ಭಾರತದೊಂದಿಗೆ ಆಸ್ಟ್ರೇಲಿಯಾ ಜಂಟಿ ವ್ಯಾಪಾರ: ವ್ಯಾಪಾರ ಸಂಬಂಧ ಬಲಪಡಿಸಲು 16 ಮಿಲಿಯನ್ ಡಾಲರ್ ಹೂಡಿಕೆ..!

ತನ್ನ ವ್ಯಾಪಾರ ಹೂಡಿಕೆ ಸಂಬಂಧವನ್ನು ಭಾರತದೊಂದಿಗೆ ಗಟ್ಟಿಗೊಳಿಸುವ ಮನಸ್ಸು ಮಾಡಿರುವ ಆಸ್ಟ್ರೇಲಿಯ ಹೊಸದೊಂದು ನಿರ್ಧಾರ ಮಾಡಿದೆ. ಅದೇನೆಂದರೆಕ್ಯಾನ್‌ಬೆರಾ ಆಸ್ಟ್ರೇಲಿಯಾ-ಭಾರತ ವ್ಯಾಪಾರ ಮತ್ತು ಹೂಡಿಕೆ ವೇಗವರ್ಧಕ ನಿಧಿಯಲ್ಲಿ, ಆಸ್ಟ್ರೇಲಿಯಾ 16 ಮಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ. ಈ ಹೂಡಿಕೆಯ ಕಾರ್ಯತಂತ್ರವು ನಾಲ್ಕು ಪ್ರಮುಖ ಬೆಳವಣಿಗೆಯ ಸೂಪರ್‍‌ಹೈವೇಗಳನ್ನು ಕೇಂದ್ರಿಕರಿಸುತ್ತದೆ. ಅಂದರೆ ಈ ಹೂಡಿಕೆಯು ಶುದ್ಧ ಇಂಧನ, ಶಿಕ್ಷಣ ಮತ್ತು ಕೌಶಲ್ಯ, ಕೃಷಿ ವ್ಯವಹಾರ ಮತ್ತು ಪ್ರವಾಸೋದ್ಯಮದ ಮೇಲೆ ಕೇಂದ್ರೀಕರಿಸಿದ್ದಾಗಿದೆ. ಈ ಹೂಡಿಕೆಯಿಂದ ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ವ್ಯಾಪಾರ ಸಂಬಂಧ ವೃದ್ಧಿಗೊಳ್ಳುತ್ತದೆ. ಅಲ್ಲದೇ ಆರ್ಥಿಕ ಸಹಕಾರ ಮತ್ತು ಉದ್ಯೋಗ ಸೃಷ್ಟಿಯಲ್ಲೂ ಸಹ ಮಹತ್ವಪೂರ್ಣವಾದ ಪಾತ್ರ ವಹಿಸಲಿದೆ. ಭಾರತೀಯ-ಆಸ್ಟ್ರೇಲಿಯನ್ ಸಮುದಾಯಗಳು ಮತ್ತು ವ್ಯಾಪಾರಗಳೊಂದಿಗೆ ಸಹಯೋಗವನ್ನು ಬೆಳೆಸಲು ಕಾಳಜಿ ವಹಿಸುತ್ತದೆ.

ಇನ್ನು ಆಸ್ಟ್ರೇಲಿಯಾ ಪ್ರಧಾನಿ ಎಂಥೋನಿ ಅಲ್ಬನೇಸ್ ಈ ಬಗ್ಗೆ ಮಾತನಾಡಿದ್ದಾರೆ. ಭಾರತ ನಮ್ಮ ಪ್ರಮುಖ ಪಾಲುದಾರ ಆಗಬೇಕು. ಏಕೆಂದರೆ ನಮ್ಮ ವ್ಯಾಪಾರ ಸಂಪರ್ಕಗಳನ್ನು ವಿಭಿನ್ನಗೊಳಿಸಲು ನಾವು ಮುಂದಾಗಿದ್ದು, ಇದರಿಂ ಎಲ್ಲಾ ಆಸ್ಟ್ರೇಲಿಯನ್ ನಾಗರಿಕರ ಕಲ್ಯಾಣ ಹೆಚ್ಚುತ್ತದೆ. ಅಲ್ಲದೇ ಈ ಹೂಡಿಕೆಯ ಮಾರ್ಗ ನಮ್ಮನ್ನು ಭಾರತದೊಂದಿಗೆ ಬೆಸೆಯುತ್ತದೆ. ಅಲ್ಲದೇ ಭಾರತದೊಂದಿಗೆ ನಮ್ಮ ಸಂಪೂರ್ಣ ಶಕ್ತಿಯನ್ನು ಅರಿತುಕೊಳ್ಳಲು ನೆರವಾಗುತ್ತದೆ. ಇದು ಆಸ್ಟ್ರೇಲಿಯಾ ಆರ್ಥಿಕತೆ, ಉದ್ಯಮಗಳು ಮತ್ತು ಉದ್ಯೋಗಗಳಿಗೆ, ಮತ್ತು ನಮ್ಮ ಸಮೃದ್ಧಿಗೆ ಮಹತ್ವದ ಅನುಗ್ರಹವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಈ ಹೂಡಿಕೆಯಿಂದ ಆಗುವ ಪ್ರಯೋಜನಗಳೇನು ಎಂದು ನೋಡುವುದಾದರೆ.

 ಭಾರತದೊಂದಿಗೆ ಆಸ್ಟ್ರೇಲಿಯಾ ಜಂಟಿ ವ್ಯಾಪಾರ..!

1.ಭಾರತ-ಆಸ್ಟ್ರೇಲಿಯಾ ನಡುವೆ ಆರ್ಥಿಕ ಸಂಬಂಧ ವಿಸ್ತರಣೆ:

ಆಗಲೇ ಹೇಳಿದ ಹಾಗೆ ಆಸ್ಟ್ರೇಲಿಯಾವು ಭಾರತದೊಂದಿಗೆ ಆರ್ಥಿಕ ಸಂಬಂಧವನ್ನು ವಿಸ್ತರಿಸಲು ಹಾಗೂ ಬಲಾಡ್ಯಗೊಳಿಸಲು ಹೂಡಿಕೆ ಮಾಡುವ ಉದ್ದೇಶ ಹೊಂದಿದೆ. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆತಿಂದ, ಆಸ್ಟ್ರೇಲಿಯಾದ ವ್ಯವಹಾರಗಳು ಪ್ರಯೋಜನ ಪಡೆಯುತ್ತವೆ. ಇದರಿಂದ ಹೊಸ ವಾಣಿಜ್ಯ ಅವಕಾಶಗಳನ್ನು ಅರಿಯಲು ಮತ್ತು ಬಳಸಿಕೊಳ್ಳಲು ನೆರವಾಗುತ್ತದೆ. ಅಲ್ಲದೇ ವ್ಯಾಪಾರ ಮತ್ತು ಹೂಡಿಕೆ ಹೆಚ್ಚಾಗುವುದಲ್ಲದೇ ಎರಡೂ ರಾಷ್ಟ್ರಗಳ ಆರ್ಥಿಕ ಸ್ಥಿತಿಯೂ ಬಲಿಷ್ಠವಾಗುವ ನಿರೀಕ್ಷೆ ಇದೆ. ಈ ಯೋಜನೆಯಿಂದ ಆಸ್ಟ್ರೇಲಿಯಾದೊಂದಿಗೆ ಪಾಲುದಾರಿಕೆಯನ್ನು ವೈವಿಧ್ಯಗೊಳಿಸುವುದಕ್ಕೆ ಸಹಾಯವಾಗುತ್ತದೆ. ಅಲ್ಲದೇ

2. ಬಲಿಷ್ಠ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ನಿರ್ಮಾಣ

ಈ ಯೋಜನೆಯ ಸಹಯೋಗದಿಂದ ಆಸ್ಟ್ರೇಲಿಯಾದ ಪಾಲುದಾರಿಕೆ ಆಸಕ್ತಿ ವಿಶೇಷವಾಗಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಉತ್ತಮ ರೀತಿಯಲ್ಲಿ ಪ್ರಭಾವಗೊಳ್ಳುತ್ತದೆ. ಶಾಂತಿಯುತ, ಸ್ಥಿರ ಮತ್ತು ಸಮೃದ್ಧ ಪರಿಸರವನ್ನು ಹೆಚ್ಚಿಸಲು ಕೂಡ ಸಹಾಯಕವಾಗುತ್ತದೆ.

3. ಎರಡೂ ರಾಷ್ಟ್ರಗಳ ಸಮುದಾಯ ಬೆಳವಣಿಗೆ:

ಈ ಯೋಜನೆಯಿಂದ ಆಸ್ಟ್ರೇಲಿಯಾದ ಆರ್ಥಿಕ ಬೆಳವಣಿಗೆಯಲ್ಲಿ, ಭಾರತೀಯ ಅಸ್ಟ್ರೆಲಿಯನ್‌ ಎಷ್ಟರಮಟ್ಟಿಗೆ ಮಹತ್ವಪೂರ್ಣವಾದ ಪಾತ್ರ ನಿರ್ವಹಿಸಿದೆ ಎಂದು ವಿವರಿಸುತ್ತದೆ. ಆಸ್ಟ್ರೇಲಿಯಾದ ಶ್ರೀಮಂತಿಕೆ ಹಾಗೂ ಭಾರತದ ವೈವಿಧ್ಯತೆ ಹೊಂದಿರುವ ಸಮುದಾಯದ ಪಾತ್ರವನ್ನು ಎತ್ತಿ ತೋರಿಸಿದ್ದಾರೆ. ಫಾರೆಲ್ ಅವರ ಮಾತಿನ ಪ್ರಕಾರ ಆಸ್ಟ್ರೇಲಿಯಾದ ನಂಟು ಭಾರತೊಂದಿಗೆ ಬಹುತೇಕ ಹೆಚ್ಚಾಗಿದೆ. ಇದರಿಂದ 1.4 ಶತಕೋಟಿಗಿಂತ ಹೆಚ್ಚುವರಿಯಾಗಿ ಜನರಿರುವ, ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯನ್ನು ತೆರೆಯಲು ಪೂರಕವಾಗಿದೆ ಎನ್ನಲಾಗುತ್ತಿದೆ. ಹಾಗೆಯೇ ಆಸ್ಟ್ರೇಲಿಯಾದ ವ್ಯವಹಾರಗಳಿಗೆ ಈ ಅಪರೂಪದ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳುವ ಒಂದು ನೀಲನಕ್ಷೆಯನ್ನ ಒದಗಿಸುತ್ತದೆ.

4. ಸಾಂಸ್ಕೃತಿಕ ಸಂಬಂಧ ಗಟ್ಟಿಗೊಳ್ಳುತ್ತದೆ:

ಈ ಹೂಡಿಕೆಯಿಂದ ಆರ್ಥಿಕವಾಗಿ ಬಲಿಷ್ಠರಾಗುವುದಲ್ಲದೇ ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ ಸಂಬಂಧ ಹೆಚ್ಚಿಸುತ್ತದೆ. ಈ ಮೂಲಕ ದೇಶಾಂತರ ಸ್ನೇಹ ಮತ್ತು ಸಂಸ್ಕೃತಿ, ವ್ಯಾಪಾರ ಮತ್ತು ಸಾಮೂಹಿಕ ಸಹಕಾರವನ್ನು ಉತ್ತೇಜಿಸಲು ಆಸ್ಟ್ರೇಲಿಯಾ ಪ್ರಯತ್ನ ಮಾಡುತ್ತಿದೆ. ಇದರಿಂದ ವಿವಿಧ ಸಾಂಸ್ಕೃತಿಕ, ವ್ಯವಹಾರಿಕ ವಿನಿಮಯಗಳ ಮೂಲಕ ಸಮೃದ್ಧ ಸಹಕಾರ ಸಾಧ್ಯವಾಗಲಿದೆ.

5. ಹೊಸ ಅವಕಾಶಗಳಿಗೆ ಉತ್ತೇಜನ:

ಈ ಹೂಡಿಕೆಯಿಂದ ಹೊಸ ವಾಣಿಜ್ಯ ಅವಕಾಶಗಳು ದೊರಕುತ್ತವೆ. ಈಗಾಗಲೇ ಈ ಹೂಡಿಕೆ ಒಪ್ಪಂದದಿಂದ ಆಸ್ಟ್ರೇಲಿಯಾದ ವ್ಯವಹಾರಗಳಿಗೆ ನೂರಾರು ಮಿಲಿಯನ್ ಡಾಲರ್‌ಗಳ ಉಳಿತಾಯವಾಗಿದೆ. ಅಲ್ಲದೇ ಈ ಹೂಡಿಕೆಯಿಂದಲೇ, ವರ್ಷಾಂತ್ಯದಲ್ಲಿ ರಫ್ತುದಾರರಿಗೆ ಸುಮಾರು 2 ಬಿಲಿಯನ್ ಡಾಲರ್‌ಗಳ ಸುಂಕ ಉಳಿತಾಯವಾಗುವ ನಿರೀಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+