ಕಾರ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ಪ್ರತ್ಯೇಕವಾಗಿ ಸುಂಕ ರಹಿತ ಮಿತಿಗಳನ್ನು ನಿಗದಿಪಡಿಸಿದೆ. ಒಂದು ವೇಳೆ ಸಾರ್ವಜನಿಕರು ಈ ನಿಯಮಗಳನ್ನು ಫಾಲೋ ಮಾಡದಿದ್ರೆ ದಂಡ ಅಥವಾ ಕಾನೂನು ಸಂಕಷ್ಟಕ್ಕೆ ಸಿಲುಕಬಹುದು. ಆದ್ದರಿಂದ ದುಬೈನಿಂದ ಚಿನ್ನ ತರುವ ನಿಯಮಗಳನ್ನು ಮೊದಲು ತಿಳಿದುಕೊಳ್ಳಬೇಕು.

ದುಬೈಯಿಂದ ಚಿನ್ನ ತರುವುದೇಕೆ?
ಭಾರತಕ್ಕೆ ಹೋಲಿಸಿದ್ರೆ, ಚಿನ್ನದ ಬೆಲೆ ಮತ್ತು ಶುದ್ಧತೆ ದುಬೈನಲ್ಲಿ ಸಿಗುತ್ತದೆ. ಅದಕ್ಕಾಗಿಯೇ ಹೆಚ್ಚಿನವರು ದುಬೈಯಿಂದ ಚಿನ್ನ ತರುತ್ತಾರೆ. ಆದರೆ, ನಿಗದಿತ ಮಿತಿಗಿಂತ ಹೆಚ್ಚು ಚಿನ್ನ ತಂದರೆ, ವಿಮಾನ ನಿಲ್ದಾಣದಲ್ಲಿ ಬಹಿರಂಗಪಡಿಸಿದಬೇಕು. ಕಸ್ಟಮ್ಸ್ ನಿಯಮಗಳ ಪ್ರಕಾರ, ಮಿತಿಗಿಂತ ಹೆಚ್ಚಿನ ಚಿನ್ನಕ್ಕೆ ಸುಂಕ ಪಾವತಿಸಬೇಕು. ಒಂದು ವೇಳೆ ನೀವು ತಂದಿರುವ ಚಿನ್ನದ ಬಗ್ಗೆ ಸುಳ್ಳು ಮಾಹಿತಿ ನೀಡಿದರೆ ದಂಡ ಅಥವಾ ಕಾನೂನು ಸಂಕಷ್ಟಕ್ಕೆ ಒಳಗಾಗಬಹುದು.
ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯ (CBIC) ಪ್ರಕಾರ, ಮಹಿಳೆಯರು ದುಬೈನಿಂದ 1 ಲಕ್ಷ ಮೌಲ್ಯದ ಗರಿಷ್ಠ 40 ಗ್ರಾಂ ಚಿನ್ನವನ್ನು ಸುಂಕ ರಹಿತವಾಗಿ ತರಬಹುದು ಎನ್ನಲಾಗಿದೆ. ಇನ್ನು ಪುರುಷ ಪ್ರಯಾಣಿಕರಿಗೆ ಈ ಮಿತಿಯು 20 ಗ್ರಾಂ ಮತ್ತು ಗರಿಷ್ಠ ಮೊತ್ತ 50,000 ರೂ. ಆಗಿದೆ. ಈ ಚಿನ್ನವು ನಾಣ್ಯಗಳು, ಆಭರಣಗಳು ಅಥವಾ ಬಾರ್ ರೂಪದಲ್ಲಿರಬಹುದು. ಒಂದು ವೇಳೆ ನಿಯಮ ಮೀರಿ ತಂದ ಚಿನ್ನಕ್ಕೆ ಶೇ 3 ರಿಂದ ಶೇ 10 ರವರೆಗೆ ಕಸ್ಟಮ್ಸ್ ಸುಂಕ ಅನ್ವಯಿಸುತ್ತದೆ.
15 ವರ್ಷದ ಕೆಳಗಿನ ಮಕ್ಕಳಿಗೂ ನಿಯಮ:
15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೂ ಚಿನ್ನ ತರಲು ನಿಯಮ ಹೇರಲಾಗಿದೆ. ಆ ಪ್ರಕಾರ 40 ಗ್ರಾಂ ವರೆಗೆ ಚಿನ್ನ ತರಬಹುದು, ಆದರೆ ಇದಕ್ಕೆ ಗುರುತಿನ ಚೀಟಿ ಕಡ್ಡಾಯ. ಮಕ್ಕಳು ತಂದ ಚಿನ್ನದ ಪ್ರಮಾಣ 40 ರಿಂದ 100 ಗ್ರಾಂ ನಡುವೆ ಇದ್ದರೆ ಶೇ 3, 100 ರಿಂದ 200 ಗ್ರಾಂ ನಡುವೆ ಇದ್ದರೆ ಶೇ 6, ಮತ್ತು 200 ಗ್ರಾಂ ಗಿಂತ ಹೆಚ್ಚು ಇದ್ದರೆ ಶೇ 10 ರಷ್ಟು ಕಸ್ಟಮ್ಸ್ ಸುಂಕ ವಿಧಿಸಲಾಗುತ್ತದೆ ಎನ್ನಲಾಗಿದೆ. ಇನ್ನು ಇದೇ ನಿಯಮಗಳಿಗೂ ಪುರುಷ, ಮಹಿಳೆಯರಿಗೆ ಅನ್ವಯವಾಗುತ್ತದೆ.
ದುಬೈನಿಂದ ಚಿನ್ನ ತರುವಾಗ ಇದೊಂದು ಇರಲೇಬೇಕು:
ದುಬೈನಿಂದ ಚಿನ್ನ ತೆಗೆದುಕೊಂಡು ಭಾರತಕ್ಕೆ ಬರಬೇಕಾದರೆ, ಖರೀದಿಯ ರಸೀದಿ (Invoice), ಶುದ್ಧತಾ ಪ್ರಮಾಣಪತ್ರ ಮತ್ತು ಚಿನ್ನದ ಬಾರ್‌ನ ಸೀರಿಯಲ್ ಸಂಖ್ಯೆ ಇರಲೇಬೇಕು.
ಆದ್ದರಿಂದ ಈ ನಿಯಮಗಳನ್ನು ಫಾಲೋ ಮಾಡಿದರೆ, ದುಬೈನಿಂದ ಆರಾಮವಾಗಿ ನೀವು ಚಿನ್ನವನ್ನು ಮನೆಗೆ ತರಬಹುದು. ಅಲ್ಲದೇ ಯಾವುದೇ ಕಾನೂನು ಸಂಕಷ್ಟವಿಲ್ಲದೆಯೇ ಚಿನ್ನ ಏರ್‌ಪೋರ್ಟ್‌ನಲ್ಲಿ ಸಾಗಿಸಬಹುದು ಎಂದು ತಜ್ಞರು ಹೇಳುತ್ತಾರೆ.


Click it and Unblock the Notifications