ಬೆಂಗಳೂರಿನಲ್ಲಿ ಚಿನ್ನದ ಬೆಲೆ, ಡಿಸೆಂಬರ್‌-24: 22k & 24k, 100 ಗ್ರಾಂ ಚಿನ್ನದ ಬೆಲೆ 1,000 ರೂ. ಇಳಿಕೆ.

ಹೊಸವರ್ಷ, ಕ್ರಿಸ್‌ಮಸ್‌ ಆರಂಭದ ವೇಳೆ ಆಭರಣ ಪ್ರಿಯರಿಗೆ ಮತ್ತೆ ಗುಡ್‌ನ್ಯೂಸ್‌ ಸಿಕ್ಕಿದೆ. ಚಿನ್ನದ ದರ ಇಂದೂ ಕೂಡ ಇಳಿಕೆಯಾದ್ದರಿಂದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಸತತವಾಗಿ ಎರಡು ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ಬೆಲೆ ಇಂದು ಮತ್ತೆ ಇಳಿಕೆಯಾಗಿದೆ. ಚಿನ್ನದ ಬೆಲೆ ಇಳಿಕೆಯಾದ್ದರಿಂದ ಖರೀದಿದಾರರಿಗೆ ಚಿನ್ನದ ಮೇಲೆ ಹೂಡಿಕೆ ಮಾಡಲು ಒಳ್ಳೆ ಅವಕಾಶ ಸಿಕ್ಕಂತಾಗಿದೆ. ಇನ್ನು ಈ ಹಬ್ಬದ ವೇಳೆಯಲ್ಲಿ ಬೆಂಗಳೂರು ಚಿನ್ನದ ಖರೀದಿಗೆ ಸೂಕ್ತವಾದ ಸ್ಥಳವಾಗಿದೆ.

ಡಿಸೆಂಬರ್‌ 24 ರಂದು, ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಇಳಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 100ರೂ. ಇಳಿಕೆಯಾಗಿ 70,900 ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 100ರೂ. ಇಳಿಕೆಯಾಗಿ 77,350ರೂ. ಆಗಿದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 80 ರೂ. ಇಳಿಕೆಯಾಗಿ 58,010 ರೂ. ಆಗಿದೆ.

ಬೆಂಗಳೂರಿನಲ್ಲಿ ಮತ್ತೆ ಇಳಿಮುಖವಾದ ಚಿನ್ನದ ಬೆಲೆ

ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,000ರೂ. ಇಳಿಕೆಯಾಗಿ 7,09,000 ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,000ರೂ. ಇಳಿಕೆಯಾಗಿ 7,73,500ರೂ. ಆಗಿದೆ. 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 800 ರೂ ಇಳಿಕೆಯಾಗಿ, 5,80,100 ರೂ. ಆಗಿದೆ.

ಈ ವರ್ಷ ಚಿನ್ನ ದಾಖಲೆಯ ಓಟವನ್ನ ನಡೆಸಿದ್ದು, ಬೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಆರ್ಥಿಕ ಅನಶ್ಚಿತತೆಗಳ ನಡುವೆ ಮಾರುಕಟ್ಟೆಯಲ್ಲಿ ಚಿನ್ನ ಪ್ರಭಲ ಸ್ಥಾನ ಪಡೆದುಕೊಂಡಿದೆ. ಈ ವಾರ ಚಿನ್ನದ ಬೇಡಿಕೆ ಕಡಿಮೆಯದ ಕಾರಣ ಬೆಂಗಳೂರು ಹಾಗೆ ಇತರೆ ನಗರಗಳಲ್ಲೂ ಚಿನ್ನದ ಬೆಲೆಯಲ್ಲಿ ತೀವ್ರವಾಗಿ ಕಡಿಮೆಯಾಗಿದೆ. ಅದರಲ್ಲೂ ಈ ವಾರ ಹಳದಿ ಲೋಹಗಳಿಗೆ ಸವಾಲಿನ ವಾರವಾಗಿ ಬಿಟ್ಟಿದೆ. ಚಿನ್ನ ಮತ್ತು ಬೆಳ್ಳಿ ಎರಡೂ ಲೋಹಗಳು ಮಾರುಕಟ್ಟೆಯಲ್ಲಿ ಕುಸಿತವನ್ನ ಅನುಭವಿಸುತ್ತಿದ್ದು, ಒತ್ತಡವನ್ನ ಎದುರಿಸುತ್ತಿವೆ.

ಅಲ್ಲದೆ ಪ್ರಮುಖ ಅಂತರಾಷ್ಟ್ರೀಯ ಅಂಶಗಳು ಕೂಡ ಚಿನ್ನದ ಬೆಲೆ ಮೇಲೆ ಪ್ರಭಾವ ಬೀರುತ್ತಿವೆ, ವಿಶೇಷವಾಗಿ US ಡಾಲರ್‌ನ ದತ್ತಾಂಶಕ್ಕಾಗಿ ಮಾರುಕಟ್ಟೆ ನಿರೀಕ್ಷೆ ಮಾಡುತ್ತಿದೆ. ಹಾಗೆ, ಹೂಡಿಕೆದಾರರು ಸಂಭಾವ್ಯ ದರ ಬದಲಾವಣೆಗಳಿಗೆ ಸಂಬಂಧಿಸಿದಂತೆ ಫೆಡರಲ್ ರಿಸರ್ವ್‌ನಿಂದ ಅಪ್‌ಡೇಟ್‌ಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಏಕೆಂದರೆ ಈ ನಿರ್ಧಾರಗಳು ಮಾರುಕಟ್ಟೆಯ ಭಾವನೆಯ ಮೇಲೆ ಮತ್ತಷ್ಟು ಪರಿಣಾಮ ಬೀರುವ ನಿರೀಕ್ಷೆಯಿದೆ. ಈ ರಜೆಯ ವೇಳೆಯಲ್ಲಿ ವ್ಯಾಪಾರ ಚಟುವಟಿಕೆಗಳು ಹೊರತುಪಡಿಸಿ, ಅನಿರೀಕ್ಷಿತ ಬೆಳವಣಿಗೆಗಳು ಕೂಡ ಚಿನ್ನದ ಮೇಲೆ ಪರಿಣಾಮ ಬೀರಲಿವೆ. ಅಲ್ಲದೆ ಈ ಡೇಟಾ ಯುಎಸ್‌ ಆರ್ಥಿಕ ದೃಷ್ಟಿಕೋನದ ಕುರಿತು ಹೆಚ್ಚಿನ ಮಾಹಿತಿಯನ್ನ ನೀಡಲಿದ್ದು, ಭವಿಷ್ಯದ ನಿರ್ಧರಗಳ ಮೇಲೆ ಇದು ಪ್ರಬಾವ ಬೀರಲಿದೆ.

ಇತರ ಪ್ರಮುಖ ಭಾರತೀಯ ನಗರಗಳಲ್ಲಿ ಚಿನ್ನದ ಬೆಲೆಗಳು

ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:

ನಗರಗಳು 24 ಕ್ಯಾರೆಟ್22 ಕ್ಯಾರೆಟ್
​ದೆಹಲಿ77,500​71,050
​ಮುಂಬೈ77,350​70,900
ಚೆನ್ನೈ ​77,35070,900
​ಕೋಲ್ಕತ್ತಾ77,35070,900

ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ

ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 91,400 ರೂ ಇದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 9,140 ರೂಪಾಯಿ ಇದೆ.

MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.17% ನಷ್ಟು ಲಾಭವನ್ನ ಅನುಭವಿಸುವ ಮೂಲಕ 76,275 ರೂ ಆಗಿದೆ. ಅದೇ ರೀತಿ, ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.33% ರಷ್ಟು ಏರಿಕೆಯಾಗುತ್ತಿದ್ದು, 89,415 ರೂಪಾಯಿ ವಹಿವಾಟು ನಡೆಸುತ್ತಿದೆ.

ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳು

ರಾಯಿಟರ್ಸ್ ಇತ್ತೀಚಿನ ವರದಿ ಪ್ರಕಾರ ಯುಎಸ್‌ ಡಾಲರ್‌ನ ಸ್ವಲ್ಪ ಪ್ರಮಾಣದ ದುರ್ಬಲತೆಯಿಂದಾಗಿ ಚಿನ್ನದ ಬೆಲೆಗಳು ಇಳಿಕೆಯಾಗಿವೆ. ಇನ್ನು ಸ್ಪಾಟ್ ಚಿನ್ನವು 03:07 GMT ಯ ಹೊತ್ತಿಗೆ US ಚಿನ್ನದ ಭವಿಷ್ಯವು ಪ್ರತಿ ಔನ್ಸ್‌ಗೆ 0.1% ಏರಿಕೆಯಾಗಿ USD 2,616.13 ನಲ್ಲಿ ವಹಿವಾಟು ನಡೆಸುತ್ತಿದೆ. ಹಾಗೆ ಸ್ಪಾಟ್ ಬೆಳ್ಳಿ ಕೂಡ, 0.1% ಕುಸಿದು ಪ್ರತಿ ಔನ್ಸ್‌ಗೆ $29.68 ರಲ್ಲಿ ವಹಿವಾಟು ನಡೆಸುತ್ತಿದೆ. US ಡಾಲರ್‌ನಲ್ಲಿ ನವೀಕೃತ ಶಕ್ತಿ ಮತ್ತು ಇತ್ತೀಚಿನ ಚಿನ್ನದ ರ್ಯಾಲಿಯ ನಂತರ ಲಾಭವಿದ್ದರು ಕೂಡ ಈ ನಡುವೆ ಚಿನ್ನದ ಬೆಲೆಯಲ್ಲಿ ಕುಸಿತವನ್ನ ಕಂಡಿದೆ. ಅಲ್ಲದೆ US ಡಾಲರ್ ತನ್ನ ಪ್ರಬಲ ಮಟ್ಟದಲ್ಲಿ ಸ್ಥಿರವಾಗಿ ಇರುವುದರಿಂದ ಈ ಕುಸಿತವನ್ನ ಕಾಣುವಂತಾಗಿದೆ. ಹೀಗಾಗಿ ಹೂಡಿಕೆದಾರರು ಈಗ ಮುಂಬರುವ US ಆರ್ಥಿಕ ದತ್ತಾಂಶ ಬಿಡುಗಡೆಗಳನ್ನು ನಿಕಟವಾಗಿ ಪರಿಶೀಲನೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+