ಅತ್ತ ಇಂಡಿಗೋ ವಿಮಾನ (IndiGo Flight) ರೆಕ್ಕೆ ಬಿಚ್ಚಿ ಹಾರಾಡೋದನ್ನೇ ನಿಲ್ಲಿಸಿ ಬಿಟ್ಟಿದೆ. ಇತ್ತ ಖಾಸಗಿ ಬಸ್‌ಗಳು (Bus Price) ಹಗಲು ದರೋಡೆಗೆ ಮುಂದಾಗಿದೆ. ಇದೀಗ ಇಂಡಿಗೋ ವಿಮಾನಯಾನದ ಪೈಳಟ್ ರೋಸ್ಟರಿಂಗ್ ಸಮಸ್ಯೆಗಳಿಂದ ದೇಶಾದ್ಯಂತ ಇದೀಗ ಭಾರೀ ರದ್ಧತಿಗಳನ್ನು ಎದುರಿಸುವಂತಾಗಿದೆ. ಇದೀಗ ಇಂಡಿಗೋ ಬಿಕ್ಕಟ್ಟು ದಿನ ಹೋದಂತೆ ಹೆಚ್ಚಾಗುತ್ತಲೇ ಇದೆ. ಪ್ರಯಾಣಿಕರು ಕೂಡಾ ಊರಿಗೆ ಹೋಗದೆ, ಉಟ್ಟ ಬಟ್ಟೆಯಲ್ಲೇ ವಿಮಾನ ನಿಲ್ದಾಣದಲ್ಲಿ ಪರದಾಡುವಂತಾಗಿದೆ.

ಬೆಂಗಳೂರು ಮಾತ್ರವಲ್ಲದೇ ರಾಜ್ಯಾದ್ಯಂತ, ದೇಶಾದ್ಯಂತ ಇಂಡಿಗೋ ವಿಮಾನ ಹಾರಾಟ ಸ್ಥಗಿತ, ವಿಳಂಬಗಳಾಗಿದೆ. ಇದುವರೆಗೆ ಸಾವಿರಾರು ಇಂಡಿಗೋ ವಿಮಾನಗಳು ರದ್ದಾಗಿದೆ. ಇನ್ನು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಪರದಾಡುತ್ತಿದ್ದು, ಈ ಸಂಬಂಧ ವಿಡಿಯೋಗಳು ಕೂಡಾ ವೈರಲ್ ಆಗಿದೆ. ಅದೆಷ್ಟೋ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಹಾಗಿದ್ರೆ ಬೆಂಗಳೂರಿನಿಂದ ಮುಂಬೈ ಪ್ರಯಾಣ ಮಾಡುವವರಿಗಾಗಿ ಇಲ್ಲಿದೆ ಓದಿ ಪರ್ಯಾಯ ಮಾರ್ಗ, ಬಸ್‌ಗಳ ಮಾಹಿತಿ.
ಬೆಂಗಳೂರು-ಮುಂಬೈ ದೂರ ಎಷ್ಟು?
- ವಾಯುಮಾರ್ಗದಲ್ಲಿ 840-845 ಕಿ.ಮೀ. (ಸುಮಾರು 1 ಗಂಟೆ 50-55 ನಿಮಿಷ).
- ರಸ್ತೆ ಮೂಲಕ 975-985 ಕಿ.ಮೀ. (ಸಾಮಾನ್ಯವಾಗಿ 14-15 ಗಂಟೆ).
- ಸದ್ಯ ವಿಮಾನ ಪ್ರಯಾಣವನ್ನು ತಪ್ಪಿಸುವುದಾದರೆ, ರಸ್ತೆ ಅಥವಾ ರೈಲಿನ ಮೂಲಕ ಪ್ರಯಾಣ ಮಾಡುವುದು ಸೂಕ್ತ.
ಉದ್ಯಾನ ಎಕ್ಸ್‌ಪ್ರೆಸ್:
ಉದ್ಯಾನ ಎಕ್ಸ್‌ಪ್ರೆಸ್ (11302/11301) ಅತ್ಯಂತ ವಿಶ್ವಾಸಾರ್ಹ ದೈನಂದಿನ ನೇರ ರೈಲು ಸೇವೆಯಾಗಿ ಗುರುತಿಸಿಕೊಂಡಿಇದೆ. KSR ಬೆಂಗಳೂರು ನಗರ (SBC) ಮತ್ತು ಮುಂಬೈ CSMT ನಡುವೆ ಸುಮಾರು 1,150 ಕಿ.ಮೀ. ಸಂಪರ್ಕ ಹೊಂದಿದೆ. ಬೆಂಗಳೂರಿನಿಂದ ರಾತ್ರಿ 20:40 ಕ್ಕೆ ಹೊರಟು, ಮುಂದಿನ ದಿನ ರಾತ್ರಿ 20:15 ಕ್ಕೆ ಮುಂಬೈ ತಲುಪುತ್ತದೆ (ಒಟ್ಟು 23.5 ಗಂಟೆ).
ಈ ರೈಲಿನಲ್ಲಿ 1A, 2A, 3A, ಸ್ಲೀಪರ್ (SL), 2S ಗ್ರೇಡ್‌ಗಳು ಲಭ್ಯವಿದೆ. ಸದ್ಯ ವಿಮಾನದ ರದ್ಧತಿಯಿಂದಾಗಿ, ಈ ರೈಲು ಸೂಕ್ತವಾಗಿದೆ. ಇನ್ನು ಎಸಿ-3 ಟೈರ್ ದರ, ವಿಮಾನದ ಮಧ್ಯಮ ಶ್ರೇಣಿಕೆ ಸಮಾನವಾಗಿದೆ.
ಬಸ್ ವ್ಯವಸ್ಥೆ:
ವೋಲ್ವೋ ಮತ್ತು ಸ್ಲೀಪರ್ ಬಸ್‌ಗಳ ಮೂಲಕ ಸಂಚಾರ ಮಾಡಬಹುದು. ಬೆಂಗಳೂರು-ಮುಂಬೈಗೆ ಪ್ರಯಾಣಿಸುವವರಿಗಾಗಿ 60-70 ವೋಲ್ವೋ/ಸ್ಲೀಪರ್ ಬಸ್‌ಗಳು ಸೇವೆ ಸಲ್ಲಿಸುತ್ತದೆ. ರಸ್ತೆ ಮೂಲಕ 980-990 ಕಿ.ಮೀ. (ಪ್ರಯಾಣದ ಸಮಯ 19-20 ಗಂಟೆ). ನಾನ್‌ಎಸಿ ಬಸ್‌ಗಳಿಗೆ ₹1,000-₹1,400 ರೂ. ಆದರೆ, ವೋಲ್ವೋ/ಎಸಿ ಸ್ಲೀಪರ್‌ಗಳಿಗೆ ₹2,500-₹3,500 ರೂ.ಕ್ಕಿಂತ ಅಧಿಕವಿಬಹುದು. ಪ್ರೀಮಿಯಂ ಬಸ್‌ಗಳಲ್ಲಿ ಚಾರ್ಜಿಂಗ್ ಪೋರ್ಟ್‌ಗಳು, ಬೆಡ್‌ಶೀಟ್, ಉತ್ತಮ ಲೆಗ್‌ರೂಮ್ ಇರುತ್ತದೆ.
ಆದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ, ಬಸ್‌ನಲ್ಲಿ 19 ರಿಂದ 20 ಗಂಟೆ ಸಂಚಾರ ಮಾಡುವುದು ಆಯಾಸಕರ. ಅಷ್ಟೇ ಅಲ್ಲದೇ ಟ್ರಾಫಿಕ್, ಹವಾಮಾನ ಬದಲಾವಣೆಯಿಂದ ಸಮಯ ಮತ್ತಷ್ಟು ಹೆಚ್ಚಾಗಬಹುದು.
ಕಾರು, ಟ್ಯಾಕ್ಸಿ:
ಕಾರು, ಟ್ಯಾಕ್ಸಿ ಅಥವಾ ಶೇರ್ಡ್ ಕ್ಯಾಬ್ ದುಬಾರಿ ಆಯ್ಕೆಯಾಗಿದೆ. ರಸ್ತೆ ದೂರ 975-985 ಕಿ.ಮೀ. (ನಿರಂತರ 14 ಗಂಟೆ, ವಿರಾಮಗಳೊಂದಿಗೆ 15-17 ಗಂಟೆ). 3-4 ಜನರು ಖರ್ಚು ಶೇರ್ ಮಾಡಿಕೊಂಡರೆ, ಡೋರ್-ಟು-ಡೋರ್ ಪ್ರಯಾಣಕ್ಕೆ ಅಥವಾ ನಿಮ್ಮ ಸಮಯಕ್ಕೆ ತಕ್ಕಂತೆ ರೀಚ್ ಆಗಬೇಕಿದ್ದರೆ ಇದು ಸೂಕ್ತ.
ಸ್ವತಃ ಡ್ರೈವ್ ಮಾಡಿದರೆ, 1,000 ಕಿ.ಮೀ.ಗೆ ಇಂಧನ ವೆಚ್ಚ ₹6,000-₹8,000+ ಮತ್ತು ಟೋಲ್ ಶುಲ್ಕ ₹1,500-₹2,000 ಆಗಬಹುದು. ಒನ್-ವೇ ಕ್ಯಾಬ್‌ಗೆ ಕಾರ್ ವರ್ಗಕ್ಕೆ ಅನುಗುಣವಾಗಿ ಸಾಮಾನ್ಯವಾಗಿ ₹12,000-₹18,000+ ರೂ. ಬೇಕಾಗುತ್ತದೆ.
ವಿಮಾನ vs ರೈಲು vs ಬಸ್ vs ಕಾರು:
ಪ್ರಯಾಣದ ಸಮಯ ಹೋಲಿಕೆ ಮಾಡುವುದಾದರೇ, ವಿಮಾನಕ್ಕೆ 4-5 ಗಂಟೆ (ಒಟ್ಟು), ಉದ್ಯಾನ ಎಕ್ಸ್‌ಪ್ರೆಸ್ 23.5 ಗಂಟೆ, ಬಸ್ 19-20 ಗಂಟೆ, ಕಾರು 14-17 ಗಂಟೆ ತೆಗೆದುಕೊಳ್ಳುತ್ತದೆ.
ಆದರೆ ವಿಮಾನ ಪ್ರಯಾಣ ರದ್ಧತಿ, ವಿಳಂಬ ಉಂಟಾಗುತ್ತಿರುವ ಹಿನ್ನೆಲೆ ಇತ್ತ ಬಸ್‌ಗಳ ಬೆಲೆಯಲ್ಲೂ ಏರಿಕೆಯಾಗುತ್ತಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ



Click it and Unblock the Notifications