ನವದೆಹಲಿ, ಸೆಪ್ಟೆಂಬರ್ 9: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿರಿವಂತರಿಗೇನು ಕೊರತೆ ಇಲ್ಲ. ಬಯೋಕಾನ್ ಕಿರಣ್ ಮಜುಂದಾರ್, ವಿಪ್ರೋದ ಅಜೀಂ ಪ್ರೇಮ್‌ಜಿ, ಇನ್ಫೋಸಿಸ್ ನ ಎನ್‌ಆರ್ ನಾರಾಯಣ ಮೂರ್ತಿ, ಹೀಗೆ ಸಾಲು ಸಾಲು ಹೆಸರುಗಳು ನೆನಪಾಗುತ್ತವೆ.
ಇತ್ತೀಚಿಗಿನ ಹುರುನ್ ಹಾಗೂ ಫೋರ್ಬ್ಸ್ ಪಟ್ಟಿ ಪ್ರಕಾರ, ಅಜೀಂ ಪ್ರೇಮ್‌ಜಿ ಅವರು 30,000 ಕೋಟಿ ರೂಪಾಯಿ ನಿವ್ವಳ ಮೌಲ್ಯವನ್ನು ಹೊಂದಿದ್ದು, ಕಿರಣ್ ಮಜುಂದಾರ್ ಶಾ ಮತ್ತು ನಾರಾಯಣ ಮೂರ್ತಿ ಕ್ರಮವಾಗಿ 17,000 ಕೋಟಿ ಮತ್ತು 35,000 ಕೋಟಿ ರೂ. ಹೊಂದಿದ್ದಾರೆ. ಆದರೆ ಈ ಮೂವರೂ ಕರ್ನಾಟಕದ ರಾಜಧಾನಿಯ ಅಗ್ರ ಸಿರಿವಂತ ಸ್ಥಾನ ಪಡೆದಿಲ್ಲ. ಅಚ್ಚರಿಯಾದರೂ ಸತ್ಯ.!

ಅತ್ಯಂತ ಚಿರಪರಿಚಿತ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲದ, ಆದರೆ ಉದ್ಯಮ ಜಗತ್ತಿನಲ್ಲಿ ಯಶಸ್ಸಿನ ಗಿರಿಶಿಖರವೇರಿರುವ ಇವರು 360 ಒನ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2023 ರಲ್ಲಿ ಬೆಂಗಳೂರಿನ ಅತ್ಯಂತ ಶ್ರೀಮಂತ ವ್ಯಕ್ತಿಯೆಂದು ಗುರುತಿಸಿಕೊಂಡಿದ್ದಾರೆ. ಅವರೇ ಬಿಲಿಯನೇರ್ ಅರ್ಜುನ್ ಮೆಂಡಾ. ಬೆಂಗಳೂರು ಮೂಲದ RMZ ಕಾರ್ಪ್ ಅನ್ನು ನಡೆಸುತ್ತಿರುವ ಅರ್ಜುನ್ ಮೆಂಡಾ ಮತ್ತು ಅವರ ಕುಟುಂಬವು 37,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದೆ.
ಅರ್ಜುನ್ ಮೆಂಡಾ ಅವರು ಈಗಿನ ಪಾಕಿಸ್ತಾನದಲ್ಲಿರುವ ಶಿಕರ್‌ಪುರ್ ಸಿಂಗ್‌ನಲ್ಲಿ ಜನಿಸಿದ್ದು, ಅವರು ಮತ್ತು ಅವರ ಕುಟುಂಬವು ವಿಭಜನೆಯ ಸಮಯದಲ್ಲಿ ಭಾರತಕ್ಕೆ ಮರಳಿತು. ಈ ಸಂದರ್ಭದಲ್ಲಿ ಅವರು ತಮ್ಮ ಸಂಪೂರ್ಣ ಆಸ್ತಿಯನ್ನು ತ್ಯಜಿಸಿ ಬರಬೇಕಾಯಿತು. ಕುಟುಂಬದ ಆರ್ಥಿಕ ಸಮಸ್ಯೆಗಳ ನಡುವೆಯೂ ವಿದ್ಯಾರ್ಥಿವೇತನದ ಕಾರಣದಿಂದ ಅರ್ಜುನ್ ಮೆಂಡಾ ಅವರು ಐಐಟಿ ಖರಗ್‌ಪುರದಲ್ಲಿ ಕಷ್ಟಪಟ್ಟು ಓದಿದರು. ಆದರೆ ಇಂದು ಮೆಂಡಾ ಫೌಂಡೇಶನ್ ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಹಲವರ ಕನಸುಗಳನ್ನು ನನಸು ಮಾಡುತ್ತಿದೆ.
ಪ್ರತಿಷ್ಠಿತ ಸಂಸ್ಥೆಯಿಂದ ಪದವಿಯೊಂದಿಗೆ, ಮೆಂಡಾ ತನ್ನ ವೃತ್ತಿಜೀವನವನ್ನು ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್‌ನೊಂದಿಗೆ ಕೈಗಾರಿಕಾ ಎಂಜಿನಿಯರ್ ಆಗಿ ಪ್ರಾರಂಭಿಸಿದರು. ಉದ್ಯಮಿಯಾಗಿ ಅವರ ಪ್ರಯಾಣವು 1967 ರಲ್ಲಿ ಬೆಂಗಳೂರಿನ ಸಣ್ಣ-ಪ್ರಮಾಣದ ಘಟಕದಿಂದ ಪ್ರಾರಂಭವಾಯಿತು. ಕೆಲವು ವರ್ಷಗಳ ನಂತರ, ಅವರು 1980 ರ ದಶಕದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಾಹಸ ಮಾಡಲು ತಮ್ಮ ಜೀವನದ ಹಾದಿಯನ್ನು ಬದಲಾಯಿಸಿದರು.
ಅರ್ಜುನ್ ಮೆಂಡಾ ಇಂದು ಅತ್ಯಂತ ಸಿರಿವಂತ್ ವ್ಯಕ್ತಿ ಹೊರಹೊಮ್ಮಿದ್ದರೂ, ಪುಟ್ಟ ಉದ್ಯಮವನ್ನು ಪ್ರಾರಂಭಿಸಿ ಅದನ್ನು ಬಹು-ಶತಕೋಟಿ-ಡಾಲರ್ ಸಾಮ್ರಾಜ್ಯವನ್ನಾಗಿ ಪರಿವರ್ತಿಸುವ ದಾರಿ ಸುಲಭವಾಗಿರಲಿಲ್ಲ. ಅದಕ್ಕಾಗಿ ಅವರ ಕಠಿಣ ಪರಿಶ್ರಮ ಹಾಗೂ ನಿಷ್ಟೆಯಿಂದ ಕೆಲಸ ಮಾಡಿದ್ದಾರೆ. RMZ ಕಾರ್ಪ್ ಅನ್ನು 2002 ರಲ್ಲಿ ಸ್ಥಾಪಿಸಲಾಗಿದ್ದುಅವರ ಇಬ್ಬರು ಮಕ್ಕಳಾದ ರಾಜ್ ಮತ್ತು ಮನೋಜ್ ಮೆಂಡಾ ವ್ಯಾಪಾರವನ್ನು ನೋಡಿಕೊಳ್ಳುತ್ತಾರೆ. ಇವರ ಕಂಪನಿಯೂ ಕಾರ್ಪೊರೇಟ್ ಕಚೇರಿಗಳ ಟಾಪ್ ಬಿಲ್ಡರ್‌ಗಳಲ್ಲಿ ಒಂದಾಗಿದ್ದು ಹೈದರಾಬಾದ್, ಬೆಂಗಳೂರು, ಪುಣೆ, ಚೆನ್ನೈ ಮತ್ತು ಇತರ ಸಾಫ್ಟ್‌ವೇರ್ ಹಬ್‌ಗಳಲ್ಲಿ ಇವರ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
ಅರ್ಜುನ್ ಮೆಂಡಾ ಅವರು ರಿಯಲ್ ಎಸ್ಟೇಟ್ ಉದ್ಯಮಿಯೂ ಆಗಿರುವ ಚಂದ್ರು ರಹೇಜಾ ಅವರ ಸಹೋದರಿಯನ್ನು ವಿವಾಹವಾಗಿದ್ದು, ಕೆ ರಹೇಜಾ ಕಾರ್ಪೊರೇಷನ್ ಅಧ್ಯಕ್ಷ ರಹೇಜಾ ಅವರು 26,620 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ ರಿಯಲ್ ಎಸ್ಟೇಟ್ ಶ್ರೀಮಂತರ ಪಟ್ಟಿಯಲ್ಲಿ ಮೆಂಡಾ ಅವರ ಹಿಂದಿನ ಸ್ಥಾನದಲ್ಲಿಯೇ ನಿಂತಿದ್ದಾರೆ.
RMZ ಕಾರ್ಪೊರೇಷನ್‌ನ ಪ್ರಮುಖ ಯೋಜನೆಗಳು:
RMZ ಸಂಸ್ಥೆಯ ಕೆಲವು ಪ್ರಮುಖ ಯೋಜನೆಗಳಲ್ಲಿ ಬೆಂಗಳೂರಿನಲ್ಲಿ ದಿ ಮಿಲೇನಿಯಾ ಮತ್ತು RMZ ಇನ್ಫಿನಿಟಿ, ದೆಹಲಿಯಲ್ಲಿ RMZ ಇನ್ಫಿನಿಟಿ, ಚೆನ್ನೈನಲ್ಲಿ RMZ ಒನ್ ಪ್ಯಾರಾಮೌಂಟ್ ಮತ್ತು ಹೈದರಾಬಾದ್‌ನ ದಿ ಸ್ಕೈವ್ಯೂ ಸೇರಿವೆ. ಅರ್ಜುನ್ ಮೆಂಡಾ ಅವರಿಗೆ 2017 ರಲ್ಲಿ ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications