ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (NHAI) 2016 ರಲ್ಲಿ ಜಾರಿಗೆ ತಂದ ಫಾಸ್ಟ್ಯಾಗ್ ನಿಯಮ ಇಂದು ದೇಶದ ಎಲ್ಲೆಡೆ ಜಾರಿಯಲ್ಲಿದೆ. ಹೆಚ್ಚಿನ ವಾಹನಗಳು ಫಾಸ್ಟ್ಯಾಗ್ (FASTag) ಕಾರ್ಡ್‌ಗಳನ್ನು ಬಳಸಿಕೊಂಡು ಟೋಲ್ ದಂಡಗಳಿಂದ ತಪ್ಪಿಸಿಕೊಂಡಿದೆ. ಆದ್ರೆ ಕೆಲವು ವಂಚಕರು ಇದೇ ಫಾಸ್ಟ್ಯಾಗ್ ಕಾರ್ಡ್‌ಗಳನ್ನು ಬಳಸಿಕೊಂಡು ವಂಚನೆಯ ದಾರಿ ಹಿಡಿದಿದ್ದಾರೆ. ಅದಕ್ಕಂತೇ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (NHAI) ಮತ್ತು ರಾಷ್ಟ್ರೀಯ ಪಾವತಿ ಕಾರ್ಪೊರೇಷನ್ ಆಫ್ ಇಂಡಿಯಾ (NPCI) 2024 ರಲ್ಲಿ ಹೊಸ ನಿಯಮ ಜಾರಿಗೆ ತಂದಿತ್ತು. ಆ ನಿಯಮದ ಪ್ರಕಾರ ಫಾಸ್ಟ್ಯಾಗ್ ಬಳಕೆದಾರರು KYV (Know Your Vehicle) ಅಪ್ಡೇಟ್ ಮಾಡಲೇಬೇಕು. ಈ ಮೂಲಕ ನೀವು ವಂಚನೆಯಿಂದ ತಪ್ಪಿಸಿಕೊಳ್ಳಬಹುದು.

ಕೆವೈಸಿಯಂತೆಯೇ ಇರುವ ಕೆವೈವಿ ಅಂದ್ರೆ ಏನು ಎಂಬ ಪ್ರಶ್ನೆ ಎಲ್ಲರಿಗೂ ಬರಬಹುದು. ಹೌದು, ಕೆವೈವಿ ಅಂದ್ರೆ ನಿಮ್ಮ ವಾಹನದ ದಾಖಲೆ, ಮಾಹಿತಿಯನ್ನು ಸಲ್ಲಿಸುವುದಾಗಿದೆ. ಹಾಗಿದ್ರೆ ಫಾಸ್ಟ್ಯಾಗ್‌ನಲ್ಲಿ ಇದು ಯಾಕೆ ಮುಖ್ಯ? ಇದನ್ನು ಮಾಡದಿದ್ರೆ ಏನಾಗುತ್ತೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೆಳಗಿನ ಮಾಹಿತಿಯಲ್ಲಿದೆ.
ಕೆವೈವಿ ಏಕೆ ಮುಖ್ಯ?
ದೇಶದೆಲ್ಲೆಡೆ 8 ಕೋಟಿಗೂ ಅಧಿಕ ಫಾಸ್ಟ್ಯಾಗ್ ಬಳಕೆದಾರರಿದ್ದಾರೆ. ಆದ್ರೆ ಇತ್ತೀಚೆಗೆ ಈ ಫಾಸ್ಟ್ಯಾಗ್ ವಂಚಕರ ಸಂಖ್ಯೆಯೂ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಆದ್ದರಿಂದ ಈ ಸಮಸ್ಸೆಗಳನ್ನು ತಪ್ಪಿಸಲು ಈ ಕೆವೈವಿ ಅಪ್ಡೇಟ್ ಕಡ್ಡಾಯಗೊಳೀಸಲಾಗಿದೆ.
- ಮುಖ್ಯವಾಗಿ ಒಂದೇ ಫಾಸ್ಟ್ಯಾಗ್‌ಗಳನ್ನು ಬಹುವಾಹನಗಳಲ್ಲಿ ಬಳಸಲಾಗುತ್ತಿದೆ. ಅಂದರೆ ಸಣ್ಣ ವಾಹನಕ್ಕೆ ನೀಡಿದ್ದ ಟ್ಯಾಗ್ ಅನ್ನೇ, ದೊಡ್ಡ ವಾಹನಗಳಲ್ಲೂ ಬಳಸುವುದು. ಈ ಮೂಲಕ ಹೆಚ್ಚಿನ ಟೋಲ್ ತಪ್ಪಿಸುತ್ತಿದ್ದಾರೆ.
- ಎರಡನೆಯದು ಫಾಸ್ಟ್ಯಾಗ್ ಅನ್ನು ಮುಂಭಾಗದಲ್ಲಿ ಅಂಟಿಸದೇ ಕೈಯಲ್ಲಿಟ್ಟುಕೊಳ್ಳುವುದು.
- ಇದರಿಂದ ಟ್ಯಾಗ್ ಬದಲಾವಣೆ ಮಾಡಿಕೊಂಡು, ದುರ್ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪವಿದೆ.
ಕೆವೈವಿ ಅಪ್ಡೇಟ್ ಮಾಡುವಾಗ ಏನಿರಬೇಕು?
- ನೀವು ಫಾಸ್ಟ್ಯಾಗ್ ಅಂಟಿಸಿದ ವಾಹನದ ಮುಂಭಾಗದ ಫೋಟೋ.
- ವಾಹನದ ಆರ್‌ಸಿ ಮುಂಭಾಗ ಮತ್ತು ಹಿಂಬಾಗದ ಡಿಜಿಟಲ್ ಫೋಟೋ.
- ನೀವು ಬಳಸುವ ಫಾಸ್ಟ್ಯಾಗ್ ಕಾರ್ಡ್‌ನ ಸೀರಿಯಲ್ ನಂಬರ್ ಜೊತೆ ಸ್ಪಷ್ಟವಾಗಿ ಕಾಣುವಂತಹ ಫೋಟೋ.
ಅಪ್ಡೇಟ್ ಮಾಡುವುದು ಹೇಗೆ?
- ಇನ್ನು ಕೆವೈವಿ ಅಪ್ಡೇಟ್ ಮಾಡಲು ಬ್ಯಾಂಕ್ ಅಥವಾ ಫಾಸ್ಟ್ಯಾಗ್ ಆಪ್ ಬಳಸಬಹುದು.
- ಓಪನ್ ಮಾಡಿದ ನಂತರ 'FASTag' ಆಯ್ಕೆಯ ಕೆಳಗೆ KYV Verification ಎಂಬುದನ್ನು ಸರ್ಚ್ ಮಾಡಿ.
- ಅಲ್ಲಿ ನೀವು ವಾಹನದ ಮುಂಭಾಗದ ನಂಬರ್ ಪ್ಲೇಟ್ ಕಾಣುವಂತೆ ಫೋಟೋ, ಆರ್‌ಸಿ ಫೋಟೋ, ಫಾಸ್ಟ್ಯಾಗ್ ಸ್ಟಿಕ್ಕರ್ ಅಪ್‌ಲೋಡ್ ಮಾಡಬೇಕು.
- ಅಪ್‌ಲೋಡ್ ಮಾಡಿದ ಏಳು ದಿನದಲ್ಲಿ ನಿಮ್ಮ ಕೆವೈವಿ ಅಪ್ಡೇಟ್ ಯಶಸ್ವಿಯಾಗುತ್ತದೆ.
ಈ ಕೆವೈವಿ ಅಪ್ಡೇಟ್ ಒಮ್ಮೆ ಮಾಡಿದರೆ ನಂತರದ 3 ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಆ ನಂತರ ಮತ್ತೆ ಅದೇ ದಾಖಲೆಗಳನ್ನು ನೀವು ಅಪ್‌ಲೋಡ್ ಮಾಡಿ, ಅಪ್ಡೇಟ್ ಮಾಡಿಕೊಳ್ಳಬೇಕು.
ಕೆವೈವಿ ಮಾಡದಿದ್ರೆ ಏನಾಗುತ್ತದೆ?
- ಒಂದು ವೇಳೆ ಕೆವೈವಿ ಅಪ್ಡೇಟ್ ಮಾಡದಿದ್ರೆ, ಫಾಸ್ಟ್ಯಾಗ್ ಬ್ಲಾಕ್ ಮಾಡಲಾಗುತ್ತದೆ ಮತ್ತು ಟೋಲ್‌ನಲ್ಲಿ ನಗದು ವ್ಯವಹಾರ ಮಾಡಬೇಕಾಗುತ್ತದೆ.
- ಇದರಿಂದ ದಂಡವೂ ಹೆಚ್ಚಾಗುತ್ತದೆ ಮತ್ತು ಟೋಲ್ ಪ್ಲಾಜಾದಲ್ಲೂ ವಿಳಂಬವಾಗಬಹುದು.
- ಇನ್ನು ವಾಹನ ಬದಲಾಯಿಸಿದರೆ, ಆರ್‌ಸಿ ಬದಲಾಯಿಸಿದರೂ ಕೆವೈವಿ ಅಪ್ಡೇಟ್ ಮಾಡಬೇಕು


Click it and Unblock the Notifications