ಆಭರಣ ಪ್ರಿಯರಿಗೆ ಮತ್ತೆ ಗುಡ್‌ನ್ಯೂಸ್ ಸಿಕ್ಕಿದೆ. ಚಿನ್ನದ ದರ ಏರಿಕೆಯಿಂದಾಗಿ ಕಂಗಾಲಾಗಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಹಲವು ದಿನಗಳಿಂದ ಏರಿಕೆಯಾಗ್ತಾನೆ ಇದ್ದ ಚಿನ್ನ ದರ ಸತತ ಮೂರು ದಿನಗಳಿಂದ ಇಳಿಕೆಯಾಗ್ತಿದೆ. ಚಿನ್ನದ ಬೆಲೆ ಇಳಿಕೆಯಾದ್ದರಿಂದ ಖರೀದಿದಾರರಿಗೆ ಚಿನ್ನದ ಮೇಲೆ ಹೂಡಿಕೆ ಮಾಡಲು ಒಳ್ಳೆ ಅವಕಾಶ ಸಿಕ್ಕಂತಾಗಿದೆ.
ಯುಎಸ್ ಡಾಲರ್ ಸೂಚ್ಯಾಂಕದಿಂದಾಗಿ ಚಿನ್ನದ ಬೆಲೆಯಲ್ಲಿ ಏರಿಳತವನ್ನ ಕಾಣುವಂತಾಗಿದೆ. ಬೆಂಗಳೂರಿನಲ್ಲಿ ಸತತ ಮೂರನೇ ದಿನ ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದೆ.

ಡಿಸೆಂಬರ್ 20 ರಂದು, ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಇಳಿಕೆಯಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 300 ರೂ. ಇಳಿಕೆಯಾಗಿ 70,400 ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 330 ರೂ. ಇಳಿಕೆಯಾಗಿ 76,800 ರೂ. ಆಗಿದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 250 ರೂ. ಇಳಿಕೆಯಾಗಿ 57,600 ರೂ. ಆಗಿದೆ.
ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 3,000 ರೂ. ಇಳಿಕೆಯಾಗಿ 7,04,000 ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 3,300, ರೂ. ಇಳಿಕೆಯಾಗಿ 7,68,000 ರೂ. ಆಗಿದೆ. 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 2,500ರೂ ಇಳಿಕೆಯಾಗಿ, 5,76,000 ರೂ. ಆಗಿದೆ.
ಅದರಲ್ಲೂ ಈ ವಾರ ಹಳದಿ ಲೋಹಗಳಿಗೆ ಸವಾಲಿನ ವಾರವಾಗಿ ಬಿಟ್ಟಿದೆ. ಚಿನ್ನ ಮತ್ತು ಬೆಳ್ಳಿ ಎರಡೂ ಲೋಹಗಳು ಮಾರುಕಟ್ಟೆಯಲ್ಲಿ ಕುಸಿತವನ್ನ ಅನುಭವಿಸುತ್ತಿದ್ದು, ಒತ್ತಡವನ್ನ ಎದುರಿಸುತ್ತಿವೆ. ಬೆಂಗಲೂರಿನಲ್ಲಿ ಸತತವಾಗಿ ಮೂರು ದಿನಗಳಲ್ಲಿ 100 ಗ್ರಾಂ ಚಿನ್ನದ ದರ 11,000 ರೂ ಇಳಿಕೆಯಾಗಿದೆ.
ಇನ್ನು ಈ ವರ್ಷ ಚಿನ್ನ ದಾಖಲೆಯ ಓಟವನ್ನ ನಡೆಸಿದ್ದು, ಬೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಆರ್ಥಿಕ ಅನಶ್ಚಿತತೆಗಳ ನಡುವೆ ಮಾರುಕಟ್ಟೆಯಲ್ಲಿ ಚಿನ್ನ ಪ್ರಭಲ ಸ್ಥಾನ ಪಡೆದುಕೊಂಡಿದೆ. ಹಾಗೆ 2025ರ ವೇಳೆಗೆ ಚಿನ್ನದ ಬೆಲೆಗಳಲ್ಲಿ ಹೊಸ ಗರಿಷ್ಠ ಮುಂದೂಡಿಕೆಯನ್ನು ಕಾಣುವ ನಿರೀಕ್ಷೆ ಇದೆ.
ಅಲ್ಲದೆ ಪ್ರಮುಖ ಅಂತರಾಷ್ಟ್ರೀಯ ಅಂಶಗಳು ಕೂಡ ಚಿನ್ನದ ಬೆಲೆ ಮೇಲೆ ಪ್ರಭಾವ ಬೀರುತ್ತಿವೆ, ವಿಶೇಷವಾಗಿ US ಡಾಲರ್‌ನ ದತ್ತಾಂಶಕ್ಕಾಗಿ ಮಾರುಕಟ್ಟೆ ನಿರೀಕ್ಷೆ ಮಾಡುತ್ತಿದೆ. ಹಾಗೆ, ಹೂಡಿಕೆದಾರರು ಸಂಭಾವ್ಯ ದರ ಬದಲಾವಣೆಗಳಿಗೆ ಸಂಬಂಧಿಸಿದಂತೆ ಫೆಡರಲ್ ರಿಸರ್ವ್‌ನಿಂದ ಅಪ್‌ಡೇಟ್‌ಗಳನ್ನ ಸ್ಪಷ್ಟವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಏಕೆಂದರೆ ಈ ನಿರ್ಧಾರಗಳು ಮಾರುಕಟ್ಟೆಯ ಭಾವನೆಯ ಮೇಲೆ ಮತ್ತಷ್ಟು ಪರಿಣಾಮ ಬೀರುವ ನಿರೀಕ್ಷೆಯಿದೆ. ಗ್ರಾಹಕ ಮತ್ತು ಉತ್ಪಾದಕರ ಎರಡೂ ಕಡೆಯ ಮಿಶ್ರ ಹಣದುಬ್ಬರ ದತ್ತಾಂಶವು ಮಾರುಕಟ್ಟೆಯ ಅನಿಶ್ಚಿತತೆಗೆ ಕಾರಣವಾಯಿತು. ಅಲ್ಲದೆ ವೈಯಕ್ತಿಪ ಬಳಕೆ ವೆಚ್ಚಳ(PSE) ಡೇಟಾ ಬಿಡುಗಡೆಯಾಗಲಿದ್ದು, ಈ ಕುರಿತು ನಿಕಟವಾಗಿ ಪರಿಶೀಲನೆ ಮಾಡ್ತಿದ್ದಾರೆ. ಅಲ್ಲದೆ ಈ ಡೇಟಾ ಯುಎಸ್ ಆರ್ಥಿಕ ದೃಷ್ಟಿಕೋನದ ಕುರಿತು ಹೆಚ್ಚಿನ ಮಾಹಿತಿಯನ್ನ ನೀಡಲಿದ್ದು, ಭವಿಷ್ಯದ ನಿರ್ಧರಗಳ ಮೇಲೆ ಇದು ಪ್ರಬಾವ ಬೀರಲಿದೆ.
ಇತರ ಪ್ರಮುಖ ಭಾರತೀಯ ನಗರಗಳಲ್ಲಿ ಚಿನ್ನದ ಬೆಲೆಗಳು
ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:
| ನಗರಗಳು | 24 ಕ್ಯಾರೆಟ್ | 22 ಕ್ಯಾರೆಟ್ |
| ದೆಹಲಿ | 76,950 | 70,550 |
| ಮುಂಬೈ | 76,800 | 70,400 |
| ಚೆನ್ನೈ | 76,800 | 70,400 |
| ಕೋಲ್ಕತ್ತಾ | 76,800 | 70,400 |
ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ
ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಕೂಡ ಇಳಿಕೆಯಾಗಿದೆ. ಕೆಲವು ದಿನಗಳ ಹಿಂದೆ ಸ್ಥಿರವಾಗಿದ್ದ ಬೆಳ್ಳಿ ಬೆಲೆ ಇಂದು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 1000 ರೂ. ಇಳಿಕೆಯಾಗಿ 90,500ರೂ ಆಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 100 ರೂ. ಇಳಿಕೆಯಾಗಿದ್ದು,9,050 ರೂಪಾಯಿ ಆಗಿದೆ.
MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.18%ನಷ್ಟು ಲಾಭವನ್ನ ಅನುಭವಿಸುವ ಮೂಲಕ 75,784 ರೂ ಆಗಿದೆ. ಅದೇ ರೀತಿ, ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.15% ರಷ್ಟು ಏರಿಕೆಯಾಗುತ್ತಿದ್ದು, 87,321 ರೂಪಾಯಿ ವಹಿವಾಟು ನಡೆಸುತ್ತಿದೆ.
ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳು
ರಾಯಿಟರ್ಸ್ ಇತ್ತೀಚಿನ ವರದಿ ಪ್ರಕಾರ ಯುಎಸ್ ಡಾಲರ್‌ನ ಸ್ವಲ್ಪ ಪ್ರಮಾಣದ ದುರ್ಬಲತೆಯಿಂದಾಗಿ ಚಿನ್ನದ ಬೆಲೆಗಳು ಇಳಿಕೆಯಾಗಿವೆ. ಇನ್ನು ಸ್ಪಾಟ್ ಚಿನ್ನವು 03:26 GMT ಯ ಹೊತ್ತಿಗೆ US ಚಿನ್ನದ ಭವಿಷ್ಯವು ಪ್ರತಿ ಔನ್ಸ್‌ಗೆ 2% ಇಳಿಕೆಯಾಗಿ USD 2,596.89ನಲ್ಲಿ ಆಗಿದೆ. ಹಾಗೆ ಚಿನ್ನ ಭವಿಷ್ಯವು 0.1% ಇಳಿಕೆಯಗಿ 2,611.30ಡಾಲರ್ ಆಗಿದೆ. ಹಾಗೆ ಸ್ಪಾಟ್ ಬೆಳ್ಳಿ ಕೂಡ, 0.4% ಕುಸಿದು ಪ್ರತಿ ಔನ್ಸ್‌ಗೆ $28.92 ಕ್ಕೆ ತಲುಪಿದೆ. US ಡಾಲರ್‌ನಲ್ಲಿ ನವೀಕೃತ ಶಕ್ತಿ ಮತ್ತು ಇತ್ತೀಚಿನ ಚಿನ್ನದ ರ್ಯಾಲಿಯ ನಂತರ ಲಾಭವಿದ್ದರು ಕೂಡ ಈ ನಡುವೆ ಚಿನ್ನದ ಬೆಲೆಯಲ್ಲಿ ಕುಸಿತವನ್ನ ಕಂಡಿದೆ. ಅಲ್ಲದೆ US ಡಾಲರ್ ತನ್ನ ಪ್ರಬಲ ಮಟ್ಟದಲ್ಲಿ ಸ್ಥಿರವಾಗಿ ಇರುವುದರಿಂದ ಈ ಕುಸಿತವನ್ನ ಕಾಣುವಂತಾಗಿದೆ. ಹೀಗಾಗಿ ಹೂಡಿಕೆದಾರರು ಈಗ ಮುಂಬರುವ US ಆರ್ಥಿಕ ದತ್ತಾಂಶ ಬಿಡುಗಡೆಗಳನ್ನು ನಿಕಟವಾಗಿ ಪರಿಶೀಲನೆ


Click it and Unblock the Notifications