ಭಾರತದಲ್ಲಿರುವ ಪ್ರಮುಖ ಜೀವ ವಿಮಾ ಕಂಪನಿಗಳಲ್ಲಿ, ಬಜಾಜ್ ಅಲಿಯನ್ಸ್ ಲೈಫ್ ಇನ್ಶೂರೆನ್ಸ್ ಕೂಡ ಒಂದು.. ಇದು ಬಜಾಜ್ ಫಿನ್‌ಸರ್ವ್ ಲಿಮಿಟೆಡ್ ಮತ್ತು ಅಲಿಯಾನ್ಸ್ ಎಸ್.ಇ ಎಂಬ ಜರ್ಮನಿಯ ಪ್ರಮುಖ ವಿಮಾ ಕಂಪನಿಯ ಜಂಟಿ ಸಂಸ್ಥೆಯಾಗಿದೆ. ಬಜಾಜ್ ಅಲಿಯಾನ್ಸ್ ಲೈಫ್ ಇನ್ಶುರೆನ್ಸ್ ಭಾರತದಾದ್ಯಂತ ಕೋಟ್ಯಾಂತರ ಗ್ರಾಹಕರಿಗೆ ಜೀವನ ವಿಮಾ ಸೇವೆಗಳನ್ನು ಒದಗಿಸುತ್ತಿದೆ. ಕಂಪನಿಯು ಉನ್ನತ ಗ್ರಾಹಕ ಸೇವೆ, ಆಧುನಿಕ ಡಿಜಿಟಲ್ ತಂತ್ರಜ್ಞಾನ, ಮತ್ತು ನಮ್ಮ ಭವಿಷ್ಯ ಭದ್ರತೆಗಾಗಿ ಶ್ರೇಷ್ಠ ವಿಮಾ ಯೋಜನೆಗಳನ್ನು ನೀಡಲು ಹೆಸರಾಗಿದೆ. ಈಗ ಇದೇ ಕಂಪನಿ ಬಜಾಜ್ ಅಲಿಯಾನ್ಸ್ ಲೈಫ್ ಗ್ಯಾರಂಟಿಡ್ ಪೆನ್ಷನ್ ಗೋಲ್ II ಎಂದ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ.

ಈ ಯೋಜನೆಯ ಪ್ರಾಮುಖ್ಯತೆ:
ವೈವಿಧ್ಯಮಯ ಪಾವತಿ ಆಯ್ಕೆಗಳು:
ಬಜಾಜ್ ಅಲಿಯನ್ಸ್ ಗ್ಯಾರಂಟಿಡ್ ಪೆನ್ಷನ್ ಗೋಲ್ II ನಿಂದ ಜೀವನಾವಧಿ ಪಿಂಚಣಿ ದೊರೆಯುತ್ತದೆ. ಇದರಲ್ಲಿ ಜಂಟಿ ಪಿಂಚಣಿ ಆಯ್ಕೆಯೂ ಇದೆ. ಅಂದರೆ ಪತಿ-ಪತ್ನಿ ಅಥವಾ ಪಾಲಕರು-ಮಕ್ಕಳಿಗೆ ಹಿತಕರವಾದ ಪಿಂಚಣಿ ಯೋಜನೆ ಇದಾಗಿದೆ. ಖರೀದಿ ಬೆಲೆಯ ಹಿಂತಿರುಗಿಸುವಿಕೆ ಶೇ. 50% ರಿಂದ 100% ವರೆಗೆ ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ 35 ವರ್ಷ ವಯಸ್ಸಿನಲ್ಲಿಯೇ ನಿವೃತ್ತಿಗಾಗಿ ಉಳಿತಾಯ ಪ್ರಾರಂಭಿಸಲು ಅವಕಾಶವೂ ಇದೆ.
ಸ್ಥಿರ ಆದಾಯ ಖಾತರಿ:
ಈ ಪಿಂಚಣಿ ಯೋಜನೆಯ ವ್ಯವಸ್ಥೆಯಿಂದ ನಿವೃತ್ತಿಯ ನಂತರವೂ ಆರ್ಥಿಕ ಭದ್ರತೆಯನ್ನು ನಿರ್ವಹಿಸಬಹುದಾಗಿದೆ. ಹಣಕಾಸಿನ ಅಸ್ಥಿರತೆಗಳಿಂದ ಮುಕ್ತಗೊಳಿಸುವ ಒಂದು ಸುಧಾರಿತ ಆಯ್ಕೆಯಾಗಿದೆ.
30 ವರ್ಷಗಳ ಮುಂದೂಡಿಕೆ ಆಯ್ಕೆ:
ಮುಖ್ಯವಾಗಿ ಈ ಯೋಜನೆ ಇದು ಭಾರತದಲ್ಲಿ ನಿವೃತ್ತಿ ಯೋಜನೆಯ ಹೊಸ ಸಂಪ್ರದಾಯವನ್ನೇ ಪರಿಚಯಿಸುತ್ತದೆ. ಈ ಹೊಸ ಆಯ್ಕೆ 35 ವರ್ಷ ವಯಸ್ಸಿನಲ್ಲಿಯೇ ನಿವೃತ್ತಿಗಾಗಿ ಉಳಿತಾಯ ಪ್ರಾರಂಭಿಸಲು ಅವಕಾಶ ನೀಡುತ್ತದೆ. ಅಂದರೆ ನೀವು ಪಿಂಚಣಿ ಪಡೆಯುವ ಮೊದಲು ನಿಗದಿತ ವರ್ಷಗಳ ಕಾಲಘಟ್ಟವನ್ನು ಆಯ್ಕೆ ಮಾಡಬಹುದು.ಇದರಿಂದ ಉದ್ಯೋಗಿಗಳು ನಿವೃತ್ತಿಗಾಗಿ ಹಂತ ಹಂತವಾಗಿ ಉಳಿತಾಯ ಮಾಡಬಹುದು ಮತ್ತು ಹೆಚ್ಚು ಪಿಂಚಣಿ ಪಡೆಯಲು ಅವಕಾಶ ಸಿಗುತ್ತದೆ.
ಪಿಂಚಣಿದಾರರಿಗೆ ಆರ್ಥಿಕ ಭದ್ರತೆ:
ಈ ನಿರಂತರ ಆದಾಯ ಖಾತರಿ ಯೋಜನೆಯು ನಿವೃತ್ತಿಯ ನಂತರವೂ ನಿತ್ಯ ಖರ್ಚುಗಳಿಗಾಗಿ ಖಾಯಂ ಆದಾಯವನ್ನು ಖಾತ್ರಿಗೊಳಿಸುತ್ತದೆ. ಈ ಯೋಜನೆಯಿಂದ ಹಠಾತ್ ವೆಚ್ಚಗಳು ಅಥವಾ ಆರ್ಥಿಕ ತೊಂದರೆಗಳಿಗೆ ಸಿಕ್ಕಲು ಸಾಧ್ಯವಿಲ್ಲ. ಪಿಂಚಣಿದಾರರು ಅಗಲಿದ ನಂತರ ಸಂಗಾತಿ ಅಥವಾ ಕುಟುಂಬದವರು ಸಹ ಪಿಂಚಣಿ ಪಡೆಯುವ ಅವಕಾಶವಿದೆ.
ಈ ಯೋಜನೆಯ ಏಕೆ ಅವಶ್ಯಕ..?
ಅಂದಹಾಗೆ ಬಜಾಜ್ ಅಲಿಯಾನ್ಸ್ ಲೈಫ್ ನಡೆಸಿದ ಅಧ್ಯಯನದ ಪ್ರಕಾರ, 77% ಭಾರತೀಯರು ನಿವೃತ್ತಿ ಭದ್ರತೆಗಾಗಿ ಜೀವ ವಿಮೆಯನ್ನು ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಿದ್ದಾರೆ. ಅಂದರೆ ಭಾರತದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳು ಕಡಿಮೆ ಇರುವ ಕಾರಣ, ಖಾಸಗಿ ನಿವೃತ್ತಿ ಯೋಜನೆಗಳ ಮಹತ್ವ ಹೆಚ್ಚುತ್ತಿದೆ.
ಇನ್ನು ಈ ಕಂಪನಿಯ ಸಿಇಒ ತರುಣ್ ಚುಗ್ ಅವರು ಕೂಡ ಮಾತನಾಡಿದ್ದಾರೆ. ಭಾರತೀಯರು ತಮ್ಮ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸಬೇಕು ಎಂಬ ಅರಿವು ಹೆಚ್ಚುತ್ತಿದೆ. ಹೀಗಾಗಿ30 ವರ್ಷಗಳ ಮುಂದೂಡಿಕೆ ಆಯ್ಕೆ, ವೈವಿಧ್ಯಮಯ ಆಯ್ಕೆಗಳು, ಮತ್ತು ಸ್ಥಿರ ಆದಾಯ ಖಾತರಿ ನೀಡುವ ಮೂಲಕ, ನಾವು ಗ್ರಾಹಕರ ನಿವೃತ್ತಿ ಭದ್ರತೆಯನ್ನು ಸುಲಭಗೊಳಿಸಲು ಈ ಯೋಜನೆಯನ್ನು ತರುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಇದೊಂದು ಆರ್ಥಿಕ ಭದ್ರತೆ ನೀಡುವ ಯೋಜನೆಯಾಗಿದ್ದು, ಇದರಿಂದ ನಿವೃತ್ತಿಯ ನಂತರವೂ ಸುಲಭ ಜೀವನ ಸಾಗಿಸಬಹುದು. ಅಲ್ಲದೇ ನಿಮ್ಮ ಅಗತ್ಯಕ್ಕೆ ತಕ್ಕಂತೆ ವರ್ಷಾಶನ ಆಯ್ಕೆ ಮಾಡಿಕೊಳ್ಳಬಹುದು. ಜೊತೆಗೆ ನಿಮ್ಮ ಆಪ್ತರ ಭದ್ರತೆಗೂ ಕೂಡ ಇಲ್ಲಿ ಅವಕಾಶವಿದೆ. ಅದಕ್ಕಾಗಿ ನೀವು ಕುಟುಂಬ ಪಿಂಚಣಿಯನ್ನು ಆಯ್ಕೆ ಮಾಡಿಕೊಳ್ಳಬಹುದು.


Click it and Unblock the Notifications