ಹಲವಾರು ಸಂಸ್ಥೆಗಳ ತ್ರೈಮಾಸಿಕ ವರದಿಯು ಪ್ರಕಟವಾಗುತ್ತಿದೆ. ಈಗ ಬಾಬಾ ರಾಮ್‌ದೇವ್‌ರ ಪತಂಜಲಿ ಫುಡ್ಸ್ ಜೂನ್ 30, 2023 ರಲ್ಲಿ ಕೊನೆಗೊಂದ ಅವಧಿಯ ವರದಿ ಪ್ರಕಟಿಸಿದ್ದು, ವರದಿ ಪ್ರಕಾರ 87.8 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ಸಂಸ್ಥೆ ಗಳಿಸಿದೆ. ಆದರೆ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷದಲ್ಲಿ ನಿವ್ವಳ ಲಾಭವು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ.
ಕಳೆದ ಹಣಕಾಸು ವರ್ಷದಲ್ಲಿ ಇದೇ ತ್ರೈಮಾಸಿಕದಲ್ಲಿ ಪತಂಜಲಿ ಫುಡ್ಸ್ ನಿವ್ವಳ ಲಾಭವು 241.25 ಕೋಟಿ ರೂಪಾಯಿ ಆಗಿತ್ತು. ಆದರೆ ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭವು ಶೇಕಡ 63.6ರಷ್ಟು ಇಳಿಕೆಯಾಗಿದೆ. ಆದಾಯವಿದ್ದರೂ ಕೂಡಾ ವೆಚ್ಚವು ಲೆಕ್ಕಾಚಾರಕ್ಕಿಂತ ಅಧಿಕವಾದ ಕಾರಣದಿಂದಾಗಿ ಪತಂಜಲಿ ಫುಡ್ಸ್ ಲಾಭವು ವರ್ಷದಿಂದ ವರ್ಷಕ್ಕೆ ಇಳಿಕೆಯಾಗಿದೆ.

ಇನ್ನು ಹಣಕಾಸು ವರ್ಷ 2024ರಲ್ಲಿ ಪತಂಜಲಿ ಫುಡ್ಸ್ ಕಾರ್ಯಾಚರಣೆಗಳ ಆದಾಯವು ಶೇಕಡ 7.71 ರಷ್ಟು ಜಿಗಿತ ಕಂಡು, 7,767.10 ಕೋಟಿ ರೂಪಾಯಿಗೆ ತಲುಪಿದೆ. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಆದಾಯವು 7,210.96 ಕೋಟಿ ರೂಪಾಯಿ ಆಗಿತ್ತು. ಇನ್ನು ಪತಂಜಲಿ ಷೇರುಗಳು ಬಿಎಸ್‌ಇಯಲ್ಲಿ ಕೊನೆಯ ವಹಿವಾಟಿನಲ್ಲಿ (ಆಗಸ್ಟ್ 11) ಶೇಕಡ 2.32 ರಷ್ಟು ಕುಸಿದು, 1293.40 ರೂಪಾಯಿಗೆ ಕೊನೆಗೊಂಡಿದೆ.
ಮಾರ್ಚ್ ತ್ರೈಮಾಸಿಕದಲ್ಲಿ ಪತಂಜಲಿಯ ಆದಾಯ ಮತ್ತು ಪಿಎಟಿ ಕ್ರಮವಾಗಿ 262.33 ಕೋಟಿ ರೂಪಾಯಿ ಮತ್ತು 7,872.92 ಕೋಟಿ ರೂಪಾಯಿ ಆಗಿದೆ. ಜೂನ್ 2023 ರ ತ್ರೈಮಾಸಿಕದಲ್ಲಿ, ಪತಂಜಲಿಯು ಆಹಾರ ಮತ್ತು ಎಫ್‌ಎಂಸಿಜಿ ವಿಭಾಗದಲ್ಲಿ ಉತ್ತಮ ಪ್ರದರ್ಶನವನ್ನು ಕಂಡ ಸಂಸ್ಥೆಯಾಗಿದೆ.
ಇನ್ನು ಆದಾಯವು ಶೇಕಡ 267.49ರಷ್ಟು ಉತ್ತಮ ಬೆಳವಣಿಗೆಯನ್ನು ಕಂಡಿದೆ. ಹಣಕಾಸು ವರ್ಷ 2023ರಲ್ಲಿ 531.30 ಕೋಟಿ ರೂಪಾಯಿಯಟ್ಟಿದ್ದು, ಈ ವರ್ಷದಲ್ಲಿ 1,952.46 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಒಟ್ಟಾರೆ ಆದಾಯವು 7,210.97 ಕೋಟಿ ರೂಪಾಯಿಯಿಂದ ಈ ವರ್ಷಕ್ಕೆ 7,767.10 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಸಂಸ್ಥೆಯ ಬೆಳವಣಿಗೆ ವೇಗ ಹಾಗೆಯೇ ಇದ್ದು, ವೆಚ್ಚ ಮಾತ್ರ ಅಧಿಕವಾಗಿದೆ.
"ಖಾದ್ಯ ತೈಲಗಳ ದರವು ನಿರಂತರವಾಗಿ ಕುಸಿತ ಕಾಣುತ್ತಿದೆ. ಅದರಿಂದಾಗಿ ಹಲವಾರು ಸಂಸ್ಥೆಗಳಲ್ಲಿ ಲಾಭ ಕೊಂಚ ಮಟ್ಟದಲ್ಲಿ ಇಳಿಕೆ ಕಾಣುತ್ತಿದೆ. ಸಂಸ್ಥೆಯ ಮಾರುಕಟ್ಟೆ ಪಾಲು ಹಾಗೆಯೇ ಮುಂದುವರಿದಿದೆ. ಆದರೆ ಖಾದ್ಯ ತೈಲದ ಆದಾಯವು ವರ್ಷದಿಂದ ವರ್ಷಕ್ಕೆ ಕುಸಿತವನ್ನು ಕಂಡಿದೆ," ಎಂದು ತ್ರೈಮಾಸಿಕ ವರದಿಯಲ್ಲಿ ತಿಳಿಸಿದೆ.
ಆದಾಗ್ಯೂ, ವರ್ಷದಿಂದ ವರ್ಷಕ್ಕೆ ಶೇಕಡ 35.80ರಷ್ಟು ಬೆಳವಣಿಗೆ ಕಂಡು ಬಂದಿದ್ದು, ಪರಿಮಾಣವು 1.4 ಲಕ್ಷ ಟನ್‌ಗಳಷ್ಟು ಹೆಚ್ಚಾಗಿದೆ. ಆದರೂ ಆದಾಯವು ಹಣಕಾಸು ವರ್ಷ 2023ರ ಮೊದಲ ತ್ರೈಮಾಸಿಕದಲ್ಲಿ 6,763.01 ಕೋಟಿ ರೂಪಾಯಿಗಳಿಂದ, ಹಣಕಾಸು ವರ್ಷ 2024ರ ಮೊದಲ ತ್ರೈಮಾಸಿಕಕ್ಕೆ 5,890.73 ಕೋಟಿ ರೂಪಾಯಿಗೆ ಇಳಿಕೆಯಾಗಿದೆ.


Click it and Unblock the Notifications