ಅಧಿಕಾರಕ್ಕೆ ಬಂದಂದಿನಿಂದ ಇಲ್ಲಿಯ ವರೆಗೆ ಹತ್ತು ಹಲವು ಯೋಜನೆಗಳನ್ನು ಪ್ರಕಟಿಸಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಯೋಜನೆಯನ್ನು ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಬಹುನಿರೀಕ್ಷಿತ ಆಯುಷ್ಮಾನ್ ಭಾರತ್ ವಂದನಾ ಆರೋಗ್ಯ ವಿಮೆಯನ್ನು ಘೋಷಿಸಿದ್ದಾರೆ.
ಇನ್ನು ಯೋಜನೆಯ ಲಾಭಾರ್ಥಿಗಳ ಆರ್ಥಿಕ ಹಿನ್ನೆಲೆಯನ್ನು ನೋಡದೆ 70 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಬಹು ನಿರೀಕ್ಷಿತ ಆಯುಷ್ಮಾನ್ ಭಾರತ್ ಆರೋಗ್ಯ ವಿಮೆಯನ್ನು ಪ್ರಾರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಕಟಿಸಿದ್ದಾರೆ.

ಇನ್ನು ಈ ಯೋಜನೆಯಡಿಯಲ್ಲಿ ಈ ಹಿರಿಯ ನಾಗರಿಕರು 5 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ. ಇನ್ನು ಈ ಯೋಜನೆಗೆ ಯಾವುದೇ ರೀತಿಯ ಆರ್ಥಿಕ ಹಿನ್ನೆಲೆಯ ಮಾನದಂಡ ಅನ್ವಯವಾಗುವುದಿಲ್ಲ.
ಹಾಗಾಗಿ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆಯೇ ಯೋಜನೆಯ ಲಾಭಾರ್ಥಿಗಳ ಆಧಾರ್ ಕಾರ್ಡ್‌ನಲ್ಲಿ ದಾಖಲಾಗಿರುವ ವಯಸ್ಸಿನಿಂದ ನಿರ್ಧರಿಸಲ್ಪಟ್ಟಂತೆ ವ್ಯಕ್ತಿಯು 70 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು ಎಂಬುದು ಏಕೈಕ ಅರ್ಹತೆಯ ಮಾನದಂಡವಾಗಿದೆ.
ಅರ್ಹ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಕಾರ್ಡ್‌ಗಳ ನೋಂದಣಿ ಮತ್ತು ವಿತರಣೆಗೆ ಆಧಾರ್ ಆಧಾರಿತ ಇ-ಕೆವೈಸಿ ಕಡ್ಡಾಯವಾಗಿದೆ. ಅದೂ ಅಲ್ಲದೆ AB PMJAY ಹಿರಿಯ ನಾಗರಿಕ ಯೋಜನೆಯಲ್ಲಿ ನೋಂದಣಿಗೆ ಅಗತ್ಯವಿರುವ ಏಕೈಕ ದಾಖಲೆ ಆಧಾರ್ ಆಗಿದೆ.
ಏನಿದು ಆಯುಷ್ಮಾನ್ ವೇ ವಂದನಾ ಕಾರ್ಡ್?
ಈಗಾಗಲೇ ಕೇಂದ್ರ ಸರ್ಕಾರ ಸಮಾಜದ ವಿವಿಧ ಸ್ತರಗಳ ನಾಗರಿಕರಿಗೆ ಹಲವು ಯೋಜನೆಗಳನ್ನು ಪ್ರಕಟಿಸಿದೆ. ಕೆಲವೊಂದು ಯೋಜನೆಯಲ್ಲಿ ನಾಗರಿಕರ ಆರ್ಥಿಕ ಹಿನ್ನೆಲೆಯ ಸ್ಥಿತಿಗತಿಗಳಿಗೆ ಅನುಸಾರವಾಗಿ ಯೋಜನೆ ಪ್ರಕಟಿಸಿದ್ದರೆ ಸದ್ಯ ಹೊರತಂದಿರುವ AB PMJAY ಅಂಥ ಯಾವುದೇ ಮಾನದಂಡವಿಲ್ಲದಿರುವುದು ನೆಮ್ಮದಿಯ ಸಂಗತಿ.
ಇನ್ನು ಆಯುಷ್ಮಾನ್ ವೇ ವಂದನಾ ಕಾರ್ಡ್ ಸಾರ್ವತ್ರಿಕವಾಗಿದ್ದು, ಆದಾಯದ ಮೇಲೆ ಯಾವುದೇ ನಿರ್ಬಂಧವಿಲ್ಲ. ಹಾಗಾಗಿ ಯೋಜನೆಯು ಬಡವ, ಮಧ್ಯಮ ವರ್ಗ ಅಥವಾ ಮೇಲ್ವರ್ಗದವರು ಎಂಬುದನ್ನು ನೋಡದೆ ಎಲ್ಲರೂ ಯೋಜನೆಯ ಭಾಗವಾಗಲಿದ್ದಾರೆ. ಇನ್ನು 70 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಹಿರಿಯ ನಾಗರಿಕರು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯುತ್ತಾರೆ. ಈ ಹಿರಿಯ ನಾಗರಿಕರಿಗೆ ಆಯುಷ್ಮಾನ್ ವಯ ವಂದನಾ ಕಾರ್ಡ್ ನೀಡಲಾಗುತ್ತದೆ.
ಉಚಿತ ಆಸ್ಪತ್ರೆ ಚಿಕಿತ್ಸೆ ನೀಡುವ ವಂದನಾ ಕಾರ್ಡ್ ಬಗ್ಗೆ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (NHA) ವೆಬ್‌ಸೈಟ್‌ನ ಪ್ರಕಾರ ಮೊಬೈಲ್‌ನಲ್ಲಿ ಆಯುಷ್ಮಾನ್ ವೇ ವಂದನಾ ಕಾರ್ಡ್ ಅನ್ನು ಹೇಗೆ ಡೌನ್ ಲೋಡ್ ಮಾಡಿಕೊಳ್ಳುವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಆರಂಭದಲ್ಲಿ ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುವಂತೆ ಆಯುಷ್ಮಾನ್ APP ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ. ಇನ್ನು ಫಲಾನುಭವಿಯಾಗಿ ಲಾಗಿನ್ ಅನ್ನು ಕ್ಲಿಕ್ ಮಾಡಿ, ಕ್ಯಾಪ್ಚಾ ನಮೂದಿಸಿ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ದೃಢೀಕರಣದ ಮೋಡ್ ಅನ್ನು ಆಯ್ಕೆ ಮಾಡಿ ಮತ್ತು ಕ್ಯಾಪ್ಚಾವನ್ನು ಮತ್ತೆ ನಮೂದಿಸಿ ಮತ್ತು ಲಾಗಿನ್ ಕ್ಲಿಕ್ ಮಾಡಬೇಕು.
ಮೂರನೇ ಹಂತದಲ್ಲಿ ಫಲಾನುಭವಿ ವಿವರಗಳು, ಆಧಾರ್ ಗೆ ಸಂಬಂಧಪಟ್ಟ ವಿವರಗಳನ್ನು ಭರ್ತಿ ಮಾಡಬೇಕು. ಒಂದು ವೇಳೆ ಫಲಾನುಭವಿ ಪತ್ತೆಯಾಗದಿದ್ದರೆ, eKYC ಗಾಗಿ ಪ್ರಕ್ರಿಯೆಯನ್ನು ಅನುಸರಿಸಿ. OTP ಪಡೆದುಕೊಳ್ಳಿ. ಐದನೇ ಹಂತದಲ್ಲಿ ಅನ್ವಯವಾಗುವಂತೆ ಘೋಷಣೆ ನೀಡಿ, ಫೋಟೋ ಒದಗಿಸಿ, ಅಲ್ಲದೆ ಎಲ್ಲಾ ಸೇರ್ಪಡೆಗಳನ್ನು ಭರ್ತಿ ಮಾಡಿಬಿಡಿ.
ಆರನೇ ಹಂತದಲ್ಲಿ ಫಲಾನುಭವಿಯ ಮೊಬೈಲ್ ಸಂಖ್ಯೆ ಮತ್ತು OTP ಅನ್ನು ನಮೂದಿಸಿ, ಬಳಿಕ ವರ್ಗ, ಪಿನ್ ಕೋಡ್‌ನಂತಹ ಫಲಾನುಭವಿಯ ವಿವರಗಳನ್ನು ಭರ್ತಿ ಮಾಡಿ. ಮುಂದಿನ ಹಂತದಲ್ಲಿ ಫಲಾನುಭವಿಯ ಕುಟುಂಬ ಸದಸ್ಯರ ವಿವರಗಳನ್ನು ಸೇರಿಸಿ ಮತ್ತು ದಾಖಲು ಮಾಡಿ. ಇನ್ನು ಈ ಹಂತದಲ್ಲಿ ಇ-ಕೆವೈಸಿ ಪೂರ್ಣಗೊಂಡು, ಅನುಮೋದನೆಯ ನಂತರ ಸ್ವಲ್ಪ ಸಮಯದ ನಂತರ ನೀವು ಆಯುಷ್ಮಾನ್ ವೇ ವಂದನಾ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.
ವಂದನಾ ಕಾರ್ಡ್ ರಚನೆ, ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಈ ಹಂತ ಅನುಸರಿಸಿ:
ಆರಂಭಿಕ ಹಂತವಾಗಿ ಯೋಜನೆಯ ಫಲಾನುಭವಿಗಳು beneficiary.nha.gov.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಕ್ಯಾಪ್ಚಾ, ಮೊಬೈಲ್ ಸಂಖ್ಯೆ ನಮೂದಿಸಿ ಮತ್ತು ಪ್ರಮಾಣೀಕರಿಸಿ. ಲಾಗಿನ್ ಕ್ಲಿಕ್ ಮಾಡಬೇಕು. ಈ ಹಂತದಲ್ಲಿ ನೀವು 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನೋಂದಾಯಿಸಲು ಬ್ಯಾನರ್ ಕಾಣಸಿಗುತ್ತದೆ ಮತ್ತು ಅದರ ಮೇಲೆ ಕ್ಲಿಕ್ ಮಾಡಬೇಕು.
ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಿ. ಈ ಹಂತದಲ್ಲಿ ಕೆಲವು ಬಾರಿ ಈ ಆಧಾರ್ ಸಂಖ್ಯೆ ಅಸ್ತಿತ್ವದಲ್ಲಿಲ್ಲ ಎಂದು ತೋರಿಸಬಹುದು. ಅಂತಹ ಸಂದರ್ಭದಲ್ಲಿ, ಬಳಕೆದಾರರು ಹೊಸ ದಾಖಲಾತಿಯನ್ನು ಕ್ಲಿಕ್ ಮಾಡಬಹುದು. OTP ನಮೂದಿಸಿ, ಆಧಾರ್ ಬಳಕೆಗೆ ಒಪ್ಪಿಗೆಯನ್ನು ಒಪ್ಪಿಕೊಳ್ಳಿ ಮತ್ತು ಅನುಮತಿಸು ಕ್ಲಿಕ್ ಮಾಡಬೇಕು.
ಇನ್ನು ಎರಡೂ OTP ಗಳನ್ನು ನಮೂದಿಸಿ, ಡೆಕ್ಲರೇಶನ್ ಪುಟದಲ್ಲಿ ಫಲಾನುಭವಿಯು ಆಯುಷ್ಮಾನ್ ಯೋಜನೆಗೆ ಅರ್ಹರಾಗಿದ್ದಾರೆ ಎಂದು ತೋರಿಸುತ್ತದೆ. ಈ ಹಂತದಲ್ಲಿ ಮೇಲಿನ ಯಾವುದನ್ನೂ ಕ್ಲಿಕ್ ಮಾಡಿ ಮತ್ತು ಮುಂದುವರಿಯಿರಿ. ಫೊಟೋ ಕ್ಯಾಪ್ಚರ್ ಮಾಡಿ, ಮುಂದುವರೆಯಿರಿ. ಎಲ್ಲಾ ಕುಟುಂಬ ಸದಸ್ಯರ ವಿವರಗಳನ್ನು ಪೂರೈಸಿ. ಯಶಸ್ವಿ ಅನುಮೋದನೆಯ ನಂತರ, 15 ನಿಮಿಷಗಳ ನಂತರ ಆಯುಷ್ಮಾನ್ ವಯ ವಂದನಾ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ.
ಮೊದಲ ದಿನದಿಂದ ಚಿಕಿತ್ಸೆ ಆರಂಭ
ಫಲಾನುಭವಿಗಳು ದಾಖಲಾತಿಯ ಮೊದಲ ದಿನದಿಂದ ಚಿಕಿತ್ಸೆಯನ್ನು ಪ್ರಾರಂಭಿಸಬಹುದು. ಯಾವುದೇ ರೋಗ ಅಥವಾ ಚಿಕಿತ್ಸೆಗಾಗಿ ಕಾಯುವ ಅವಧಿ ಇಲ್ಲ, ಆದ್ದರಿಂದ ಕವರೇಜ್ ತಕ್ಷಣವೇ ಪ್ರಾರಂಭವಾಗುತ್ತದೆ. ಈ ಯೋಜನೆಯಡಿ ಅರ್ಹತೆಗಾಗಿ ಸರ್ಕಾರವು ಯಾವುದೇ ಆದಾಯ ಮಿತಿಯನ್ನು ನಿಗದಿಪಡಿಸಿಲ್ಲ. 70 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಆದಾಯವನ್ನು ಲೆಕ್ಕಿಸದೆ ಅರ್ಹರಾಗಿರುತ್ತಾರೆ.


Click it and Unblock the Notifications