ನವದೆಹಲಿ: ಭಾರತ ಚೀನಾ ಗಡಿ ಸಂಘರ್ಷದ ನಂತರ ದೇಶದ ಸುರಕ್ಷತೆ ದೃಷ್ಠಿಯಿಂದ ಭಾರತ ಚೀನಾ ಮೂಲದ 59 ಮೊಬೈಲ್ ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ನಿಷೇಧ ಮಾಡಲಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದೆ. ಭಾರತ ಕೈಗೊಂಡಿರುವ ಕ್ರಮಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಇದೇ ಮೊದಲ ಬಾರಿಗೆ ಕೇಂದ್ರದ ಮಂತ್ರಿಯೊಬ್ಬರು ಟೆಲಿಕಾಂ ಇಲಾಖೆಯ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ದೇಶಕ್ಕೆ ಹಾನಿ ಮಾಡಲು ಬರುವ ಪರದೇಶದ ಮೇಲೆ ನಮ್ಮ "ಡಿಜಿಟಲ್ ಸ್ಟ್ರೈಕ್" ಎಂದು ಕೇಂದ್ರ ಟೆಲಿಕಾಂ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ನಾವು ದೇಶವಾಸಿಗಳ ಡೇಟಾವನ್ನು ರಕ್ಷಿಸಲು ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ್ದೇವೆ; ಇದು ಡಿಜಿಟಲ್ ಸ್ಟ್ರೈಕ್ ಆಗಿದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಮೂಲಕ ಅವರು ಬಾಲಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಶಿಬಿರಗಳ ವಿರುದ್ಧ ಭಾರತದ ವಾಯುದಾಳಿಯೊಂದಿಗೆ ಆಪ್‌ಗಳ ನಿಷೇಧವನ್ನು ಹೋಲಿಕೆ ಮಾಡಿದ್ದಾರೆ.
ಇದೊಂದು ಉತ್ತಮ ಅವಕಾಶ
'ನಾವು ವಿಧಿಸಿರುವ ನಿಷೇಧದ ಹಿನ್ನೆಲೆಯಲ್ಲಿ, ಇದೊಂದು ಉತ್ತಮ ಅವಕಾಶ ಎಂದು ನಾನು ಭಾವಿಸುತ್ತೇನೆ. ಭಾರತೀಯರು ತಯಾರಿಸಿದ ಉತ್ತಮ ಅಪ್ಲಿಕೇಶನ್‌ಗಳೊಂದಿಗೆ ನಾವು ಮುಂದಡಿ ಇಡಬಹುದು. ವಿವಿಧ ಕಾರಣಗಳಿಗಾಗಿ ತಮ್ಮದೇ ಆದ ಕಾರ್ಯಸೂಚಿಯೊಂದಿಗೆ ವಿದೇಶಿ ಅಪ್ಲಿಕೇಶನ್‌ಗಳ ಅವಲಂಬನೆಯನ್ನು ನಿಲ್ಲಿಸಲಿ' ಎಂದು ಸಚಿವರು ಹೇಳಿದ್ದಾರೆ.
59 ಮೊಬೈಲ್ ಅಪ್ಲಿಕೇಶನ್ ಬ್ಯಾನ್
ಟಿಕ್‌ಟಾಕ್, ಯುಸಿ ಬ್ರೌಸರ್, ಕ್ಯಾಮ್‌ಸ್ಕಾನರ್, ವೀಚಾಟ್, ವೀಬೊ, ಬೈದು ಮ್ಯಾಪ್, ಕ್ಸೆಂಡರ್ ಸೇರಿದಂತೆ 59 ಚೀನಾ ಮೂಲದ ಮೊಬೈಲ್ ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ನಿಷೇಧ ಮಾಡಲಾಗಿದೆ. ನಿಷೇಧದಿಂದ 43 ಸಾವಿರ ಕೋಟಿ ರುಪಾಯಿವರೆಗೂ ಟಿಕ್‌ಟಾಕ್ ಒಂದಕ್ಕೇ ವಾರ್ಷಿಕ ನಷ್ಟ ಆಗಬಹುದು ಎಂದು ಅಂದಾಜಿಸಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲೂ ಪರವಾದ ದ್ವನಿ ಕೇಳಿ ಬಂದಿದೆ
ನಿಷೇಧದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪರವಾದ ದ್ವನಿ ಕೇಳಿ ಬಂದಿದೆ. ಭಾರತದ ಡಿಜಿಟಲ್ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿದ್ದ ಚೀನಾ ಮೊಲದ ಕಂಪನಿಗಳನ್ನು ನಿಷೇಧ ಮಾಡಿದ್ದು ಸೂಕ್ತ ಇದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹೇಳಿದ್ದಾರೆ. ವಿಶ್ವಸಂಸ್ಥೆ ಮಾಜಿ ರಾಯಭಾರಿ ನಿಕ್ಕಿ ಹಾಲೆ ಕೂಡ ಭಾರತದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ತೀವ್ರ ಗಮನ ಇದೆ
ಚೀನಾದ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಭಾರತದ ನಿರ್ಧಾರದ ಬಗ್ಗೆ ತೀವ್ರ ಗಮನ ಇದೆ ಎಂದು ಚೀನಾ ಮಂಗಳವಾರ ಹೇಳಿದೆ. ಇದು ಉಭಯ ದೇಶಗಳ ನಡುವಿನ ಸಹಕಾರವನ್ನು ಕಟ್ಟಿ ಹಾಕುತ್ತದೆ ನಿಷೇಧವು ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿರುತ್ತದೆ ಎಂದು ಹೇಳಿದೆ.


Click it and Unblock the Notifications