ದೇವಾಲಯದ ಪಟ್ಟಣವಾದ ಅಯೋಧ್ಯೆಯಲ್ಲಿ ದೇಶದ ಮೊದಲ 7 ಸ್ಟಾರ್ ಐಷಾರಾಮಿ ಹೋಟೆಲ್ ಅನ್ನು ಆರಂಭ ಮಾಡಲಾಗುತ್ತದೆ. ಅದು ಸಸ್ಯಾಹಾರಿ ಆಹಾರವನ್ನು ಮಾತ್ರ ಪೂರೈಸುವ ಹೋಟೆಲ್ ಇದಾಗಲಿದೆ. ಈ ನಗರದಲ್ಲಿಯೇ ಮುಂದಿನ ಸೋಮವಾರ ಭವ್ಯವಾದ ರಾಮಮಂದಿರವನ್ನು ತೆರೆಯಲಾಗುತ್ತದೆ.
ಮುಂಬೈ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯು ಅಯೋಧ್ಯೆಯಲ್ಲಿ ಪಂಚತಾರಾ ಹೋಟೆಲ್ ಅನ್ನು ಸಹ ಸ್ಥಾಪಿಸಲಿದೆ. ಜನವರಿ 22 ರಿಂದ ವಸತಿ ಯೋಜನೆಗೆ ಚಾಲನೆ ನೀಡಲಾಗುವುದು. ದೇವಸ್ಥಾನದಲ್ಲಿ ಮಹಾಮಸ್ತಕಾಭಿಷೇಕ ಜನವರಿ 22ರಂದೇ ನಡೆಯಲಿದೆ.

ದೇವಾಲಯದ ಉದ್ಘಾಟನೆ ಆಗುತ್ತಿರುವಂತೆ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿದೆ. ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಹೋಟೆಲ್‌ಗಳು ಮತ್ತು ವಸತಿ ಯೋಜನೆಗಳನ್ನು ಕೂಡಾ ಕೈಗೊಳ್ಳಲಾಗುತ್ತಿದೆ.
ಮುಂಬೈ, ದೆಹಲಿ ಮತ್ತು ಇತರ ಪ್ರಮುಖ ನಗರಗಳನ್ನು ಸಂಪರ್ಕಿಸುವ ಹೊಸ ವಿಮಾನ ನಿಲ್ದಾಣ ಮತ್ತು ನವೀಕರಿಸಿದ ರೈಲು ನಿಲ್ದಾಣವು ಈಗಾಗಲೇ ನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಶುಕ್ರವಾರದಿಂದ ಲಕ್ನೋದಿಂದ ಹೆಲಿಕಾಪ್ಟರ್ ಸೇವೆ ಆರಂಭವಾಗಲಿದೆ.
ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರು ದೇವಸ್ಥಾನದಿಂದ ಸುಮಾರು 15 ನಿಮಿಷಗಳ ಐಷಾರಾಮಿ ಎಕ್ಸ್‌ಕ್ಲೇವ್ 'ದಿ ಸರಯು' ನಲ್ಲಿ ಭೂಮಿಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.
ಮುಂಬೈ ಮೂಲದ ಡೆವಲಪರ್ ದಿ ಹೌಸ್ ಆಫ್ ಅಭಿನಂದನ್ ಲೋಧಾ (HoABL) ಪ್ಲಾಟ್‌ನ ಗಾತ್ರ ಮತ್ತು ಮೌಲ್ಯವನ್ನು ಬಹಿರಂಗಪಡಿಸಿಲ್ಲ. ಆದರೆ ಉದ್ಯಮದ ಮೂಲಗಳು ಇದು ಸುಮಾರು 10,000 ಚದರ ಅಡಿ ಮತ್ತು 14.5 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇದಲ್ಲದೆ, ಸರಯೂ ನದಿಯ ದಡದಲ್ಲಿ ಹಲವಾರು ಪಂಚತಾರಾ ಹೋಟೆಲ್‌ಗಳು ಬರಲಿವೆ. ಸುಮಾರು 110 ಸಣ್ಣ ಮತ್ತು ದೊಡ್ಡ ಹೋಟೆಲ್ ಉದ್ಯಮಿಗಳು ಅಯೋಧ್ಯೆಯಲ್ಲಿ ತಮ್ಮ ಹೋಟೆಲ್‌ಗಳನ್ನು ಆರಂಭಿಸಲು ಭೂಮಿಯನ್ನು ಖರೀದಿಸುತ್ತಿದ್ದಾರೆ. ಇಲ್ಲಿ ಸೋಲಾರ್ ಪಾರ್ಕ್ ಕೂಡ ನಿರ್ಮಾಣವಾಗುತ್ತಿದೆ.
ಅಯೋಧ್ಯೆಯನ್ನು ಸ್ಮಾರ್ಟ್ ಸಿಟಿಯನ್ನಾಗಿಯೂ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹಿಂದಿನ ರಾಜಮನೆತನದ ಮತ್ತು ದೇವಾಲಯದ ಟ್ರಸ್ಟ್‌ನ ಸದಸ್ಯ ಬಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಈ ಹಿಂದೆ ಎನ್‌ಡಿಟಿವಿಗೆ ತಿಳಿಸಿದ್ದರು.


Click it and Unblock the Notifications