ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯೂ ದೇಶದ ಆರೋಗ್ಯ ಸೇವೆಗಳಲ್ಲಿ ಬಹು ದೊಡ್ಡ ಬದಲಾವಣೆ ತಂದಿದೆ. ಈ ಯೋಜನೆಯ ಉದ್ದೇಶ ಭಾರತದ ಪ್ರತಿಯೊಬ್ಬ ವ್ಯಕ್ತಿಗೆ ಆರೋಗ್ಯ ವಿಮೆಯನ್ನು ಒದಗಿಸುವ ಬಹು ದೊಡ್ಡ ಕಾರ್ಯಕ್ರಮವಾಗಿದೆ. ಸರ್ಕಾರದ ಈ ಆರೋಗ್ಯ ಯೋಜನೆಯ ಅಡಿಯಲ್ಲಿ 5 ಲಕ್ಷ ರೂಪಾಯಿವರೆಗೂ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಈ ಯೋಜನೆಗೆ ಸಂಬಂಧಪಟ್ಟಂತೆ ಸರ್ಕಾರ ಸೆಪ್ಟಂಬರ್ ನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದು, 70 ವರ್ಷ ಮೇಲ್ಪಟ್ಟ ಎಲ್ಲಾ ವೃದ್ಧರು ಸಹ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವ ಸಂಪುಟ ತೀರ್ಮಾನಿಸಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ (ABHA) ID ಕಾರ್ಡ್ ಇದ್ದರೆ ಅಂತಹ ವ್ಯಕ್ತಿಗಳು 5 ಲಕ್ಷದವರೆಗೆ ಆರೋಗ್ಯ ವಿಮೆ ಪಡೆಯಲಿದ್ದಾರೆ.
ಮತ್ತೊಂದು ಸಂತಸದ ಸುದ್ದಿ ಎಂದರೆ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ (ABHA) ID ಕಾರ್ಡ್ ಅನ್ನು Google Wallet ನಲ್ಲಿ ಲಭ್ಯವಾಗುವ ದಿನ ಶೀಘ್ರ ಬರಲಿದೆ. ಹೌದು ಇದಕ್ಕಾಗಿ ಭಾರತ ಸರ್ಕಾರ ಯೋಜನೆ ಹಾಕಿಕೊಂಡಿದ್ದು ಎಲ್ಲವೂ ಅಂದುಕೊಂಡರೆ ನಡೆದರೆ 2025 ರಲ್ಲಿ, ನಿಮ್ಮ ABHA ID ಅಥವಾ ಆಯುಷ್ಮಾನ್ ಕಾರ್ಡ್ ಗೂಗಲ್ ವ್ಯಾಲೆಟ್ ನಲ್ಲಿ ಲಭ್ಯವಾಗಲಿದೆ.

ಭಾರತದ ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿ ತರಲು, ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ಅನ್ನು ಮೇಲ್ವಿಚಾರಣೆ ಮಾಡುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA) ಮತ್ತು ಗೂಗಲ್ ನಡುವೆ ಒಂದು ಪ್ರಮುಖ ಪಾಲುದಾರಿಕೆ ರಚನೆಯಾಗಿದೆ. ಈ ಪಾಲುದಾರಿಕೆಯ ಮುಖ್ಯ ಉದ್ದೇಶ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅನ್ನು ಇನ್ನಷ್ಟು ಬಲಪಡಿಸುವುದಾಗಿದ್ದು, ಈ ಬಗ್ಗೆ ಟೆಕ್ ದೈತ್ಯ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬ್ಲಾಗ್ ಪೋಸ್ಟ್‌ನಲ್ಲಿ ಪ್ರಕಟಣೆಯನ್ನು ಮಾಡಿದೆ.
ಮೊದಲು ಆರು ತಿಂಗಳಲ್ಲಿ ಮಾಡಬೇಕಾಗಿದ್ದ ಕೆಲಸವನ್ನು ಈಗ ಎರಡು ವಾರಗಳಲ್ಲಿಯೇ ಮುಗಿಸಬಹುದು ಎಂದು ಗೂಗಲ್ ಹೇಳಿದೆ. ಮುಂದಿನ ವರ್ಷದಿಂದ, ನಮ್ಮ ಆರೋಗ್ಯ ಮಾಹಿತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಬಳಸುವ ABHA ID ಕಾರ್ಡ್‌ಗಳನ್ನು ಗೂಗಲ್ ವಾಲೆಟ್‌ನಲ್ಲಿ ಸಹ ನೋಡಬಹುದು ಎಂದು ಎಕಾ ಕೇರ್ ಮತ್ತು ಗೂಗಲ್ ಜೊತಾಗಿ ತಿಳಿಸಿವೆ."
"ಹಿಂದೆ ಆರು ತಿಂಗಳ ಕಾಲ ತೆಗೆದುಕೊಳ್ಳುತ್ತಿದ್ದ ಪ್ರಕ್ರಿಯೆಗಳನ್ನು ಈಗ ಎರಡು ವಾರಗಳೊಳಗೆ ಪೂರ್ಣಗೊಳಿಸಲು ಸಾಧ್ಯವಾಗಿದೆ. ಡಿಜಿಟಲ್ ಹೆಲ್ತ್ ಐಡಿಗಳ ಅಧಿಕೃತ ವಿತರಕ ಎಕಾ ಕೇರ್ ಸಹಭಾಗಿತ್ವದಲ್ಲಿ, ಗೂಗಲ್ ವಾಲೆಟ್‌ನಲ್ಲಿ ABHA ID ಕಾರ್ಡ್‌ಗಳನ್ನು ಮುಂದಿನ ವರ್ಷದಿಂದ ಲಭ್ಯವಾಗುವಂತೆ ಮಾಡಲಾಗುವುದು. ಇದು 600 ಮಿಲಿಯನ್‌ಗಿಂತಲೂ ಹೆಚ್ಚು ABHA ID ಹೊಂದಿರುವವರು ತಮ್ಮ ಕಾರ್ಡ್‌ಗಳನ್ನು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಸುಲಭವಾಗಿ ಶೇಖರಿಸಿರಿಸಿಕೊಳ್ಳಬಹುದಾಗಿದೆ" ಎಂದು ಗೂಗಲ್‌ನ ಪೋಸ್ಟ್ ನಲ್ಲಿ ತಿಳಿಸಿದೆ.
Google Wallet ನಲ್ಲಿ ABHA ಹೆಲ್ತ್ ಐಡಿ ಕಾರ್ಡ್: ಇದರ ಪ್ರಮುಖ ಉದ್ದೇಶವೇನು?
Google Wallet ಮತ್ತು ABHA (ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ) ಏಕೀಕರಣವು ಭಾರತದ ಆರೋಗ್ಯ ಕ್ಷೇತ್ರದಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಇದು ವ್ಯಕ್ತಿಗಳಿಗೆ ತಮ್ಮ ಆರೋಗ್ಯ ದಾಖಲೆಗಳನ್ನು ಸುಲಭವಾಗಿ ಪ್ರವೇಶಿಸಲು ಮತ್ತು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.ಎಲ್ಲಾ ವೈದ್ಯಕೀಯ ದಾಖಲೆಗಳು ಒಂದೇ ಸ್ಥಳದಲ್ಲಿ ಲಭ್ಯವಿರುವುದರಿಂದ, ರೋಗಿಗಳು ತಮ್ಮ ಆರೋಗ್ಯ ಇತಿಹಾಸ (Medical history)ವನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು. ಪ್ರತಿ ಬಾರಿ ಆಸ್ಪತ್ರೆಗೆ ಭೇಟಿ ನೀಡುವಾಗ ದಾಖಲೆಗಳನ್ನು ಹುಡುಕುವ ಅಗತ್ಯವಿರುವುದಿಲ್ಲ.
Google Wallet ಬಳಕೆದಾರರು ತಮ್ಮ ABHA ID ಅನ್ನು ಸೇರ್ಪಡೆ ಮಾಡುವಾಗ ಅಥವಾ ಬಳಸುವಾಗ ಫಿಂಗರ್‌ಪ್ರಿಂಟ್, PIN ಅಥವಾ ಪಾಸ್‌ಕೋಡ್ ಅನ್ನು ಬಳಸಿಕೊಂಡು ತಮ್ಮ ಸಾಧನಗಳನ್ನು ದೃಢೀಕರಿಸುವ ಅಗತ್ಯವಿದೆ. ಸೂಕ್ಷ್ಮವಾದ ಆರೋಗ್ಯ ಮಾಹಿತಿಯನ್ನು ರಕ್ಷಿಸುತ್ತದೆ.
ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಎಂದರೇನು?
ABHA ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ಅಡಿಯಲ್ಲಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಉಪಕ್ರಮವಾಗಿದೆ. ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಅವರ ಆರೋಗ್ಯ ಅಗತ್ಯಗಳನ್ನು ನಿರ್ವಹಿಸಲು ಸಹಾಯ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ABHA ಖಾತೆಯೊಂದಿಗೆ, ನಾಗರಿಕರು ತಮ್ಮ ವೈದ್ಯಕೀಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದು.
ABHA ಐಡಿ ರಚಿಸುವುದು ಹೇಗೆ?
ಇದನ್ನು ಮಾಡಲು, ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:
ABHA ವೆಬ್‌ಸೈಟ್‌ಗೆ ಭೇಟಿ ನೀಡಿ ಇಲ್ಲಿ 'Create ABHA number' ಆಯ್ಕೆ ಮಾಡಿ
ಗುರುತಿನ ಪುರಾವೆ: ನಿಮ್ಮ ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಅನ್ನು ಆಯ್ಕೆ ಮಾಡಿ.
ವಿವರಗಳನ್ನು ನಮೂದಿಸಿ: ಆಯ್ಕೆ ಮಾಡಿದ ಗುರುತಿನ ಪುರಾವೆಯ ಸಂಖ್ಯೆಯನ್ನು ಎಚ್ಚರಿಕೆಯಿಂದ ನಮೂದಿಸಿ.
ನೀವು ನಿಯಮಗಳನ್ನು ಒಪ್ಪುತ್ತೀರಿ ಎಂದು ಸೂಚಿಸುವ ಪೆಟ್ಟಿಗೆಯನ್ನು ಗುರುತಿಸಿ.(Agree to the terms)
OTP ಪರಿಶೀಲನೆ: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಅನ್ನು ನಮೂದಿಸಿ.
ಫಾರ್ಮ್ ಭರ್ತಿ ಮಾಡಿ: ನಿಮ್ಮ ವೈಯಕ್ತಿಕ ವಿವರಗಳನ್ನು ಸರಿಯಾಗಿ ನಮೂದಿಸಿ.ಫಾರ್ಮ್ ಅನ್ನು ಸಲ್ಲಿಸಿ.
ನಿಮ್ಮ ABHA ಐಡಿಯನ್ನು ಡೌನ್‌ಲೋಡ್ ಮಾಡಿ
ABHA ID ಹೊಂದುವುದರ ಹಲವು ಪ್ರಯೋಜನಗಳು
ನೀವು ABHA ID ಹೊಂದುವುದರಿಂದ ಹಲವಾರು ಪ್ರಯೋಜನಗಳಿವೆ:
ನಿಮ್ಮ ಆರೋಗ್ಯ ದಾಖಲೆಗಳನ್ನು ನೀವು ಡಿಜಿಟಲ್ ಆಗಿ ಸಂಗ್ರಹಿಸಬಹುದು ಮತ್ತು ಪ್ರವೇಶಿಸಬಹುದು
ಇದು ವಿಮೆ ಮತ್ತು ಸಾರ್ವಜನಿಕ ಆರೋಗ್ಯ ಯೋಜನೆ ಸೇರಿದಂತೆ ಎಲ್ಲಾ ಆರೋಗ್ಯ ಯೋಜನೆಗಳಿಗೆ ಲಿಂಕ್ ಆಗಿದೆ.
ABDM ABHA ಅಪ್ಲಿಕೇಶನ್‌ನಂತಹ ವೈಯಕ್ತಿಕ ಆರೋಗ್ಯ ದಾಖಲೆಗಳ (PHR) ಅಪ್ಲಿಕೇಶನ್‌ಗಳಿಗೆ ಸೈನ್ ಅಪ್ ಮಾಡಲು ABHA ಐಡಿ ನಿಮಗೆ ಅನುಮತಿಸುತ್ತದೆ. ಈ ಅಪ್ಲಿಕೇಶನ್‌ಗಳ ಮೂಲಕ ನೀವು ನಿಮ್ಮ ಆರೋಗ್ಯ ಡೇಟಾವನ್ನು ಇತರ ಆರೋಗ್ಯ ಪೂರೈಕೆದಾರರೊಂದಿಗೆ ಸುರಕ್ಷಿತವಾಗಿ ಹಂಚಿಕೊಳ್ಳಬಹುದು.
ಇದು ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಸೇರಿದಂತೆ ಎಲ್ಲಾ ಆಯುಷ್ ಚಿಕಿತ್ಸಾ ಕೇಂದ್ರಗಳಲ್ಲಿ ಮಾನ್ಯವಾಗಿದೆ.
ಇದು ನಿಮಗೆ ಆರೋಗ್ಯ ಸೇವೆಗಳಿಗಾಗಿ ಅನನ್ಯ ಗುರುತ(unique identity)ನ್ನು ಒದಗಿಸುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications