ಬೆಂಗಳೂರು ನಗರಾಭಿವೃದ್ಧಿಗೆ ಬಿಬಿಎಂಪಿ ಹೊಸ ಹಾದಿ..B-SMILE ಹೊಸ ಯೋಜನೆ ಪರಿಚಯ..! ಹಾಗಂದರೇನು..?

ಬೆಂಗಳೂರು ನಗರಾಭಿವೃದ್ಧಿಗೊಳಿಸಲು ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಒಂದು ಹೆಜ್ಜೆ ಮುಂದಿಟ್ಟಿದೆ ನಗರದ ಮೂಲಸೌಕರ್ಯ ಅಭಿವೃದ್ಧಿಗೆಂದೇ, ನೂತನ ಪ್ರಾಧಿಕಾರದ ಅಗತ್ಯವನ್ನು ಗುರುತಿಸಿದೆ. ಅದಕ್ಕೆ B-SMILE ಎಂಬ ವಿಶೇಷ ಶೀರ್ಷಿಕೆ ಇಟ್ಟಿದೆ. B-SMILE ಎಂದರೆ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎಂದರ್ಥ. ಈ ವಿಶೇಷ ಶೀರ್ಷಿಕೆಯ ಮೂಲಕ ವಿಶೇಷ ಉದ್ದೇಶದ ವಾಹನ ಆಗಿ ಕಾರ್ಯ ನಿರ್ವಹಿಸಲಿದ್ದು, ಇದರ ಸ್ಥಾಪನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.

ಬೆಂಗಳೂರು ನಗರಾಭಿವೃದ್ಧಿಗೆ ಬಿಬಿಎಂಪಿ ಹೊಸ ಹಾದಿ..!

ಹೌದು, ಸುರಂಗ ರಸ್ತೆಗಳು, ಎತ್ತರದ ಕಾರಿಡಾರ್‌ಗಳು, ಮುಖ್ಯ ರಸ್ತೆ ಮಾರ್ಗಗಳ ವೈಟ್-ಟಾಪಿಂಗ್ ಮತ್ತು ಇತರ ಮೂಲಸೌಕರ್ಯ ಯೋಜನೆಗಳ ನಿರ್ವಹಣೆ ಮತ್ತು ಅನುಷ್ಠಾನ ಈ ಘಟಕದ ಮುಖ್ಯ ಉದ್ದೇಶವಾಗಿದೆ.

ಇನ್ನು ಈ ಎಸ್‌ಪಿವಿ ಸ್ಥಾಪನೆಗಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಕಂಪನಿಗಳ ಕಾಯ್ದೆ 2013ರ ಅಡಿಯಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅಂದಹಾಗೆ ಈ ಬಿ-ಸ್ಮೈಲ್ ಕಂಪನಿಯ 90% ಪಾಲುದಾರಿಕೆಯನ್ನು ಕರ್ನಾಟಕ ಸರ್ಕಾರ ಹೊಂದಿದ್ದು, ಉಳಿದ 10% BBMP ಪಾಲಾಗಿದೆ. ಈ ಪ್ರಸ್ತಾವನೆಗೆ ಅನುಮೋದನೆ ದೊರೆತರೆ, BBMP ತನ್ನ ಅನೇಕ ನಿರ್ಧಾರಾತ್ಮಕ ಅಧಿಕಾರಗಳನ್ನು SPV ಗೆ ಒಪ್ಪಿಸಬೇಕಾಗುತ್ತದೆ.

ಇನ್ನು ಈ ಎಸ್‌ಪಿವಿಯ ಆಡಳಿತ ಮಂಡಳಿಯಲ್ಲಿ ಒಟ್ಟು 9 ಮಂದಿ ಸದಸ್ಯರನ್ನು ಸೇರಿಸುವ ನಿರೀಕ್ಷೆ ಇದೆ. ಇದರಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅಧ್ಯಕ್ಷರಾಗಲಿದ್ದಾರೆ. BBMP ಮುಖ್ಯ ಆಯುಕ್ತರು ವ್ಯವಸ್ಥಾಪಕ ನಿರ್ದೇಶಕರಾಗಿರುತ್ತಾರೆ. ಮೇಯರ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮತ್ತು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (BWSSB) ಆಯುಕ್ತರು ಸಹ ಸದಸ್ಯರಾಗಿ ಪಾಲ್ಗೊಳ್ಳಲಿದ್ದಾರೆ. ತಾಂತ್ರಿಕ ಅಂಶಗಳನ್ನು ನೋಡಿಕೊಳ್ಳಲು BBMP ಇಂಜಿನಿಯರ್-ಇನ್-ಚೀಫ್ ತಾಂತ್ರಿಕ ನಿರ್ದೇಶಕರಾಗಿ ನೇಮಕಗೊಳ್ಳಲಿದ್ದಾರೆ.

BBMPಯ ಹೊಸ ಹೊಣೆಗಾರಿಕೆಗಳು:

ನಗರಾಭಿವೃದ್ಧಿಗಾಗಿ ತರುವ ಈ ಹೊಸ ವ್ಯವಸ್ಥೆಯಿಂದ ಬಿಬಿಎಂಪಿಯ ಕಾರ್ಯಪದ್ದತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಲಿದೆ. ಪಾಲಿಕೆಯಲ್ಲಿರುವ ಪ್ರಮುಖ ಜವಾಬ್ದಾರಿಗಳಾದ ಆಸ್ತಿ ತೆರಿಗೆ ಸಂಗ್ರಹ, ಜಾಹೀರಾತು ಆದಾಯ ನಿರ್ವಹಣೆ, ನಗರ ಸುಧಾರಣಾ ಕಾರ್ಯಗಳ ನಿರ್ವಹಣೆ ಹಾಗೂ ವಾರ್ಡ್ ಮಟ್ಟದ ಮೂಲಸೌಕರ್ಯಗಳ ಅಭಿವೃದ್ಧಿ ಇತ್ಯಾದಿಗಳಿಗೆ ಸೀಮಿತವಾಗಬಹುದು.

ಹಾಗೆಯೇ ಸುಮಾರು 11,500 ಕಿ.ಮೀ. ವಿಸ್ತೀರ್ಣದ ಸ್ಥಳೀಯ ರಸ್ತೆಗಳನ್ನು ನಿರ್ವಹಿಸುವ ಜವಾಬ್ದಾರಿ BBMP ಯಲ್ಲಿಯೇ ಉಳಿಯಲಿದೆ. ಇದರ ಜೊತೆಗೆ ಇನ್ನೂ ಐದು ಲಕ್ಷ ಬೀದಿ ದೀಪಗಳು, 205 ಸರೋವರಗಳು, ಸಾರ್ವಜನಿಕ ಶೌಚಾಲಯಗಳು, ಉದ್ಯಾನವನಗಳು, ಆಟದ ಮೈದಾನಗಳು ಇತ್ಯಾದಿಗಳನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು BBMP ನಿರ್ವಹಿಸುತ್ತದೆ.

ಹೊಸ ವ್ಯವಸ್ಥೆಯ ಪ್ರಭಾವ ಹೇಗಿರಲಿದೆ..?

ಇನ್ನು ಹೊಸ ವ್ಯವಸ್ಥೆಯಾದ SPVಯ ಅಧಿಕಾರ BBMP ಗಡಿಗಳನ್ನು ಮೀರಿ ಬೆಂಗಳೂರು ನಗರ ಜಿಲ್ಲೆಯಲ್ಲಿಯೂ ಪ್ರಮುಖ ಯೋಜನೆಗಳನ್ನು ನಿರ್ವಹಿಸುವಂತಿದೆ. ಅಂದರೆ ಬಿಬಿಎಂಪಿ ಕೇವಲ ಬೆಂಗಳೂರಿಗೆ ಸೀಮಿತವಾಗಿತ್ತು. ಆದರೆ ಈ ಹೊಸ ವ್ಯವಸ್ಥೆ ಸರ್ಕಾರದ ಅನುದಾನಿತ ಯೋಜನೆಗಳ ಮೇಲೆ ಈ ಸಂಸ್ಥೆ ಹೆಚ್ಚು ಗಮನಹರಿಸಲಿದೆ. ವಿಶೇಷವಾಗಿ, ಸುರಂಗ ರಸ್ತೆ ನಿರ್ಮಾಣ, ಎತ್ತರದ ಕಾರಿಡಾರ್‌ಗಳು ಮತ್ತು ವೈಟ್-ಟಾಪಿಂಗ್ ರಸ್ತೆ ಕಾಮಗಾರಿಗಳು SPV ನಿರ್ವಹಣೆಯ ಅಡಿಯಲ್ಲಿ ಬರಲಿವೆ.

ಅಂದಹಾಗೆ ಮಾರ್ಚ್‌ 7ರಂದು ಬಜೆಟ್ ಮಂಡಿಸಿದ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರ ಅಭಿವೃದ್ಧಿಗೆ ಆದ್ಯತೆ ನೀಡಲು SPV ರಚನೆ ಅಗತ್ಯ ಎಂದು ಘೋಷಿಸಿದ್ದರು. ಇದನ್ನು ಅನುಸರಿಸಿ, ಪ್ರಸ್ತಾಪಿತ ಯೋಜನೆಯನ್ನು ಮುಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಇನ್ನು ಎಸ್‌ಪಿವಿಯ ರಚನೆಯ ಮೂಲಕ ಬಿಬಿಎಂಪಿಗೆ ಸಂಬಂಧಿಸಿದ, ಪ್ರಮುಖ ಯೋಜನೆಗಳ ನಿರ್ಧಾರಾತ್ಮಕ ಅಧಿಕಾರ ಕಡಿಮೆಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಚುನಾಯಿತ ಪ್ರತಿನಿಧಿಗಳ ಪ್ರಭಾವ ಕಡಿಮೆಯಾಗಬಹುದು ಎಂಬ ಭೀತಿಯೂ ವ್ಯಕ್ತವಾಗಿದೆ. SPVಯಂತಹ ಪ್ರತ್ಯೇಕ ಸಂಸ್ಥೆಯನ್ನು ರಚಿಸುವ ಬದಲಿಗೆ, BBMP ಯ ಕಾರ್ಯಪದ್ಧತಿಯನ್ನು ಸುಧಾರಿಸಿ ಅದನ್ನು ಬಲಪಡಿಸುವತ್ತ ಗಮನಹರಿಸಬೇಕಾಗಿತ್ತು ಎಂಬ ಅಭಿಪ್ರಾಯವನ್ನು ಕೆಲವು ತಜ್ಞರು ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಬಿ-ಸ್ಮೈಲ್ ಎಂಬ ಹೊಸ ವ್ಯವಸ್ಥೆಯು ಬೆಂಗಳೂರು ನಗರದ, ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಹೆಜ್ಜೆ ಎಂದು ಅಭಿಪ್ರಾಯಿಸಲಾಗುತ್ತಿದೆ. ಆದರೆ, BBMP ನ ರಾಜಕೀಯ ಹಾಗೂ ಆಡಳಿತಾತ್ಮಕ ಶಕ್ತಿಯ ಮೇಲೆ ಇದರ ಪರಿಣಾಮ ಹೇಗಿರುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ತೀರ್ಮಾನಿಸಬೇಕಾಗುತ್ತದೆ. SPV ಯ ನಿರ್ವಹಣೆ, ಕಾರ್ಯಪದ್ಧತಿ, ಹಾಗೂ ಪಾಲನೆಯ ಮಾದರಿಯು ಬೆಂಗಳೂರು ನಗರಾಭಿವೃದ್ಧಿಯ ಮುಂದಿನ ದಿಕ್ಕನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಲಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+