ಆಕ್ಸಿಕ್ ಬ್ಯಾಂಕ್ ವಿಸ್ತಾರಾ ಕ್ರೆಡಿಟ್ ಕಾರ್ಡ್ ಹೊಂದಿರುವವರು ಇದನ್ನು ಓದಲೇಬೇಕು. ಏಕೆಂದರೆ ಆಕ್ಸಿಕ್ ಬ್ಯಾಂಕ್ ವಿಸ್ತಾರಾ ಕ್ರೆಡಿಟ್ ಕಾರ್ಡ್ ಒಂದಷ್ಟು ಮಹತ್ವದ ಬದಲಾವಣೆಯನ್ನು ಹೊತ್ತು ಬರುತ್ತಿದೆ. ಅಂದರೆ ಮುಂಬರುವ ಏಪ್ರಿಲ್ 18ರಿಂದ ಕ್ರೆಡಿಟ್ ಕಾರ್ಡ್ ಹೊಸ ನಿಯಮಗಳು ಜಾರಿಗೆ ಬರುತ್ತಿವೆ. ಈ ಬದಲಾವಣೆಗಳು ಕ್ರೆಡಿಟ್ ಕಾರ್ಡ್ ಪ್ರಯೋಜನಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ.

ಹೌದು, ಆಕ್ಸಿಸ್ ಬ್ಯಾಂಕ್ ತನ್ನ ವಿಸ್ತಾರಾ ಕ್ರೆಡಿಟ್ ಕಾರ್ಡ್‌ನ ನಿಯಮಗಳು ಹಾಗೂ ಪ್ರಯೋಜನಗಳಲ್ಲಿ, ಒಂದಷ್ಟು ಮಹತ್ವದ ಬದಲಾವಣೆಗಳನ್ನು ಪರಿಚಯಿಸಿದೆ. ಈ ಹೊಸ ನಿಯಮಗಳ ಪ್ರಕಾರ ಈ ಹೊಸ ಬದಲಾವಣೆಗಳು ಎಲ್ಲಾ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಅನ್ವಯವಾಗಲಿವೆ. ಈ ಬದಲಾವಣೆಯ ಭಾಗವಾಗಿ ಏನೆಲ್ಲಾ ಉಪಯೋಗಗಳಿವೆ ಎಂಬುದನ್ನು ಗ್ರಾಹಕರು ತಿಳಿದುಕೊಳ್ಳಲೇಬೇಕಾಗಿದೆ.
ಈ ಹೊಸ ಬದಲಾವಣೆಗಳ ಭಾಗವಾಗಿ ಆಕ್ಸಿಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ವಾರ್ಷಿಕ ಶುಲ್ಕವನ್ನು ಮನ್ನಾ ಮಾಡಿದೆ. ಆದರೆ ಇತ್ತ ಉಚಿತ ಮಹಾರಾಜ ಕ್ಲಬ್ ಶ್ರೇಣಿ ಸದಸ್ಯತ್ವಗಳು ಮತ್ತು ಉಚಿತ ಟಿಕೆಟ್ ವೋಚರ್‌ಗಳಂತಹ ಒಂದಷ್ಟು ವಿಶೇಷ ಪ್ರಯೋಜನಗಳನ್ನು ರದ್ದು ಮಾಡಲಾಗಿದೆ. ಆದರೆ ಗ್ರಾಹಕರು ಅರ್ಹ ವಹಿವಾಟುಗಳನ್ನು ನಡೆಸಿ ಮಹಾರಾಜ ಪಾಯಿಂಟ್ಸ್‌ಗಳನ್ನು ಪಡೆದುಕೊಳ್ಳಬಹುದು. ಅಂದರೆ ಲೌಂಜ್ ಪ್ರವೇಶ, ಊಟದ ರಿಯಾಯಿತಿಗಳು ಮತ್ತು ಗಾಲ್ಫ್ ಸವಲತ್ತುಗಳಂತಹ ವಿಶೇಷ ಸೇವೆಗಳನ್ನು ಪಡೆಯಲು ಮುಂದುವರಿಸಬಹುದಾಗಿದೆ.
ಪ್ರಮುಖ ಬದಲಾವಣೆಗಳು:
ವಾರ್ಷಿಕ ಶುಲ್ಕ ವಿನಾಯಿತಿ:
ಏಪ್ರಿಲ್ 18ರ ನಂತರ ಬರಲಾಗುವ ಬದಲಾವಣೆ ಪ್ರಕಾರ ನವೀಕರಿಸುವ ಗ್ರಾಹಕರಿಗೆ ವಾರ್ಷಿಕ ಶುಲ್ಕ ವಿಧಿಸಲಾಗುವುದಿಲ್ಲ. ಹಾಗೂ ಏಪ್ರಿಲ್ 18ಕ್ಕೂ ಮುನ್ನ ನವೀಕರಿಸುವ ಬಳಕೆದಾರರು ಹಳೆಯ ನಿಯಮಗಳ ಪ್ರಕಾರ ಪ್ರಕಾರ ವಾರ್ಷಿಕ ಶುಲ್ಕವನ್ನು ಪಾವತಿಸಬೇಕು.
ಆಯ್ದ ಪ್ರಯೋಜನಗಳ ಸ್ಥಗಿತ:
ಇನ್ನು ಆಕ್ಸಿಸ್ ಬ್ಯಾಂಕ್ ವಿಸ್ತಾರಾ ಕಾರ್ಡ್ ಬದಲಾವಣೆಯೊಂದಿಗೆ ಕೆಲವು ವಿಶೇಷ ಪ್ರಯೋಜನಗಳನ್ನು ರದ್ದುಗೊಳಿಸಲಾಗಿದೆ. ಅಂದರೆ ಉಚಿತ ಮಹಾರಾಜ ಕ್ಲಬ್ ಸದಸ್ಯತ್ವಗಳು, ನಿರ್ದಿಷ್ಟ ಖರ್ಚುಗಳ ಮೇರೆಗೆ ಲಭ್ಯವಿದ್ದ ಉಚಿತ ಟಿಕೆಟ್‌ಗಳು, ವಿಮಾನ ಪ್ರಯಾಣ ವರ್ಗ ನವೀಕರಣ ವೋಚರ್‍ನಂತಹ ಪ್ರಯೋಜನಗಳನ್ನು ರದ್ದುಗೊಳಿಸಲಾಗಿದೆ.
ಮಹಾರಾಜ ಪಾಯಿಂಟ್‌ಗಳ ನಿರ್ವಹಣೆ:
ಇನ್ನು ಗ್ರಾಹಕರಿಗೆ ಮಹಾರಾಜ್ ಪಾಯಿಂಟ್‌ಗಳು ಪಡೆಯುವಿಕೆಯನ್ನು ಮುಂದುವರಿಸಬೇಕೆಂದರೆ, ಏರ್ ಇಂಡಿಯಾ ಮಹಾರಾಜ ಕ್ಲಬ್ ಲಾಯಲ್ಟಿ ಪ್ರೋಗ್ರಾಂನ ನಿಯಮಗಳ ಪ್ರಕಾರ ಬಳಸಬಹುದಾಗಿದೆ. ಈ ಮಹಾರಾಜ ಪಾಯಿಂಟ್‌ಗಳ ಬಳಕೆಗೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳು ಏರ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ.
ಕ್ರೆಡಿಟ್ ಕಾರ್ಡ್ ಬಳಕೆ ಮತ್ತು ಅರ್ಹ ವಹಿವಾಟುಗಳು:
ಇನ್ನು ಆಕ್ಸಿಸ್ ಬ್ಯಾಂಕ್ ವಿಸ್ತಾರಾ ಕ್ರೆಡಿಟ್ ಕಾರ್ಡ್‌ದಾರರು, ಆನ್‌ಲೈನ್ ಮತ್ತು ಅಂಗಡಿಗಳಲ್ಲಿ, ದೇಶೀಯ ಹಾಗೂ ಅಂತರರಾಷ್ಟ್ರೀಯ ವಹಿವಾಟುಗಳಿಗಾಗಿ ತಮ್ಮ ಕ್ರೆಡಿಟ್ ಕಾರ್ಡ್ ಬಳಸಬಹುದಾಗಿದೆ. ಆದರೆ ಕೆಲವು ವಹಿವಾಟುಗಳು ಮಹಾರಾಜ ಪಾಯಿಂಟ್‌ಗಳನ್ನು ಪಡೆಯಲು ಅರ್ಹವಾಗಿರುವುದಿಲ್ಲ. ಅಂದರೆ ಬಾಡಿಗೆ ಪಾವತಿಗಳು, ವ್ಯಾಲೆಟ್ ಲೋಡ್ ವಹಿವಾಟುಗಳು, ಯುಟಿಲಿಟಿ ಬಿಲ್ ಪಾವತಿಗಳು, ಸರ್ಕಾರಿ ಸೇವೆಗಳ ಪಾವತಿಗಳು, ವಿಮಾ ಪ್ರೀಮಿಯಂ ಪಾವತಿಗಳು, ಚಿನ್ನ, ಬೆಳ್ಳಿ, ಅಮೂಲ್ಯ ಕಲ್ಲುಗಳು, ಲೋಹಗಳು ಮತ್ತು ಕೈಗಡಿಯಾರಗಳ ಖರೀದಿಗಳ ಮೇಲೆ ಮಹಾರಾಜ ಪಾಯಿಂಟ್‌ಗಳನ್ನು ಪಡೆಯಲಾಗುವುದಿಲ್ಲ.
ಆದರೆ ವಿಮಾನ ನಿಲ್ದಾಣದ ಲಾಂಜ್ ಪ್ರವೇಶ ಆಯ್ದ ಕಾರ್ಡ್ ವರ್ಗದ ಪ್ರಕಾರ ಲಭ್ಯವಿರುತ್ತದೆ. ಆಯ್ದ ಗಾಲ್ಫ್ ಕೋರ್ಸ್‌ಗಳಿಗೆ ಪ್ರವೇಶವಿರುತ್ತದೆ. ಹಾಗೆಯೇ ಪ್ರೀಮಿಯಂುದ ರೆಸ್ಟೋರೆಂಟ್‌ಗಳಲ್ಲಿ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಯಾಗದೇ ಮುಂದುವರಿಯುತ್ತದೆ.
ಇನ್ನು ಆಕ್ಸಿಸ್ ಬ್ಯಾಂಕ್ ವಿಸ್ತಾರಾ ಕ್ರೆಡಿಟ್ ಕಾರ್ಡ್‌ನ ಬದಲಾವಣೆಗಳು, ಗ್ರಾಹಕರ ಅನುಭವವನ್ನು ಸುಧಾರಿಸುವತ್ತ ಗಮನ ಹರಿಸಲು ಒಂದು ಹೆಜ್ಜೆ ಮುಂದೆ ಇಟ್ಟಿದೆ. ಅಂದರೆ ವಾರ್ಷಿಕ ಶುಲ್ಕ ವಿನಾಯಿತಿಯು ಖರ್ಚಿನ ಭಾರವನ್ನು ಕಡಿಮೆ ಮಾಡುವಾಗ, ಕೆಲವು ಪ್ರಯಾಣ-ಸಂಬಂಧಿತ ಸವಲತ್ತುಗಳ ಸ್ಥಗಿತದಿಂದ ಪ್ರಯಾಣಿಕರು ತಮ್ಮ ಲಾಭಗಳನ್ನು ಮೌಲ್ಯಮಾಪನ ಮಾಡಬೇಕಾಗಬಹುದು. ಆದರೆ, ಲೌಂಜ್ ಪ್ರವೇಶ, ಊಟದ ರಿಯಾಯಿತಿಗಳು ಮತ್ತು ಗಾಲ್ಫ್ ಸವಲತ್ತುಗಳಂತಹ ಪ್ರೀಮಿಯಂ ಸೇವೆಗಳು ಮುಂದುವರಿಯುವುದರಿಂದ ಗ್ರಾಹಕರು ಇನ್ನೂ ವಿಶಿಷ್ಟ ಅನುಭವವನ್ನು ಪಡೆಯಬಹುದು. ಈ ಬದಲಾವಣೆಗಳ ಪ್ರಭಾವವನ್ನು ಅರಿತು, ನಿಮ್ಮ ಖರ್ಚು ಮತ್ತು ಪ್ರಯೋಜನಗಳನ್ನು ಸಮರ್ಥವಾಗಿ ನಿರ್ವಹಿಸುವುದು ಒಳ್ಳೆಯ ಆಯ್ಕೆಯಾಗಿರುತ್ತದೆ. ಹೀಗಾಗಿಯೇ ಆಕ್ಸಿಸ್ ಬ್ಯಾಂಕ್ ವಿಸ್ತಾರಾ ಕ್ರೆಡಿಟ್ ಕಾರ್ಡ್‌ನಲ್ಲಿ ಈ ಮಹತ್ವದ ಬದಲಾವಣೆಯನ್ನು ತರಲಾಗಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications