ಬೆಂಗಳೂರಿನಲ್ಲಿರುವ ನಮ್ಮ ಮೆಟ್ರೋ (Namma Metro) ಸೇವೆ ಹಲವರ ಜೀವನಾಡಿಯಾಗಿದೆ. ತುರ್ತು ಪ್ರಯಾಣದಿಂದ ಹಿಡಿದು ಟ್ರಾಫಿಕ್ ಸಮಸ್ಯೆಯಿಂದ ಪಾರಾಗುವವರಿಗೆ ಮೆಟ್ರೋ ಬಹಳ ಅನುಕೂಲವಾಗಿದೆ. ಈಗಾಗಲೆ ಬೆಂಗಳೂರಿನಲ್ಲಿ ಪ್ರಮುಖ ನಗರಗಳಲ್ಲಿ ವಿಸ್ತರಿಸುವ ನಮ್ಮ ಮೆಟ್ರೋ, ಪರ್ಪಲ್ ಲೈನ್, ಪಿಂಕ್ ಲೈನ್, ಗ್ರೀನ್ ಲೈನ್, ಯೆಲ್ಲೋ ಲೈನ್ ಹೀಗೆ ಹಲವು ಮಾರ್ಗದಲ್ಲಿ ಸೇವೆ ಸಲ್ಲಿಸುತ್ತಿದೆ. 2025ರಲ್ಲಿ ಆರಂಭವಾದ ಯೆಲ್ಲೋ ಲೈನ್ ಮೆಟ್ರೋ ಮಾರ್ಗ, ಸದ್ಯ ಭಾರೀ ಆದ್ಯತೆಯೆ ಮೆಟ್ರೋ ಮಾರ್ಗವಾಗಿದೆ. ಆರ್.ವಿ.ರಸ್ತೆ ಮತ್ತು ಬೊಮ್ಮಸಂದ್ರ (RV Road-Bommasandra) ಸಂಪರ್ಕಿಸುವ ಈ ಮೆಟ್ರೋ ರೈಲಿನಲ್ಲಿ ದಿನಕ್ಕೆ ಲಕ್ಷಾಂತರ ಮಂದಿ ಪ್ರಯಾಣ ಮಾಡುತ್ತಾರೆ. ಇದೀಗ ತನ್ನ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್ ಕೊಟ್ಟಿದೆ ನೋಡಿ.

ಸಿಲಿಕಾನ್ ಸಿಟಿ ಮಂದಿಗೆ ಕೊನೆಗೂ ಗುಡ್ ನ್ಯೂಸ್ ಕೊಟ್ಟಾಯ್ತು, ಯೆಲ್ಲೋ ಲೈನ್‌ನಲ್ಲಿ ಆರನೇ ರೈಲು ಕಾರ್ಯಾರಂಭ ಮಾಡಿಯೂ ಆಯ್ತು. ಇದುವರೆಗೆ ಕೇವಲ 5 ರೈಲಿನೊಂದಿಗೆ ಸೇವೆ ಸಲ್ಲಿಸುತ್ತಿದ್ದ ಯೆಲ್ಲೋ ಲೈನ್ ಮೆಟ್ರೋ ಮಾರ್ಗದಲ್ಲಿ ಇಂದಿನಿಂದ ಆರನೇ ರೈಲು ಸಂಚರಿಸಲಿದೆ. ಈ ಮೂಲಕ ಪೀಕ್ ಅವರ್‌ನಲ್ಲಿ ಓಡಿಕೊಂಡು ಮೆಟ್ರೋ ಹತ್ತುತ್ತಿದ್ದ ಪ್ರಯಾಣಿಕರಿಗೆ ಕೊಂಚ ನಿಟ್ಟುಸಿರುವ ಬಿಡುವಂತಾಗಿದೆ.
6ನೇ ರೈಲಿನ ಆಗಮನ!
ಹೌದು, ಇಂದು (ಡಿಸೆಂಬರ್ 23) ಬೆಳಿಗ್ಗೆ 6 ಗಂಟೆಯುಂದ ಮೆಟ್ರೋ ಹಳದಿ ಮಾರ್ಗದಲ್ಲಿ ಆರನೇ ಮೆಟ್ರೋ ರೈಲು ಸಂಚಾರ ಆರಂಭವಾಗಿದೆ. ಆದ್ದರಿಂದ ಇನ್ಮೇಲೆ ಪ್ರಯಾಣಿಕರ ಕಾಯುವಿಕೆ ಅವಧಿಗೆ ಸ್ವಲ್ಪ ಬ್ರೇಕ್ ಬೀಳಲಿದೆ.
BMRCL ಹೇಳಿದ್ದೇನು?
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) ಯೆಲ್ಲೋ ಲೈನ್‌ನಲ್ಲಿ ಡಿಸೆಂಬರ್ 23ರಿಂದ ಆರನೇ ಮೆಟ್ರೋ ರೈಲನ್ನು ಪ್ರಾರಂಭಿಸುತ್ತಿದೆ. ಈ ರೈಲಿನ ಸೇರ್ಪಡೆಯಿಂದಾಗಿ, ಸೋಮವಾರದಿಂದ ಶನಿವಾರದವರೆಗೆ ಜನದಟ್ಟನೆಯ ಅವಧಿಯಲ್ಲಿ ಮೆಟ್ರೋ ಸೇವೆಗಳು 13 ನಿಮಿಷಗಳಿಗೊಮ್ಮೆ ಸಂಚಾರ ಮಾಡುತ್ತದೆ. ಇನ್ನು ಭಾನುವಾರ ಮಾತ್ರ ಪೀಕ್ ಅವರ್‌ನಲ್ಲಿ 15 ನಿಮಿಷಕ್ಕೊಮ್ಮೆ ಮೆಟ್ರೋ ರೈಲುಗಳು ಸೇವೆ ಸಲ್ಲಿಸುತ್ತದೆ ಎನ್ನಲಾಗಿದೆ.
ಸಮಯದಲ್ಲಿ ಬದಲಾವಣೆ ಇಲ್ಲ
ಇನ್ನು ಆರ್.ವಿ.ರಸ್ತೆ ಹಾಗೂ ಬೊಮ್ಮಸಂದ್ರ ನಿಲ್ದಾಣಗಳ ಎರಡೂ ಟರ್ಮಿನಲ್‌ಗಳಿಂದ ಹೊರಡುವ ಮೊದಲ ಮತ್ತು ಕೊನೆಯ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದ್ದರಿಂದ ಯಾವುದೇ ಮಾಹಿತಿಗಾಗಿ ಮೆಟ್ರೋ ಅಧಿಕೃತ ಎಕ್ಸ್ (ಟ್ವಿಟರ್) ಪೇಜ್ ಅನ್ನು ಫಾಲೋ ಮಾಡುವುದು ಉತ್ತಮ.
ಡಿಕೆಶಿ ಹೇಳಿದ್ದೇನು?
ಮೆಟ್ರೋ ಅಧಿಕಾರಿಗಳ ಜೊತೆ ಸೋಮವಾರ ಡಿಕೆ ಶಿವಕುಮಾರ್ ಅವರು ಸಭೆ ನಡೆಸಿದರು. ಆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ್ದು, ಬೆಂಗಳೂರಿನಲ್ಲಿ ಟ್ರಾಫಿಕ್ ಕಡಿಮೆ ಆಗಬೇಕು, ಮೆಟ್ರೋ ಸಂಚಾರ ಜಾಸ್ತಿ ಆಗಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಮೆಟ್ರೋ ಅಧಿಕಾರಿಗಳ ಜೊತೆ ಚರ್ಚೆ ನಡೆಸಿರುವುದಾಗಿ ಹೇಳಿದ್ದಾರೆ. ಶೀಘ್ರದಲ್ಲೇ ಅತಿ ದೊಡ್ಡ ಎಲಿವೇಟೆಡ್ ಕಾರಿಡಾರ್ ಮೂರನೇ ಹಂತದಲ್ಲಿ ಉದ್ಘಾಟನೆಯಾಗಲಿದೆ. ಅಲ್ಲದೇ ಎಲ್ಲೆಲ್ಲಿ ಮೆಟ್ರೋ ಕಾರ್ಯನಿರ್ವಹಿಸುತ್ತದೆ, ಅಲ್ಲೆಲ್ಲಾ ವಾಣಿಜ್ಯ ಚಟುವಟಿಕೆಗೂ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.


Click it and Unblock the Notifications