500 ವರ್ಷಗಳ ಹೋರಾಟ, ಹಲವಾರು ಗಲಭೆಗಳ ಬಳಿಕ ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ರಾಮಲಲ್ಲಾ ಪ್ರತಿಷ್ಠಾಪನೆ ಮಾಡಲಾಯಿತು. 2024, ಜನವರಿ 22 ರಲ್ಲಿ ಭವ್ಯವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ದೇಗುಲವನ್ನು ಉದ್ಘಾಟಿಸಲಾಯಿತು. ಆ ಸಂದರ್ಭದಲ್ಲಿ ಸಹಸ್ರಾರು ಭಕ್ತರು, ರಾಮನ ದರ್ಶನವನ್ನು ಪಡೆಯಲು ಅಯೋಧ್ಯೆಗೆ ಭಾಗವಹಿಸಿದ್ದರು. ಇದೀಗ ರಾಮಲಲ್ಲಾ ಪ್ರತಿಷ್ಠಾಪನೆಯಾಗಿ 2 ವರ್ಷ ಪೂರ್ಣವಾಗುತ್ತಿದೆ. ಈ ಮಧ್ಯೆ ಕರ್ನಾಟಕ ಮೂಲಕ ಬೆಂಗಳೂರಿನ ಕಲಾವಿದೆ ಜಯಶ್ರೀ ಫಣೀಶ್ ಎಂಬವರು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ 20 ರಿಂದ 30 ಕೋಟಿ ರೂ. ಮೌಲ್ಯದ ಚಿನ್ನದ ರಾಮನ ಮೂರ್ತಿಯನ್ನು ದೇಣಿಗೆಯಾಗಿ ನೀಡಿದ್ದಾರೆ.

ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಎರಡನೇ ವಾರ್ಷಿಕೋತ್ಸವಕ್ಕೆ ಸಜ್ಜಾಗುತ್ತಿದ್ದಂತೆ, ಚಿನ್ನ, ಬೆಳ್ಳಿ, ವಜ್ರಗಳು ಹಾಗೂ ಅಮೂಲ್ಯ ಕಲ್ಲುಗಳಿಂದ ನಿರ್ಮಿಸಿದ ಭವ್ಯ ವಿಗ್ರಹವೊಂದು ದೇಣಿಗೆಯಾಗಿ ತಲುಪಿದೆ. 10 ಅಡಿ ಎತ್ತರ, 8 ಅಡಿ ಅಗಲ ಮತ್ತು 500 ಕೆಜಿ ತೂಕದ ಈ ವಿಗ್ರಹವು ಸದ್ಯ ಭಾರೀ ಗಮನ ಸೆಳೆಯುತ್ತಿದೆ.
ಇನ್ನು ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ.ಅನಿಲ್ ಮಿಶ್ರಾ ಅವರು ಮಾತನಾಡಿದ್ದು, ಕರ್ನಾಟಕದ ಕಲಾವಿದೆ ಜಯಶ್ರೀ ಫಣೀಶ್ ಎಂಬ ಭಕ್ತರೊಬ್ಬರು ಸುಮಾರು ₹25-30 ಕೋಟಿ ಮೌಲ್ಯದ ಈ ರಾಮ ವಿಗ್ರಹವನ್ನು ಆಯೋಧ್ಯೆಯ ರಾಮಮಂದಿರಕ್ಕೆ ಕಾಣಿಕೆಯಾಗಿ ನೀಡಿದ್ದಾರೆ. ಚಿನ್ನ, ಬೆಳ್ಳಿ, ವಜ್ರಗಳು, ಪಚ್ಚೆ, ನೀಲಮಣಿ ರತ್ನಗಳು ಮತ್ತು ಇತರ ಅಮೂಲ್ಯ ಕಲ್ಲುಗಳಿಂದ ನಿರ್ಮಾಣವಾಗಿರುವ ಇದು ದಕ್ಷಿಣ ಭಾರತದ ಶಿಲ್ಪಕಲಾ ಪರಂಪರೆಯನ್ನು ಎತ್ತಿ ತೋರಿಸುತ್ತದೆ.
10 ಅಡಿ ಎತ್ತರ ಮತ್ತು ಸುಮಾರು 8 ಅಡಿ ಅಗಲದ ಈ ವಿಗ್ರಹವು ಬರೋಬ್ಬರಿ 500 ಕೆಜಿ (5 ಕ್ವಿಂಟಾಲ್) ತೂಕವಿದೆ ಎಂದು ಹೇಳಲಾಗಿದೆ. ವಿಗ್ರಹದ ಪರಿಶೀಲನೆ ನಡೆಸಿದ ತಜ್ಞರು, ಇದರಲ್ಲಿ ಬಳಸಿರುವ ಲೋಹಗಳು ಮತ್ತು ರತ್ನಗಳ ಬಗ್ಗೆಯೂ ನಿಖರವಾಗಿ ಗುರುತಿಸಿದ್ದಾರೆ. ಇನ್ನು ಈ ವಿಗ್ರಹವು ಮಂಗಳವಾರ ಸಂಜೆ ಅಯೋಧ್ಯೆ ತಲುಪಿದೆ ಎನ್ನಲಾಗಿದೆ.
ಡಿಸೆಂಬರ್ 29 ರಿಂದ ಜನವರಿ 2ರ ನಡುವೆ ನಡೆಯಲಿರುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಎರಡನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಇದನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಗ್ರಹದ ಸ್ಥಾಪನೆಗೂ ಮೊದಲು ಎಲ್ಲಾ ತಾಂತ್ರಿಕ ಹಾಗೂ ಶಾಸ್ತ್ರಗಳ ವಿವರಗಳನ್ನು ಪರಿಶೀಲಿಸುತ್ತಿದೆ.
ಈ ಭವ್ಯ ವಿಗ್ರಹವನ್ನು ಮಂದಿರ ಆವರಣದಲ್ಲಿರುವ ಸಂತ ತುಳಸಿದಾಸ ದೇವಾಲಯದ ಸಮೀಪದ ಅಂಗದ್ ಟೀಲಾ ಎಂಬ ಸ್ಥಳದಲ್ಲಿ ಇಡುವ ಸಾಧ್ಯತೆ ಹೆಚ್ಚಿದೆ. ಅನಾವರಣ ಸಮಾರಂಭದ ನಂತರ ದೇಶದಾದ್ಯಂತದ ಸಂತರು ಮತ್ತು ಋಷಿಮುನಿಗಳ ಭಾಗವಹಿಸುವಿಕೆಯೊಂದಿಗೆ ಮಹಾಮಸ್ತಕಾಭಿಷೇಕ ಶಾಸ್ತ್ರ ಕೂಡಾ ನಡೆಯಲಿದೆ.
ಇನ್ನು ಜಯಶ್ರೀ ಫಣೀಶ್ ಇದೇ ಮೊದಲಲ್ಲ, ಈ ಹಿಂದೆಯೂ ದೇಶಾದ್ಯಂತ ಹಲವು ದೇವಾಲಯಗಳಿಗೆ ಇದೇ ರೀತಿಯ ಕಲಾಕೃತಿಯಗಳನ್ನು ಸ್ವಯಂಪ್ರೇರಿತವಾಗಿ ದೇಣಿಗೆಯಾಗಿ ನೀಡಿದ್ದಾರೆ. ಈ ಬಾರಿ ಅಯೋಧ್ಯೆ ರಾಮ ಮಂದಿರಕ್ಕೂ ರಾಮನ ವಿಗ್ರಹವನ್ನು ಕಾಣಿಕೆಯಾಗಿ ನೀಡಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications