ಆರ್ಥಿಕ ಬೆಳೆವಣಿಗೆಯು ಭಾರತದಲ್ಲಿ ಈಗಾಗಲೇ ಶೀಘ್ರವಾಗಿ ಸಾಗುತ್ತಿದೆ. ನವೆಂಬರ್‌ನಲ್ಲಿ ಭಾರತದಲ್ಲಿ ಆಟೋಮೊಬೈಲ್ ರಿಟೇಲ್ ಮಾರಾಟವು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದೆ. ಪ್ರಯಾಣಿಕ ವಾಹನ ಮತ್ತು ದ್ವಿಚಕ್ರ ವಾಹನ ವಿಭಾಗಗಳಲ್ಲಿ ಅತೀ ಅಧಿಕ ಏರಿಕೆ ಕಂಡು ಬಂದಿದೆ ಎಂದು ವಿತರಕರ ಸಂಸ್ಥೆ ಎಫ್‌ಎಡಿಎ ತಿಳಿಸಿದೆ.
ಒಟ್ಟಾರೆಯಾಗಿ ರಿಟೇಲ್ ಮಾರಾಟವು ಕಳೆದ ತಿಂಗಳು 28,54,242 ಯುನಿಟ್‌ಗಳಷ್ಟಿತ್ತು, ನವೆಂಬರ್ 2022 ರಲ್ಲಿ 24,09,535 ಯುನಿಟ್‌ಗಳಿಗಿಂತ ಶೇಕಡ 18 ರಷ್ಟು ಹೆಚ್ಚಾಗಿದೆ. ಪ್ರಯಾಣಿಕ ವಾಹನ (ಪಿವಿ) ರಿಟೇಲ್ ಮಾರಾಟವು 3,07,550 ಯುನಿಟ್‌ಗಳಿಂದ 3,60,431 ಯುನಿಟ್‌ಗೆ ಜಿಗಿದು ಶೇಕಡ 17ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಅದೇ ರೀತಿ, ಕಳೆದ ವರ್ಷ ನವೆಂಬರ್‌ನಲ್ಲಿ 18,56,108 ಯುನಿಟ್‌ನಷ್ಟು ಮಾರಾಟವಾಗಿದ್ದ ಪ್ರಯಾಣಿಕ ವಾಹನ (ಪಿವಿ) 22,47,366 ಯುನಿಟ್‌ಗಳಿಗೆ ಏರಿಕೆಯಾಗಿದೆ. "28.54 ಲಕ್ಷ ವಾಹನಗಳನ್ನು ಮಾರಾಟ ಮಾಡಲಾಗಿದ್ದು, ನವೆಂಬರ್ 2023 ಭಾರತೀಯ ವಾಹನ ರಿಟೇಲ್ ಉದ್ಯಮಕ್ಕೆ ಐತಿಹಾಸಿಕ ತಿಂಗಳಾಗಿದೆ.
ದ್ವಿಚಕ್ರ ವಾಹನ ವಿಭಾಗದಲ್ಲಿ 22.47 ಲಕ್ಷ ವಾಹನಗಳ ಮಾರಾಟವಾಗಿದೆ. ಮಾರ್ಚ್ 2020 ಕ್ಕೆ ಹೋಲಿಕೆ ಮಾಡಿದರೆ ಇದು 1.77 ಲಕ್ಷ ವಾಹನಗಳ ಗರಿಷ್ಠಮಟ್ಟಕ್ಕೆ ಏರಿಕೆಯಾಗಿದೆ. ಪ್ರಯಾಣಿಕ ವಾಹನ ವಿಭಾಗವು 3.6 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ. ತ್ರಿಚಕ್ರ ವಾಹನಗಳ ರಿಟೇಲ್ ಮಾರಾಟವು ಕಳೆದ ತಿಂಗಳು 99,890 ಯುನಿಟ್‌ಗಳಿಗೆ ಏರಿಕೆಯಾಗಿದೆ. ನವೆಂಬರ್ 2022 ರಿಂದ ಶೇಕಡ 23 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
ಸೆಪ್ಟೆಂಬರ್‌ನಲ್ಲಿ ತ್ರಿಚಕ್ರ ವಾಹನಗಳ ವಿಭಾಗದಲ್ಲಿ ಹೊಸ ದಾಖಲೆ
ತ್ರಿಚಕ್ರ ವಾಹನಗಳ ವಿಭಾಗದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಈ ವಿಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟ ವೇಗವನ್ನು ಕಂಡಿದೆ. ಸಾರ್ವಕಾಲಿಕ ರಿಟೇಲ್ ಮಾರಾಟ ಕಂಡು ಬಂದಿದೆ. ಸೆಪ್ಟೆಂಬರ್ 2022 ರಲ್ಲಿ 68,937 ಯುನಿಟ್‌ಗಳಷ್ಟು ತ್ರಿಚಕ್ರ ವಾಹನಗಳ ಮಾರಾಟವಾಗಿದೆ.
ನಾವು ಈ ಹಿಂದಿನ ವರ್ಷದ ಮಾರಾಟ ಪ್ರಮಾಣಕ್ಕೆ ಹೋಲಿಕೆ ಮಾಡಿದಾಗ ಈ ವರ್ಷದ ಸೆಪ್ಟೆಂಬರ್‌ನಲ್ಲಿ ತ್ರಿಚಕ್ರ ವಾಹನಗಳ ಮಾರಾಟವು 102,426 ಯುನಿಟ್‌ಗಳಿಗೆ ತಲುಪಿದ್ದು, ಸುಮಾರು ಶೇಕಡ 48.58 ರಷ್ಟು ಬೆಳವಣಿಗೆಯಾಗಿದೆ. ಇನ್ನು ತಿಂಗಳಿನಿಂದ ತಿಂಗಳಿಗೆ ಶೇಕಡ 5 ರಷ್ಟು ಬೆಳವಣಿಗೆ ಕಂಡಿದೆ. 1 ಲಕ್ಷ ಯುನಿಟ್ ಗಡಿ ದಾಟಿದೆ.
ಪ್ರಯಾಣಿಕ ವಾಹನಗಳ (ಪಿವಿ) ವಿಭಾಗವು ಸೆಪ್ಟೆಂಬರ್ 2023 ರಲ್ಲಿ 332,248 ಯೂನಿಟ್‌ಗಳಿಗೆ ಅಂದರೆ ಶೇಕಡ 19.03 ರಷ್ಟು ಏರಿಕೆಯಾಗಿದೆ. ಹಿಂದಿನ ವರ್ಷದ ಅದೇ ಅವಧಿಯಲ್ಲಿ 279,137 ಯುನಿಟ್‌ಗಳಷ್ಟು ಮಾರಾಟವಾಗಿದೆ. ಇನ್ನು ವಾಣಿಜ್ಯ ವಾಹನಗಳ (ಸಿವಿ) ಮಾರಾಟವು ಸೆಪ್ಟೆಂಬರ್ 2023 ರಲ್ಲಿ 80,804 ಯುನಿಟ್ ಆಗಿದ್ದು, ಸೆಪ್ಟೆಂಬರ್ 2022 ರಲ್ಲಿ 77,054 ಮಾರಾಟವಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications