ಭಾರತಕ್ಕೆ ನಡುಕ ಹುಟ್ಟಿಸಲು ನಡೆಸಿದ ಪಾಕಿಸ್ತಾನದ ಉಗ್ರರ ದಾಳಿ, ಇದೀಗ ಅವರಿಗೇ ನಡುಕ ಹುಟ್ಟಿಸಿದೆ. ಭಾರತೀಯರ ಸಹವಾಸಕ್ಕೆ ಕಾಲಿಟ್ಟ ಪಾಕಿಗಳಿಗ ಹೆಡೆಮುರಿ ಕಟ್ಟಲು ಭಾರತ ಸರ್ಕಾರ ಒಂದೊಂದೇ ತಯಾರಿ ಮಾಡಿಕೊಳ್ಳುತ್ತಿದೆ. ಯುದ್ಧಕ್ಕಾದರೂ ಸರಿಯೇ ನಾವು ರೆಡಿ ಎಂದಿದೆ. ಆದ್ರೆ ಪಾಕಿಸ್ತಾನ ಮಾತ್ರ ಗಢ ಗಢ ನಡುಗುತ್ತಿದೆ. ಭಾರತ ಸೇನೆಗೆ ಹೆದರಿದ ಪಾಕಿಸ್ತಾನ ಸೇನೆಯ ಸಾವಿರಾರು ಸೈನಿಕರು ರಾಜೀನಾಮೆ ಕೊಡುತ್ತಿದ್ದಾರೆ. ಇದರಲ್ಲಿ ಮತ್ತೊಂದು ಆಘಾತಕಾರಿ ಸಂಗತಿ ಏನಂದ್ರೆ, ಸೇನೆಗೆ ಸೇರುವ ಇಚ್ಛೆ ಹೊಂದಿದ್ದವರು ಕೂಡ ಸೇನೆ ಸೇರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಪಾಕಿಸ್ತಾನ ಸೇನೆಗೆ ಭವಿಷ್ಯದಲ್ಲಿ ಮನೋಧೈರ್ಯವಿಲ್ಲದ, ಬಲವಿಲ್ಲದ ಸ್ಥಿತಿಗೆ ತಲುಪುವ ಭೀತಿ ಇದೆ.

ಪಹಲ್ಗಾಮ್‌ನಲ್ಲಿ ನಡೆದ ದಾಳಿ ನಂತರ ಭಾರತ ಪಾಕಿಸ್ತಾನದ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸುತ್ತಿದೆ. ಈಗಾಗಲೇ ನಿಮಗೆಲ್ಲರಿಗೂ ಗೊತ್ತೇ ಇದೆ. ಪಾಕಿಸ್ತಾನಕ್ಕೆ ನಿರು ಹರಿಸುವುದನ್ನು ನಿಲ್ಲಿಸಲಾಗಿದೆ, ಗಡಿ ಮುಚ್ಚಲಾಗಿದೆ..ಹೀಗೆ ಒಂದಷ್ಟು ರೀತಿಯ ವಿರೋಧದ ಪ್ರತಿಕ್ರಿಯೆಗಳನ್ನು ನೀಡಲಾಗಿದೆ. ಆದರೆ ಇವುಗಳಿಂದ ಪಾಕಿಸ್ತಾನ ಥಂಡಾ ಹೊಡೆದಿದೆ. ಪಾಕಿಸ್ತಾನದಲ್ಲಿ ಭಾರೀ ರಾಜಕೀಯ ಹಾಗೂ ಸೇನಾ ಬಿಕ್ಕಟ್ಟಿಗೆ ಕಾರಣವಾಗುತ್ತಿದೆ. ಈ ಹಿನ್ನಲೆಯಲ್ಲಿ, ಪಾಕಿಸ್ತಾನ ಸೇನೆಗೆ ಸಂಬಂಧಿಸಿದ ಬಹುಮಾನ್ಯ ವರದಿ ಒಂದನ್ನು ಅನೇಕ ಅಂತಾರಾಷ್ಟ್ರೀಯ ಮಾಧ್ಯಮಗಳು ಪ್ರಕಟಿಸಿವೆ. ಭವಿಷ್ಯದಲ್ಲಿ ಭಾರತದ ಪ್ರತೀಕಾರದ ದಾಳಿಯಿಂದ ಭಯಗೊಂಡು ಸುಮಾರು 4,500 ಸೈನಿಕರು ಮತ್ತು 250 ಅಧಿಕಾರಿಗಳು ತಮ್ಮ ಹುದ್ದೆಗಳಿಂದ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಭಯದಲ್ಲಿದೆ ಪಾಕಿಸ್ತಾನ:
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಎಂಬ ಪ್ರವಾಸಿ ಪ್ರದೇಶದಲ್ಲಿ ನಡೆದ ಈ ದಾಳಿಯಲ್ಲಿ ಕನಿಷ್ಠ 26 ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಹತ್ಯೆಯಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಈ ದಾಳಿಯ ಹಿಂದೆಯೂ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ಕೈವಾಡವಿರಬಹುದು ಎಂಬ ಅಂಶ ಉಲ್ಬಣವಾಗಿದೆ. ಇದರಿಂದಾಗಿ ಭಾರತ ಸರ್ಕಾರ ಪ್ರತೀಕಾರದ ದಾಳಿ ನಡೆಸಬಹುದೆಂಬ ಭೀತಿ ಪಾಕಿಸ್ತಾನದ ರಾಜಕೀಯ ಮತ್ತು ಸೇನಾ ಮಂಡಳಿಗಳಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ.
ಪಾಕಿಸ್ತಾನ ಸೇನೆಯಲ್ಲಿ ಚರ್ಚೆಗಳು:
ಭಾರತ ಪ್ರತೀಕಾರದ ದೃಷ್ಟಿ ಹರಿಸುತ್ತಿದೆ. ಈಗಾಗಲೇ ಪಾಕಿಸ್ತಾನದ ವಿರುದ್ಧ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಸೇನೆಯೊಳಗೆ ಆತಂಕದ ಪರಿಸ್ಥಿತಿ ಉಂಟಾಗಿದೆ. ಭಾರತೀಯ ಸೇನೆಗೆ ಹೆದರಿದ ಪಾಕಿಸ್ತಾನ ಸೈನಿಕರು, ತಮ್ಮ ಕುಟುಂಬದವರ ಒತ್ತಾಯದ ಮೇರೆಗೆ ರಾಜೀನಾಮೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲ ಸೇನೆ ಪಠಣದಲ್ಲಿ ಹಾಜರಾಗದೇ ನಾಪತ್ತೆಯಾಗಿರುವ ಸೈನಿಕರ ಸಂಖ್ಯೆಯು ದಾರುಣವಾಗಿ ಏರಿದೆ. ಹಲವಾರು ಸೈನಿಕರು ತಮ್ಮ ಸಮೀಪದ ಮೇಲುಸ್ಥಾನಿಗಳಿಗೆ 'ಭದ್ರತೆಗಾಗಿ' ಸೇವೆಯಿಂದ ದೂರ ಉಳಿಯಬೇಕೆಂದು ಅರ್ಜಿ ಸಲ್ಲಿಸಿರುವುದೂ ವರದಿಯಾಗಿದೆ.
ಪಾಕಿಸ್ತಾನ ಸೇನಾ ಮುಖ್ಯಸ್ಥರ ಆಘಾತ:
ಇನ್ನು ಈ ಒಂದು ಬೆಳವಣಿಗೆಯಿಂದ ಪಾಕಿಸ್ತಾನ ಸೇನಾ ಮುಖ್ಯಸ್ಥರಾದ ಅಸಿಂ ಮುನೀರ್ ಅವರಿಗೆ ದೊಡ್ಡ ಆಘಾತವನ್ನುಂಟುಮಾಡಿವೆ. ದೇಶದ ಗಡಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದರೂ, ಸೇನೆಯೊಳಗಿನ ನಿರಾಳತೆ, ಆತಂಕ ಮತ್ತು ನಂಬಿಕೆಯ ಕೊರತೆ ಇಂಥ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ. ಹಲವಾರು ಉನ್ನತಾಧಿಕಾರಿಗಳು ತಮ್ಮ ಹುದ್ದೆಗಳನ್ನೇ ತ್ಯಜಿಸಿದ ಪ್ರಕರಣಗಳು ಕೂಡ ಈ ವರದಿಯಲ್ಲಿ ಉಲ್ಲೇಖಗೊಂಡಿವೆ.
ಸೈನಿಕರ ರಾಜೀನಾಮೆಗೆ ಕಾರಣವೇನು?
ಪಾಕಿಸ್ತಾನ ಸೇನೆಯೊಳಗಿನ ಮೂಲಗಳಿಂದ ಲಭ್ಯವಾದ ಮಾಹಿತಿಯ ಪ್ರಕಾರ, ಹಲವಾರು ಸೈನಿಕರು ತಮ್ಮ ಕುಟುಂಬಗಳ ಒತ್ತಾಯದಿಂದ ರಾಜೀನಾಮೆ ನೀಡುತ್ತಿದ್ದಾರೆ. "ಭಾರತದ ಪ್ರತೀಕಾರ ಅತಿ ಭಯಾನಕವಾಗಿರಬಹುದು" ಎಂಬ ಭೀತಿಯಿಂದ ಪಾಕಿಸ್ತಾನದ ವಿವಿಧ ಮಿಲಿಟರಿ ಘಟಕಗಳಲ್ಲಿ ಭೀಷಣ ಮನಃಸ್ಥಿತಿ ನಿರ್ಮಾಣವಾಗಿದೆ. ಕೆಲವು ಕುಟುಂಬಗಳು ನೇರವಾಗಿ ಸೇನಾ ಸಿಬ್ಬಂದಿಗೆ 'ನೀವು ಬದುಕಿ ಮನೆಗೆ ಬನ್ನಿ' ಎಂದು ಒತ್ತಾಯಿಸುತ್ತಿವೆ. ಇದರಿಂದಾಗಿ ಸೈನಿಕರ ಮಾನಸಿಕ ಸ್ಥಿತಿ ಕುಸಿಯುತ್ತಿದೆ. ಹಲವು ಕಿರಿಯ ಅಧಿಕಾರಿಗಳು 'ಈ ಯುದ್ಧ ದೇಶದ ಹಿತಕ್ಕಾಗಿ ಅಲ್ಲ, ರಾಜಕೀಯ ಲಾಭಕ್ಕಾಗಿ' ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿರುವ ವರದಿಗಳು ಲಭ್ಯವಿವೆ.
ಭಾರತದಲ್ಲಿ ರಾಜಕೀಯ ಪ್ರತಿಕ್ರಿಯೆಗಳು:
ಪಹಲ್ಗಾಮ್ ದಾಳಿಯ ನಂತರ, ಭಾರತದಲ್ಲಿ ವಿವಿಧ ರಾಜಕೀಯ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯವನ್ನು ಒಂದು ಕಡೆಗೆ ಇಟ್ಟುಕೊಂಡು ರಾಷ್ಟ್ರದ ಹೆಮ್ಮೆಗೆ ಒಗ್ಗಟ್ಟಾಗಿ ನಿಲ್ಲಬೇಕೆಂದು ಕರೆ ನೀಡಿದ್ದಾರೆ. ಆರ್‌ಜೆಡಿ ಸಂಸದ ಮನೋಜ್ ಝಾ, ಸಿಪಿಐ ಸಂಸದ ಸಂದೋಷ್ ಕುಮಾರ್, ಮತ್ತು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಅವರು ಸರ್ಕಾರವನ್ನು ವಿಶೇಷ ಸಂಸತ್ ಅಧಿವೇಶನ ಕರೆದೊಯ್ಯಲು ಒತ್ತಾಯಿಸಿದ್ದಾರೆ. ಇದರೊಂದಿಗೆ, ದೇಶದ ಪ್ರತೀಕಾರದ ಭಾವನೆಗೆ ಸರ್ವಪಕ್ಷೀಯ ಬೆಂಬಲ ಒದಗಿಸಲು ಒಂದು ವೇದಿಕೆಯನ್ನು ರೂಪಿಸುವ ನಿರೀಕ್ಷೆಯಿದೆ.
ಪಾಕಿಸ್ತಾನ ಸಶಸ್ತ್ರ ಪಡೆಗಳಲ್ಲಿ ಬಿಕ್ಕಟ್ಟಿನ ತೀವ್ರತೆ ಏರಿಕೆ:
ಇದನ್ನು ಹೀಗೇ ನಿರೀಕ್ಷಿಸಲಾಗದು. ಇತ್ತೀಚಿನ ರಾಜೀನಾಮೆಗಳ ಅಲೆ, ಪಾಕಿಸ್ತಾನ ಸಶಸ್ತ್ರ ಪಡೆಗಳಲ್ಲಿ ಆತ್ಮವಿಶ್ವಾಸದ ಕೊರತೆಯ ಸಂಕೇತವಾಗಿದೆ. ಇದರಿಂದಾಗಿ ಉಗ್ರರ ವಿರುದ್ಧ ಅಥವಾ ಭಾರತದ ವಿರುದ್ಧ ಕಾರ್ಯಾಚರಣೆಗೆ ಸೇನೆಯ ಸಜ್ಜತೆ ಕುರಿತು ಗಂಭೀರವಾದ ಪ್ರಶ್ನೆಗಳು ಉದ್ಭವಿಸುತ್ತಿವೆ. ಇದನ್ನೆಲ್ಲಾ ನೋಡಿದರೆ, ಪಾಕಿಸ್ತಾನ ಭದ್ರತೆ, ರಾಜಕೀಯ ಸ್ಥಿರತೆ ಮತ್ತು ರಾಷ್ಟ್ರಪ್ರಮಾಣದ ಮೇಲಿನ ನಂಬಿಕೆ, ಈ ಮೂರೂ ಕೂಡ ನಡುಕದಲ್ಲಿ ನಿಂತಿವೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಖಭಂಗ:
ಇದಕ್ಕೂ ಮಿಕ್ಕದಂತೆ, ಪಾಕಿಸ್ತಾನ ಸರ್ಕಾರ ಈ ವಿಚಾರಗಳಲ್ಲಿ ಯಾವುದೇ ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ. ಇದರ ಪರಿಣಾಮವಾಗಿ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಪಾಕಿಸ್ತಾನದ ಸೇನಾ ಸಾಮರ್ಥ್ಯ ಮತ್ತು ರಾಷ್ಟ್ರೀಯ ಭದ್ರತಾ ಯೋಗ್ಯತೆಯ ಮೇಲಿನ ನಂಬಿಕೆ ಶೀಘ್ರ ಕುಸಿಯುತ್ತಿದೆ. ಇದೊಂದು ದೊಡ್ಡ ನಾಚಿಕೆಗೆಡಿಸುವ ಸಂಗತಿಯಾಗಿದೆ.
ಒಟ್ಟಿನಲ್ಲಿ ಇಂದಿನ ದಿನಗಳಲ್ಲಿ ಯುದ್ಧಕ್ಕೆ ಸಿದ್ಧತೆ ಹೊಂದಿರುವುದಕ್ಕಿಂತ ಹೆಚ್ಚು ಮುಖ್ಯವಾದದ್ದು, ರಾಷ್ಟ್ರದ ಒಳಭಾಗದಲ್ಲಿ ಶಿಸ್ತಿನ ಸ್ಥಿತಿಯನ್ನು ಕಾಪಾಡುವುದು. ಪಾಕಿಸ್ತಾನ ಸೇನೆ ಈಗ ಒಳಗಿನಿಂದ ಮುರಿಯುತ್ತಿದೆ. ಆರ್ಥಿಕ ಬಿಕ್ಕಟ್ಟು, ರಾಜಕೀಯ ಬದ್ಧತೆಗಳ ಕೊರತೆ ಮತ್ತು ಜನರ ವಿಶ್ವಾಸದ ಕುಸಿತ ಈ ಎಲ್ಲವೂ ಸೇರಿ, ಪಾಕಿಸ್ತಾನ ಇತಿಹಾಸದ ಅತಿದುರ್ದಶೆಯ ಹಂತಕ್ಕೆ ಜಾರುತ್ತಿದೆ. ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತ ತೀವ್ರ ಕ್ರಮ ಕೈಗೊಂಡರೆ, ಅದು ಪಾಕಿಸ್ತಾನವನ್ನು ಇನ್ನಷ್ಟು ಹಿಂಜಗ್ಗಿಸಬಹುದೆಂಬುದು ಸ್ಪಷ್ಟ.


Click it and Unblock the Notifications