ಮನೆ, ಬಂಗಾರಕ್ಕಾಗಿ ಹೆಚ್ಚಿನವರು ಸಾಲ (Loan) ಮಾಡುತ್ತಾರೆ. ಈ ಸಂದರ್ಭದಲ್ಲಿ ಬ್ಯಾಂಕ್, ಇನ್ನಿತರ ಫೈನಾನ್ಸ್ ಕಂಪನಿಗಳಲ್ಲಿ (Finance) ಸಾಲ ತೆಗೆದುಕೊಳ್ಳುತ್ತಾರೆ. ಯಾವುದೇ ಸಾಲವನ್ನು ತೆಗೆದುಕೊಳ್ಳುವ ಸಾಲವನ್ನು, ಸಾಲ ನೀಡುವ ಕಂಪನಿಗಳು ನೀಡುವ ಬಡ್ಡಿದರಗಳನ್ನು (Interest Rates) ಗಮನಿಸುವುದು ಮುಖ್ಯ. ಶೇ. 1% ರಷ್ಟು ಸಣ್ಣ ವ್ಯತ್ಯಾಸವೂ ದೊಡ್ಡ ಮೊತ್ತದ ಉಳಿತಾಯಕ್ಕೆ ಕಾರಣವಾಗಬಹುದು. ಇದರಿಂದ ಲಕ್ಷಗಟ್ಟಲೆ ಹಣ ನೀವು ಉಳಿಸಬಹುದು.

ಸಾಮಾನ್ಯವಾಗಿ, ಬ್ಯಾಂಕುಗಳು ಸಾಲ ನೀಡುವ ಮುನ್ನ ಸಾಲಗಾರರ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ವೈಯಕ್ತಿಕ ಸಾಲಗಳಿಗೆ ಶೇ. 12ರಿಂದ 18 ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ. ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವ ಸಾಲಗಾರರು ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯುವ ಅವಕಾಶವಿರುತ್ತದೆ. ಹಾಗಿದ್ರೆ ಯಾವ ಬ್ಯಾಂಕುಗಳು ವೈಯಕ್ತಿಕ ಸಾಲಗಳಿಗೆ ಎಷ್ಟು ಬಡ್ಡಿದರ ವಿಧಿಸುತ್ತದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಟಾಪ್ 8 ಬ್ಯಾಂಕುಗಳ ವೈಯಕ್ತಿಕ ಸಾಲದ ಬಡ್ಡಿದರಗಳು:
ಎಚ್‌ಡಿಎಫ್‌ಸಿ ಬ್ಯಾಂಕ್: ಎಚ್‌ಡಿಎಫ್‌ಸಿ ಬ್ಯಾಂಕ್ ವಾರ್ಷಿಕ ಶೇ. 9.99ರಿಂದ 24ರಷ್ಟು ಬಡ್ಡಿದರ ವಿಧಿಸುತ್ತದೆ. ಪ್ರೊಸೆಸಿಂಗ್ ಶುಲ್ಕವು ಜಿಎಸ್‌ಟಿ ಹೊರತುಪಡಿಸಿ ₹6,500 ಇರುತ್ತದೆ.
ಐಸಿಐಸಿಐ ಬ್ಯಾಂಕ್: ಈ ಎರಡನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಎಂದು ಗುರುತಿಸಿಕೊಂಡಿರುವ ಐಸಿಐಸಿಐ ಬ್ಯಾಂಕ್ ವಾರ್ಷಿಕವಾಗಿ ಶೇ. 10.45 ರಿಂದ 16.50ರಷ್ಟು ಬಡ್ಡಿದರ ವಿಧಿಸುತ್ತದೆ. ಪ್ರೊಸೆಸಿಂಗ್ ಶುಲ್ಕವು ಸಾಲದ ಮೊತ್ತದ ಶೇ. 2% ರಷ್ಟು ಮತ್ತು ಜಿಎಸ್‌ಟಿ ಸೇರಿರುತ್ತದೆ.
ಕೋಟಕ್ ಮಹೀಂದ್ರಾ ಬ್ಯಾಂಕ್: ಈ ಬ್ಯಾಂಕ್‌ನಲ್ಲೂ ವಾರ್ಷಿಕ ಶೇ. 9.98 ರಿಂದ ಬಡ್ಡಿದರ ವಿಧಿಸಬಹುದು. ಪ್ರೊಸೆಸಿಂಗ್ ಶುಲ್ಕವು ಸಾಲದ ಮೊತ್ತದ ಶೇ. 5ರಷ್ಟು (ತೆರಿಗೆ ಹೊರತುಪಡಿಸಿ) ವಿಧಿಸಬಹುದು. ಈ ಶುಲ್ಕವನ್ನು ಸಾಲ ವಿತರಣೆ ಸಮಯದಲ್ಲಿ ಕಡಿತಗೊಳಿಸಲಾಗುತ್ತದೆ.
ಫೆಡರಲ್ ಬ್ಯಾಂಕ್: ಈ ಖಾಸಗಿ ಬ್ಯಾಂಕ್ ಸಾಲ ಪಡೆದರೆ ವಾರ್ಷಿಕವಾಗಿ ಶೇ. 11.99 ರಿಂದ 18.99ರಷ್ಟು ಬಡ್ಡಿದರ ವಿಧಿಸುತ್ತದೆ. ಪ್ರೊಸೆಸಿಂಗ್ ಶುಲ್ಕವು ವಾರ್ಷಿಕ ಶೇ.3% ರಷ್ಟು ಇರುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI): ದೇಶದ ಅತಿದೊಡ್ಡ ಬ್ಯಾಂಕ್ ಎಂದು ಗುರುತಿಸಿಕೊಂಡಿರುವ ಎಸ್‌ಬಿಐ ಬ್ಯಾಂಕ್, ವಾರ್ಷಿಕವಾಗಿ ಶೇ. 10.05 ರಿಂದ 15.05ರಷ್ಟು ಬಡ್ಡಿದರ ವಿಧಿಸಲಾಗುತ್ತದೆ. ಪ್ರೊಸೆಸಿಂಗ್ ಶುಲ್ಕವು ತೆರಿಗೆ ಹೊರತುಪಡಿಸಿ ₹1,000 ದಿಂದ ₹15,000ದವರೆಗೆ ಇರುತ್ತದೆ.
ಕೆನರಾ ಬ್ಯಾಂಕ್: ಈ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ವೈಯಕ್ತಿಕ ಸಾಲಗಳಿಗೆ ವಾರ್ಷಿಕ ಶೇ. 14.50 ರಿಂದ 16ರಷ್ಟು ಬಡ್ಡಿದರ ವಿಧಿಸುತ್ತದೆ. ಇದು ಆರ್‌ಎಲ್‌ಎಲ್‌ಆರ್ (ರೆಪೊ-ಲಿಂಕ್ಡ್ ಲೆಂಡಿಂಗ್ ರೇಟ್) ಗೆ ಲಿಂಕ್ ಮಾಡಿದಾಗ ವಾರ್ಷಿಕ ಶೇ. 13.75 ರಿಂದ 15.25ರಷ್ಟು ವಿಧಿಸುತ್ತದೆ.
ಬ್ಯಾಂಕ್ ಆಫ್ ಬರೋಡಾ: ಬ್ಯಾಂಕ್ ಆಫ್ ಬರೋಡಾ (ಸರ್ಕಾರಿ ಅಥವಾ ಖಾಸಗಿ ವಲಯ) ಮತ್ತು ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಶೇ. 10.4 ರಿಂದ 15.75ರಷ್ಟು ಬಡ್ಡಿದರ ವಿಧಿಸಲಾಗುತ್ತದೆ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವೈಯಕ್ತಿಕ ಸಾಲಗಳಿಗೆ ವಾರ್ಷಿಕ ಶೇ. 10.75 ರಿಂದ 14.45ರ ಷ್ಟು ಬಡ್ಡಿದರ ವಿಧಿಸಲಾಗುತ್ತದೆ.
ಪ್ರಮುಖ ಬ್ಯಾಂಕುಗಳ ವೈಯಕ್ತಿಕ ಸಾಲದ ಬಡ್ಡಿದರಗಳು:
| ಬ್ಯಾಂಕ್ | ಬಡ್ಡಿದರ (%) |
| ಎಚ್‌ಡಿಎಫ್‌ಸಿ ಬ್ಯಾಂಕ್ | 9.99 ರಿಂದ 24% |
| ಐಸಿಐಸಿಐ ಬ್ಯಾಂಕ್ | 10.45 ರಿಂದ 16.50% |
| ಕೋಟಕ್ ಮಹೀಂದ್ರಾ ಬ್ಯಾಂಕ್ | 9.98% ರಿಂದ ಆರಂಭ |
| ಫೆಡರಲ್ ಬ್ಯಾಂಕ್ | 11.99 ರಿಂದ 18.99% |
| ಎಸ್‌ಬಿಐ | 10.05 ರಿಂದ 15.05% |
| ಕೆನರಾ ಬ್ಯಾಂಕ್ | 14.50 ರಿಂದ 16% |
| ಬಿಒಬಿ | 10.40 ರಿಂದ 15.75% |
| ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ | 10.75 ರಿಂದ 14.45% |
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications