ಗಮನಿಸಿ ! ನಾಳೆಯಿಂದ ನಂದಿನಿ ಹಾಲು, ಮೊಸರು ಸಿಗೋದು ಅನುಮಾನ; ಹೈನುಗಾರರಿಗೂ ಆತಂಕ

ಮನೆಗೆ ನಂದಿನಿ ಹಾಲು ತರಿಸೋರು ನೀವಾಗಿದ್ರೆ ಒಂದೆರಡು ಪ್ಯಾಕೆಟ್ ಹಾಲು ಹೆಚ್ಚು ತರಿಸಿಟ್ಟುಕೊಳ್ಳುವುದು ಒಳ್ಳೆಯದು. ಯಾಕೆಂದರೆ ನಾಳೆಯಿಂದ ನಂದಿನಿ ಹಾಲು ಸಿಗೋದು ಅನುಮಾನವಿದೆ.! ಹೌದು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ ( KMF) ಆಡಳಿಯ ಮಂಡಳಿಯ ವಿರುದ್ದ ಅಧಿಕಾರಿಗಳು ಹಾಗೂ ನೌಕರರ ಮುನಿಸು ಜೋರಾಗಿದೆ. ಇದೇ ಕಾರಣಕ್ಕೆ ಆಡಳಿತ ಮಂಡಳಿ ವಿರುದ್ಧ ನೌಕರರು, ಅಧಿಕಾರಿಗಳು ಫೆಬ್ರವರಿ 1ರಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧಾರ ಮಾಡಿದ್ದಾರೆ. ಒಂದು ವೇಳೆ ಇಂದು ಸಂಜೆಯೊಳಗೆ ಈ ಮುನಿಸು ಶಮನವಾಗದೆ ಅಧಿಕಾರಿಗಳು ಮತ್ತು ನೌಕರರು ಮುಷ್ಕರಕ್ಕೆ ಮುಂದಾದ್ರೆ ಕೆಎಂಎಫ್‌ ಉತ್ಪನ್ನಗಳ ಪೂರೈಕೆಯಲ್ಲಿ ರಾಜ್ಯದಲ್ಲಿ ದೊಡ್ಡಮಟ್ಟದ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ.

ಮುಷ್ಕರಕ್ಕೆ ಕಾರಣ ಏನು?

ಕರ್ನಾಟಕ ಹಾಲು ಮಹಾಮಂಡಳ ನೌಕರರು ಪ್ರಮುಖವಾಗಿ ಬಾಕಿ ವೇತನ ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಫೆಬ್ರವರಿಯಿಂದ ಮುಷ್ಕರ ನಡೆಸುವುದಾಗಿ ಅವರು ಸರ್ಕಾರಕ್ಕೆ ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು. KMF ನೌಕರರ ಸಂಘವು ಈಗಾಗಲೇ ತಮ್ಮ ಬೇಡಿಕೆಗಳ ಪಟ್ಟಿಯೊಂದಿಗೆ ಆಡಳಿತ ಮಂಡಳಿಗೆ ಮನವಿ ಪತ್ರ ಸಲ್ಲಿಸಿದ್ದು, ಇವುಗಳ ಈಡೇರಿಕೆಗೆ ಒಂದು ವಾರ ಗಡುವು ನೀಡಿತ್ತು. ಇದು ಜನವರಿ 31ಕ್ಕೆ ಅಂದರೆ ಇಂದಿಗೆ ಕೊನೆಗೊಳ್ಳಲಿದೆ. ಅಷ್ಟರೊಳಗೆ ಬೆಡಿಕೆಗಳು ಈಡೇರದಿದ್ದರೆ ಮುಷ್ಕರ ನಡೆಸಲಾಗುವುದು ಎಂದು ನೌಕರರ ಸಂಘ ಎಚ್ಚರಿಕೆ ನೀಡಿದೆ.

ಫೆ. 1ರಿಂದ ನಂದಿನಿ ಹಾಲು, ಮೊಸರು ಸಿಗೋದು ಅನುಮಾನ

7ನೇ ವೇತನ ಆಯೋಗದ ಶಿಫಾರಸಿನಂತೆ ಬಾಕಿ ಉಳಿದಿರುವ ವೇತನವನ್ನು ಕೂಡಲೇ ನೀಡಬೇಕೆಂದು ಕೆಎಂಎಫ್ ನೌಕರರ ಸಂಘದ ಅಧ್ಯಕ್ಷ ಗೋವಿಂದಗೌಡ ಒತ್ತಾಯಿಸಿದ್ದರು. ಸರ್ಕಾರವು 7ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ಶೇ 25 ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿಗೆ ನೀಡಿತ್ತು. ಆದರೆ, ಈಗ ಕೇವಲ ಶೇ 17 ರಷ್ಟು ಮಾತ್ರ ಹೆಚ್ಚಳ ಮಾಡಲಾಗಿದೆ. ಇನ್ನೂ ಶೇ 8 ರಷ್ಟು ವೇತನ ಹೆಚ್ಚಳ ಬಾಕಿ ಇದೆ. ಅದನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಗೋವಿಂದಗೌಡ ಆಗ್ರಹಿಸಿದ್ದರು.

ಏಳನೇ ವೇತನ ಜಾರಿ ಮಾಡುವಂತೆ ಕಳೆದ 2-3 ತಿಂಗಳಿಂದ ಒತ್ತಡ ಹಾಕುತ್ತಿದ್ದರೂ ಇದಕ್ಕೆ ಆಡಳಿತ ಮಂಡಳಿ ಸರಿಯಾದ ರೀತಿ ಸ್ಪಂದಿಸಿಲ್ಲ ಎನ್ನೋದು ನೌಕರರ ಆರೋಪ. ಈಗಾಗಲೇ ಪರಿಷ್ಕೃತ ಶ್ರೇಣಿ- ವೇತನ ಸೌಲಭ್ಯಗಳನ್ನು ಅಕ್ಟೋಬರ್ 1 ರಿಂದ ಜಾರಿಗೊಳಿಸಲು ಸರ್ಕಾರ ಆದೇಶ ನೀಡಿದೆ. ಆದರೆ ಇದಕ್ಕೆ ತಾಂತ್ರಿಕ ಕಾರಣಗಳನ್ನು ಒಡ್ಡಿ ಕೆಎಂಎಫ್ ಹಾಗೂ ಒಕ್ಕೂಟಗಳು ಯಥಾವತ್ ಯೋಜನೆ ಜಾರಿ ಮಾಡಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಶನಿವಾರದಿಂದಲೇ ಕೆಎಂಎಫ್ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಲು ಕೆಎಂಎಫ್ ಅಧಿಕಾರಿ ಮತ್ತು ನೌಕರರ ಸಂಘ ಒಮ್ಮತದ ನಿರ್ಧಾರ ತೆಗೆದುಕೊಂಡಿದೆ.

ಒಂದು ವೇಳೆ ಅಧಿಕಾರಿಗಳು ಮತ್ತು ನೌಕರರು ಮುಷ್ಕರಕ್ಕೆ ನಡೆಸಿದರೆ ಕೆಎಂಎಫ್‌ ಉತ್ಪನ್ನಗಳ ಪೂರೈಕೆಯಲ್ಲಿ ದೊಡ್ಡಮಟ್ಟದ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದ್ದು ಇದರ ಬಿಸಿ ಜನಸಾಮಾಯರಿಗೂ ಮುಟ್ಟಲಿದೆ.

ಕೆಎಂಎಫ್ ನೌಕರರ ಸಂಘವು ರಾಜ್ಯಾದ್ಯಂತ ಸುಮಾರು 7,000 ಉದ್ಯೋಗಿಗಳನ್ನು ಹೊಂದಿದೆ, ಇದರಲ್ಲಿ 1,400 ಮಂದಿ ಉನ್ನತ ದರ್ಜೆಯ ಸಿಬ್ಬಂದಿಗಳು ಇದ್ದಾರೆ. ಓಮ್ದು ವೇಳೆ ವೇತನ ಹೆಚ್ಚಳವನ್ನು ಜಾರಿಗೊಳಿಸಿದರೆ, ಸರ್ಕಾರಕ್ಕೆ ತಿಂಗಳಿಗೆ ಸುಮಾರು 3 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಪ್ರಸ್ತುತ, ಸರ್ಕಾರವು ವೇತನ ಬಾಕಿಯನ್ನು ಬಿಡುಗಡೆ ಮಾಡಲು ಅನುಮತಿ ನೀಡಿಲ್ಲ ಎಂದು ಆಡಳಿತ ಮಂಡಳಿ ಭಾವಿಸಿಕೊಂಡಂತಿದೆ ಕೆಎಂಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಎಂಎಫ್ ಪ್ರತಿದಿನ ಸುಮಾರು 1 ಲಕ್ಷ ಲೀಟರ್ ಹಾಲನ್ನು ಗ್ರಾಹಕರಿಗೆ ಪೂರೈಸುತ್ತದೆ ಮತ್ತು 15 ಒಕ್ಕೂಟಗಳ ಮೂಲಕ ಹಾಲನ್ನು ಸಂಗ್ರಹಿಸುತ್ತದೆ.

ಆದರೆ ಈ ಮುಷ್ಕರದಿಂದಾಗಿ ರಾಜ್ಯದ ಹೈನು ಉದ್ಯಮಕ್ಕೆ ಭಾರೀ ಪೆಟ್ಟು ಬೀಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ರಾಜ್ಯದ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆ ನೆಚ್ಚಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಪ್ರತಿದಿನ ಲಕ್ಷಾಂತರ ಲೀಟರ್‌ ಹಾಲು ಶೇಖರಣೆಯಾಗುತ್ತಿದ್ದು, ಒಂದು ವೇಳೆ ಪೂರೈಕೆ ಹಾಗೂ ಸಂಗ್ರಹದಲ್ಲಿ ವ್ಯತ್ಯಯವಾದರೆ ಪರಿಸ್ಥಿತಿ ದುಸ್ತರವಾಗಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+